ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಭದ್ರವಾಗಲಿ ಬೇಲಿ

ಅಸ್ಸಾಂ ರಾಜ್ಯದ 3.29 ಕೋಟಿ ಜನಸಂಖ್ಯೆಯಲ್ಲಿ ಅಕ್ರಮ ವಲಸಿಗರ ಪಾಲೇ ಬರೋಬ್ಬರಿ 40 ಲಕ್ಷದಷ್ಟಿದೆ ಎಂಬ ಅಂಶ ಆಘಾತಕಾರಿಯಷ್ಟೇ ಅಲ್ಲ, ದೇಶದ ಭದ್ರತೆ-ಸುರಕ್ಷತೆ-ಸಾರ್ವಭೌಮತೆಗಳಿಗೆ ಸಂಚಕಾರ ಒದಗದ ರೀತಿಯಲ್ಲಿ ಗಡಿಬೇಲಿಯನ್ನು ಎಷ್ಟರಮಟ್ಟಿಗೆ ಭದ್ರಗೊಳಿಸಬೇಕಿದೆ ಎಂಬುದರ ಕುರಿತಾದ ಎಚ್ಚರಿಕೆಯ ಗಂಟೆಯೂ ಹೌದು. ನಮ್ಮ ಕರ್ನಾಟಕದಲ್ಲಿಯೂ ಇಂಥ ಸಾವಿರಾರು ವಲಸಿಗರಿದ್ದಾರೆ. ನಮ್ಮ ದೇಶದೊಳಗೆ ಕದ್ದು ನುಸುಳಿ, ಸುದೀರ್ಘ ಕಾಲದಿಂದ ಇಲ್ಲೇ ತಳವೂರುವ ಅಕ್ರಮ ವಲಸಿಗರಿಂದಾಗಿ ಭಾರತೀಯ ಅಸ್ಮಿತೆ, ಸಂಸ್ಕೃತಿ-ಪರಂಪರೆ, ಸಾಮಾಜಿಕ ರೀತಿನೀತಿಗಳಲ್ಲಿ ಅನಪೇಕ್ಷಿತ ವ್ಯತ್ಯಯವಾಗುವುದರ ಜತೆಗೆ, ಮೂಲನಿವಾಸಿಗಳು ಮತ್ತು ಅಕ್ರಮ ವಲಸಿಗರ ನಡುವಿನ ಜಟಾಪಟಿಗೂ ಅದು ಕಾರಣವಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಾಜಕೀಯ ಹಿತಾಸಕ್ತಿಗಳು ಅಥವಾ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಇಂಥವರಿಗೆ ಆಧಾರ್ ಗುರುತಿನ ಚೀಟಿಯಂಥ ಮೂಲಭೂತ ದಾಖಲೆಗಳೂ ಸೇರಿದಂತೆ ಹತ್ತು ಹಲವು ಸೌಲಭ್ಯ ಕಲ್ಪಿಸಿಕೊಡುವವರಿಂದಾಗಿ (ಅಕ್ರಮವಾಗಿ ಭಾರತದೊಳಗೆ ನುಸುಳಿರುವ ಲಕ್ಷಾಂತರ ವಲಸಿಗರು ನಕಲಿ ದಾಖಲೆಗಳನ್ನು ನೀಡಿ, ಈ ನೆಲದಲ್ಲಿ ಮತದಾನ ಮಾಡುವ ಹಕ್ಕನ್ನೂ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿಬರುತ್ತಿದೆ) ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದು ಅಪ್ರಿಯ ಸತ್ಯ. ಆದರೆ ಅದಿನ್ನೂ ಕೆಲವರಿಗೆ ಅರ್ಥವಾಗಿಲ್ಲ ಎಂಬುದೇ ವಿಷಾದನೀಯ!
