ಸ್ವಾತಂತ್ರ್ಯೊತ್ಸವ ದಿನವೆಂಬುದು ದೇಶದ ಈವರೆಗಿನ ಪ್ರಗತಿಯನ್ನು
ಮೆಲುಕು ಹಾಕುವ ಮತ್ತು ಭವಿಷ್ಯದ ಕನಸುಗಳ ಸಾಕಾರಕ್ಕೆ ಸಂಕಲ್ಪ ಮಾಡುವ ಸುದಿನ. ಸ್ವಾತಂತ್ರ್ಯ
ಹೋರಾಟದ ಬಗ್ಗೆ ಓದಿ ಮತ್ತು ಕೇಳಿ ಮಾತ್ರ ತಿಳಿದಿರುವ ಇಂದಿನ ಯುವಜನರಿಗೆ ಸ್ವಾತಂತ್ರ್ಯ
ಮಹತ್ವ ಏನೆಂಬುದರ ಬಗ್ಗೆ ಅರಿವಿದೆಯೇ, ಭಾರತದ ಭವಿಷ್ಯದ ಸ್ಪಷ್ಟ ಕಲ್ಪನೆಯಿದೆಯೇ ಎಂಬುದು
ಆಗಾಗ ಚರ್ಚೆಗೊಳಗಾಗುವ ವಿಷಯ. ಈ ಹಿನ್ನೆಲೆಯಲ್ಲಿ ನಿಮ್ಮ ಕಲ್ಪನೆಯ ಭಾರತ ಹೇಗಿರಬೇಕು,
ಈವರೆಗಿನ ಪ್ರಗತಿಯ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ಯುವಜನರನ್ನು ವಿಜಯವಾಣಿ
ಪ್ರಶ್ನಿಸಿತ್ತು. ಅದಕ್ಕೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲವನ್ನು ಇಲ್ಲಿ
ಪ್ರಕಟಿಸಲಾಗುತ್ತಿದೆ.
ದೊಡ್ಡಣ್ಣನಾಗಲಿ ಭಾರತ
ಡಾ. ಅಬ್ದುಲ್ ಕಲಾಂ ಕಂಡ ವಿಜನ್ 20-20 ಕನಸು, ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು
ಕಾಣುತ್ತಿರುವ ವಿಶ್ವಗುರು ಭಾರತದ ಕನಸು… ಇವೆಲ್ಲವೂ ನನ್ನ ಕನಸುಗಳೂ ಹೌದು. ನಾವು ಬ್ರಿಟಿಷರ
ದಾಸ್ಯದಿಂದ ಮುಕ್ತವಾಗಿ ಮುಕ್ಕಾಲು ಶತಮಾನ ಕಳೆಯುತ್ತ ಬಂದರೂ ಇಂದಿಗೂ ಹಸಿವು, ಬಡತನ,
ಅನಾರೋಗ್ಯ, ನಿರುದ್ಯೋಗ, ಅನಕ್ಷರತೆ ಮುಂತಾದವು ನಾಗರಿಕರನ್ನು ಹೈರಾಣಾಗಿಸುತ್ತಿವೆ. ಇದರ
ಜತೆಗೆ ಅಪರಾಧ ಕೃತ್ಯಗಳು ಬೇರೆ. ಹೀಗಾಗಿ ನನ್ನ ಕಲ್ಪನೆಯ ದೇಶದಲ್ಲಿ ಪ್ರತಿಯೊಬ್ಬ
ನಾಗರಿಕನಿಗೂ ಉತ್ತಮ ಆಹಾರ, ಶಿಕ್ಷಣ, ಆರೋಗ್ಯ ಒದಗಿಸುವುದು ಸರ್ಕಾರದ ಆದ್ಯತೆ. ಇಲ್ಲಿ
ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗುವಂತಾಗಬೇಕು. ಬಾಲ್ಯವಿವಾಹ ಹಾಗೂ ವರದಕ್ಷಿಣೆ ಕಿರುಕುಳಗಳು
ಸಂಪೂರ್ಣ ನಿಮೂಲನೆಯಾಗಬೇಕು. ದೇಶದಲ್ಲಿ ಮದ್ಯಪಾನ, ಧೂಮಪಾನವನ್ನು ಸರ್ಕಾರ ನಿಷೇಧಿಸಬೇಕು.
ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪಬೇಕು. ಒಟ್ಟಿನಲ್ಲಿ ನನ್ನ ಭಾರತ ಎಲ್ಲ
ಸಾಮಾಜಿಕ ಸಮಸ್ಯೆಗಳಿಂದ ಮುಕ್ತವಾಗಿ ಎಲ್ಲ ರಂಗಗಳಲ್ಲಿ ವಿಶ್ವದ ದೊಡ್ಡಣ್ಣನಾಗಬೇಕು.
| ಸಂತೋಷ ನಿಡಗುಂದಿ ಅಥಣಿ ಬೆಳಗಾವಿ
ಪ್ರತಿಯೊಬ್ಬರೂ ಯೋಧರೇ
ಜಾತಿ-ಧರ್ಮ-ಲಿಂಗ ಭೇದವಿಲ್ಲದೆ, ಸರ್ಕಾರದ ಮೇಲೆ ಅತಿಯಾದ ಅವಲಂಬನೆಯಿಲ್ಲದೆ, ತಮ್ಮ
ಜವಾಬ್ದಾರಿಯೇನೆಂಬುದನ್ನು ಅರಿತುಕೊಂಡು ನಿಸ್ವಾರ್ಥ ದೇಶಸೇವೆ ಮಾಡುವುದು ಇಂದಿನ ತುರ್ತು
ಅಗತ್ಯ. ಇದಕ್ಕಾಗಿ ಇಂದಿನ ಯುವಕರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕಾಗಿದೆ. ಎಲ್ಲರಿಗೂ
ಮತದಾನ ಕಡ್ಡಾಯವಾಗಬೇಕಿದೆ. ವಿದೇಶ ಮತ್ತು ಅಲ್ಲಿನ ಸರಕುಗಳ ವ್ಯಾಮೋಹವನ್ನು ಕಡಿಮೆ
ಮಾಡಿಕೊಂಡು ಸ್ವದೇಶ ಮತ್ತು ಇಲ್ಲಿ ಉತ್ಪಾದನೆಯಾಗುವ ವಸ್ತುಗಳ ಮೇಲೆ ಪ್ರೇಮ
ವೃದ್ಧಿಸಿಕೊಳ್ಳಬೇಕಿದೆ. ಪುಟ್ಟ ದೇಶಗಳಾದ ಜಪಾನ್, ದಕ್ಷಿಣ ಕೊರಿಯಾ, ಇಸ್ರೇಲ್ಗಳಂತೆ
ಭಾರತದಲ್ಲಿಯೂ ಪ್ರತಿಯೊಬ್ಬ ನಾಗರಿಕನೂ ತಾನೊಬ್ಬ ಯೋಧ ಎಂದು ಭಾವಿಸಿ ದೇಶಸೇವೆ ಮಾಡುವ ಗುಣ
ಬೆಳೆಸಿಕೊಳ್ಳಬೇಕಿದೆ. ಅದೇ ನಾವು ಈ ರಾಷ್ಟ್ರಕ್ಕೆ ಕೊಡುವ ಅತ್ಯಂತ ಶ್ರೇಷ್ಠ ಗೌರವ.
| ಡಾ. ಮಾನಸಾ ನವನೀತ್ ಬೆಂಗಳೂರು
ಸಂಪನ್ಮೂಲದ ಸದ್ಬಳಕೆಯಾಗಲಿ
ಶ್ರೀಮಂತ ಮತ್ತು ಬಡವರ ಮಧ್ಯೆ ಆರ್ಥಿಕ ಮತ್ತು ಸಾಮಾಜಿಕ ಅಂತರ ಹೆಚ್ಚಾಗಿದೆ, ಇದನ್ನು
ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ವಿಶ್ವದ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲದ ಪ್ರಾಕೃತಿಕ
ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲ ಭಾರತದಲ್ಲಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿಗೆ
ಬೇಕಾದ ಎಲ್ಲವನ್ನೂ ಸರ್ಕಾರವೇ ಒದಗಿಸಿ ರೈತರು ಬೆಳೆದ ಬೆಳೆಯನ್ನು ಕೂಡ ಸರ್ಕಾರವೇ ನೇರವಾಗಿ
ಕೊಂಡುಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿಯಿಂದ ರೈತ ಸಮುದಾಯವನ್ನು ಮುಕ್ತಗೊಳಿಸಬೇಕು. ವಿವಿಧ
ಕ್ಷೇತ್ರಗಳಲ್ಲಿ ತಾಂಡವವಾಡುತ್ತಿರುವ ವೇತನ ತಾರತಮ್ಯವನ್ನು ಕಡಿಮೆ ಮಾಡಬೇಕು.
