ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು, ಅದ್ಭುತ ವಾಗ್ಮಿ, ದೂರದರ್ಶಿ ನಾಯಕ. ರಾಜಕೀಯ ಮುತ್ಸದ್ದಿ. ಅವರು ಪ್ರಧಾನಿಯಾಗಿದ್ದಾಗ ನೀಡಿದ ಆಡಳಿತ ಮಾದರಿ.
ಆಧುನಿಕ ಭಾರತದಲ್ಲಿ ಸಾಮ್ರಾಟ್ ಅಶೋಕನಂತೆ ಇದ್ದವರು. ಅಭಿವೃದ್ಧಿ ಕನಸು ಕಂಡು ಅದನ್ನು ಸಾಕಾರಗೊಳಿಸಿದರು. ದೇಶದ ಉದ್ದಗಲಕ್ಕೂ ಚತುಷ್ಪಥ ಹೆದ್ದಾರಿ ಗಳ ನಿರ್ಮಾಣಕ್ಕೆ ಕಾರಣಕರ್ತರಾದರು. ಇಂತಹ ಹೆದ್ದಾರಿಗಳಿಂದ ಆಧುನಿಕ ಭಾರತದ ಆರ್ಥಿಕ ಚಿತ್ರಣವನ್ನೇ ಬದಲಿಸಿದರು. ಹಳ್ಳಿ ಹಳ್ಳಿಗೂ ಸಂಪರ್ಕ ಜಾಲ ಕಲ್ಪಿಸಿದರು. ಇದು ಒಬ್ಬ ದೂರದರ್ಶಿ ಪ್ರಧಾನಿಯ ಕಾರ್ಯವೈಖರಿಗೆ ಸಾಕ್ಷಿ. ಇದೂ ಕೂಡ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಸಾಧನೆಯೇ.
ಸ್ವಾತಂತ್ರ್ಯ ನಂತರ ಭಾರತದಲ್ಲಿ ಮೇರುಸದೃಶ ನಾಯಕರಾಗಿ ಜನಮನ್ನಣೆ ಪಡೆದವರು ಯಾರಾದರೂ ಇದ್ದರೆ ಅದು ನೆಹರು ಬಳಿಕ ವಾಜಪೇಯಿ ಅವರೇ. ಇಂದಿರಾಗಾಂಧಿಗೆ ದೈತ್ಯಶಕ್ತಿ ಇದ್ದರೂ ಮುತ್ಸದ್ದಿಯಾಗಿರಲಿಲ್ಲ. ಪ್ರತಿಪಕ್ಷ ಸಾಲಿನಲ್ಲಿ ಕುಳಿತು ರಚನಾತ್ಮಕ ಕೆಲಸ ಮಾಡಿದ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಅಷ್ಟೇ, ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ನಾಯಕರ ಜತೆ ಹಿಂಜರಿಕೆ ಇಲ್ಲದೆ ವ್ಯವಹರಿಸುತ್ತಿದ್ದರು.
