ಈ ನಾಡು ಕಂಡ ಪ್ರಸಿದ್ಧ ಕಾದಂಬರಿಕಾರ ಮಾತ್ರವಲ್ಲ, ಇತಿಹಾಸದ ಸೂಕ್ಷ್ಮಗಳನ್ನು ತಲರ್ಸ³ ಅಧ್ಯಯನ ಮಾಡಿದವರು. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಆಯೋಜಿಸಿದ್ದ ಭೈರಪ್ಪ ಅವರ ಉಪನ್ಯಾಸ ಹಾಗೂ ಸಂವಾದದ ಎರಡನೆಯ ಹಾಗೂ ಕೊನೆಯ ಭಾಗವಿದು. ದೇಶದಲ್ಲಿ ಭ್ರಷ್ಟಾಚಾರ ಆರಂಭವಾದುದು ಯಾವಾಗ, ಅದಕ್ಕೆ ಪ್ರೇರಣೆಯಾದವರು ಯಾರು? ಕಾಶ್ಮೀರ ಸಮಸ್ಯೆ, ಶಿಕ್ಷಣ, ದೇವರು- ಧರ್ಮ, ಸಾಹಿತ್ಯ, ಅಂತರ್ಜಾತೀಯ ವಿವಾಹ ಮೊದಲಾದ ಅನೇಕ ಸಂಗತಿಗಳು ಅವರ ಉಪನ್ಯಾಸದಲ್ಲೂ ಸಂವಾದದಲ್ಲೂ ಪ್ರಸ್ತಾಪಗೊಂಡವು. ವರ್ತಮಾನಕ್ಕೆ ಕನ್ನಡಿ ಹಿಡಿಯುತ್ತಲೇ ಭವಿಷ್ಯಕ್ಕೆ ಮುನ್ನುಡಿಯಾಗಬಲ್ಲ ವಿಷಯಗಳು ಮೂಡಿಬಂದವು. ಈ ಸಂವಾದದಲ್ಲಿ ಭೈರಪ್ಪ ಅವರ ಜ್ಞಾನಸಂಪತ್ತಿನ ಮತ್ತಷ್ಟು ತುಣುಕುಗಳು, ಚರಿತ್ರೆಯ ಇನ್ನಷ್ಟು ಹೊಳಹುಗಳು ಅನಾವರಣಗೊಂಡವು…
ವೋಟ್ ಬ್ಯಾಂಕ್ಗಾಗಿ ನುಸುಳುಕೋರರಿಗೆ ಅವಕಾಶ
ಅಸ್ಸಾಂನಲ್ಲಿ ಈಚೆಗೆ ಪ್ರಕಟವಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) 40 ಲಕ್ಷ ಅಕ್ರಮ ವಲಸಿಗರ ಬಗ್ಗೆ ಉಲ್ಲೇಖಿಸಿರುವ ಕುರಿತ ಪ್ರಶ್ನೆಗೆ ಭೈರಪ್ಪ ಉತ್ತರಿಸಿದ್ದು ಹೀಗೆ:
ಬಾಂಗ್ಲಾ ನುಸುಳುಕೋರರು ಮತ್ತು ಅಸ್ಸಾಂನ ಸಮಸ್ಯೆ ಉದ್ಭವಿಸಲು ವೋಟ್ಬ್ಯಾಂಕ್ ರಾಜಕಾರಣವೇ ಕಾರಣ. ಬ್ರಿಟಿಷರ ಕಾಲದಿಂದಲೂ ಪೂರ್ವ ಬಂಗಾಳದಲ್ಲಿ ಮುಸ್ಲಿಂರ ಸಮಸ್ಯೆಯಿತ್ತು. ಅವರ ನಾಯಕತ್ವ ವಹಿಸಿದ್ದ ಫಕ್ರುದ್ದೀನ್ ಅಲಿ ಅಹ್ಮದ್ರನ್ನು ರಾಷ್ಟ್ರಪತಿಯನ್ನಾಗಿಸಿದ್ದ ಪ್ರಧಾನಿ ಇಂದಿರಾ ಗಾಂಧಿ ಬಾಂಗ್ಲಾದೇಶದ ನುಸುಳುಕೋರರನ್ನು ಪ್ರೋತ್ಸಾಹಿಸಲು ಅವಕಾಶ ಮಾಡಿಕೊಟ್ಟರು. ಈಗ ಅವರು ಬೆಂಗಳೂರಿನವರೆಗೆ ಬಂದಿದ್ದಾರೆ. ಅವರನ್ನು ಆಚೆ ದಬ್ಬುವ ವಿಷಯವಾಗಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಇಲ್ಲೇ ಇಟ್ಟುಕೊಂಡರೆ ಸಮಸ್ಯೆ; ಆಚೆ ಕಳಿಸಲು ಮುಂದಾದರೆ ಮಾನವ ಹಕ್ಕು ವಿಚಾರ ಮುಂದಿಡುತ್ತಾರೆ. ವೋಟ್ ಬ್ಯಾಂಕ್ನಿಂದಲೇ ಈ ಸಮಸ್ಯೆಗಳು ಉಲ್ಬಣಿಸಿವೆ.
ಕಳ್ಳಲೆಕ್ಕ ಶುರುವಾದದ್ದು…
ತೆರಿಗೆ ಉಳಿಸುವ ಕಳ್ಳತನದ ಮಾರ್ಗಗಳನ್ನು ಅಂದಿನ ಆಡಳಿತವೇ ಹರಿಬಿಟ್ಟಂತಿತ್ತು. ಸರ್ಕಾರ ತನ್ನ ನೀತಿಗಳಿಂದಲೇ ಉದ್ಯಮಿಗಳು ತೆರಿಗೆ ವಂಚಿಸುವುದಕ್ಕೆ, ಕಪು್ಪಹಣವನ್ನು ಕೂಡಿ ಇಡುವುದಕ್ಕೆ ಅವಕಾಶ ಮಾಡಿಕೊಟ್ಟಿತು. ನಂತರ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಿ ಲಂಚದ ಬೇಡಿಕೆ ಇಡಲಾಗುತ್ತಿತ್ತು. ದೇಶದಲ್ಲಿ ಭ್ರಷ್ಟಾಚಾರ ಹುಟ್ಟಲು ಇದುವೇ ಮೂಲ ಪ್ರೇರಣೆ ಆಯಿತು. ಆಗಿನಿಂದಲೇ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂಬ ಎರಡು ವಿಧದ ಲೆಕ್ಕವನ್ನು ತೋರಿಸಿ, ತೆರಿಗೆ ವಂಚನೆ ಮಾಡುವ ರೂಢಿ ಬಂದಿತು. ದೇಶದ ಜನ ತೆರಿಗೆ ತುಂಬಲು ಆಸಕ್ತಿ ತೋರದೆ ಅನ್ಯಮಾರ್ಗ ಅನುಸರಿಸುತ್ತಿರುವುದು ಎಲ್ಲ ಸಮಸ್ಯೆಗಳಿಗೆ ಮೂಲವಾಗಿದೆ.
