ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಒಂದು ದೇಶ, ಒಂದು ತೆರಿಗೆ, ಒಂದು ವರ್ಷ.

ಸುಧಾರಣೆ ಹಾದಿಯಲ್ಲಿನ ನೋವು-ನಲಿವು, ಮುಂಚೆ ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದ ವಿದೇಶಿಗರು ಹಾಗೂ ಭಾರತೀಯ ಉದ್ಯಮಿಗಳು ಇಲ್ಲಿನ ಸಂಕೀರ್ಣ ತೆರಿಗೆ ವ್ಯವಸ್ಥೆಯನ್ನು ‘ತೆರಿಗೆ ಭಯೋತ್ಪಾದನೆ’ ಎಂದು ಟೀಕಿಸುತ್ತಿದ್ದರು. ದಶಕಗಳ ಯತ್ನದ ಬಳಿಕ ಭಾರತದಲ್ಲಿ ಐತಿಹಾಸಿಕ ಜಿಎಸ್​ಟಿ 2017ರ ಜು.1ರಂದು ಜಾರಿಯಾಯಿತು. ನೋಟು ಅಮಾನ್ಯೀಕರಣ ಜಾರಿಯಾದ ಕೆಲ ತಿಂಗಳಲ್ಲಿಯೇ ಜಿಎಸ್​ಟಿ ಕೂಡ ಜಾರಿಯಾಗಿ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಹೊಡೆತ ಎಂಬ ಟೀಕೆಗೂ ಗುರಿಯಾಯಿತು. ಅದರೆ ಒಂದು ವರ್ಷದ ಬಳಿಕ ದೇಶದ ಆರ್ಥಿಕ ಸುಧಾರಣೆಯಲ್ಲಿ ಮೈಲಿಗಲ್ಲು ಎಂದು ಬಿಂಬಿತವಾಗುತ್ತಿದೆ. ಜಿಎಸ್​ಟಿ ಜಾರಿಯಾಗಿ ಜುಲೈ 1ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಮೂರು ಕಂತುಗಳಲ್ಲಿ ಈ ಕುರಿತ ಅವಲೋಕನ ನೀಡಲಿದೆ.
| ಸಿ.ಎಸ್. ಸುಧೀರ್ , ಸಂಸ್ಥಾಪಕರು, ಸಿಇಒ ಇಂಡಿಯನ್​ವುನಿ ಡಾಟ್ ಕಾಂ

ಹೌದು, ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆಗೆ ಈಗ ವರ್ಷದ ಹರ್ಷ. ಹತ್ತು ವರ್ಷಗಳ ಕಾಯುವಿಕೆಯ ಬಳಿಕ 2017 ರ ಜುಲೈ 1ರಂದು ಜಾರಿಗೆ ಬಂದ ಜಿಎಸ್​ಟಿ(ಸರಕು ಮತ್ತು ಸೇವಾ ತೆರಿಗೆ) ಸ್ವಾತಂತ್ರ್ಯ ನಂತರದ ಅತಿ ದೊಡ್ಡ ಆರ್ಥಿಕ ಸುಧಾರಣೆ ಎಂದೇ ಬಿಂಬಿತವಾಗಿದೆ.
ಯಾವುದೇ ದೇಶದಲ್ಲಿ ತೆರಿಗೆ ಸುಧಾರಣೆಗಳಾಗುವುದು ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ನೆಲೆಗಟ್ಟಿನಲ್ಲಿ. ಹಾಗಾದರೆ ಜಿಎಸ್​ಟಿ ನಿಜಕ್ಕೂ ‘ಗುಡ್ ಆಡ್ ಸಿಂಪಲ್ ಟ್ಯಾಕ್ಸ್’ ವ್ಯವಸ್ಥೆಯಾ? ಅಥವಾ ಕೆಲವರು ಟೀಕಿಸುವಂತೆ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಪದ್ಧತಿನಾ? ಜಿಎಸ್​ಟಿಯಿಂದ ಬಡವರಿಗೆ ಲಾಭವಾಗಿದೆಯಾ? ಭಾರತದ ಆರ್ಥಿಕತೆ ಸರಿದಾರಿಯಲ್ಲಿ ಸಾಗುತ್ತಿದೆಯಾ? ಇಂಥ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆದಿದೆ.