ಪೋಖ್ರಾನ್ ಅಣುಸ್ಫೋಟ ಸಂದರ್ಭದಲ್ಲಿ ಇಡೀ ವಿಶ್ವ ಭಾರತದ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿತ್ತು. ಅದಕ್ಕೆ ಹೆದರಲಿಲ್ಲ. ಸಂಬಂಧ ಸುಧಾರಣೆಗೆಂದು ಪಾಕಿಸ್ತಾನಕ್ಕೆ ಸ್ನೇಹದ ಹಸ್ತ ಚಾಚಿದರು. ಪಾಕಿಗಳು ಎಡವಟ್ಟು ಮಾಡಿಕೊಂಡು ಕಾರ್ಗಿಲ್ ಯುದ್ಧ ಸಾರಿದರು. ಯುದ್ಧದಲ್ಲಿ ತಿರುಗೇಟು ನೀಡಿದ್ದೂ ಅಲ್ಲದೆ, ಗೆಲುವು ಸಾಧಿಸುವಲ್ಲಿ ಪ್ರೇರಣೆ ನೀಡಿದವರು ಅಟಲ್. ಗುಜರಾತ್‌ನಲ್ಲಿ ದೊಂಬಿ ನಡೆದಾಗ ರಾಜಧರ್ಮ ಪಾಲಿಸುವಂತೆ ಮುಖ್ಯಮಂತ್ರಿ ಮೋದಿಯವರಿಗೆ ಸೂಚಿಸಿದರು. ಅತ್ಯಂತ ಕ್ಲಿಷ್ಟ ಸಂದರ್ಭ ಬಂದಾಗ ಪಕ್ಷದ ಎಲ್ಲೆ ಮೀರಿ ನಿಲ್ಲುವ ಗುಣ ಅವರಲ್ಲಿತ್ತು. ಅತಿ ದೀರ್ಘ ಕಾಲ ಸಂಸತ್ತನ್ನು ಪ್ರತಿನಿಧಿಸಿದ್ದರು. ಪ್ರಧಾನಿಯಾದವರಲ್ಲಿ ಯಾರೂ ಅಷ್ಟು ಕಾಲ ಸಂಸತ್ ಪಟುವಾಗಿ ಕಾರ್ಯನಿರ್ವಹಿಸಿಲ್ಲ.
ಎಲ್ಲ ಪಕ್ಷಗಳ ಜತೆ ಮಧುರ ಬಾಂಧವ್ಯ
ಎಲ್ಲ ಪಕ್ಷಗಳ ಜತೆ ಅವರು ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅದಕ್ಕೆ ಪೂರಕವಾಗಿ ಸಂಸತ್ ಅಧಿವೇಶನ ನಡೆಯುತ್ತಿದ್ದಾಗ ಎಲ್ಲ ಪಕ್ಷಗಳ ನಾಯಕರ ಜತೆ ಹರಟುತ್ತಿದ್ದರು. ತಮ್ಮ ಕೋಣೆಯಲ್ಲಿ ಅವರು ಲಭ್ಯರಿರುತ್ತಿದ್ದರು. ಅವರ ಈ ಗುಣದಿಂದಾಗಿಯೇ 24 ಪಕ್ಷಗಳ ಒಕ್ಕೂಟವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಯಿತು. ಒಕ್ಕೂಟದ ಯಾವುದೇ ಪಕ್ಷದ ನಾಯಕನೂ ವಾಜಪೇಯಿ ವಿರುದ್ಧ ದ್ವನಿ ಎತ್ತುತ್ತಿರಲಿಲ್ಲ.
ಇಂದಿರಾ ಸಾಹಸ ಮೆಚ್ಚುತ್ತಿದ್ದರು
ಇಂದಿರಾ ನೀತಿಗಳು, ಸರ್ವಾಧಿಕಾರಿ ಧೋರಣೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದರೂ ಅವರ ಧೈರ್ಯ, ಸಾಹಸ ಪ್ರವೃತ್ತಿಯನ್ನು ವಾಜಪೇಯಿ ಮೆಚ್ಚಿಕೊಂಡಿದ್ದರು. 1971ರ ಯುದ್ಧದಲ್ಲಿ ಭಾರತ ಗೆದ್ದಾಗ, ಇಂದಿರಾ ಅವರನ್ನು ದುರ್ಗೆ ಎಂದು ಬಣ್ಣಿಸಿ ಸಂಸತ್ತಿನಲ್ಲಿ ಕೊಂಡಾಡಿದ್ದರು.