ಶುದ್ಧ ಸಾಹಿತ್ಯವೇ ಶಾಶ್ವತ
ಇಸಂಗಳ ಮೇಲಾಟದಲ್ಲಿ ಶುದ್ಧಸಾಹಿತ್ಯಕ್ಕೆ ತೊಂದರೆಯಾಗಿದೆಯೇ ಎಂಬ ಪ್ರಶ್ನೆಗೆ ಭೈರಪ್ಪ ಉತ್ತರ:
ಸಾಹಿತ್ಯವನ್ನು ಸಾಹಿತ್ಯವೆಂದು ಭಾವಿಸುತ್ತಾರೆಯೋ ಅಥವಾ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾರೆಯೋ ಎಂಬುದು ಮೂಲ ಪ್ರಶ್ನೆಯಾಗುತ್ತದೆ. ಯಾವುದೇ ಸಿದ್ಧಾಂತಕ್ಕೆ ಒಳಪಡದ ಶುದ್ಧ ಸಾಹಿತ್ಯವು ಬಹುಕಾಲ ಉಳಿಯುತ್ತದೆ. ಸಿದ್ಧಾಂತವನ್ನೇ ಜನ ಓದಬೇಕೆನಿಸಿದರೆ ಪಠ್ಯವನ್ನು ಓದಬಹುದು. ಆದರೆ ಜನ ಕಾದಂಬರಿಯನ್ನು ಓದುವುದು ಶುದ್ಧ ರಸಸೃಷ್ಟಿ, ರಸಾನುಭವ ಪಡೆಯುವುದಕ್ಕಾಗಿ. ಯಾವುದೋ ಸಿದ್ಧಾಂತಕ್ಕೆ ಒಳಗೊಂಡಿರುವ ಲೇಖಕ ಅದರ ಬಗ್ಗೆ ಬರೆಯಲು ಮುಂದಾದರೆ ಜನ ಅದನ್ನು ಒಪು್ಪವುದಿಲ್ಲ. ಬದಲಾಗಿ ಶುದ್ಧಸಾಹಿತ್ಯವನ್ನು ಜನ ಒಪು್ಪತ್ತಾರೆ.
ಉದಾರೀಕರಣದ ನಂತರ ಆರ್ಥಿಕ ಸುಧಾರಣೆ
ಚಂದ್ರಶೇಖರ್ ಪ್ರಧಾನಿಯಾಗಿದ್ದ ಅವಧಿಯಲ್ಲಿ (1990-91) ಭಾರತದಲ್ಲಿದ್ದ ವಿದೇಶಿ ದೂತಾವಾಸ ಕಚೇರಿ ಸಿಬ್ಬಂದಿಗೆ ಸಂಬಳ ಕೊಡಲೂ ದುಡ್ಡಿರಲಿಲ್ಲ. ಆರ್ಥಿಕ ಸ್ಥಿತಿ ಅಷ್ಟೊಂದು ಚಿಂತಾಜನಕವಾಗಿತ್ತು. 1991ರಲ್ಲಿ ಪ್ರಧಾನಿಯಾಗಿ ಬಂದ ನರಸಿಂಹರಾಯರು ದೇಶ ಇನ್ನೂ ಇದೇ ಹಾದಿಯಲ್ಲಿ ಸಾಗಿದರೆ ಕಷ್ಟ ಎಂಬುದನ್ನು ಅರಿತು ಭಾರತವನ್ನು ಉದಾರಿಕರಣಕ್ಕೆ ತೆರೆದಿಟ್ಟರು. ಆ ಬಳಿಕ ದೇಶದಲ್ಲಿ ಬಂಡವಾಳ ಹೂಡುವುದು, ಕೈಗಾರಿಕೆಗಳನ್ನು ಸ್ಥಾಪಿಸುವುದು ಸುಲಭವಾಯಿತು. ಆರ್ಥಿಕತೆಯೂ ಚೇತರಿಕೆ ಕಂಡಿತು. ಈಗ ಭಾರತ ಭಿಕ್ಷೆ ಬೇಡುವ ದೇಶವಾಗಿ ಉಳಿದಿಲ್ಲ, ಬದಲಾಗಿ ಬೇರೆ ದೇಶಗಳಿಗೆ ನೆರವು ನೀಡುವ ಮಟ್ಟಿಗೆ ಬೆಳೆದಿದೆ. ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಭಾರತ ನೆರವು ತೆಗೆದುಕೊಳ್ಳಲಿಲ್ಲ. ಬದಲಿಗೆ, ಇಂಡೋನೇಷ್ಯಾಗೆ ನೆರವಿನ ಹಸ್ತ ಚಾಚಿತು.
ಬಂಡವಾಳಶಾಹಿಗಳಿಂದ ಆರ್ಥಿಕತೆ ಬೆಳಗಬೇಕು
ಬಂಡವಾಳಶಾಹಿಗಳಲ್ಲಿಯೂ ಎರಡು ರೀತಿ ಇರುತ್ತದೆ. ಯಾವುದೇ ಉದ್ಯಮಿಯಾಗಿದ್ದರೂ ಆತನ ದುಡಿಮೆಯಿಂದ ದೇಶದ ಆರ್ಥಿಕತೆ ಬೆಳಗುತ್ತಿರಬೇಕು. ಎಲ್ಲ ಉದ್ಯಮಿಗಳೂ ಕಳ್ಳರಾಗಿರುವುದಿಲ್ಲ. ಗಟ್ಟಿಯಾದ ಆಡಳಿತವಿದ್ದರೆ ಆರ್ಥಿಕ ಸ್ಥಿತಿಯೂ ಸುಸ್ಥಿರವಾಗಿರುತ್ತದೆ. ವಿಜಯ ಮಲ್ಯ ದೇಶ ಬಿಟ್ಟು ಇಂಗ್ಲೆಂಡ್ಗೆ ಪರಾರಿಯಾದ. ಆದರೆ ಆತ ತನ್ನ ಉದ್ಯಮವನ್ನು ಮುಚ್ಚಿದ್ದರಿಂದ ಎಷ್ಟು ಕುಟುಂಬಗಳು ಬೀದಿಗೆ ಬಂದಿವೆಯೆಂಬ ಬಗ್ಗೆ ಮತ್ತು ಆತ ಪ್ರತಿ ವರ್ಷ ಪಾವತಿಸುತ್ತಿದ್ದ ತೆರಿಗೆಯಿಂದ ಆಗುತ್ತಿರುವ ನಷ್ಟದ ಬಗ್ಗೆಯೂ ಯೋಚಿಸಬೇಕಿದೆ. ಈ ರೀತಿಯಾಗಲು ವ್ಯವಸ್ಥೆಯಲ್ಲಿನ ಬೇಜವಾಬ್ದಾರಿಯೂ ಕಾರಣವಾಗಿರುತ್ತದೆ. ದೇಶದ ಆರ್ಥಿಕತೆ ಯನ್ನು ಬೆಳೆಸುವ ಉದ್ಯಮದ ಅಗತ್ಯವಿದೆ. ಹೀಗೆ ಹೇಳಿದರೆ ನನ್ನನ್ನು ಬಂಡವಾಳಶಾಹಿಗಳ ಪರ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ನನ್ನ ಬ್ಯಾಂಕ್ ಖಾತೆಯಲ್ಲಿ ಜೀವನ ಸಾಗಿಸುವುದಕ್ಕೆ ಬೇಕಾದಷ್ಟು ಮೊತ್ತ ಮಾತ್ರವೇ ಇದೆ.
