ನವದೆಹಲಿ:* ಟೆಸ್ಟ್ ಮತ್ತು ಏಕದಿನ
ಕ್ರಿಕೆಟ್ನಲ್ಲಿ ಯಾರು ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಬಗ್ಗೆ ಚರ್ಚೆಗಳಿವೆ. ಆದರೆ ಟಿ20
ಕ್ರಿಕೆಟ್ನಲ್ಲಿ ಇಂಥ ಚರ್ಚೆಗಳಿಲ್ಲ. ಯಾಕೆಂದರೆ ಟಿ20ಯಲ್ಲಿ ನಾನೇ ಶ್ರೇಷ್ಠ
ಬ್ಯಾಟ್ಸ್ಮನ್. ಅದಕ್ಕಾಗಿಯೇ ನನ್ನನ್ನು ಯುನಿವರ್ಸ್ ಬಾಸ್ ಎನ್ನುತ್ತಾರೆ ಎಂದು ವೆಸ್ಟ್
ಇಂಡೀಸ್ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.
336 ಟಿ20 ಪಂದ್ಯಗಳಲ್ಲಿ ಸರ್ವಾಧಿಕ 11,540 ರನ್ ಗಳಿಸಿರುವ ಗೇಲ್ 21 ಶತಕ, 71 ಅರ್ಧಶತಕ
ಸಿಡಿಸಿದ್ದಾರೆ. ಬೇರೆ ಯಾರೂ ಟಿ20ಯಲ್ಲಿ 7ಕ್ಕಿಂತ ಅಧಿಕ ಶತಕ ಸಿಡಿಸಿಲ್ಲ. 851 ಸಿಕ್ಸರ್
ಮತ್ತು 873 ಬೌಂಡರಿಗಳನ್ನು ಗೇಲ್ ಬಾರಿಸಿದ್ದಾರೆ. ಹೀಗಾಗಿ 38 ವರ್ಷದ ಗೇಲ್ ಮಾತುಗಳಲ್ಲಿ
ಅಹಂಕಾರಕ್ಕಿಂತ ಅಂಕಿ-ಅಂಶಗಳ ಸ್ಪಷ್ಟ ಪುರಾವೆ ಕಾಣಿಸಿದೆ. 103 ಟೆಸ್ಟ್ ಮತ್ತು 284 ಏಕದಿನ
ಪಂದ್ಯಗಳನ್ನು ಆಡಿರುವ ಹೊರತಾಗಿಯೂ ತಮ್ಮನ್ನು ಟಿ20 ಸ್ಪೆಷಲಿಸ್ಟ್ ಎನ್ನುವ ಬಗ್ಗೆ ಬೇಸರಿಸದ
ಗೇಲ್, ಹೀಗೆ ಹೇಳುವ ಮೂಲಕ ಜನರು ತಮ್ಮನ್ನು ಟಿ20 ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್
ಎಂದು ಒಪ್ಪಿಕೊಂಡಿರುವ ಖುಷಿ ಇದೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 476
ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನ ಶಾಹಿದ್ ಅಫ್ರಿದಿ ದಾಖಲೆ ಸರಿಗಟ್ಟಿರುವ ಗೇಲ್ಗೆ
ಅವರನ್ನು ಹಿಂದಿಕ್ಕುವುದು ಇಷ್ಟವಿಲ್ಲವಂತೆ. ಇದಕ್ಕಾಗಿ ಇನ್ನು ಮುಂದೆ ಬೌಂಡರಿಗಳನ್ನು
ಮಾತ್ರ ಬಾರಿಸುವುದಾಗಿ ತಮಾಷೆಯಾಗಿ ಹೇಳಿದ್ದಾರೆ.
*ಭಾರತದಲ್ಲಿ ಪ್ರಥಮ ದರ್ಜೆ ಪದಾರ್ಪಣೆ:* ಐಪಿಎಲ್ನಲ್ಲಿ ಆರ್ಸಿಬಿ ಪರ ಮಿಂಚುವ ಮೂಲಕ ಗೇಲ್
ಭಾರತೀಯರ ಮನ ಗೆದ್ದವರು. ಆದರೆ ಅದಕ್ಕೆ ಸಾಕಷ್ಟು ಮುನ್ನ ಭಾರತದಲ್ಲೇ ಅವರು ಪ್ರಥಮ ದರ್ಜೆ
ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. 1998ರಲ್ಲಿ
ವೆಸ್ಟ್ ಇಂಡೀಸ್ ಎ ತಂಡದ ಪರ ಭಾರತ ಪ್ರವಾಸ ಕೈಗೊಂಡಿದ್ದ 19 ವರ್ಷದ ಗೇಲ್, ಪುಣೆಯಲ್ಲಿ
ಮೊದಲ ಪಂದ್ಯ ಆಡಿದ್ದನ್ನು ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಬೆಂಗಳೂರಿನ ಐಪಿಎಲ್
ಪಂದ್ಯದಲ್ಲಿ 175 ರನ್ ಸಿಡಿಸಿದ್ದಕ್ಕಿಂತಲೂ ಪುಣೆಯಲ್ಲಿ ಆಡಿದ ಆ ಪಂದ್ಯವೇ ತನಗಿನ್ನೂ
ಸ್ಮರಣೀಯವಾಗಿದೆ ಎಂದಿದ್ದಾರೆ.* -ಏಜೆನ್ಸೀಸ್*

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