ಅಷ್ಟಾಗಿ ಧಾರ್ಮಿಕ ವ್ಯಕ್ತಿಯಾಗಿ ಕಾಣಿಸಿಕೊಳ್ಳದ ಅವರು, ಆಗಾಗ ರಾಮಾಯಣ ಮತ್ತು ಮಹಾಭಾರತ ಓದುವುದರ ಮೂಲಕ ಪ್ರೇರಣೆ ಪಡೆಯುತ್ತಿದ್ದರು. ಅಲ್ಲದೆ, ಕಾಳಿದಾಸನ ಮೇಘಧೂತ ಹಾಗೂ ಶೇಕ್‌ಸ್ಪಿಯರನ ನಾಟಕಗಳನ್ನು ಓದುತ್ತಿದ್ದರು. ತುರ್ತು ಪರಿಸ್ಥಿತಿ ಸಂದರ್ಭ ಜೈಲಿನಲ್ಲಿದ್ದಾಗ ವೇದಗಳನ್ನೂ ಓದಿಕೊಂಡಿದ್ದರು.
ಹೀಗೆ ಹೇಳಿದ್ದರು ವಾಜಪೇಯಿ
ಆರ್ಥಿಕ ಅಂತರ್ ಅವಲಂಬನೆಯ ಅರ್ಥವೆಂದರೆ ಅಭಿವೃದ್ಧಿಶೀಲ ದೇಶಗಳಲ್ಲಿ ವಿತ್ತೀಯ ವಿಪ್ಲವಗಳು ಅಭಿವೃದ್ಧಿ ಹೊಂದಿದ ದೇಶಗಳ ಮೇಲಾಗುವುದು.
ಉಗ್ರಗಾಮಿ ಚಟುವಟಿಕೆಗಳಿಗೆ ನೆರವು ರವಾನೆಯಾಗುತ್ತಿರುವುದರಿಂದ ಭಯೋತ್ಪಾದನೆ ವಿರುದ್ಧ ಸಮರ ಸಾರುವುದಕ್ಕೆ ಜಾಗತಿಕ ವೇದಿಕೆಯಲ್ಲಿ ಸಹಭಾಗಿತ್ವ ಮಾಡಿಕೊಳ್ಳಲು ರಾಜ್ಯಗಳಿಗೆ ಅವಕಾಶ ಸಿಗಬಾರದು.
ಸಂಭವನೀಯ ಪರಮಾಣು ದುಸ್ಸಾಹಸವನ್ನು ಬಗ್ಗುಬಡಿಯಲು ನಮ್ಮ ದೇಶದ ಅಣ್ವಸ್ತ್ರಗಳು ಸಂಪೂರ್ಣ ಮೀಸಲಾಗಿವೆ.
ಐವತ್ತೈದು ವರ್ಷಗಳ ಇತಿಹಾಸದಲ್ಲಿ ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಯ ಪ್ರಕ್ರಿಯೆ ಶುರುವಾಗಿರುವುದು ನಿಸ್ಸಂಶಯವಾಗಿ ಭಾರತದಿಂದಲೇ.
ಬಡತನಕ್ಕೆ ಹಲವು ಆಯಾಮ. ಹಣದಾಚೆ ಶಿಕ್ಷಣ, ಆರೋಗ್ಯ, ರಾಜಕೀಯ ಸಹವಾಸ ಮತ್ತು ವ್ಯಕ್ತಿಯ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಲ್ಲಿಯೂ ಅದರ ಪ್ರಭಾವ ಚಾಚಿರುತ್ತದೆ.
ಭಾರತ ವಿರುದ್ಧ ನಡೆಸುತ್ತಿರುವ ಗಡಿ ಭಯೋತ್ಪಾದನೆಗೆ ಪಾರದರ್ಶಕವಾಗಿ ಮತ್ತು ಶಾಶ್ವತವಾಗಿ ಪೂರ್ಣವಿರಾಮ ಹಾಕಲು ಪಾಕಿಸ್ತಾನದ ಮೇಲೆ ಅಮೆರಿಕ ಹಾಗೂ ಇತರ ಅಂತಾರಾಷ್ಟ್ರೀಯ ಸಮುದಾಯ ಪ್ರಭಾವ ಬೀರುತ್ತವೆಂಬ ವಿಶ್ವಾಸ ನಮಗೆ ಇದೆ.
