ಅಟಲ್ ಬಿಹಾರಿ ವಾಜಪೇಯಿ
ಜನನ:
ಡಿಸೆಂಬರ್
25, 1924
ಹುಟ್ಟಿದೂರು:
ಗ್ವಾಲಿಯರ್,
ಮಧ್ಯಪ್ರದೇಶ
ಭಾರತದ ಪ್ರಧಾನ ಮಂತ್ರಿ
ಅಧಿಕಾರಕ್ಕೆ
ಬಂದದ್ದು:
11ನೇ ಪ್ರಧಾನಮಂತ್ರಿಯಾಗಿ
ರಾಜಕೀಯ
ಪಕ್ಷ:
ಭಾರತೀಯ
ಜನತಾ ಪಕ್ಷ
ಮೊದಲನೆಯ
ಕಾರ್ಯಾವಧಿ
ಅಧಿಕಾರ
ವಹಿಸಿಕೊಂಡದ್ದು:
ಮೇ 16,
1996
ಅಧಿಕಾರ
ಬಿಟ್ಟುಕೊಟ್ಟದ್ದು:
ಜೂನ್
1, 1996
ಪೂರ್ವಾಧಿಕಾರಿ:
ನರಸಿಂಹರಾವ್
ಉತ್ತರಾಧಿಕಾರಿ:
ದೇವೇಗೌಡ
ಎರಡನೆಯ
ಕಾರ್ಯಾವಧಿ
ಅಧಿಕಾರ
ವಹಿಸಿಕೊಂಡದ್ದು:
ಮಾರ್ಚ್
19, 1998
ಅಧಿಕಾರ
ಬಿಟ್ಟುಕೊಟ್ಟದ್ದು:
ಮೇ 22,
2004
ಪೂರ್ವಾಧಿಕಾರಿ:
ಐ ಕೆ ಗುಜ್ರಾಲ್
ಉತ್ತರಾಧಿಕಾರಿ:
ಡಾ. ಮನಮೋಹನ್ ಸಿಂಗ್.
ಅಟಲ್ ಬಿಹಾರಿ ವಾಜಪೇಯಿ (ಜನನ
ಡಿಸೆಂಬರ್ 25, 1924) ಅಟಲ್ ಅವರು ಹುಟ್ಟಿದ್ದು
ಕ್ರಿಸ್ಮಸ್ ದಿನದಂದು.[೧]
ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾಜಕಾರಣಿಯಾಗಿ ತಮ್ಮ ಅಪೂರ್ವ ಯೋಗದಾನವನ್ನು
ನೀಡಿದ್ದಾರೆ. ಅವರೊಬ್ಬ ಕವಿ, ಹೆಸರಾಂತ
ಪತ್ರಕರ್ತ, ಶ್ರೇಷ್ಠ ವಾಗ್ಮಿ, ಚಿಂತಕ,
ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ, [೨] ಹಾಗೂ ನುಡಿದಂತೆ
ನಡೆಯುವ ಮಾನವತಾವಾದಿಯಾಗಿ ಭಾರತ, ಹಾಗೂ ವಿಶ್ವದಲ್ಲಿ
ಹೆಸರುವಾಸಿಯಾಗಿದ್ದಾರೆ.• ಅಟಲ್ ರವರು, 1924 ರಲ್ಲಿ
ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ
ವಾಜಪೇಯಿ ಅವರಿಗೆ ಮಗನಾಗಿ ಮಧ್ಯ
ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ
ಚವ್ವಾಣಿ ಎನ್ನುವ ಗ್ರಾಮದಲ್ಲಿ ಜನಿಸಿದರು.[೩] ತಂದೆ ಒಬ್ಬ
ಕವಿ, ಮಾತ್ತು ಸಾಮಾನ್ಯ ಶಾಲೆಯ
ಉಪಾಧ್ಯಾಯರು. ಅಟಲ್ ಅವರ 'ಅಜ್ಜ
ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ'
ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು.
• ಅಟಲ್
ಅವರ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ
ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್
ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ
ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ
ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ
ಕಾಲೇಜಿನಿಂದ ಪಡೆದರು.
• ಕಾನ್ಪುರದ
ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್
ಡಿಗ್ರಿ ಪಡೆದ ಅಟಲ್ 1942ರಲ್ಲಿ
ಕ್ವಿಟ್ ಇಂಡಿಯ ಚಳವಳಿಯ ಮೂಲಕ,
ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್
ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ
ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ
ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು.
'ವೀರ ಅರ್ಜುನ' ಹಾಗೂ 'ಪಾಂಚಜನ್ಯ'
ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ
ಕವಿಯಾಗಿ ಸೇವೆ ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