ಮೇಲ್ವಿಚಾರಕರಿದ್ದರೂ ಕೆಲಸಗಳ್ಳತನ
ನೆಹರು, ಇಂದಿರಾ ಸರ್ಕಾರದ ಅವಧಿಯಲ್ಲಿ ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಎಂಬ ನೀತಿ ಅಳವಡಿಕೆಯಾದ್ದರಿಂದ, ಜನರ ಕಾಯಕ ಮನೋಧರ್ಮದ ಮೇಲೆ ಪರಿಣಾಮವಾಯಿತು ಎನಿಸುವುದಿಲ್ಲವೆ ಎಂಬ ಪ್ರೇಮಶೇಖರ ಪ್ರಶ್ನೆಗೆ ಭೈರಪ್ಪ ಉತ್ತರ: ಬಸವಣ್ಣ ಬೋಧಿಸಿದ ಕಾಯಕನಿಷ್ಠೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಎಷ್ಟು ಅಚ್ಚುಕಟ್ಟಾಗಿ ಅನುಸರಿಸುತ್ತಿದ್ದಾರೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ. ಸರ್. ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿ ನಿವೃತ್ತರಾದ ನಂತರ ಸ್ವಂತ ಖರ್ಚಿನಲ್ಲಿ ಅಮೆರಿಕ ಪ್ರವಾಸ ನಡೆಸಿದರು. ಅಲ್ಲಿ ಮನೆಗೆಲಸದವರು ಸಮಯಕ್ಕೆ ಸರಿಯಾಗಿ ಆಗಮಿಸಿ, ಕೆಲಸಗಳನ್ನು ಚಾಚೂ ತಪ್ಪದೆ ಮಾಡಿ, ಮನೆಯಲ್ಲಿದ್ದ ಅಮೂಲ್ಯ ವಸ್ತುಗಳತ್ತ ಕಣ್ಣೂ ಹಾಯಿಸದೆ ಹೊರಟುಹೋಗುವುದನ್ನು ಗಮನಿಸಿದರು.
ಇಂತಹ ಅನುಭವದಿಂದ ವಿಶ್ವೇಶ್ವರಯ್ಯನವರು, ಮೇಲ್ವಿಚಾರಕರ (ಸೂಪರ್ವೈಸರ್)ಅವಶ್ಯಕತೆಯೇ ಇಲ್ಲದ ಈ ದೇಶ ಅಭಿವೃದ್ಧಿ ಕಾಣುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ನಮ್ಮ ದೇಶದಲ್ಲಿ ಹಾಗಿಲ್ಲ. ಒಂದು ಉದಾಹರಣೆ ಕೊಡುತ್ತೇನೆ. ನಮ್ಮ ತಂದೆ ಶಾನುಭೋಗರಾಗಿದ್ದರು. ಒಮ್ಮೆ ನಮ್ಮೂರಿಗೆ ಜಿಲ್ಲಾಧಿಕಾರಿ ಬಂದರು. ಅವರ ವಾಸ್ತವ್ಯಕ್ಕೆ ಊರಿನ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸ್ನಾನ ಮಾಡಿದ ಜಿಲ್ಲಾಧಿಕಾರಿ ಚಡ್ಡಿಯನ್ನು ಅಲ್ಲೆ ಬಿಟ್ಟು, ಒಗೆಯುವಂತೆ ಪಿಎಗೆ ಸೂಚಿಸಿ ಹೊರಟರು. ಜಿಲ್ಲಾಧಿಕಾರಿಯ ಪಿಎ ಉಪವಿಭಾಗಾಧಿಕಾರಿ ಪಿಎಯನ್ನು ಕರೆದು ‘ಸಾಹೇಬ್ರ ಚಡ್ಡಿ ಒಗೆದುಹಾಕೋ’ ಎಂದ. ಆತ ತಹಸೀಲ್ದಾರ್ ಪಿಎಯನ್ನು ಕರೆದು ಅದೇ ಮಾತು ಹೇಳಿದ. ಆಗ ತಹಸೀಲ್ದಾರ್ ಪಿಎ ನಮ್ಮಪ್ಪನ ಬಳಿ ಬಂದು ‘ಸಾಹೇಬ್ರ ಚಡ್ಡಿ ಒಗೆಯಬೇಕಂತೆ, ಸೋಪಿಗೆ ಕಾಸು ಕೊಡಿ’ ಎಂದು ಕೊಂಡು ಹೋದ. ನಮ್ಮ ದೇಶದಲ್ಲಿ ಇಷ್ಟೆಲ್ಲ ಮೇಲ್ವಿಚಾರಕರ ವ್ಯವಸ್ಥೆ ಇದ್ದರೂ ಕೆಲಸಗಳ್ಳತನದ ಕಾರಣದಿಂದ ಉತ್ತಮ ಪರಿಣಾಮಗಳು ಕಾಣುತ್ತಿಲ್ಲ. ಬಸವಣ್ಣ ಬೋಧಿಸಿದ ಮತ್ತೊಂದು ವಿಚಾರ ಅಂತರ್ಜಾತಿ ವಿವಾಹ. ಎರಡು ವಿಭಿನ್ನ ಜಾತಿಯವರ ನಡುವೆ ವಿವಾಹ ಮಾಡಿಸಿ ಬಸವಣ್ಣ ಕ್ರಾಂತಿ ಮಾಡಿದ್ದರು. ವಧು-ವರರು ಅತಿ ಚಿಕ್ಕ ವಯಸ್ಸಿನವರಾಗಿದ್ದರಿಂದ ಅವರ ಪಾಲಕರು ಈ ನಿರ್ಧಾರ ಮಾಡಿದ್ದರು. ಇದನ್ನೆಲ್ಲ ಒಪ್ಪಿಕೊಳ್ಳುವಷ್ಟು ಆಗಿನ ಸಮಾಜವೂ ಪಕ್ವವಾಗಿರಲಿಲ್ಲ. ಈಗ ಸಾಕಷ್ಟು ಬದಲಾವಣೆಯಾಗಿದೆ. ಯುವಕ ಯುವತಿಯರು ಸ್ವಂತ ನಿರ್ಧಾರ ಕೈಗೊಂಡರೆ ಪಾಲಕರೂ ಒಪ್ಪಲೇಬೇಕಾದ ಸಂದರ್ಭ ಇದೆ. ಹಿಂದೂ ಧರ್ಮದ ವಿಭಿನ್ನ ಜಾತಿಯವರು ಪ್ರೇಮಿಸಿದರೆ ಅವರ ವಿವಾಹಕ್ಕೆ ಸಮಾಜ ಹಾಗೂ ಪಾಲಕರು ಸಹಕಾರ ನೀಡಬೇಕು. ಅಂತರ್ಜಾತಿ ವಿವಾಹಕ್ಕೆ ಕಾಲ ಪಕ್ವವಾಗಿರುವ ಈ ಸಂದರ್ಭದಲ್ಲಿ ಬಸವಣ್ಣ ಹೆಚ್ಚು ಪ್ರಸ್ತುತ.