ನೀವು ಸ್ನೇಹಿತರನ್ನು ಬದಲಾಯಿಸಬಹುದು. ಆದರೆ, ನೆರೆಹೊರೆಯವರನ್ನಲ್ಲ.
ಜಗತ್ತಿನೊಂದಿಗೇ ನಂಟು ಬೆಸೆದರು...
ತುರ್ತುಪರಿಸ್ಥಿತಿಯ ನಂತರ ಇಂದಿರಾಗಾಂಧಿ ಸರ್ಕಾರ ಪತನಗೊಂಡು ಜನತಾ ಪಕ್ಷದ ಸರ್ಕಾರ ಆಡಳಿತಕ್ಕೆ ಬಂತು. ಪ್ರಧಾನ ಮಂತ್ರಿ ಮುರಾರ್ಜಿ ದೇಸಾಯಿ ಸಂಪುಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾದರು. ಆ ಸಂದರ್ಭದಲ್ಲಿ ಇಡೀ ಪ್ರಪಂಚ ಭಾರತದ ಹೊಸ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ತುರ್ತು ಪರಿಸ್ಥಿತಿಯಲ್ಲಿ ಭಾರತದ ಹೆಸರಿಗೆ ಕಳಂಕ ತರುವ ಘಟನೆಗಳು ನಡೆದಿದ್ದರಿಂದ ವಿದೇಶೀಯರ ಮೇಲೂ ಅದು ಪರಿಣಾಮ ಬೀರಿತ್ತು.
ಇಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಯಿಡುವ ಮೂಲಕ ವಾಜಪೇಯಿ ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿಕೊಂಡಿದ್ದು ವಿಶೇಷ. ಮೊದಲನೆಯದಾಗಿ, ವಿದೇಶಾಂಗ ಸಚಿವಾಲಯದಲ್ಲಿ ನೆಹರು ಕಾಲದಿಂದಲೂ ಪಟ್ಟಾಗಿ ಕುಳಿತಿದ್ದ ಅಧಿಕಾರಶಾಹಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ಹೊಸ ಸಚಿವರ ಬಗ್ಗೆ ಕೆಲವು ಅಧಿಕಾರಿಗಳು ಆತಂಕವನ್ನೂ ಇಟ್ಟುಕೊಂಡಿದ್ದರು. ಆದರೆ, ವಾಜಪೇಯಿ ಅವರೆಲ್ಲರ ವಿಶ್ವಾಸ ಸಂಪಾದಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾದರು.
ವಾಜಪೇಯಿ ವಿದೇಶಾಂಗ ಸಚಿವರಾದ ಕೆಲವೇ ತಿಂಗಳಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುವ ಅವಕಾಶ ಒದಗಿಬಂತು. ಹಿಂದಿಯಲ್ಲೇ ಮಾತನಾಡಲು ಅವರು ನಿಶ್ಚಯಿಸಿದರು. ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಲಾಗಿದ್ದ ಭಾಷಣವನ್ನು ಹಿಂದಿಗೆ ಅನುವಾದ ಮಾಡಲೆಂದೇ ಪರಿಣತರನ್ನು ನ್ಯೂಯಾರ್ಕ್‌ಗೆ ಕರೆಸಲಾಗಿತ್ತು. ಅವರೇನೋ ಭಾಷಣವನ್ನು ಹಿಂದಿಗೆ ತರ್ಜುಮೆ ಮಾಡಿದ್ದರು. ಹಿಂದಿನ ದಿನ ಸಂಜೆ ಅದನ್ನು ನೋಡಿದ ವಾಜಪೇಯಿಗೆ ಸ್ವಲ್ಪವೂ ಸಮಾಧಾನವಾಗಲಿಲ್ಲ. ತಾವೇ ರಾತ್ರಿ ಬಹುಹೊತ್ತಿನವರೆಗೆ ಕುಳಿತು ಆ ಭಾಷಣವನ್ನು ಹಿಂದಿಗೆ ಅನುವಾದಿಸಿ ಮರುದಿನ ಮಾತನಾಡಿದರು.