ಯಾವುದೇ ದೊಡ್ಡ ಯೋಜನೆಯನ್ನು ಕಾರ್ಯಗತಗೊಳಿಸಬೇಕಾದರೆ ಗೊಂದಲಗಳು ಸಹಜ. ಆದರೆ ಗೊಂದಲಗಳು ಉಂಟಾದ ವೇಳೆಯಲ್ಲೇ ಉತ್ತರವೂ ಸಿಗುತ್ತದೆ ಎನ್ನುವ ಮಾತಿನಂತೆ, ಕೇಂದ್ರ ಸರ್ಕಾರವು ಜಿಎಸ್​ಟಿ ವ್ಯವಸ್ಥೆಯಲ್ಲಿದ್ದ ಆರಂಭಿಕ ಅಡೆತಡೆಗಳನ್ನು ಕಾಲಕಾಲಕ್ಕೆ ನೀಗಿಸುತ್ತಾ ಸಾಗಿತು. ಹಾಗೆಂದ ಮಾತ್ರಕ್ಕೆ ಈಗ ಎಲ್ಲವೂ ಸರಿಯಿದೆ ಎಂದಲ್ಲ. ಈಗಲೂ ಲೋಪಗಳಿವೆ. ಆದರೆ ವ್ಯವಸ್ಥೆಯನ್ನು ಸರಿದಾರಿಗೆ ತರುವ ಎಲ್ಲ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ.
ಹತ್ತಾರು ಮಾದರಿಯ ತೆರಿಗೆಗಳನ್ನು ಏಕೀಕೃತ ವ್ಯವಸ್ಥೆಯೊಳಗೆ ತರುವಲ್ಲಿ ಜಿಎಸ್​ಟಿ ಯಶ ಸಾಧಿಸಿದ್ದು, ವಾಣಿಜ್ಯ ವಹಿವಾಟಿಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವಲ್ಲಿ ಇದು ಸಫಲವಾಗಿದೆ. ಇನ್ನೊಂದೆಡೆ ಆರ್ಥಿಕ ಅಭಿವೃದ್ಧಿ ದರ ಸುಧಾರಣೆಗೂ ಪರೋಕ್ಷವಾಗಿ ಇದರಿಂದ ನೆರವಾಗುತ್ತದೆ.
?ಆರ್ಥಿಕ ಸಮೀಕ್ಷೆ ಪ್ರಕಾರ 2017-18 ರ ಜಿಡಿಪಿ ದರ ಶೇ. 6.5 ರಿಂದ ಶೇ. 6.7ರವರೆಗೆ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ? 2016- 17 ರ ಆರ್ಥಿಕ ಸಮೀಕ್ಷೆ ಪ್ರಗತಿ ದರ ಶೇ. 7.1ಕ್ಕೆ ಹೋಲಿಸಿದಾಗ ಇದು ಕಡಿಮೆ ಎನಿಸುತ್ತದೆ. ? ಜಿಎಸ್​ಟಿಯ ಅನುಷ್ಠಾನ ಹಂತದಲ್ಲಿ ಇದು ನಿರೀಕ್ಷಿತ ಎನ್ನುವುದನ್ನು ಮೊದಲೇ ಅಂದಾಜು ಮಾಡಲಾಗಿದೆ. ?2018 -19 ನೇ ಸಾಲಿನಲ್ಲಿ ಜಿಡಿಪಿ ದರ ಮತ್ತೆ ಶೇ.7 ರಿಂದ ಶೇ. 7.5ರಷ್ಟು ಪುಟಿದೇಳಲಿದ್ದು ಆರ್ಥಿಕತೆ ಮತ್ತಷ್ಟು ಚೇತರಿಕೆಯತ್ತ ಮುನ್ನಡೆ ಯಲಿದೆ. ?-ಠಿ; 80,000 ಕೋಟಿಯಿಂದ -ಠಿ;1 ಲಕ್ಷ ಕೋಟಿಯ ದಾಖಲೆ ತೆರಿಗೆ ಸಂಗ್ರಹ ಇದಕ್ಕೆ ಪೂರಕವಾಗಿದೆ.