ನಮ್ಮ ಶಿಕ್ಷಣದ ಕುರಿತು…
ಶಿಕ್ಷಣ ವ್ಯವಸ್ಥೆ ಬಗ್ಗೆ ವಿಘ್ನೇಶ್ವರ ಭಟ್ ಕೇಳಿದ ಪ್ರಶ್ನೆಗೆ ಭೈರಪ್ಪ ಉತ್ತರಿಸಿದ್ದು ಹೀಗೆ: ಶಿಕ್ಷಣ ವ್ಯವಸ್ಥೆ ಬಗ್ಗೆ ಟೀಕೆ ಟಿಪ್ಪಣೆ ಮಾಡಲು ಹೋಗುವುದಿಲ್ಲ. ಆದರೆ ಮೂರು ಘಟನೆಗಳನ್ನು ಹೇಳುತ್ತೇನೆ. 1-1969-70ರಲ್ಲಿ ಎನ್ಸಿಇಆರ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಈ ಸಂದರ್ಭದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಕಮಿಟಿ ಫಾರ್ ನ್ಯಾಷನಲ್ ಇಂಟಿಗ್ರೇಷನ್ ರಚಿಸಿ, ಜಿ. ಪಾರ್ಥಸಾರಥಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. 5 ಮಂದಿ ಸದಸ್ಯರಲ್ಲಿ ನಾನು ಕೂಡ ಒಬ್ಬನಾಗಿದ್ದೆ. ಮೊದಲ ಸಭೆಯಲ್ಲಿ, ರಾಷ್ಟ್ರದ ಐಕ್ಯತೆಗೆ ಪೂರಕವಾಗುವ ಅಂಶವನ್ನು ಮಾತ್ರ ಶಾಲಾ ಪುಸ್ತಕದಲ್ಲಿ ಉಳಿಸಿಕೊಂಡು ಇತಿಹಾಸ ಶುದ್ಧೀಕರಣ ಮಾಡಬೇಕೆಂದು ಪಾರ್ಥಸಾರಥಿ ಹೇಳಿದರು. ನನ್ನನ್ನು ಹೊರತುಪಡಿಸಿ ಉಳಿದವರು ಸಹಮತ ಸೂಚಿಸಿದರು. ಆದರೆ, ನಾನು ಉದಾಹರಣೆ ಸಹಿತ ವಿವರಿಸುವಂತೆ ವಿನಂತಿಸಿಕೊಂಡೆ. ‘ಔರಂಗಜೇಬ್ ಮಥುರೆ ಸೇರಿದಂತೆ ವಿವಿಧ ದೇವಸ್ಥಾನ ಒಡೆದ’ ಎಂದು ಪುಸ್ತಕದಲ್ಲಿದ್ದರೆ ಮಕ್ಕಳಲ್ಲಿ ಕೆಟ್ಟ ಭಾವನೆ ಸೃಷ್ಟಿಸುತ್ತದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ನಾನು, ಸತ್ಯವನ್ನು ಮಕ್ಕಳಿಗೆ ತಿಳಿಸಬೇಕು. ಕಾಶಿ ಯಾತ್ರೆಗೆ ಹೋದರೆ ವಿಶ್ವನಾಥನ ಜಾಗದಲ್ಲಿ ದೊಡ್ಡ ಮಸೀದಿಯಿದೆ. ನಂದಿ ಮಸೀದಿಯ ಕಡೆ ಮುಖ ಮಾಡಿದ್ದಾನೆ. ಅದೇಕೆ ಹೀಗೆ ಎಂದು ಮಕ್ಕಳು ಕೇಳಿದರೆ ಉತ್ತರಿಸಲಾಗುತ್ತಿಲ್ಲ. ಇದರ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕಾಗುತ್ತದೆ ಎಂದು ಹೇಳಿದೆ. ಅಷ್ಟಕ್ಕೆ ಸಭೆ ಅಂತ್ಯಮಾಡಲಾಯಿತು. 15 ದಿನದ ಬಳಿಕ ನನಗೊಂದು ಸುತ್ತೋಲೆ ಬಂದಿತು. ಸಮಿತಿ ಮರುರಚಿಸಲಾಗಿದ್ದು, ಎಸ್.ಎಲ್. ಭೈರಪ್ಪ ಅವರನ್ನು ಕೈಬಿಡಲಾಗಿದೆ ಎಂದು ನಮೂದಿಸಲಾಗಿತ್ತು. ಆ ಸ್ಥಾನಕ್ಕೆ ಅರ್ಜುನ್ ದೇವ್ ಎಂಬ ಎಡಪಂಥೀಯ ಪ್ರಾಧ್ಯಾಪಕರನ್ನು ನೇಮಿಸಲಾಯಿತು. ಇತಿಹಾಸ, ಸಮಾಜಶಾಸ್ತ್ರ, ಸಾಹಿತ್ಯವನ್ನು ಸಂಪೂರ್ಣ ಪರಿಷ್ಕರಿಸಿ ನೂತನ ಪಠ್ಯವನ್ನು ರೂಪಿಸಿದರು. ಇದನ್ನೇ ಮಾದರಿ ಪಠ್ಯ ಎಂಬಂತೆ ಬಿಂಬಿಸಿದರು.
2-ನಮ್ಮಲ್ಲಿ ಬೋಧನೆಯಲ್ಲಿ್ಲ ಮೌಲ್ಯಗಳು ಮರೆಯಾಗಿವೆ. ಆದರೆ ಅಮೆರಿಕದಲ್ಲಿ ‘ನೀನು ದುಡಿದು ಸಂಪಾದಿಸಿದ್ದು ಮಾತ್ರ ನಿನ್ನದು’ ಎಂದು ಹೇಳಿಕೊಡಲಾಗುತ್ತದೆ. ಅಲ್ಲಿಯ ಮಗು ‘ಇದು ಯಾರ ಮನೆ’ ಎಂದು ಕೇಳಿದರೆ ತನ್ನ ತಂದೆಯ ಮನೆ ಎನ್ನುತ್ತದೆ. ನಿನ್ನದು? ಎಂದರೆ ‘ಇನ್ನೂ ಇಲ್ಲ’ ಎಂದು ಹೇಳುತ್ತದೆ. ರಸ್ತೆಯಲ್ಲಿ ಪೆನ್ನು ಬಿದ್ದಿದ್ದರೆ ಯಾರೂ ಎತ್ತಿಕೊಳ್ಳುವುದಿಲ್ಲ. ಬೇರೆಯವರದ್ದು ತನ್ನದಲ್ಲ ಎಂಬ ಸ್ಪಷ್ಟ ತಿಳಿವಳಿಕೆ ಅಲ್ಲಿಯ ಜನರಲ್ಲಿದೆ.
3-ನಮ್ಮಲ್ಲಿ ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಬೂಟು ಹಾಗೂ ಕಾಲುಚೀಲವನ್ನು ನೀಡುತ್ತಿದೆ. ಈ ಉಷ್ಣದೇಶದಲ್ಲಿ ಇದರ ಅಗತ್ಯವಿಲ್ಲ. ಮಣ್ಣಿನ ಮೇಲೆ ಓಡಾಡಿದಾಗ ಮಾತ್ರ ಈ ನೆಲದ ಅನುಭವ ಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಪೂರಕವಾಗಿಲ್ಲ. ಆರ್ಎಸ್ಎಸ್ನ ನ. ಕೃಷ್ಣಪ್ಪ ಅವರ ಪರಿಕಲ್ಪನೆಯಲ್ಲಿ ಮೈದಳೆದಿರುವ ಹರಿಹರಪುರದ ಹತ್ತಿರವಿರುವ ಗುರುಕುಲ ಪ್ರಭೋದಿನಿ ಮಾದರಿಯ ಶಾಲೆಗಳ ಅಗತ್ಯವಿದೆ. ಅಲ್ಲಿನ ಮಕ್ಕಳು ಉತ್ತಮ ಸಂಸ್ಕಾರದ ಜತೆಗೆ ಜ್ಞಾನವನ್ನು ಸಂಪಾದಿಸಿದ್ದಾರೆ.