ಭಾರತ- ಪಾಕ್ ಸಂಬಂಧ ಸುಧಾರಣೆ
1965ರ ಭಾರತ-ಪಾಕ್ ಯುದ್ಧದ ನಂತರ ಹಾಗೂ 1971ರ ಬಾಂಗ್ಲಾ ವಿಮೋಚನೆಯ ನಂತರ ಹಳಸಿಕೊಂಡಿದ್ದ ಭಾರತ-ಪಾಕ್ ಸಂಬಂಧ ಸುಧಾರಣೆಗೆ ವಾಜಪೇಯಿ ಶ್ರಮಿಸಿದರು. ದೆಹಲಿಯಲ್ಲಿದ್ದ ಪಾಕ್ ರಾಯಭಾರಿಯನ್ನು ಭೇಟಿಯಾದರು. ಇದಕ್ಕೆ ಸ್ಪಂದಿಸಿದ ಪಾಕಿಸ್ತಾನ ಅಂದಿನ ವಿದೇಶಾಂಗ ಸಚಿವ ಆಘಾ ಸಹಾಯ್ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳನ್ನು ಭಾರತಕ್ಕೆ ಕಳುಹಿಸಿತು. 1977ರ ಏಪ್ರಿಲ್‌ನಲ್ಲಿ ಭಾರತ-ಪಾಕ್ ನಡುವೆ ಒಪ್ಪಂದದ ಹೊಸ ಶಕೆ ಆರಂಭವಾಯಿತು.
ಮುಂದೆ ವಾಜಪೇಯಿ ಪಾಕಿಸ್ತಾನಕ್ಕೂ ಭೇಟಿ ನೀಡಿದರು. ಅವರ ಜನಸಂಘದ ಹಿನ್ನೆಲೆಯನ್ನು ಅರಿತಿದ್ದ ಉಭಯ ದೇಶದ ಜನರು ಇದರಿಂದ ಹುಬ್ಬೇರಿಸುವಂತಾಯಿತು. ಜತೆಗೆ ಈ ವೇಳೆ ಪಾಕ್ ಪತ್ರಿಕೆಗಳು ವಾಜಪೇಯಿ ಅವರನ್ನು ಹಿಂದು ಧರ್ಮಾಂಧ ಎನ್ನುವಂತೆ ಬಿಂಬಿಸಿದವು. ಅವರ ಹಿನ್ನೆಲೆ ಮತ್ತು ಪಾಕ್ ಅಸ್ತಿತ್ವವನ್ನು ವಿರೋಧಿಸಿದ್ದ ಬಗ್ಗೆ ಪುಟಗಟ್ಟಲೆ ಲೇಖನ ಬರೆದಿದ್ದವು. ಇದರಿಂದ ಸ್ವಲ್ಪವೂ ವಿಚಲಿತರಾಗದ ವಾಜಪೇಯಿ ಅವರ ನೆಲದಲ್ಲಿಯೇ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ವಿವರವಾಗಿ ಹೇಳಿದರು. ಇನ್ನು ಮುಂದಿನ ಎರಡೂ ದೇಶಗಳ ಭವಿಷ್ಯದ ದೃಷ್ಟಿಯಿಂದ ಪರಸ್ಪರ ಹೇಗಿರಬೇಕೆಂಬುದನ್ನು ಪ್ರತಿಪಾದಿಸಿದರು.
