‘ಮುತ್ತುರತ್ನ ಜಾಸ್ತಿ ಇತ್ತೂಂತ ಎಲ್ಲೆಲ್ಲಿಗೋ ಪೋಣಿಸಿಕೊಂಡ್ರಂತೆ’ ಅನ್ನೋ ಜಾಣನುಡಿ ನಮ್ಮ ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಈ ಮಾತಿಗೆ ಪುಷ್ಟಿ ನೀಡೋ ಘಟನೆ ಜಪಾನ್ನಿಂದ ವರದಿಯಾಗಿದೆ.
ಮಧ್ಯಮ ಗಾತ್ರದ ಎರಡು ಖರಬೂಜ ಹಣ್ಣುಗಳು ಅಬ್ಬಬ್ಬಾ ಎಂದರೆ ಎಷ್ಟು ರೂಪಾಯಿಗೆ ಮಾರಾಟವಾಗಬಹುದು? 200 ರೂ.? 300 ರೂ.? ಉಸಿರು ಬಿಗಿಹಿಡಿದುಕೊಳ್ಳಿ, ಅದಕ್ಕೆ ದಕ್ಕಿರುವ ಬೆಲೆಯೆಷ್ಟು ಗೊತ್ತೇ? ಬರೋಬ್ಬರಿ 3.2 ದಶಲಕ್ಷ ಯೆನ್ಗಳು! (ಅಂದ್ರೆ 19 ಲಕ್ಷ ರೂ.ಗಿಂತ ಹೆಚ್ಚು). ಇಂಥದೊಂದು ದಾಖಲಾರ್ಹ ಬೆಲೆ ದಾಖಲಾಗಿರುವುದು ಜಪಾನ್ನ ಹರಾಜುಕಟ್ಟೆಯೊಂದರಲ್ಲಿ.
ಹಾಗಂದ ಮಾತ್ರಕ್ಕೆ ಅದೇನೂ ಕಾಂಜಿ- ಪೀಂಜಿ ತಳಿಯಲ್ಲ; ಅತ್ಯಂತ ಪ್ರತಿಷ್ಠಿತ ಎನ್ನಲಾಗುವ ‘ಯುಬಾರಿ’ ತಳಿಯ ಖರಬೂಜ. ಇಂಥ ಖರಬೂಜ ಹಣ್ಣುಗಳನ್ನು ಇಷ್ಟೊಂದು ಹಣ ಪೀಕಿ ಖರೀದಿಸಿದ್ದು ಹಣ್ಣು ಪ್ಯಾಕಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಒಂದು ಸ್ಥಳೀಯ ಸಂಸ್ಥೆಯಂತೆ! ಹೀಗೆ ಅಧಿಕ ಬೆಲೆ ತೆತ್ತು ಯುಬಾರಿ ಖರಬೂಜ ಖರೀದಿಸುವುದು, ಬಂಧು-ಮಿತ್ರರಿಗೆ ಅದನ್ನು ಉಡುಗೊರೆಯಾಗಿ ನೀಡುವುದು ಅಲ್ಲಿ ಸಾಮಾಜಿಕ ಪ್ರತಿಷ್ಠೆಯ ಸಂಕೇತವಂತೆ! ಎರಡು ವರ್ಷಗಳ ಹಿಂದೆ ಇದೇ ತಳಿಯ ಖರಬೂಜಯು 3 ದಶಲಕ್ಷ ಯೆನ್ಗಳಿಗೆ ಮಾರಾಟವಾಗಿತ್ತು ಎಂಬುದು ಲಭ್ಯಮಾಹಿತಿ.
ಅದೇನೋ ಸರಿ, ಬಾಯಲ್ಲಿಟ್ಟಾಕ್ಷಣ ಕರಗಿ ‘ನೀರಾಗುವ’ ಖರಬೂಜಗೆ ಹೀಗೆ ‘ನೀರಿನಂತೆ’ ಹಣ ಖರ್ಚುಮಾಡುವುದೇ? ಅದೇ ದುಡ್ಡಿಗೆ ಒಂದು ಭರ್ಜರಿ ಕಾರು ಬರುತ್ತಿತ್ತಲ್ಲವೇ? ಎಂಬ ಪ್ರಶ್ನೆ ಅಥವಾ ಆತಂಕ ಕೆಲವರಲ್ಲಿ ಸುಳಿದಾಡಬಹುದು. ಆದರೆ ‘ಅವರ ದುಡ್ಡು, ಅವರ ಮರ್ಜಿ ಕಣ್ರೀ’ ಅನ್ನೋದು ‘ಕೊಳ್ಳುಬಾಕ ಸಂಸ್ಕೃತಿ’ಯವರ ಉದ್ಗಾರ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