ಶ್ರೇಷ್ಠ ಆಲೋಚನೆ ಇಲ್ಲದೆ ಸರ್ಕಾರ ರಚನೆ
ರಾಜ್ಯದಲ್ಲಿ ರಚನೆಯಾಗಿರುವ ಮೈತ್ರಿ ಸರ್ಕಾರ ಶ್ರೇಷ್ಠ ಆಲೋಚನೆಯಿಂದ ಕೂಡಿಲ್ಲ ಎಂದು ಬ್ರಿಟನ್ನಿನ ಬ್ರೆಕ್ಸಿಟ್ ಸಂದರ್ಭದ ಉದಾಹರಣೆ ನೀಡಿ ಭೈರಪ್ಪ ವಿವರಿಸಿದರು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರೆಯಾಗಬೇಕೆ, ಬೇಡವೇ ಎಂಬ ಕುರಿತು 2016ರಲ್ಲಿ ಜನಮತ ಸಂಗ್ರಹ ನಡೆದಾಗ, ಒಕ್ಕೂಟದಿಂದ ಹೊರಬರಲು ಜನರು ಒಲವು ತೋರಿದ್ದರು. ಐರೋಪ್ಯ ಒಕ್ಕೂಟದಲ್ಲೆ ಉಳಿಯಬೇಕು ಎಂದು ಪ್ರತಿಪಾದಿಸಿದ್ದ ಪ್ರಧಾನಿ ಡೇವಿಡ್ ಕೆಮರಾನ್, ಯಾರೂ ಒತ್ತಾಯಿಸದಿದ್ದರೂ ರಾಜೀನಾಮೆ ನೀಡಿದರು. ನಂತರ ಬ್ರಿಟನ್ ಪ್ರಧಾನಿಯಾಗಿ ಥೆರೇಸಾ ಮೇ ಅವರನ್ನು ಆಡಳಿತ ಪಕ್ಷ ನೇಮಿಸಿತು. ಈ ನೇಮಕವನ್ನು ಕೆಲ ಜನಸಾಮಾನ್ಯರು ಪತ್ರಿಕೆಗಳ ‘ಸಂಪಾದಕರಿಗೆ ಪತ್ರ’ ವಿಭಾಗದಲ್ಲಿ ಟೀಕಿಸಿದರು. ನಾವು ಥೆರೇಸಾ ಮೇ ಅವರಿಗೆ ಮತ ಹಾಕಿರದಿದ್ದರೂ ಅವರು ಆಳುತ್ತಿದ್ದಾರೆ ಎಂದರು. ಕೂಡಲೇ ಮೇ ಅವರು ಚುನಾವಣೆ ಘೋಷಿಸಿದರು. ಅವರ ಪಕ್ಷ ಅತಿ ದೊಡ್ಡ ಪಕ್ಷಆಯಿತಾದರೂ ಸರಳ ಬಹುಮತ ಸಿಗಲಿಲ್ಲ. ಮತ್ತೊಂದು ಚುನಾವಣೆ ನಡೆದು ತೆರಿಗೆ ಹಣ ಪೋಲಾಗುವುದನ್ನು ತಡೆಯುವ ಸಲುವಾಗಿ, 3ನೇ ಸ್ಥಾನದಲ್ಲಿದ್ದ ಪಕ್ಷವೊಂದು ಸರ್ಕಾರಕ್ಕೆ ಬೆಂಬಲ ನೀಡಿತು. ಆದರೆ ಕರ್ನಾಟಕದಲ್ಲಿ ಏನಾಯಿತು? 78 ಹಾಗೂ 38 ಎರಡೂ ಒಟ್ಟಾದರೆ 104ಕ್ಕಿಂತ ಹೆಚ್ಚು ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ರಚನೆಯಾಗಿದೆ. ಚುನಾವಣೆಗೆ ಮುನ್ನ ಇಬ್ಬರೂ ಪರಸ್ಪರರ ವಿರುದ್ಧ ಮಾಡಿಕೊಂಡಿದ್ದ ಆರೋಪಗಳು ಮುಕ್ತಾಯವಾದವೇ? ಇದು ಪರಸ್ಪರರ ವಿರುದ್ಧ ಮತ ನೀಡಿದ ಮತದಾರನಿಗೆ ಮಾಡಿದ ಮೋಸವಲ್ಲವೇ? ಬ್ರಿಟನ್ನಲ್ಲಿ ಲಿಖಿತ ಸಂವಿಧಾನ ಇಲ್ಲ. ಅಲ್ಲಿ ಅನುಸರಿಸುವ ಪದ್ಧತಿಗೂ ನಮ್ಮ ದೇಶಕ್ಕೂ ಎಷ್ಟು ವ್ಯತ್ಯಾಸವಿದೆ ಅಲ್ಲವೇ? ಅಂಬೇಡ್ಕರ್ ಉತ್ತಮ ಸಂವಿಧಾನ ನೀಡಿದ್ದಾರೆ. ಆದರೆ ಸಂವಿಧಾನದ ಆಶಯಗಳನ್ನು ಪಾಲಿಸಲು ಶ್ರೇಷ್ಠ ಆಲೋಚನೆಗಳು ಕೂಡ ಇರಬೇಕು. ಇದರಿಂದ ಪ್ರಜಾಪ್ರಭುತ್ವ ಬೆಳೆಯುತ್ತದೆ.
ನಾವೆಲ್ಲ ಚಿಕ್ಕವರಿದ್ದಾಗ ಮನೆ ಕೆಲಸವನ್ನು ಪ್ರತಿನಿತ್ಯ ಮಾಡುತ್ತಿದ್ದೆವು. ಸ್ವಲ್ಪ ದೊಡ್ಡವರಾದ ಮೇಲೆ ಆಕಳ ಹಾಲು ಕರೆಯುವುದು, ಸಗಣಿ ಎತ್ತುವುದನ್ನು ರೂಢಿಸಿಕೊಂಡಿದ್ದೆವು. 15 ವರ್ಷವಾದಾಗ ಮನೆಯ ಜವಾಬ್ದಾರಿ ನೀಡಿದಾಗ ದಿನದಲ್ಲಿ 10 ಗಂಟೆ ಕೆಲಸಮಾಡಿ, ಅಭ್ಯಾಸ ಮಾಡುತ್ತಿದ್ದೆ. ಧೀರೂಭಾಯಿ ಅಂಬಾನಿ, ನರೇಂದ್ರ ಮೋದಿ, ಅಬ್ದುಲ್ ಕಲಾಂ ಮುಂತಾದವರು ಬಡತನದಲ್ಲಿಯೇ ಕೆಲಸಮಾಡಿ, ಮೇಲಕ್ಕೆ ಬಂದವರು. ನೀವು ಕೂಡ ಹೋಟೆಲ್ನಲ್ಲಿ ಕೆಲಸ ಮಾಡಿದ್ದೀರಿ. ನಿಮ್ಮ ಮಕ್ಕಳನ್ನು ಬಿಡುವಿನ ವೇಳೆಯಲ್ಲಿ ವಿವಿಧ ಕೆಲಸಕ್ಕೆ ಕಳುಹಿಸುತ್ತಿದ್ದಿರಿ. ಆದರೆ, ಇದೀಗ ಬದಲಾದ ಸನ್ನಿವೇಶದಲ್ಲಿ ಓದುವ ಮಕ್ಕಳಿಗೆ ಬೇರೆ ಕೆಲಸ ಸೂಚಿಸುತ್ತಿಲ್ಲ. 30 ವರ್ಷವಾದ ಬಳಿಕ ಕೆಲಸ ಆರಂಭಿಸುವುದು ಎಷ್ಟು ಸರಿ? ಚಿಕ್ಕಂದಿನಿಂದಲೇ ಓದಿನ ಜತೆಗೆ ಕೆಲಸವನ್ನು ಮಾಡುವಂತೆ ಪಾಠ ಹೇಳುವುದು ಉತ್ತಮ ಅನಿಸುವುದಿಲ್ಲವೇ?
