ನಿರೀಕ್ಷೆಯಂತೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಆಯ್ಕೆ ಆಗಿದ್ದಾರೆ. ಪಾಕ್ನ ಸಂಸತ್ತಿನಲ್ಲಿ ಶುಕ್ರವಾರ ನಡೆದ ಪ್ರಧಾನಿ ಆಯ್ಕೆ ಚುನಾವಣೆಯಲ್ಲಿ ಇಮ್ರಾನ್ರನ್ನು 176 ಸಂಸದರು ಬೆಂಬಲಿಸಿದರು. ಅವರ ಎದುರಾಳಿ ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿ ಶಹಬಾಜ್ ಷರೀಫ್ಗೆ 96 ಮತ ದೊರಕಿತು. ಪಾಕ್ನ 22ನೇ ಪ್ರಧಾನಿಯಾಗಿರುವ ಇಮ್ರಾನ್, ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಧಾನಿ ಅಭ್ಯರ್ಥಿ ವಿಷಯವಾಗಿ ಪಿಎಂಎಲ್-ಎನ್ ಜತೆ ಮುನಿಸಿಕೊಂಡಿದ್ದ ಬಿಲಾವಲ್ ಭುಟ್ಟೋ ಮತ್ತು ಜರ್ದಾರಿ ಅವರ ಪಿಪಿಪಿ ಪಕ್ಷದ 54 ಸಂಸದರು ಮತ್ತು ಜಮಾತ್-ಇ-ಇಸ್ಲಾಮಿ ಪಕ್ಷದವರು ಮತದಾನದಲ್ಲಿ ಭಾಗವಹಿಸದೆ ತಟಸ್ಥರಾಗಿದ್ದರು.
ಇಮ್ರಾನ್ ಖಾನ್ ವಿಜೇತರಾಗಿದ್ದಾರೆಂದು ಸ್ಪೀಕರ್ ಅಸಾದ್ ಕೈಸರ್ ಘೋಷಿಸುತ್ತಿದ್ದಂತೆ ಪಿಎಂಎಲ್-ಎನ್ ಸಂಸದರು ಘೋಷಣೆಗಳನ್ನು ಕೂಗಿ ಸದನದಲ್ಲಿ ಪ್ರತಿಭಟನೆ ನಡೆಸಿದರು. ಪಿಟಿಐಗೆ ಮಹಿಳೆಯರ ಕೋಟಾದಲ್ಲಿ 28 ಮತ್ತು ಅಲ್ಪಸಂಖ್ಯಾತರ ಕೋಟಾದಲ್ಲಿ 5 ಸ್ಥಾನಗಳು ದೊರಕಿದ್ದು, ಇದರಿಂದ ಪಿಟಿಐ ಸಂಖ್ಯಾಬಲ 158 ತಲುಪಿತು. ಸರಳ ಬಹುಮತಕ್ಕೆ ಕೊರತೆಯಾಗಿದ್ದ 14 ಸದಸ್ಯರ ಬೆಂಬಲವನ್ನು ಇಮ್ರಾನ್ ಖಾನ್ ಸಣ್ಣ ಪಕ್ಷಗಳಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕ್ಗೆ ಸಿಧು
ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ವಾಘಾ ಗಡಿ ಮೂಲಕ ಶುಕ್ರವಾರ ಲಾಹೋರ್ ತಲುಪಿದ್ದಾರೆ. ನೀಲಿ ಬಣ್ಣದ ಸೂಟ್, ಗುಲಾಬಿ ವರ್ಣದ ಟರ್ಬನ್ ಧರಿಸಿದ್ದ ಸಿಧು, ಪಾಕ್ನ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬದಲಾವಣೆ ಗಾಳಿ ಬೀಸಿದೆ. ಇಮ್ರಾನ್ ಎರಡೂ ದೇಶಗಳ ಮಧ್ಯೆ ಶಾಂತಿ ಸ್ಥಾಪಿಸಲು ಮುಂದಾಗಬೇಕು ಎಂದಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