ನವದೆಹಲಿ: ನಿಗದಿತ ಅವಧಿಗೆ ಎಂಟು ತಿಂಗಳು ಮುಂಚಿತವಾಗಿಯೇ ಪ್ರಧಾನಮಂತ್ರಿ ಉಜ್ವಲಾ ಯೋಜನೆ (ಪಿಎಂಯುವೈ)ಯಲ್ಲಿ ಐದು ಕೋಟಿ ಕಡು ಬಡ ಕುಟುಂಬಗಳಿಗೆ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಒದಗಿಸುವ ಗುರಿ ಸಾಧಿಸಿದೆ ಕೇಂದ್ರ ಸರ್ಕಾರ.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಂಸತ್ ಭವನದಲ್ಲಿ ಉಜ್ವಲಾ ಯೋಜನೆಯ 5ನೇ ಕೋಟಿ ಫಲಾನುಭವಿಗೆ ಶುಕ್ರವಾರ ವಿತರಣಾ ಪತ್ರ ನೀಡಿದರು. ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಹಾಜರಿದ್ದರು. ಹೊಗೆ ರಹಿತ ಅಡುಗೆ ಮನೆ ಪರಿಕಲ್ಪನೆಯಲ್ಲಿ ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಿಂದ 2016ರ ಮೇ 1ರಂದು ಪಿಎಂಯುವೈ ಜಾರಿಗೆ ತರಲಾಯಿತು. 2019ರ ಮಾರ್ಚ್ ಒಳಗೆ ಐದು ಕೋಟಿ ಫಲಾನುಭವಿಗಳನ್ನು ತಲುಪುವ ಗುರಿಹೊಂದಲಾಗಿತ್ತು. ಆದರೆ, 2018ರ ಆಗಸ್ಟ್ನಲ್ಲೇ ಈ ಗುರಿ ಸಾಧಿಸಲಾಗಿದೆ.
ಫಲಾನುಭವಿಗಳ ಪ್ರಮಾಣ ಶೇ.80ಕ್ಕೆ ಏರಿಕೆ
ಸಾಮಾಜಿಕ, ಆರ್ಥಿಕ ಮತ್ತು ಜಾತಿ ಆಧಾರಿತ ಜನಗಣತಿ ದತ್ತಾಂಶ ಆಧರಿಸಿ ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ಸಹಿತ ಎಲ್ಪಿಸಿ ಸಂಪರ್ಕ ನೀಡುವ ಉಜ್ವಲಾ ಯೋಜನೆಯನ್ನು 2018ರ ಏಪ್ರಿಲ್ನಲ್ಲಿ ಇನ್ನೂ ಹಲವು ವರ್ಗಗಳಿಗೆ ವಿಸ್ತರಿಸಲ್ಪಟ್ಟಿತು. ಇದರಿಂದಾಗಿ ದೇಶದಲ್ಲಿ ಶೇ. 62ರಷ್ಟಿದ್ದ ಎಲ್ಪಿಜಿ ಸಂಪರ್ಕ ಶೇ. 80ಕ್ಕೆ ಏರಿತು. ಉಜ್ವಲಾ ಯೋಜನೆಯ ಪ್ರತಿ ಫಲಾನುಭವಿಗೆ ಮುಂದಿನ ಮೂರು ವರ್ಷಗಳವರೆಗೆ ಸರ್ಕಾರ -ಠಿ; 1,600 ಸಬ್ಸಿಡಿ ಬೆಂಬಲ ನೀಡಲಿದೆ. ಈ ಫಲಾನುಭವಿಗಳ ಪೈಕಿ ಶೇ.47ರಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ್ದಾರೆ. ಡಬ್ಲ್ಯುಎಚ್ಒ ಶ್ಲಾಘನೆ
ಗ್ರಾಮೀಣ ಭಾಗದಲ್ಲಿ ಅಡುಗೆಗೆ ಉರುವಲು ಆಶ್ರಯಿಸುವುದನ್ನು ತಪ್ಪಿಸಿದ ಮತ್ತು ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಿದ ಪಿಎಂಯುವೈನಿಂದ 3.70 ಕೋಟಿ ಮಹಿಳೆಯರು ಸ್ವಚ್ಛ ಇಂಧನ ಪಡೆಯುವಂತೆ ಆಯಿತು. ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಈ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೂಡ ಶ್ಲಾಘಿಸಿದೆ.
ಪ್ರಧಾನಿ ಕರೆಗೆ ಓಗೊಟ್ಟು ಸಬ್ಸಿಡಿ ಬಿಟ್ಟರು
ಅವಶ್ಯಕತೆ ಇದ್ದವರಿಗೆ ಸಬ್ಸಿಡಿ ದೊರೆಯಬೇಕು, ಹೀಗಾಗಿ ಉಳ್ಳವರು ಎಲ್ಪಿಜಿ ಸಬ್ಸಿಡಿಯನ್ನು ಬಿಟ್ಟುಕೊಡಬೇಕು ಎಂದು ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದವರು. ಈ ಕರೆಗೆ ಓಗೊಟ್ಟು ಒಟ್ಟಾರೆ ಗ್ರಾಹಕರಲ್ಲಿ ಶೇ. 4 ಜನರು ಸ್ವ ಇಚ್ಛೆಯಿಂದ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಇದರ ಜತೆಗೆ ಸಿಲಿಂಡರ್ಗಳ ದುರ್ಬಳಕೆ ತಪ್ಪಿಸಲು ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 12 ಸಿಲಿಂಡರ್ಗಳ (14.2 ಕಿಲೊ ತೂಕ) ಮಿತಿಯನ್ನು ಸರ್ಕಾರ ವಿಧಿಸಿದೆ ಮತ್ತು ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