| ಹರ್ಷಿತ್ ಎಸ್.ಪಿ. ಮಂಚೇನಹಳ್ಳಿ, ಚಿಕ್ಕಬಳ್ಳಾಪುರ
ಎಲ್ಲದರಲ್ಲೂ ಮುಂದಿರಬೇಕು
ಭಾರತ ಎಲ್ಲ ದೇಶಗಳಿಗಿಂತಲೂ ಮುಂಚೂಣಿಯಲ್ಲಿರಬೇಕು, ಸಂಪೂರ್ಣ ಸಾಕ್ಷರತಾ ರಾಷ್ಟ್ರವಾಗಬೇಕು,
ಇಲ್ಲಿನ ಜನರ ಸೃಜನಶೀಲತೆ ಗುರುತಿಸಿ ಅದನ್ನು ಸರ್ಕಾರವೇ ಜಗತ್ತಿಗೇ ಪರಿಚಯಿಸಬೇಕು.
ದೇಶದಲ್ಲಿ ಭಿಕ್ಷುಕರೇ ಇರಬಾರದು. ಸರ್ಕಾರಿ ಕಚೇರಿಗಳು ಸಾರ್ವಜನಿಕರನ್ನು
ಕಾಯಿಸುವಂತಾಗಬಾರದು. ಶುಚಿತ್ವ, ಸಾಧನೆ ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿ ವಿಶ್ವದಲ್ಲಿಯೇ
ನನ್ನ ದೇಶ ಮುಂದಿರಬೇಕು, ಯೋಗಯುಕ್ತ ರೋಗಮುಕ್ತ ರಾಷ್ಟ್ರವಾಗಬೇಕು.
| ಬಿಂದು ಎಚ್. ಹೊನ್ನಾಳಿ, ದಾವಣಗೆರೆ
ಹಕ್ಕುಗಳ ಜತೆ ಕರ್ತವ್ಯದ ಅರಿವಿರಲಿ
ಭವ್ಯ ಭಾರತದ ಕನಸನ್ನು ಕಾಣುವ ಹಕ್ಕು ಹೇಗೆ ಎಲ್ಲರಿಗೂ ಇದೆಯೋ ಹಾಗೆಯೇ ಅದನ್ನು ನನಸು
ಮಾಡುವ ಕರ್ತವ್ಯ ಕೂಡ ಪ್ರತಿಯೊಬ್ಬ ನಾಗರಿಕನದ್ದಾಗಿದೆ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು
ಆಶಿಸದೆ ಅಗತ್ಯವಿರುವಲ್ಲಿ ಜನಸಮುದಾಯ ಕೂಡ ಸಕ್ರಿಯವಾಗಿ ಕೈಜೋಡಿಸಿದರೆ ಭಾರತ ಅಭಿವೃದ್ಧಿ
ಪಥದತ್ತ ಸಾಗುವುದರಲ್ಲಿ ಸಂಶಯವೇ ಇಲ್ಲ. ಒಬ್ಬ ಪ್ರಜೆಯೂ ಮೂಲಭೂತ ಅವಶ್ಯಕತೆಗಳಿಂದ
ವಂಚಿತನಾಗಬಾರದು. ತನ್ನ ಆಸಕ್ತಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳೆಯುವ ಅವಕಾಶ
ಪ್ರತಿಯೊಬ್ಬರಿಗೂ ಸಿಕ್ಕರೆ ಅದೇ ನಿಜವಾದ ಸ್ವಾತಂತ್ರ್ಯ. ಜತೆಗೆ, ಎಲ್ಲರೂ ಅವರವರ
ಸ್ಥಾನವನ್ನು ನ್ಯಾಯಯುತವಾಗಿ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಪ್ರತಿ ಮನೆಯನ್ನು
ತಲುಪಬೇಕು. ಎಲ್ಲ ನಾಗರಿಕರು ಅದರ ಫಲಾನುಭವಿಗಳಾಗಬೇಕು. ಆಗಲೇ ನೈಜ ಪ್ರಗತಿ ಸಾಧ್ಯ.