ರಾಜಕೀಯ ಜಿದ್ದಾಜಿದ್ದಿಯ ನಡುವೆ ಅರಳಿದ ಜಿಎಸ್​ಟಿ
15 ವರ್ಷಗಳ ಹಗ್ಗಜಗ್ಗಾಟದ ನಡುವೆ ಜಿಎಸ್​ಟಿ ಜಾರಿಗೆ ತರುವ ಸರ್ಕಾರದ ಕೆಲಸ ಅಷ್ಟು ಸರಳ ವಾಗಿರಲಿಲ್ಲ. ಎಲ್ಲ ಪಕ್ಷಗಳನ್ನು ಒಗ್ಗೂಡಿಸುವ ಜತೆಗೆ, ರಾಜ್ಯಗಳಲ್ಲಿದ್ದ ವಿವಿಧ ಸರ್ಕಾರಗಳ ಮನವೊಲಿಸುವ ಮಹತ್ತರ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿತ್ತು. ತೆರಿಗೆ ಸಂಗ್ರಹ ಕುಠಿತವಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯಗಳು ಜಿಎಸ್​ಟಿ ಅನುಷ್ಠಾನಕ್ಕೆ ಅಡ್ಡಗಾಲು ಹಾಕಿದ್ದವು. ಅದಾಗಿಯೂ ಬೇಕು, ಬೇಡ, ಟೀಕೆ, ಟಿಪ್ಪಣಿ, ಗೊಂದಲ, ಆತಂಕ, ಆರೋಪ- ಪ್ರತ್ಯಾರೋಪಗಳ ನಡುವೆ ನರೇಂದ್ರ ಮೋದಿ ಸರ್ಕಾರ ಐತಿಹಾಸಿಕ ಜಿಎಸ್​ಟಿ ಜಾರಿಗೊಳಿಸಿತು. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ‘ಗುಡ್ ಆಂಡ್ ಸಿಂಪಲ್ ಟ್ಯಾಕ್ಸ್’ ಹಾಗೂ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ವಾಗ್ವಾದಕ್ಕೆ ವೇದಿಕೆಯಾಯಿತು.
ಜಿಎಸ್​ಟಿ ದೋಷ ನಿವಾರಣೆ ಮತ್ತು ವೈರುಧ್ಯ
ಜಿಎಸ್​ಟಿ ಆರಂಭವಾದಾಗ ವಾರ್ಷಿಕ 75 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ಹೋಟೆಲ್​ಗಳಿಗೆ ಶೇ. 12ರಷ್ಟು ಮತ್ತು ಎಸಿ ಹಾಗೂ ಐಷಾರಾಮಿ ಹೋಟೆಲ್​ಗಳಿಗೆ ಶೇ.18 ತೆರಿಗೆ ಇತ್ತು.
ಈ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದಾಗ ಜಿಎಸ್​ಟಿ ಮಂಡಳಿ ತೆರಿಗೆಯನ್ನು ಶೇ.5ಕ್ಕೆ ಇಳಿಸಿತು.
ಈಗಲೂ ಜಿಎಸ್​ಟಿಯ ಕೆಲ ದರಗಳಲ್ಲಿ ವೈರುಧ್ಯಗಳಿವೆ. ಚಿನ್ನದ ಮೇಲೆ ಶೇ.3 ಜಿಎಸ್​ಟಿ ಮಾತ್ರ ಇದೆ. ಇದನ್ನು ಶೇ. 8 ರಿಂದ ಶೇ. 10 ಮಾಡಿದರೆ ಯಾವುದೇ ತಪ್ಪಿಲ್ಲ.
