ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ರಾಜ್ಯದ ಏಕೈಕ ‘ಬ್ಲೂ ಫ್ಲ್ಯಾಗ್ ಬೀಚ್’ ಯೋಗ ಪಡುಬಿದ್ರಿಗೆ

*ಹೇಮನಾಥ್ ಪಡುಬಿದ್ರಿ*
ಕಾಮಿನಿ ನದಿ ಹಾಗೂ ಅರಬ್ಬಿ ಸಮುದ್ರ ಸಂಗಮವಾಗುವ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್ ಪ್ರದೇಶ
ಮುಂದಿನ ದಿನಗಳಲ್ಲಿ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಪಡೆದು ಅಂತಾರಾಷ್ಟ್ರೀಯ ಮಾನ್ಯತೆ
ಗಳಿಸುವ ನಿರೀಕ್ಷೆ ಇದ್ದು, ಇದು ಈ ಮಾನ್ಯತೆ ಪಡೆಯುವ ರಾಜ್ಯದ ಏಕೈಕ ಮತ್ತು ರಾಷ್ಟ್ರದ 13
ಬೀಚ್‌ಗಳಲ್ಲಿ ಒಂದು ಎನ್ನುವುದು ವಿಶೇಷ.
ವಿದೇಶಿ ಪ್ರವಾಸಿಗರು ಸಾಮಾನ್ಯವಾಗಿ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ಹೊಂದಿರುವ ಸಮುದ್ರ
ತೀರಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಬ್ಲೂ ಫ್ಲ್ಯಾಗ್ ಎನ್ನುವುದು ಡೆನ್ಮಾರ್ಕ್‌ನಲ್ಲಿ
ಪ್ರಧಾನ ಕಚೇರಿ ಹೊಂದಿರುವ ಪರಿಸರ ಶಿಕ್ಷಣ ಪ್ರತಿಷ್ಠಾನ(ಎಫ್‌ಇಇ) ಸಂಸ್ಥೆಯ ಟ್ರೇಡ್ ಮಾರ್ಕ್
ಆಗಿದ್ದು, ಮಾನ್ಯತೆ ಪಡೆಯುವ ಬೀಚ್‌ಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವುದು
ಕಡ್ಡಾಯವಾಗಿರುತ್ತದೆ. ಸೂಚಿತ ಮಾದರಿಯಲ್ಲಿ ಪಡುಬಿದ್ರಿ ಬೀಚ್ ನಿರ್ಮಾಣಗೊಂಡರೆ ಬ್ಲೂ
ಫ್ಲ್ಯಾಗ್ ಸರ್ಟಿಫಿಕೇಟ್ ಸಿಗಲಿದೆ. ಈಗ ಪಡುಬಿದ್ರಿ ಬೀಚನ್ನು ಬ್ಲೂ ಫ್ಲ್ಯಾಗ್
ಸರ್ಟಿಫಿಕೇಶನ್‌ಗೆ ಪರಿಗಣಿಸಲು ಕೇಂದ್ರ ಪರಿಸರ ಮಂತ್ರಾಲಯ ಅನುಮೋದನೆ ನೀಡಿದೆ.

*8 ಕೋಟಿ ರೂ. ಯೋಜನೆ:* ಪಡುಬಿದ್ರಿ ಎಂಡ್ ಪಾಯಿಂಟ್ ಬಳಿಯ ಸುಮಾರು 500 ಮೀಟರ್ ಸರ್ಕಾರಿ
ಜಮೀನಿನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಬ್ಲೂ ಫ್ಲ್ಯಾಗ್ ಬೀಚ್ ಅನುಷ್ಠಾನವಾಗಲಿದೆ.
ಗುರ್‌ಗಾಂವ್‌ನ ಎ ಟು ಝಡ್ ಇನ್‌ಫ್ರಾ ಸರ್ವೀಸಸ್ ಲಿ. ಸಂಸ್ಥೆಗೆ ಕೇಂದ್ರ ಸರ್ಕಾರ ಈಗಾಗಲೇ
ಟೆಂಡರ್ ಅಂತಿಮಗೊಳಿಸಿದೆ.
ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಜೈವಿಕ ಶೌಚಗೃಹ, ಬಟ್ಟೆ ಬದಲಾವಣೆ – ಸ್ನಾನದ ಕೊಠಡಿ,
ಫಲಕಗಳು, ಜಾಗಿಂಗ್ ಟ್ರ್ಯಾಕ್, ಹೊರಾಂಗಣ ಜಿಮ್, ಮಕ್ಕಳ ಮನೋರಂಜನಾ ಚಟುವಟಿಕೆಗಳು,
ಪ್ಲಾಸ್ಟಿಕ್ ಬಾಟಲ್ ಬಳಕೆ ನಿಯಂತ್ರಿಸಲು ಶುದ್ಧ ಕುಡಿಯುವ ನೀರಿನ ಘಟಕ, ಘನತ್ಯಾಜ್ಯ
ಸಂಯೋಜನೆ ಮತ್ತು ಮರುಬಳಕೆ, ಕಸ ಸಂಗ್ರಹ ಬುಟ್ಟಿ, ಆಸನಗಳು, ವಿಕಲಾಂಗರಿಗೆ ಗಾಲಿಕುರ್ಚಿ,
ಸೌರಶಕ್ತಿ ಬಳಕೆ, ಎಲ್‌ಇಡಿ ಬಲ್ಬ್, ಛತ್ರಿಗಳೊಂದಿಗೆ ಲ್ಯಾಂಜರ್ ಕುರ್ಚಿಗಳು, ಇಟಿಪಿ ಮೂಲಕ
ನೀರಿನ ಮರುಬಳಕೆ, ಸಿಸಿಟಿವಿ ಕಣ್ಗಾವಲು, ಸುರಕ್ಷತಾ ಧ್ವಜಗಳು, ವೀಕ್ಷಣೆ ಗೋಪುರ ನಿರ್ಮಾಣ
ಯೋಜನೆ ಒಳಗೊಂಡಿದೆ.
ಮೂಲಸೌಕರ್ಯ ನಿರ್ಮಾಣದ ಜತೆಗೆ ಮಲಿನ ನೀರು ಸಮುದ್ರಕ್ಕೆ ಹರಿಯದಂತೆ ಕ್ರಮ, ಬೀಚ್
ಸ್ವಚ್ಛತೆದಾರರ ನೇಮಕ, ಬೀಚ್ ಕ್ಲೀನಿಂಗ್ ಮಷಿನ್, ಭದ್ರತಾ ಸಿಬ್ಬಂದಿ, ಜೀವರಕ್ಷಕ – ಪ್ರಥಮ
ಚಿಕಿತ್ಸಾ ವ್ಯವಸ್ಥೆ ಇರುತ್ತದೆ. ಬೀಚ್ ನಿರ್ಮಾಣದ ಎರಡು ವರ್ಷ ನಿರ್ವಹಣಾದಾರರದ್ದೇ
ಜವಾಬ್ದಾರಿ. ಇದರೊಂದಿಗೆ ಸ್ಥಳೀಯರಿಗೆ ಪರಿಸರ ಶಿಕ್ಷಣ, ಪರಿಸರದ ಬಗ್ಗೆ ಅರಿವು ಕಾರ್ಯಕ್ರಮ,
ಸ್ಥಳೀಯ ಸಹಭಾಗಿತ್ವದಾರರಿಗೆ ತರಬೇತಿ, ಹೋಂ ಸ್ಟೇ ಬಗ್ಗೆ ಅಭಿಯಾನ ಹಾಗೂ ಪ್ರವಾಸೋದ್ಯಮವನ್ನು
ಒಂದು ಉತ್ತಮ ಆರ್ಥಿಕ ಮಾರ್ಗೋಪಾಯವಾಗಿ ಬಳಸಿಕೊಳ್ಳುವ ಬಗ್ಗೆ ಪ್ರಚಾರ ನೀಡಿ ಸುಸ್ಥಿರ
ಪ್ರವಾಸೋದ್ಯಮ ಉತ್ತೇಜಿಸಲಾಗುತ್ತದೆ. ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಯೊಂದಿಗೆ ಮುಂದಿನ
ಹಂತದಲ್ಲಿ ಸ್ಮಾರ್ಟ್ ವಿಲೇಜ್ ಯೋಜನೆ ಕೂಡ ಅನುಷ್ಠಾನವಾಗಲಿದೆ.