ಜಾಗತೀಕರಣ, ಉದಾರೀಕಣ, ಉದ್ಯಮ-ಸ್ನೇಹಿ ಮತ್ತು ಹೂಡಿಕೆದಾರ-ಸ್ನೇಹಿ ವಾತಾವರಣ ಇವೇ ಮೊದಲಾದ ಪರಿಕಲ್ಪನೆಗಳಿಗೆ ಮತ್ತು ಸಾಧ್ಯತೆಗಳಿಗೆ ದೇಶ ಒಡ್ಡಿಕೊಂಡಾಗಿನಿಂದ, ವಿದೇಶಿ ಪ್ರಜೆಗಳ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದು ಯಾವುದೇ ಭೂರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಯಲ್ಲಿ ಕಾಣಬರುವ ವಾಡಿಕೆಯ ಬೆಳವಣಿಗೆ. ಆದರೆ, ಉನ್ನತ ಅಧ್ಯಯನಕ್ಕೆಂದೋ, ಪ್ರವಾಸಕ್ಕೆಂದೋ ಭಾರತಕ್ಕೆ ಭೇಟಿ ನೀಡಿದವರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದಿದ್ದರೆ, ಅವರ ಜಾತಕ ಸೋಸಿ ಹೊರತೆಗೆಯುವಂಥ ಸಮರ್ಥ ಉಪಕ್ರಮ ಅಸ್ತಿತ್ವದಲ್ಲಿರಬೇಕು. ಇಲ್ಲವಾದಲ್ಲಿ ಇಂಥವರಲ್ಲಿ ಕುತ್ಸಿತ ಚಿಂತನೆಗಳು ಮನೆಮಾಡಿಕೊಂಡಿದ್ದರೆ ಅಂತಿಮವಾಗಿ ಸಂಕಷ್ಟ ಎದುರಿಸುವುದು ನಾವೇ ಅಲ್ಲವೇ? ನೈಜೀರಿಯಾ ಮೂಲದ ಅನೇಕರು ಭಾರತದಲ್ಲೇ ಇನ್ನೂ ಉಳಿದುಕೊಂಡು ಮಾದಕವಸ್ತು ಮಾರಾಟಜಾಲವನ್ನು ವ್ಯವಸ್ಥಿತವಾಗಿ ಬೆಳೆಸಿಕೊಂಡು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿರುವ ನಿದರ್ಶನಗಳು ಈ ಮಾತಿಗೆ ಪುಷ್ಟಿನೀಡಬಲ್ಲವು. ಅನೇಕ ರೋಹಿಂಗ್ಯಾ ವಲಸಿಗರು ಐಸಿಸ್ ಮತ್ತು ಇತರೆ ಉಗ್ರಸಂಘಟನೆಗಳೊಂದಿಗೆ ಗುಪ್ತಸಂಬಂಧ ಹೊಂದಿದ್ದು, ಇವರ ಅಸ್ತಿತ್ವ ಮುಂದುವರಿದಲ್ಲಿ ಕೋಮುಗಲಭೆ ಸೇರಿದಂತೆ ಇತರ ವಿಧ್ವಂಸಕ ಕೃತ್ಯಗಳಿಗೆ ಅವರು ಚಿತಾವಣೆ ನೀಡಬಹುದು ಎಂಬ ಕಳವಳದೊಂದಿಗೆ ಕೇಂದ್ರ ಸರ್ಕಾರ, ಅವರನ್ನು ಮ್ಯಾನ್ಮಾರ್​ಗೆ ಗಡಿಪಾರು ಮಾಡುವುದರ ಕುರಿತು ಸವೋಚ್ಚ ನ್ಯಾಯಾಲಯಕ್ಕೆ ಹಿಂದೆ ಕೋರಿಕೆ ಸಲ್ಲಿಸಿದ್ದು ಇಲ್ಲಿ ಸ್ಮರಣೀಯ. ಹೀಗೆ ದೇಶದೊಳಗೆ ನುಸುಳಿಕೊಂಡಿರುವ, ಇಲ್ಲೇ ನೆಲೆಗೊಂಡಿರುವ ಅಕ್ರಮ ವಲಸಿಗರ ಲೆಕ್ಕ ತೆಗೆಯುವುದು ಅನಿವಾರ್ಯ. ಅಸ್ಸಾಂನಲ್ಲಿನ ಇಂಥವರನ್ನು ಗಡಿಪಾರು ಮಾಡಬೇಕೋ ಅಥವಾ ಸವಲತ್ತುಗಳು ಸಿಗದಂತೆ ಮಾಡಿ ಇಲ್ಲೇ ಉಳಿಯಲು ಅವಕಾಶ ಕೊಡಬೇಕೋ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ವನವಾಗಿಲ್ಲ. ಆದರೆ ಹೀಗೆ ಕ್ರಮ ಜರುಗಿಸುವುದಕ್ಕೆ ಮುಂದಾದಲ್ಲಿ, ಅವರನ್ನು ವೋಟ್​ಬ್ಯಾಂಕ್ ರೀತಿಯಲ್ಲಿ ಸಲಹುತ್ತಿರುವವರಿಗೆ ಆಘಾತವಾಗಿ, ಬೇರೆಯದೇ ರೀತಿಯಲ್ಲಿ ಇದಕ್ಕೆ ತಡೆಯೊಡ್ಡಬಹುದು ಎಂಬ ಗ್ರಹಿಕೆಯನ್ನು ಪುರಸ್ಕರಿಸುವ ಅಗತ್ಯವಿಲ್ಲ. ಕಾರಣ, ಯಾವುದೇ ರಾಜಕೀಯ ವ್ಯಕ್ತಿ, ರಾಜಕೀಯ ಪಕ್ಷಕ್ಕಿಂತ ಮಿಗಿಲಾದುದು ದೇಶದ ಹಿತರಕ್ಷಣೆ. ಅದು ಎಲ್ಲರ ಆದ್ಯಕರ್ತವ್ಯವಾಗಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...