ಪುಂಡಾಟಕ್ಕೆ ತಕ್ಕ ಉತ್ತರ
ವಾಜಪೇಯಿ ಎಷ್ಟು ಸಹೃದಯಿ, ಸ್ನೇಹಪರರಾಗಿದ್ದರೋ ಅಷ್ಟೇ ಸ್ವಾಭಿಮಾನಿಯೂ ಆಗಿದ್ದರು. ಭಾರತದತ್ತ ಯಾರೇ ಆಗಲಿ ಕೆಟ್ಟ ದೃಷ್ಟಿಯಿಂದ ನೋಡಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದರು.
2003ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ರಷ್ಯಾಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ಮಾಧ್ಯಮವೊಂದು ಅಟಲ್‌ರನ್ನು ಸಂದರ್ಶಿಸಿ, ‘ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆಗೆ ಏಕೆ ನಿರಾಕರಿಸುತ್ತಿದೆ’ ಎಂದು ಪ್ರಶ್ನಿಸಿತು. ‘ಭಾರತ ಮಾತುಕತೆಗೆ ನಿರಾಕರಿಸುತ್ತಿದೆ ಎಂಬುದು ಸಂಪೂರ್ಣ ತಪ್ಪು. ನಾವು ಈಗಲೂ ಮಾತುಕತೆಗೆ ಸಿದ್ಧರಾಗಿದ್ದೇವೆ. ಆದರೆ, ಭಯೋತ್ಪಾದನೆ ಹಾಗೂ ಸ್ನೇಹ ಒಟ್ಟೊಟ್ಟಿಗೆ ಸಾಗಲಾರವು. ಇದಕ್ಕಾಗಿ ಪಾಕಿಸ್ತಾನ ಮೊದಲು ಜಮ್ಮು-ಕಾಶ್ಮೀರ ಗಡಿಯಲ್ಲಿ ನಡೆಯುತ್ತಿರುವ ನುಸುಳುವಿಕೆಯನ್ನು ತಡೆಯಬೇಕು ಎಂದು ಸ್ಪಷ್ಟವಾಗಿ ನುಡಿದಿದ್ದರು.
ಭಾರತೀಯ ಜನತಾ ಪಕ್ಷದ ಜನಕ
1979ರ ಆಗಸ್ಟ್ 20ರಂದು ಜನತಾ ಪಕ್ಷದ ಸರ್ಕಾರ ಪತನವಾದ ನಂತರ ಚುನಾವಣೆ ಘೋಷಣೆಯಾಯಿತು. ಮುಂದೆಯೂ ಜನತಾ ಪಕ್ಷದೊಂದಿಗೆ ಸಾಗುವುದು ಜನಸಂಘದ ಕಾರ್ಯಕರ್ತರು ಮತ್ತು ನೇತಾರರ ಪಾಲಿಗೆ ಆತ್ಮಹತ್ಯೆಯ ಹಾದಿಯೇ ಆಗಿತ್ತು. ಈಗಾಗಲೇ ಸಂಘಟನೆಗೆ ಸಾಕಷ್ಟು ಹಾನಿ ಆಗಿತ್ತು. ಆದ್ದರಿಂದ ಜನತಾ ಪಕ್ಷದಿಂದ ಸಂಪೂರ್ಣವಾಗಿ ಬೇರ್ಪಟ್ಟು ಪಕ್ಷವನ್ನು ಹೊಸದಾಗಿ ಕಟ್ಟಿ ಬೆಳೆಸಬೇಕೆಂದು ವಾಜಪೇಯಿ ನಿಶ್ಚಯಿಸಿದರು. ಜನಸಂಘವನ್ನು ಜನತಾ ಪಕ್ಷದೊಂದಿಗೆ ವಿಲೀನಗೊಳಿಸಿದ್ದರಿಂದ ಇದೀಗ ಪಕ್ಷವನ್ನು ಆರಂಭದಿಂದಲೇ ಕಟ್ಟಿ ನಿಲ್ಲಿಸಬೇಕಿತ್ತು. ಮೊದಲಿನ ಜನಸಂಘದ ಹೆಸರನ್ನೇ ಇಟ್ಟುಕೊಳ್ಳಬೇಕೇ ಅಥವಾ ಬೇರೆ ಹೆಸರಿನಿಂದ ಪಕ್ಷವನ್ನು ಕಟ್ಟಬೇಕೇ ಎಂಬ ಚರ್ಚೆ ನಡೆಯಿತು.