ಪೆಟ್ರೋಲ್ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತಂದಿಲ್ಲ. ಕೇಂದ್ರ ಮತ್ತು ರಾಜ್ಯದ ತೆರಿಗೆ ಭಾರ ಕೂಡಿದರೆ ಶೇ. 50 ತೆರಿಗೆಯನ್ನು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೇರಲಾಗುತ್ತಿದೆ.
ಜಿಎಸ್​ಟಿ ಹಿನ್ನೆಲೆ
ಜಿಎಸ್​ಟಿ ಮಾದರಿ ಕುರಿತ ವಿವರಣೆಗೆ 1999ರಲ್ಲಿ ವಾಜಪೇಯಿ ಸರ್ಕಾರದಿಂದ ಸಲಹಾ ಮಂಡಳಿ ರಚನೆ
ತೆರಿಗೆ ಸುಧಾರಣೆಗೆ ಸೂಕ್ತ ಶಿಫಾರಸು ನೀಡುವಂತೆ 2002ರಲ್ಲಿ ವಿಜಯ್ ಕೇಳ್ಕರ್ ಸಮಿತಿ ರಚನೆ
2005ರಲ್ಲಿ ಜಿಎಸ್​ಟಿ ಜಾರಿಗೆ ಕೇಳ್ಕರ್ ಸಮಿತಿಯಿಂದ ಶಿಫಾರಸು
2010ರಲ್ಲಿ ಯುಪಿಎ ಸರ್ಕಾರದಿಂದ ಜಿಎಸ್​ಟಿ ಜಾರಿಯ ಘೋಷಣೆ
ತೆರಿಗೆ ಪ್ರಮಾಣ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಚನೆಯಲ್ಲಿ ವಿಳಂಬ
2014ರಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಜಿಎಸ್​ಟಿ ಅನುಷ್ಠಾನಕ್ಕೆ ವೇಗ
2016ರ ಆಗಸ್ಟ್​ನಲ್ಲಿ ಜಿಎಸ್​ಟಿ ಕಾಯ್ದೆಗೆ ಉಭಯ ಸದನಗಳಿಂದ ಒಪ್ಪಿಗೆ
ಜಿಎಸ್​ಟಿಯ ಮೊದಲ ಯಶಸ್ಸು ಎಂದರೆ ಸಂಕೀರ್ಣ ತೆರಿಗೆ ವ್ಯವಸ್ಥೆಗೆ ತೆರೆ ಎಳೆದು, ಸರಳ ರೂಪ ನೀಡಿದ್ದು. ಜಿಎಸ್​ಟಿ ಜಾರಿ ಬಳಿಕ ಹೊಸದಾಗಿ 50 ಲಕ್ಷ ಜನರು ತೆರಿಗೆ ವ್ಯಾಪ್ತಿಗೆ ಬಂದಿದ್ದಾರೆ. ತೆರಿಗೆ ಸಂಗ್ರಹದಲ್ಲಿ ಶೇ.13ರ ಬೆಳವಣಿಗೆಯಾಗಿದೆ. ಬೇರೆ ದೇಶಗಳಲ್ಲಿನ ಜಿಎಸ್​ಟಿಗೆ ಹೋಲಿಸಿ ಭಾರತದಲ್ಲಿನ 4 ಹಂತದ ತೆರಿಗೆಯನ್ನು ಟೀಕಿಸಿದರೂ ಕೂಡ ಇದೇ ವ್ಯವಸ್ಥೆಯು ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
| ಹಸ್ಮುಖ್ ಅದಿಯಾ, ಕೇಂದ್ರ ಹಣಕಾಸು ಕಾರ್ಯದರ್ಶಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...