ಹೈದರಾಬಾದ್: ದೇಶದ ಬಡವರಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಜನಧನ ಯೋಜನೆಯ ಎರಡನೇ ಹಂತಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈಗಿರುವ ಯೋಜನೆಯನ್ನು ಇನ್ನಷ್ಟು ಸುಧಾರಿಸುವುದು, ಅತ್ಯಂತ ಹೆಚ್ಚು ಜನರಿಗೆ ಯೋಜನೆಯ ಲಾಭ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ದೇಶದಲ್ಲಿ ಸುಮಾರು 10-12 ಕೋಟಿ ಜನರು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ. ಇವರನ್ನೂ ಜನಧನ ಯೋಜನೆಯ ಫಲಾನುಭವಿಯನ್ನಾಗಿ ಮಾಡುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಯೋಜನೆಗೆ ಹೆಚ್ಚು ಸಮಯ ಹಾಗೂ ಹಣ ಅಗತ್ಯವಾಗಿದೆ. ಆದರೆ ಜನಧನ ಯೋಜನೆಯಲ್ಲಿ 32 ಕೋಟಿ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ನೀಡಿರುವುದು ದೊಡ್ಡ ಸಾಧನೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. -ಏಜೆನ್ಸೀಸ್
# ಜನಧನ ಫಲಾನುಭವಿಗಳ ಸಂಖ್ಯೆ – 32.25 ಕೋಟಿ
# ಜನಧನ ಖಾತೆಗಳಲ್ಲಿ ಜಮಾ ಆಗಿರುವ ಮೊತ್ತ – 80,675 ಕೋಟಿ ರೂ.
# ರುಪೆ ಕಾರ್ಡ್ ಪಡೆದ ಫಲಾನುಭವಿಗಳು – 24.7 ಕೋಟಿ
# ಮಹಿಳಾ ಫಲಾನುಭವಿಗಳು – 17 ಕೋಟಿ
# ಜನಧನ ಫಲಾನುಭವಿಗಳ ಸಂಖ್ಯೆ – 32.25 ಕೋಟಿ
# ಜನಧನ ಖಾತೆಗಳಲ್ಲಿ ಜಮಾ ಆಗಿರುವ ಮೊತ್ತ – 80,675 ಕೋಟಿ ರೂ.
# ರುಪೆ ಕಾರ್ಡ್ ಪಡೆದ ಫಲಾನುಭವಿಗಳು – 24.7 ಕೋಟಿ
# ಮಹಿಳಾ ಫಲಾನುಭವಿಗಳು – 17 ಕೋಟಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