ತುರ್ತುಪರಿಸ್ಥಿತಿಯ ನಂತರ ಪ್ರಜಾಸತ್ತಾತ್ಮಕ ಸರ್ಕಾರದ ಕನಸು ಕಂಡಿದ್ದ ಜಯಪ್ರಕಾಶ್ ನಾರಾಯಣ್ ಕೆಲವು ಆದರ್ಶಗಳನ್ನು ಹೊಸ ಪಕ್ಷ ಜನತಾ ಪಕ್ಷದ ಮುಂದಿಟ್ಟಿದ್ದರು. ಆ ಸಿದ್ಧಾಂತದ ಅಡಿಪಾಯದಲ್ಲೇ ಆ ಪಕ್ಷವನ್ನು ನಿರ್ಮಿಸಲಾಗಿತ್ತು. ಇದರಿಂದ ಜನಾಕರ್ಷಣೆಯಲ್ಲೂ ಹೆಚ್ಚಿನ ಯಶಸ್ಸು ಸಿಕ್ಕಿತ್ತು. ಜೆಪಿ ಎಂದು ಖ್ಯಾತಿ ಹೊಂದಿದ್ದ ಜಯಪ್ರಕಾಶ್ ನಾರಾಯಣ್ ಆಧುನಿಕ ಗಾಂಧಿ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಆದ್ದರಿಂದ ಅವರ ವಿಚಾರಧಾರೆಯನ್ನು ಮುಂದುವರಿಸುವಂತೆ ಹೊಸ ಪಕ್ಷವನ್ನು ರೂಪಿಸಬೇಕೆಂಬ ಒತ್ತಾಸೆ ವಾಜಪೇಯಿಯವರಲ್ಲಿ ಬಲವಾಗಿತ್ತು. ಇತರ ನಾಯಕರು ಹಾಗೂ ಕಾರ್ಯಕರ್ತರೂ ಈ ಬಗ್ಗೆ ಸಹಮತ ವ್ಯಕ್ತಪಡಿಸಿದರು. ಹೀಗೆ 1980ರ ಏಪ್ರಿಲ್ 5ರಂದು ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂತು. ಉಪಾಧ್ಯಕ್ಷರಾಗಿ ಅವರಿಗೆ ಎಲ್.ಕೆ.ಅಡ್ವಾಣಿ ಸಾಥ್ ನೀಡಿದರು. ಕಮಲದ ಹೂ ಪಕ್ಷದ ಚಿಹ್ನೆಯಾಯಿತು. ಮುಂಬೈನಲ್ಲಿ ಪಕ್ಷದ ಪ್ರಥಮ ಸಮ್ಮೇಳನವೂ ಏರ್ಪಾಡಾಯಿತು. ಈ ಸಮ್ಮೇಳನದಲ್ಲಿ ವಾಜಪೇಯಿ ಮಾತನಾಡಿ, ರಾಜಕೀಯದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ವಿಷಾದಿಸಿ ಬಿಜೆಪಿಯಲ್ಲಿ ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.