ಯೋಜನೆ ಬಗ್ಗೆ ಇನ್ನೂ ಸ್ಥಳೀಯರಲ್ಲಿ ಅನುಮಾನಗಳಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು
ಮನವರಿಕೆ ಮಾಡಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ
ಅನುಷ್ಠಾನಗೊಳಿಸಿದರೆ ಪಡುಬಿದ್ರಿ ಬೀಚ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿ ಪ್ರವಾಸಿಗರನ್ನು
ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ.

*100 ಕೋಟಿ ರೂ. ವಹಿವಾಟು: *ಸಮಗ್ರ ಕರಾವಳಿ ನಿರ್ವಹಣೆ ಸಂಸ್ಥೆ, ಪರಿಸರ, ಅರಣ್ಯ ಮತ್ತು
ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಬೀಚ್ ನಿರ್ವಹಣೆ ಸೇವಾ ಯೋಜನೆ (ಬಿಇಎಎಂಎಸ್) ಸಹಯೋಗದಲ್ಲಿ
ಸ್ವಚ್ಛ ಹಾಗೂ ಉತ್ತಮ ಪರಿಸರ ಮತ್ತು ನೀರಿನ ಗುಣಮಟ್ಟ ಹೊಂದಿರುವ 13 ಬೀಚ್‌ಗಳನ್ನು
ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ, ಗುಜರಾತ್‌ನ
ಶಿವರಾಜ್‌ಪುರ, ದಿಯುವಿನ ಗೋಗ್ಲಾ, ಮಹಾರಾಷ್ಟ್ರದ ಭೋಗ್ವೆ, ಗೋವಾದ ಮಿರಮಾರ್, ಕೇರಳದ
ಕಪ್ಪಡ್, ಪುದುಚ್ಚೇರಿಯ ಎಮರಾಲ್ಡ್, ತಮಿಳುನಾಡಿನ ಮಹಾಬಲಿಪುರಂ, ಆಂಧ್ರದ ಋಷಿಕೊಂಡ, ಪಶ್ಚಿಮ
ಬಂಗಾಲದ ತಾಜ್‌ಪುರ್, ಅಂಡಮಾನ್ ನಿಕೋಬಾರ್‌ನ ರಾಧಾನಗರ, ಲಕ್ಷದ್ವೀಪದ ಬಂಗಾರಂ ಸಹಿತ 13
ಬೀಚ್‌ಗಳನ್ನು ಬ್ಲೂ ಫ್ಲಾೃಗ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ಬ್ಲೂ ಫ್ಲಾೃಗ್ ಸರ್ಟಿಫಿಕೇಶನ್
ಪಡೆದ ಬೀಚ್‌ಗಳು ವಾರ್ಷಿಕ ಸುಮಾರು 100 ಕೋಟಿ ರೂ. ವಹಿವಾಟು ನಿರೀಕ್ಷೆ ಹೊಂದಿವೆ.

ಕರಾವಳಿ ನಿಯಂತ್ರಣ ವಲಯ ಕಾಯ್ದೆ ಉಲ್ಲಂಘಿಸಿ ಯಾವುದೇ ಕಟ್ಟಡಗಳು ಈ ಯೋಜನೆಯಲ್ಲಿಲ್ಲ.
ಯಾವುದೇ ಖಾಸಗಿ ಜಾಗ, ಮನೆಗಳು, ಮರ, ಗಿಡಗಳನ್ನು ತೆರವುಗೊಳಿಸುವುದಿಲ್ಲ. ಬೀಚ್
ಸಂಪೂರ್ಣವಾಗಿ ರೂಪುಗೊಂಡ ಬಳಿಕ ಅಂತಾರಾಷ್ಟ್ರೀಯ ಸಂಸ್ಥೆ ಮೂಲಕ ಪರಿಶೀಲನೆ ನಡೆದು ಬ್ಲೂ
ಫ್ಲ್ಯಾಗ್ ಬೀಚ್ ಎಂದು ಘೋಷಣೆಯಾಗಲಿದೆ. ಎರಡು ವರ್ಷ ಕೇಂದ್ರ ಪರಿಸರ ಸಚಿವಾಲಯವೇ
ನಿರ್ವಹಿಸುತ್ತದೆ. ಬಳಿಕ ಜಿಲ್ಲಾಡಳಿತಕ್ಕೆ ಹಸ್ತಾಂತರವಾಗಲಿದೆ.
*– ಅನಿತಾ ಭಾಸ್ಕರ್, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಉಡುಪಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...