ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಬೀದಿಮಕ್ಕಳು ಮತ್ತು ಸಮಾಜ, (ಪ್ರಶ್ನೋತ್ತರ ರೂಪದಲ್ಲಿ

ಮನುಷ್ಯನ ದೈನಂದಿನ ಚಟುವಟಿಕೆಗಳ ಕುರಿತು ಮಾರ್ಗದರ್ಶನ ಮಾಡುವ ಚಿಂತನೆಗಳು)
ಬೀದಿಮಕ್ಕಳು ಎಂದರೆ ಯಾರು?
ಯಾರಿಗೆ ಅಪ್ಪ-ಅಮ್ಮ, ಬಂಧು, ಬಳಗ ಯಾರೂ ಇರುವುದಿಲ್ಲವೋ ಅವರೇ ಬೀದಿಮಕ್ಕಳು. ಸಾಮಾನ್ಯವಾದ ಭಾಷೆಯಲ್ಲಿ ಹೇಳುವುದಾದರೆ ಅವರನ್ನು ‘ದೇವರೇ ಕಾಪಾಡುತ್ತಿದ್ದಾನೆ’ ಎಂದು. ಏಕೆಂದರೆ ಇವರು ಸಣ್ಣ ವಯಸ್ಸಿನಿಂದಲೇ ಅಥವಾ ಹುಟ್ಟಿನಿಂದಲೇ ಇವರ ಸಂಬಂಧಿಕರಿಂದ ದೂರವಾಗಿರುತ್ತಾರೆ. ಇವರು ಇಡೀ ದಿನ ಏನು ಮಾಡುತ್ತಾರೆ? ಎಲ್ಲಿರುತ್ತಾರೆ? ಎಂಬುದನ್ನು ತಿಳಿದಾಗ ಒಂದೆಡೆ ಭಯವಾದರೆ ಇನ್ನೊಂದೆಡೆ ಅನುಕಂಪವುಂಟಾಗುತ್ತದೆ. ದಿನಪೂರ್ತಿ ಬೀದಿಯಲ್ಲಿಯೇ ಇದ್ದು, ದಿನಾಂತ್ಯಕ್ಕೆ ಎಲ್ಲೋ ಮಲಗಿ ವಿಶ್ರಾಂತಿ/ ನಿದ್ದೆ ಮಾಡುವವರು. ಎಂದರೆ ಅವರಿಗೆ ಅವರ ಪಾಲಕರಿಂದ, ಹೆತ್ತವರಿಂದ ಪೋಷಣೆ ಎಂಬುದೇ ತಿಳಿಯದು. ಇಂತಹವರು ಪ್ರಾಣಿಗಳಂತೆಯೇ ಬದುಕುತ್ತಾರೆ. ಚಿಂದಿ, ಕಸ ಆಯುತ್ತಾರೆ. ಭಿಕ್ಷೆ ಬೇಡುತ್ತಾರೆ. ಪ್ರಾಯಕ್ಕೆ ಬಂದಮೇಲೆ ನಾನಾ ದುಶ್ಚಟಗಳಿಗೆ ಪರಿಸ್ಥಿತಿಗಳ ಒತ್ತಡದಿಂದಾಗಿ ಒಗ್ಗಿಹೋಗುತ್ತಾರೆ.
ಬೀದಿಮಕ್ಕಳು ಹೇಗೆ ಬದುಕುತ್ತಾರೆ? ಎಲ್ಲಿರುತ್ತಾರೆ?
ಸಾಮಾನ್ಯವಾಗಿ ಅವರ ಬದುಕು ಬಹಳವೇ ವಿಚಿತ್ರ. ಕೆಲವೊಮ್ಮೆ ಭಯಾನಕವೂ ಕೂಡ. ಬೆಳಗ್ಗೆ ಎದ್ದು ಸಿಕ್ಕಲ್ಲಿ ತಮ್ಮ ಶೌಚಗಳನ್ನು ಮುಗಿಸಿಕೊಂಡು, ಎಲ್ಲೆಡೆ ಸುತ್ತುತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಓಡಾಡುತ್ತಾ, ಭಿಕ್ಷೆ ಬೇಡುತ್ತಾ ಇರುತ್ತಾರೆ. ಅದರಿಂದ ಹಣ ಗಳಿಸಿ ಆ ಹಣವನ್ನು ಮನಸೋ ಇಚ್ಛೆ ಖರ್ಚುಮಾಡುತ್ತಾರೆ. ಮಧ್ಯಾಹ್ನಗಳಲ್ಲಿ ಉಪವನ, ಬಸ್ ನಿಲ್ದಾಣ ಇತ್ಯಾದಿ ಸ್ಥಾನಗಳಲ್ಲಿ ವಿಶ್ರಮಿಸಿ ಸಂಜೆಯ ತನಕ ಎಲ್ಲ ಕಡೆ ಸುತ್ತಾಡಿ ಸಾಮಾನ್ಯವಾಗಿ ಅವರ ಆವಾಸವಾದ ಯಾವುದೋ ಷೆಡ್, ಜೋಪಡಿ, ಮುರುಕುಮನೆ ಇತ್ಯಾದಿಗಳನ್ನು ಸೇರುವಾಗ ರಾತ್ರಿಯಾಗಿರುತ್ತದೆ. ಏಕಾಂತವನ್ನು ಕಳೆಯಲಿಕ್ಕಾಗಿ ಇಂತಹವರಲ್ಲಿ ಅನೇಕರು ಅನೇಕ ತರಹದ ದುಶ್ಚಟಗಳಿಗೂ ದಾಸರಾಗಿರುತ್ತಾರೆ. ಕೆಲವರು ಕಳ್ಳತನವನ್ನೂ, ಇನ್ನು ಕೆಲವರು ಮಾಡಬಾರದಂಥ ಕೆಲಸಗಳಲ್ಲೂ ತೊಡಗಿ ಸಮಾಜಘಾತುಕರೂ ಆಗುತ್ತಾರೆ.