ಹಂತಹಂತವಾಗಿ ಭಾರತೀಯ ಜನತಾ ಪಕ್ಷವು ಪ್ರಗತಿಯತ್ತ ಸಾಗತೊಡಗಿತು. 1980ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 14 ಸ್ಥಾನಗಳು ಲಭಿಸಿದವು. ಭಾರತೀಯ ಜನತಾ ಪಕ್ಷವೆಂಬ ಅಸ್ತಿತ್ವ ಪಡೆದ ನಂತರ ಇದು ಮೊದಲನೇ ಗೆಲುವು. ಇಂದಿರಾಗಾಂಧಿ ಹತ್ಯೆಯ ನಂತರ 1984ರ ಚುನಾವಣೆಯಲ್ಲಿ ಅನುಕಂಪದ ಅಲೆಯಿಂದಾಗಿ ಬಿಜೆಪಿ ಕೇವಲ 2 ಸ್ಥಾನಗಳನ್ನು ಪಡೆಯಿತಾದರೂ, ನಂತರ 1989ರ ಚುನಾವಣೆಯಲ್ಲಿ 89 ಸ್ಥಾನಗಳನ್ನು ಪಡೆದು ದಾಪುಗಾಲಿಟ್ಟಿತು. 1999ರಲ್ಲಿ ಅದು ತನ್ನ ಸಂಖ್ಯೆಯನ್ನು 119ಕ್ಕೇರಿಸಿಕೊಂಡಿತು.
ಕುದುರೆ ವ್ಯಾಪಾರಕ್ಕಿಳಿಯಲಿಲ್ಲ
ವಿಶ್ವಾಸ ಮತ ಸಾಬೀತುಪಡಿಸುವ ದಿನದಂದು ಅವರಲ್ಲಿದ್ದ ಆತ್ಮವಿಶ್ವಾಸ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿತ್ತು. ದೇಶದೆಲ್ಲೆಡೆ ಕುತೂಹಲ ಹೆಪ್ಪುಗಟ್ಟಿತ್ತು. ಅಂತಿಮವಾಗಿ ಪ್ರಧಾನಿ ವಾಜಪೇಯಿ ಮಾತನಾಡುವ ಸರದಿ ಬಂತು. ವಾಜಪೇಯಿ ಮಾತನಾಡಿದರು. ಇತಿಹಾಸದಲ್ಲಿ ಎಂದೆಂದಿಗೂ ಮರೆಯಲಾಗದಂತೆ ಅವರ ಮಾತುಗಳು ದಾಖಲಾದವು. ‘ಅಧಿಕಾರ ಉಳಿಸಿಕೊಳ್ಳಲು ನಾನು ಸಂಸದರನ್ನು ಖರೀದಿಸುವ ಮಟ್ಟಕ್ಕೆ ಎಂದಿಗೂ ಇಳಿಯುವುದಿಲ್ಲ. ನಾನು ನಂಬಿರುವ, ಈವರೆಗೂ ಆಚರಿಸಿಕೊಂಡು ಬಂದಿರುವ ತತ್ವ-ಸಿದ್ಧಾಂತಕ್ಕೆ ಎಳ್ಳಷ್ಟೂ ಚ್ಯುತಿಯುಂಟುಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಕನಸು-ಮನಸಿನಲ್ಲೂ ಕುದುರೆ ವ್ಯಾಪಾರದಂತಹ, ಅಸಂಸದೀಯ, ಅಕ್ರಮ ಮಾರ್ಗವನ್ನು ನಾನು ಎಣಿಸಲಾರೆ. ಅದಕ್ಕಿಂತಲೂ ಸಂತೋಷವಾಗಿ, ಆನಂದದಿಂದ ಈ ಪ್ರಧಾನಿ ಹುದ್ದೆಯನ್ನು ತ್ಯಜಿಸುತ್ತೇನೆ. ಇದೋ ರಾಷ್ಟ್ರಪತಿಗಳಿಗೆ ನನ್ನ ರಾಜೀನಾಮೆ ಸಲ್ಲಿಸಲು ಹೋಗುತ್ತಿದ್ದೇನೆ’ ಎಂದು ಸಂಸತ್‌ಭವನದಿಂದ, ಹೊರನಡೆದೇಬಿಟ್ಟರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