| ಡಾ. ವಿಜಯ ಸಂಕೇಶ್ವರ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್
-ನಾವು ಚಿಕ್ಕಪುಟ್ಟ ಕೆಲಸ ಮಾಡುವುದರಿಂದ ಮಿದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕೇವಲ ಓದುತ್ತಿದ್ದರೆ ತಲೆಗೆ ಹತ್ತುವುದಿಲ್ಲ. ನನ್ನ ‘ಭಿತ್ತಿ’ ಆತ್ಮಕಥೆಯಲ್ಲಿ ಈ ಬಗ್ಗೆ ವಿವರಿಸಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ವಿವಿಧ ಪುಸ್ತಕವನ್ನು ಓದುತ್ತಿದ್ದೆ. ಇದರಿಂದ ನನ್ನ ಧಾರಣಾ ಶಕ್ತಿ ಬೆಳೆಯಿತು. ಇದರಿಂದ ದೊಡ್ಡ ಕಾದಂಬರಿಗಳನ್ನು ರಚಿಸಲು ಸಾಧ್ಯವಾಯಿತು. ಪ್ರೌಢಶಾಲೆ ಓದುತ್ತಿರುವಾಗ ನೂರಕ್ಕೂ ಅಧಿಕ ಹಳ್ಳಿ ಸುತ್ತಿದ್ದೆ. ಓದಿನ ಜತೆಗೆ ದೇಹಕ್ಕೆ ಶ್ರಮವಾಗುವ ಕೆಲಸವನ್ನು ಮಾಡಬೇಕು. ನನ್ನ ಮಕ್ಕಳನ್ನು ರಜಾ ದಿನಗಳಲ್ಲಿ ಮೈಸೂರಿನಲ್ಲಿ ಭಾವಸಾರ್ ಎಂಬ ಜವಳಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿದ್ದೆ. ‘ನಿಮಗೆ ತಿಂಗಳಿಗೆ 20 ರೂ. ನೀಡುತ್ತೇನೆ. ಅದನ್ನೇ ಮಗನಿಗೆ ಸಂಬಳ ರೂಪದಲ್ಲಿ ನೀಡಿ’ ಎಂದು ಅಂಗಡಿ ಮಾಲೀಕನಿಗೆ ಹೇಳಿದ್ದೆ. ಕಾರು ರಿಪೇರಿ ಕಲಿಯಲು ರಜಾ ಅವಧಿಯಲ್ಲಿ ಗ್ಯಾರೇಜಿಗೆ ಕಳುಹಿಸಿದ್ದೆ. ಆದ್ದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಬಂದಿತು. ಆದರೆ, ಬದಲಾದ ಸನ್ನಿವೇಶದಲ್ಲಿ ಇಂಥ ಶಿಸ್ತನ್ನು ಕಲಿಸುತ್ತಿಲ್ಲ.
ದೇವರು, ಧರ್ಮದ ಬಗ್ಗೆ…
ನಾನು ದೇವರ ಪರಮಭಕ್ತನೇನಲ್ಲ. ಆದರೆ ಭಾರತೀಯ ಸಂಸ್ಕೃತಿ, ಆಚರಣೆಗಳಿರುವುದೇ ಮಂದಿರಗಳಲ್ಲಿ ಎನ್ನುವ ಕಾರಣಕ್ಕೆ ಎಲ್ಲೆಡೆ ಹೋಗುತ್ತೇನೆ. ವಿದೇಶದ ದೇವಸ್ಥಾನಗಳಿಗೂ ತೆರಳುತ್ತೇನೆ. ಆದರೆ, ನಾವು ನೋಡಿಲ್ಲ ಎಂಬ ಮಾತ್ರಕ್ಕೆ ದೇವರೇ ಇಲ್ಲ ಎಂಬ ಮಾತು ದಡ್ಡತನ, ಅಹಂಕಾರ. ಬಣವೆಯೊಂದರಲ್ಲಿ ಸೂಜಿ ಹುಡುಕಿದ ಕಥೆಯಂತೆ, ನಮಗೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆ ವಸ್ತುವೇ ಇಲ್ಲ ಎಂದು ಬುದ್ಧಿಜೀವಿಗಳು ಮಾತನಾಡುವುದು ಸರಿಯಲ್ಲ. ನಮ್ಮ ಮಹಾತ್ಮರು ದೇವರ ಬಗ್ಗೆ ಹೇಳಿದ್ದಾರೆ. ಅವರೇಕೆ ಸುಳ್ಳು ಹೇಳುತ್ತಾರೆ? ಎಂಬ ನಂಬಿಕೆ ಇದೆ. ನಾನು ದೇವರು, ಧರ್ಮಗಳ ಬಗ್ಗೆ ಮಾತನಾಡುವುದೆಲ್ಲವೂ ನನ್ನ ಓದಿನಿಂದ, ಅಧ್ಯಯನದಿಂದ ಬಂದಿದ್ದು.
ಮತಾಂತರಕ್ಕೆ ಮಿಷನರಿಗಳ ಟ್ರಿಕ್
ಕೆಲ ಚರ್ಚ್ಗಳಲ್ಲಿ ದೇವಸ್ಥಾನದ ರೀತಿ ತ್ರಿಶೂಲ ಇತ್ಯಾದಿ ಇಡುತ್ತಿದ್ದಾರೆ, ಇದು ಜನರನ್ನು ಸೆಳೆಯುವ ತಂತ್ರವೇ ಎಂಬ ಪ್ರಶ್ನೆಗೆ ಭೈರಪ್ಪ ಉತ್ತರ: ಮತಾಂತರಕ್ಕೆ ವಿರೋಧ ವ್ಯಕ್ತವಾಗಬಾರದು ಎಂಬ ಕಾರಣಕ್ಕೆ ಕ್ರೖೆಸ್ತ ಮಿಷನರಿಗಳು ಅನೇಕ ಟ್ರಿಕ್ಗಳನ್ನು ಮಾಡುತ್ತಾರೆ. ಬೊಲಿವಿಯಾ ದೇಶದಲ್ಲಿ ಮೂಲದಲ್ಲಿ ಗುಡ್ಡಗಾಡು ಜನರಿದ್ದರು. ಭೂಮಿಯನ್ನು ತಾಯಿ ಎಂದು ಪೂಜಿಸುತ್ತಿದ್ದ ಮುಗ್ಧ ಜನರ ಬಳಿಗೆ ಸ್ಪೇನ್ ಮಿಷನರಿಗಳು ತೆರಳಿ ‘ನಿಮ್ಮ ಭೂಮಿತಾಯಿಯ ರೀತಿಯಲ್ಲೇ ನಮ್ಮ ಮೇರಿ ತಾಯಿಯನ್ನೂ ಒಟ್ಟಿಗೆ ಪೂಜಿಸೋಣ’ ಎಂದರು. ನಂತರ ನಿಧಾನವಾಗಿ, ಮೇರಿ ಪುತ್ರನೇ ಆಗಿರುವ ಜೀಸಸ್ ಪೂಜಿಸೋಣ ಎಂದರು. ಎಲ್ಲರನ್ನೂ ಮತಾಂತರ ಮಾಡಿದರು. ಮತಾಂತರಕ್ಕೆ ಜನರಿಂದ ವಿರೋಧ ಕಡಿಮೆ ಮಾಡುವ ತಂತ್ರವಾಗಿ ಚರ್ಚ್ಗಳಲ್ಲಿ ದೇವಸ್ಥಾನದ ರೀತಿ ಪೂಜೆ, ಪ್ರಸಾದ, ಫಾದರ್ಗಳು ಕುಂಕುಮ ಇಡುವುದೆಲ್ಲ ಮಾಡುತ್ತಾರೆ.
