ಉಬ್ಬಿ ನೀಲಿಯಾದ ರಕ್ತನಾಳಗಳಿಗೆ ವೆರಿಕೋಸ್ ವೇನ್ಸ್ ಎನ್ನುತ್ತಾರೆ. ಚರ್ಮದ ಮೇಲೆ ಅಂಕುಡೊಂಕಾದ ಎಳೆಗಳಲ್ಲಿ ನರಗಳು ನೀಲಿಯಾಗಿ ಕಂಡುಬರುತ್ತವೆ. ಇದು ಹೆಚ್ಚಾಗಿ ಕಾಲುಗಳು, ಪಾದಗಳಲ್ಲಿ ಕಾಣಿಸುತ್ತದೆ. ಕೆಲವೊಂದು ಬಾರಿ ರಕ್ತನಾಳಗಳಲ್ಲಿ ಬಾವು, ಅದರ ಸುತ್ತ ರಕ್ತದಿಂದ ಹೆಪ್ಪುಗಟ್ಟಿರುವ ಲೋಮನಾಳಗಳು ಕಂಡುಬರುತ್ತದೆ. ಕಾಲಿನ ಮೇಲೆ ಹಾಗೂ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡವು ವೆರಿಕೋಸ್ ವೇನ್ಸ್ಗೆ ಕಾರಣವಾಗಬಹುದು. ಗರ್ಭಧಾರಣೆಯ ಸಂದರ್ಭದಲ್ಲಿ, ಬೊಜ್ಜು ಇರುವಾಗ, ಬಹುಕಾಲ ನಿಂತು ಕೆಲಸ ಮಾಡುವವರಲ್ಲಿ ವೆರಿಕೋಸ್ ವೇನ್ಸ್ ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ.
ವೆರಿಕೋಸ್ ವೇನ್ಸ್ನ್ನು ಕಡಿಮೆ ಮಾಡಲು ಆಹಾರ ಪದ್ಧತಿ, ಮನೆಮದ್ದುಗಳು ಹಾಗೂ ಪ್ರಕೃತಿ ಚಿಕಿತ್ಸೆಗಳು ಮುಖ್ಯ. ಮುಖ್ಯವಾಗಿ ಕಾಲು ಹಾಗೂ ಪಾದಗಳಲ್ಲಿ ರಕ್ತಸಂಚಾರ ಸರಿಯಾಗಿ ಆಗುವಂತೆ ಮಾಡಬೇಕು.
ಸಿಪ್ಪೆ ಬಿಡಿಸಿರುವ ಆರು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಲಘುವಾಗಿ ಜಜ್ಜಿಕೊಳ್ಳಬೇಕು. ನಂತರ ಒಂದು ಕಿತ್ತಳೆ ಹಣ್ಣನ್ನು ಕತ್ತರಿಸಿ ಅದರ ರಸವನ್ನು ಹಿಂಡಿ ಬೆಳ್ಳುಳ್ಳಿಯ ಜೊತೆ ಸೇರಿಸಬೇಕು. ಅದಕ್ಕೆ ಎರಡು ಚಮಚ ಆಲಿವ್ ಎಣ್ಣೆ ಹಾಕಿ ಕಲಸಿ 12 ಗಂಟೆಗಳ ಕಾಲ ನೆನೆಸಿಡಬೇಕು. 12 ಗಂಟೆಗಳ ಬಳಿಕ ಈ ರಸವನ್ನು ಮತ್ತೊಮ್ಮೆ ಕಲಕಿ ಅದರಲ್ಲಿ ಶುದ್ಧ ಹತ್ತಿಯನ್ನು ಅದ್ದಿ ಉಬ್ಬಿರುವ ರಕ್ತನಾಳಗಳ ಮೇಲೆ ಒತ್ತಡ ಹಾಕದೆ ಲೇಪಿಸಬೇಕು. ಹುಣ್ಣಾಗಿರುವಂತಹ ಭಾಗಗಳ ಮೇಲೆ ಹಚ್ಚಬಾರದು. ಇದು ಊತವನ್ನು ಕಡಿಮೆ ಮಾಡಲು ಸಹಕಾರಿ.
ತಾಜಾ ಇರುವ ಕ್ಯಾರೆಟ್ ಹಾಗೂ ಪಾಲಕ್ ಸೊಪ್ಪನ್ನು ಸೇರಿಸಿ ಜ್ಯೂಸ್ ಮಾಡಬೇಕು. ರುಚಿಗೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಹಾಕಿಕೊಳ್ಳಬಹುದು. ನಂತರ ಕಾಳುಮೆಣಸಿನ ಪುಡಿ/ದಾಲ್ಚಿನ್ನಿ ಚೂರ್ಣ ಸೇರಿಸಿ ಸೇವಿಸಬೇಕು. ಇದು ದೇಹದಲ್ಲಿ ಚೆನ್ನಾಗಿ ರಕ್ತಸಂಚಾರವಾಗಲು ಸಹಾಯ ಮಾಡುತ್ತದೆ. ಎಲೆಕೋಸನ್ನು ಬೇಯಿಸದೆ, ಉಗುರುಬೆಚ್ಚಗಿನ ಉಪ್ಪುನೀರಿನಲ್ಲಿ ತೊಳೆದು ನಂತರ ಬೇಕಾದಲ್ಲಿ ಸ್ವಲ್ಪ ಒಗ್ಗರಣೆ ಹಾಕಿಕೊಂಡು ಹಸಿಯಾಗಿಯೇ ಸೇವಿಸಬೇಕು. ಇದು ಸಮಸ್ಯೆಯ ಹತೋಟಿಗೆ ಅನುಕೂಲಕಾರಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