ಅಗರ್ತಾಲ: 'ರಾಣಿ' ತಳಿಯ ಅನಾನಸ್ ತ್ರಿಪುರ ರಾಜ್ಯದ ಹಣ್ಣು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಘೋಷಿಸಿದ್ದಾರೆ.
ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಈ ಘೋಷಣೆ ಮಾಡಿರುವ ರಾಮನಾಥ ಕೋವಿಂದ್ ಅವರು ಮಾತನಾಡಿ, ರಾಣಿ ತಳಿಯ ಅನಾನಸ್ ತ್ರಿಪುರಾ ರಾಜ್ಯದ ಹಣ್ಣು. ರಾಜ್ಯವನ್ನು ವಿಶ್ವ ವ್ಯಾಪಾರದೊಂದಿಗೆ ಸಂಪರ್ಕಿಸುವ ಮೂಲಕ ಅದರ ರಫ್ತು ಪ್ರಮುಖ ಭಾಗವಾಗಲಿದೆ ಎಂದು ಹೇಳಿದರು.
ವಿಶ್ವ ವ್ಯಾಪಾರದಲ್ಲಿ ರಾಜ್ಯವು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಅನಾನಸ್ ಅನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಇದು ವಿಶ್ವ ವ್ಯಾಪಾರದೊಂದಿಗೆ ಸಂಪರ್ಕ ಸಾಧಿಸುವ ಪ್ರಮುಖ ಹಂತವಾಗಲಿದೆ ಎಂದರು.
ರಾಣಿ ತಳಿಯ ಅನಾನಸ್ ಅನ್ನು ನೆರೆಯ ಬಾಂಗ್ಲಾದೇಶ ಸೇರಿದಂತೆ ವಿವಿಧ ರಾಷ್ಟ್ರಗಳು ಉತ್ತಮ ರೀತಿಯಲ್ಲಿ ಸ್ವೀಕರಿಸುವ ವಿಶ್ವಾಸವಿದೆ ಎಂದರು.
‘ರಾಣಿ ತಳಿಯ ಅನಾನಸ್ ಅನ್ನು ತ್ರಿಪುರ ರಾಜ್ಯದ ಹಣ್ಣು ಎಂದು ಘೋಷಿಸಲು ನನಗೆ ತುಂಬಾ ಖುಷಿಯಾಗಿದೆ. ಕೆಲವು ದಿನಗಳ ಹಿಂದೆಯೇ ಹಣ್ಣಿನ ಮೊಟ್ಟಮೊದಲ ರಫ್ತನ್ನು ವಿದೇಶಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಇದು ವಿಶ್ವ ವ್ಯಾಪಾರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ತ್ರಿಪುರದ ಅನಾನಸ್‌ಗೆ ಬೇರೆಡೆಯಿಂದ ಉತ್ತಮ ಬೇಡಿಕೆ ಬರಲಿದೆ’ ಎಂದು ರಾಷ್ಟ್ರಪತಿ ವಿಶ್ವಾಸ ವ್ಯಕ್ತಪಡಿಸಿದರು.
ನೆರೆಯ ಬಾಂಗ್ಲಾದೇಶ ಸೇರಿದಂತೆ ಏಷ್ಯಾ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧ ಬೆಳೆಸಲು ತ್ರಿಪುರಾ ಪ್ರಮುಖ ಸ್ಥಾನ ಹೊಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ 'ಆಕ್ಟ್ ಈಸ್ಟ್' ನೀತಿಯ ಮೂಲಕ ಈಶಾನ್ಯ ರಾಜ್ಯಗಳ ಅಭಿವೃದ್ಧಿಯನ್ನು ಗಂಭೀರವಾಗಿದೆ ಪರಿಗಣಿಸಿದೆ ಎಂದು ಹೇಳಿದರು.
ಪ್ರಸಕ್ತ ತಿಂಗಳು ತ್ರಿಪುರಾ ಮೊದಲ ಬಾರಿಗೆ ದುಬೈಗೆ ಒಂದು ಟನ್ ಅನಾನಸ್ ಹಣ್ಣುಗಳನ್ನು ರಫ್ತು ಮಾಡಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