ಕಾಶ್ಮೀರ ವಿಚಾರದಲ್ಲಿ ತಪ್ಪು ನಡೆ
ದೇಶದ ಏಕತೆಗಾಗಿ 560ಕ್ಕೂ ಅಧಿಕ ಪ್ರಾಂತ್ಯಗಳನ್ನು ಒಗ್ಗೂಡಿಸಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಗೃಹ ಮಂತ್ರಿಯಾಗಿದ್ದರು ಕೂಡ ಕಾಶ್ಮೀರದ ವಿಚಾರದಲ್ಲಿ ವ್ಯವಹರಿಸಲು ನೆಹರು ಅಡ್ಡಿಪಡಿಸಿದ್ದರು. ಶೇಖ್ ಅಬ್ದುಲ್ಲಾ ಜತೆಗೆ ಇದ್ದ ಸ್ನೇಹವನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮ ವ್ಯಾಪ್ತಿಗೆ ಬರುತ್ತಿರಲಿಲ್ಲವಾದರೂ ನೆಹರು ತಾವೇ ಕಾಶ್ಮೀರದ ವಿಚಾರವನ್ನು ವಹಿಸಿಕೊಂಡರು.
ಉತ್ತಮ ನಾಯಕನಿಗೆ ದೇಶ ಸ್ಪಂದಿಸುತ್ತದೆ
ಆಡಳಿತದಲ್ಲಿದ್ದವರು ಪ್ರಾಮಾಣಿಕರಾಗಿದ್ದರೆ, ಉತ್ತಮ ಚಿಂತನೆಯುಳ್ಳವರಾಗಿದ್ದರೆ ದೇಶವೂ ಅವರನ್ನು ಹಿಂಬಾಲಿಸುತ್ತದೆ, ಅನುಸರಿಸುತ್ತದೆ. ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಲಾಲ್ ಬಹಾದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದರು. ದೇಶದಲ್ಲಿ ಆಹಾರದ ಕೊರತೆ, ಆರ್ಥಿಕ ಸಂಕಷ್ಟ ಉದ್ಭವಿಸಿತು. ಆಗ ಶಾಸ್ತ್ರಿಯವರು ಪ್ರತಿ ಸೋಮವಾರ ರಾತ್ರಿಯ ಊಟವನ್ನು ತ್ಯಜಿಸಿದರಲ್ಲದೆ, ದೇಶವಾಸಿಗಳಿಗೂ ವಾರದಲ್ಲಿ ಒಂದು ಊಟ ತ್ಯಜಿಸುವಂತೆ ಕರೆ ನೀಡಿದರು. ಲಕ್ಷಾಂತರ ಜನರು ಇದಕ್ಕೆ ಸ್ಪಂದಿಸಿ, ರಾತ್ರಿ ಉಪವಾಸ ಆರಂಭಿಸಿದರು. ಹೋಟೆಲ್ಗಳು ಕೂಡ ಸೋಮವಾರ ಸಂಜೆ ಬಾಗಿಲು ಹಾಕುತ್ತಿದ್ದವು. ನಾಯಕನಲ್ಲಿ ಕಳಕಳಿ, ಸ್ಪಂದನೆಯ ಗುಣವಿದ್ದರೆ ದೇಶ ಅದಕ್ಕೆ ಪ್ರತಿಸ್ಪಂದಿಸುತ್ತದೆ. ಬ್ರೆಕ್ಸಿಟ್ ಸಂದರ್ಭದಲ್ಲಿ ಬ್ರಿಟನ್ ರಾಜಕಾರಣಿಗಳು ನಡೆದುಕೊಂಡ ಬಗೆಯೂ ಗುಡ್ ಪಾಲಿಟಿಕಲ್ ಸೆನ್ಸ್ಗೆ ಉತ್ತಮ ಉದಾಹರಣೆ.
ಹಿಂದೂಗಳೊಳಗೆ ವಿವಾಹ ಸೂಕ್ತ
ಅಂತರ್ಜಾತಿ ವಿವಾಹವಾಗುವಾಗ, ಹಿಂದೂ ಧರ್ಮದೊಳಗಿನ ವಿಭಿನ್ನ ಜಾತಿಗಳಿಗೇ ಸೀಮಿತವಾಗುವುದು ಸೂಕ್ತ ಎಂದು ಭೈರಪ್ಪ ತಿಳಿಸಿದರು. ಬೇರೆ ಧರ್ಮದವರ ಜತೆ ಏಕೆ ವಿವಾಹವಾಗಬಾರದು? ಎಂಬ ಡಾ. ವಿಜಯ ಸಂಕೇಶ್ವರ ಅವರ ಪ್ರಶ್ನೆಗೆ ಭೈರಪ್ಪ ಪ್ರತಿಕ್ರಿಯಿಸಿದ್ದು ಹೀಗೆ:
ಹಿಂದೂ, ಸಿಖ್ಖ, ಬೌದ್ಧ, ಜೈನರನ್ನು ಒಂದೇ ಸಂಪ್ರದಾಯ ಎಂದು ಸಂವಿಧಾನ ಪರಿಗಣಿಸಿದ್ದು, ಎಲ್ಲ ಧರ್ಮಗಳನ್ನೂ ಹಿಂದೂ ವಿವಾಹ ಕಾಯ್ದೆ ಅಡಿಯಲ್ಲೆ ನಮೂದಿಸಿದೆ. ಈ ಧರ್ಮ, ಪಂಥಗಳ ನಡುವೆ ವಿವಾಹವಾಗಲು ಯಾವುದೇ ವಿಶೇಷ ಕಾನೂನು, ಅನುಮತಿ ಬೇಕಿಲ್ಲ. ಇದಲ್ಲದೆ, ಈ ಎಲ್ಲವುಗಳ ಸಾಮಾಜಿಕ ಮೌಲ್ಯಗಳು, ಒಟ್ಟಾರೆ ಪೂಜಾ ವಿಧಾನಗಳಲ್ಲೂ ಭಿನ್ನತೆಯಿಲ್ಲ. ಶ್ರವಣಬೆಳಗೊಳದ ಗೊಮ್ಮಟೇಶ್ವರನ ಪೂಜೆಗೆ ಜೈನರಷ್ಟೇ ಹೋಗುವುದಿಲ್ಲ. ಧರ್ಮಸ್ಥಳದ ಮಂಜುನಾಥನ ದೇವಾಲಯಕ್ಕೆ ಜೈನ ಸಮುದಾಯಕ್ಕೆ ಸೇರಿದ ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ವಧಿಕಾರಿ. ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ -ಅಂದರೆ ಒಂದೇ ಸತ್ಯವನ್ನು ವಿದ್ವಾಂಸರು ವಿವಿಧ ಹೆಸರುಗಳಿಂದ ಕರೆಯುತ್ತಾರೆ ಎಂಬುದು ನಮ್ಮ ಧರ್ಮದ ಕೇಂದ್ರ ವಿಚಾರ. ಆದರೆ ಇಸ್ಲಾಂ ಹಾಗೂ ಕ್ರೖೆಸ್ತರು ಒಂದೇ ಸತ್ಯ ಎನ್ನುತ್ತಾರೆಯೇ ಹೊರತು, ಬೇರೆ ಬೇರೆ ಹೆಸರುಗಳಲ್ಲಿ ನೋಡುವುದನ್ನು ಅವರು ಒಪು್ಪವುದಿಲ್ಲ. ಪ್ರಿಡೇಟರಿ ರಿಲೀಜನ್ ಎನ್ನಲಾಗುವ ಈ ನಂಬಿಕೆಗಳವರನ್ನು ವಿವಾಹವಾದರೆ ಪೂಜೆಯ ಹಾಗೂ ನಂಬಿಕೆಯ ಸ್ವಾತಂತ್ರ್ಯ ಹೋಗುತ್ತದೆ. ಈ ರೀತಿಯ ಉದಾಹರಣೆಯನ್ನು ನಾನು ನೋಡಿದ್ದೇನೆ. ‘ಈಶ್ವರ ಅಲ್ಲಾ ತೇರೇ ನಾಮ್ ಎಂದು ಗಾಂಧಿ ಸೇರಿಸಿದ ಭಜನೆಯನ್ನು ಹಿಂದೂಗಳು ಹೇಳುತ್ತೇವೆಯೇ ವಿನಾ ಯಾವುದೇ ಮಸೀದಿಯಲ್ಲಿ, ಚರ್ಚ್ನಲ್ಲಿ ಹೇಳುವುದಿಲ್ಲ. ಹಾಗಾಗಿ ಹಿಂದೂ ಧರ್ಮದೊಳಗೆ ಆಗುವ ಅಂತರ್ಜಾತಿ ವಿವಾಹದಿಂದ ಯಾವುದೇ ತೊಂದರೆ ಆಗದು.
ನೆಹರು ನೀತಿ ಮುಂದುವರಿಸಿದ ಸಿದ್ದರಾಮಯ್ಯ
ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ವಿವಾದ ಸೃಷ್ಟಿಯಾಗಲು ಅಂದಿನ ಸಿಎಂ ಸಿದ್ದರಾಮಯ್ಯ ಕಾರಣವೆಂದ ಎಸ್.ಎಲ್. ಭೈರಪ್ಪ, ಈ ಹಿಂದೆ ನೆಹರು ಆರಂಭಿಸಿದ ನೀತಿಯನ್ನು ಇವರು ಮುಂದುವರಿಸಿದರೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಧರ್ಮವನ್ನು ಒಡೆಯುವುದು ಬ್ರಿಟಿಷರ ನೀತಿ. ಸ್ವಾತಂತ್ರಾ್ಯನಂತರ ನೆಹರು ಅದನ್ನು ಅಳವಡಿಸಿಕೊಂಡರು. ಹಿಂದು- ಮುಸ್ಲಿಂ, ಹಿಂದುಳಿದವರು, ದಲಿತರು, ಮತ್ತಷ್ಟು ಹಿಂದುಳಿದವರು… ಹೀಗೆ ಅನೇಕ ಭಾಗಗಳಾಗಿ ಒಡೆದು ಆಳಿದರು. ಕರ್ನಾಟಕದಲ್ಲೂ ಈ ಹಿಂದೆಯೇ ಅನೇಕರು ಒಕ್ಕಲಿಗ-ಕುರುಬರ ನಡುವೆ ಕಂದಕ ಸೃಷ್ಟಿಸಿದ್ದರು. ಸಿದ್ದರಾಮಯ್ಯ ಅವರಿಗೆ ವೀರಶೈವ- ಲಿಂಗಾಯತ ವಿಚಾರ ಸಿಕ್ಕಿತು. ಈ ವಿಚಾರ ಅನೇಕ ವರ್ಷಗಳಿಂದ ಚರ್ಚೆ ಆಗುತ್ತಿತ್ತು. ಹಾಗೆ ನೋಡಿದರೆ ಭಾರತದ ಯಾವ ಪಂಥಗಳ ನಡುವೆ ಈ ರೀತಿ ಚರ್ಚೆ ಇಲ್ಲ? ವೇದಾಂತದಲ್ಲಿ ಚರ್ಚೆ ಇಲ್ಲವೇ? ದ್ವೆ ೖತ, ಅದ್ವೆ ೖತ, ವಿಶಿಷ್ಟಾ ದ್ವೆ ೖತ ನಡುವೆ ಚರ್ಚೆ ಇದೆ. ದ್ವೆ ೖತದಲ್ಲೆ ಉಡುಪಿ ಮಠಕ್ಕೂ, ಮಂತ್ರಾಲಯಕ್ಕೂ ಭಿನ್ನತೆ ಇದೆ. ಪ್ರತಿ ಮಠಗಳ ನಡುವೆ ವಿಭಿನ್ನತೆ ಇದೆ. ಇವೆಲ್ಲ ಚರ್ಚೆ, ಭಿನ್ನತೆ ನಡುವೆಯೇ ಎಲ್ಲವನ್ನೂ ಒಪು್ಪವುದೇ ನಮ್ಮ ಸಂಸ್ಕೃತಿಯ ವಿಶೇಷತೆ. ಇದೇ ವ್ಯತ್ಯಾಸವನ್ನು ಮುಂದಿಟ್ಟುಕೊಂಡು ವೋಟ್ಬ್ಯಾಂಕ್ ಮಾಡಿಕೊಳ್ಳುವುದು ಇವರ ಉದ್ದೇಶವಾಗಿತ್ತು. ವೀರಶೈವ ಲಿಂಗಾಯತ ಎಂಬುದು ರಾಜಕೀಯ ಕಾರಣಕ್ಕೆ ಉಂಟಾದ ವಿಭಜನೆ. ಶಿವನ ಪೂಜೆಯನ್ನು ಯಾರೂ ಸೃಷ್ಟಿಸಲಿಲ್ಲ. ಬಸವಣ್ಣನೂ ಸೃಷ್ಟಿಸಲಿಲ್ಲ. ಕಾಲಕಾಲಕ್ಕೆ ಬಂದ ಮಹಾನುಭಾವರು ಹೊಸ ವ್ಯಾಖ್ಯಾನ ಮಾಡುತ್ತ ಹೋದರು. ಹಾಗೆ ನೋಡಿದರೆ ಬಸವಣ್ಣ ಬಹುದೊಡ್ಡ ಸಮಾಜ ಸುಧಾರಕ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