ಅವರನ್ನು ಗುರುತಿಸಬಹುದೇ?
ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಸ್ವಲ್ಪ ಗಮನಿಸಿದಾಗ ಅಲ್ಲಲ್ಲಿ ಕಾಣಸಿಗುತ್ತಾರೆ. ಅವರೂ ನಮ್ಮವರೇ ಎಂಬ ಭಾವವನ್ನು ತಾಳಿದಾಗ ನಾವು ಅವರನ್ನು ಗುರುತಿಸಲೂ ಮತ್ತು ಮೇಲೆ ತರಲೂ ಸಾಧ್ಯವಾಗುತ್ತದೆ. ಅದಕ್ಕೆ ನಮಗೆ ಇರಬೇಕಾದುದು ಗುರುತಿಸಬಲ್ಲ ಕರುಣೆಯ ಕಣ್ಣುಗಳು.
ಅವರನ್ನು ತಿದ್ದಬಹುದೇ?
ಬಿತ್ತಿದಂತೆ ಬೆಳೆ, ಬೆಳೆಸಿದಂತೆ ಮರ ಎಂಬಂತೆ ಇವರಿಗೆ ಸಮಾಜದಲ್ಲಿ ಯಾವ ವಿಧವಾದ ಉಪಚಾರ ಸಲ್ಲುವುದೋ ಅಂಥ ಪ್ರತಿಫಲವನ್ನು ಅಪೇಕ್ಷಿಸಬಹುದು. ಆದ್ದರಿಂದ ಸೂಕ್ತ ಸಂಸ್ಕಾರಗಳಿಂದ ಅವರನ್ನು ತಿದ್ದಬಹುದಾಗಿದೆ. ಮಾನವ ಪ್ರೀತಿಯನ್ನೇ ಕಾಣದೆ, ಅನುಮಾನ, ದ್ವೇಷಗಳ ನಡುವೆಯೇ ಬೆಳೆಯುತ್ತಿರುವ ಅವರನ್ನು ತಿದ್ದುವುದು ಪ್ರಾರಂಭದಲ್ಲಿ ಕಷ್ಟ ಎನ್ನಿಸಿದರೂ ಸಾಧ್ಯ.
ಹೇಗೆ ತಿದ್ದಬಹುದು? ಯಾರು ತಿದ್ದಬಹುದು?
ನಾವು ಈ ಸಮಾಜದ ಅಂಗ, ಅವರೂ ಸಹ ಈ ಸಮಾಜದ್ದೇ ಭಾಗ. ಆದ್ದರಿಂದ ವಿಶೇಷವಾದ ಪ್ರೀತಿ ನೀಡಿ ನಾವು ಅವರನ್ನು ತಿದ್ದಬೇಕು. ಪ್ರೀತಿಯೊಂದೇ ಅವರನ್ನು ತಿದ್ದಬಲ್ಲುದು. ಕೆಲವು ಸಂಘಸಂಸ್ಥೆಗಳೂ ಈ ಕೆಲಸಗಳನ್ನು ನಿರ್ವಹಿಸುತ್ತಿವೆ. ಬೀದಿ ಮಕ್ಕಳಿಗೆ ಸಂಸ್ಕಾರವೇ ಅತಿ ಶ್ರೇಷ್ಠ ಮದ್ದು. ಸ್ವಚ್ಛಂದವಾಗಿ ಬೆಳೆದ ಅವರಿಗೆ ಮನೆ, ಆಶ್ರಮ ಇವೆಲ್ಲ ಜೈಲು ಎನಿಸಿದರೂ ಆಶ್ಚರ್ಯವಿಲ್ಲ. ಆದರೆ ತಾಳ್ಮೆಯಿಂದ ಪ್ರೀತಿಯಿಂದ ಅವರನ್ನು ಕಂಡರೆ ಉಳಿಯುತ್ತಾರೆ. ಬೆಂಗಳೂರಿನ ಹಿಂದು ಸೇವಾ ಪ್ರತಿಷ್ಠಾನದವರು ನಡೆಸುತ್ತಿರುವ ‘ನೆಲೆ’ಯಂಥ ಕೇಂದ್ರಗಳು ಇದಕ್ಕೆ ಸಾಕ್ಷಿ.
(ಆಧಾರಗ್ರಂಥ: ‘ಮನೆಯೇ ಮಾಂಗಲ್ಯ’ 9449057714)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...