| ಭೂಮಿಕಾ ಭಟ್ ಹೊನ್ನಾವರ
ಉತ್ತರಕನ್ನಡ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಲಿ
ನನ್ನ ಕನಸಿನ ಭಾರತ ಹೇಗಿರಬೇಕೆಂದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ,
ಅತ್ಯಂತ ಪ್ರಬಲವಾಗಬೇಕು. ಎಲ್ಲ ಗಡಿ ಹಾಗೂ ಪ್ರಾದೇಶಿಕ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ
ಕಾಣಬೇಕು, ಸಂಪೂರ್ಣ ಭ್ರಷ್ಟಾಚಾರ ಮುಕ್ತವಾಗಬೇಕು. ದೇಶದ ರಕ್ಷಣಾ ವ್ಯವಸ್ಥೆ ಇನ್ನಷ್ಟು
ಬಲಿಷ್ಠವಾಗಬೇಕು. ಸರ್ವ ವಿಧದಲ್ಲೂ ಸ್ವಾವಲಂಬನೆ, ದೇಶದ್ರೋಹಿಗಳಿಗೆ, ಅಪರಾಧಿಗಳಿಗೆ ಉಗ್ರ
ಹಾಗೂ ಶೀಘ್ರ ಶಿಕ್ಷೆ ಆಗಬೇಕು. ಒಟ್ಟಾರೆ ನನ್ನ ಭಾರತ ವಿಶ್ವಗುರು ಆಗಬೇಕು. ಅದಕ್ಕಾಗಿ
ರಾಜಕೀಯ ರಂಗದಲ್ಲಿ ಹೊಸಬರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗಬೇಕು. ತನ್ಮೂಲಕ ಯುವ ಜನತೆಯ
ಕನಸು ನನಸಾಗಬೇಕು.
| ಹೊಸಪಟ್ಟಣ ಸತ್ಯನಾರಾಯಣ ಶೇಟ್ ವಿಜಯನಗರ, ಬೆಂಗಳೂರು
ಪುರುಷ ಪರನಾರಿ ಸಹೋದರನಂತಿರಲಿ
ದೇಶದ ಅಭಿವೃದ್ಧಿಗೆ ಯುವಪೀಳಿಗೆಯ ಅಗತ್ಯ ತುಂಬ ಇದೆ. ಅಹಿಂಸೆ, ಸತ್ಯ-ಧರ್ಮಗಳನ್ನು
ಎತ್ತಿಹಿಡಿದು ಸಮಾಜದ ಎಲ್ಲ ವರ್ಗದ ಜನತೆಗೆ ಮತ್ತು ಸಕಲ ಜೀವರಾಶಿಗೆ ಕಲ್ಯಾಣವನ್ನುಂಟು
ಮಾಡುವುದು ಇಂದಿನ ಅಗತ್ಯಗಳಲ್ಲಿ ಒಂದು. ಪುರುಷ ಪರನಾರಿ ಸಹೋದರನಂತೆ ನಡೆದುಕೊಳ್ಳಬೇಕು.
ಕೊಲೆ, ದರೋಡೆ, ಅತ್ಯಾಚಾರ, ಅಪಹರಣದಂಥ ಪ್ರಕರಣಗಳು ಇಲ್ಲವಾಗಬೇಕು. ನಾಡಿನ ಹಾಗೂ ದೇಶದ
ಕಲೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿ, ನೆಲ, ಜಲ, ಭಾಷೆ ಗಡಿಗಳನ್ನು ರಕ್ಷಿಸಿ, ದೇಶವನ್ನು
ಆರ್ಥಿಕ ಸಾಮಾಜಿಕ ಧಾರ್ವಿುಕವಾಗಿ ವೈಜ್ಞಾನಿಕ ಪಥದತ್ತ ಮುನ್ನಡೆಸಬೇಕು. ಇಂತಹ ಕನಸನ್ನು
ನನಸಾಗಿಸುವ ಆದ್ಯ ಕರ್ತವ್ಯವೂ ನನ್ನದೇ.
| ಎ. ಶ್ರೀನಿವಾಸ ತೋರಣಗಟ್ಟೆ ಉಪನ್ಯಾಸಕರು ಪಿ.ವಿ.ಎಸ್ ಶಿಕ್ಷಣ ಮಹಾವಿದ್ಯಾಲಯ
ಚಿತ್ರದುರ್ಗ
ಸಮಸ್ಯೆಮುಕ್ತ ಸೈನಿಕರು
ನನ್ನ ಕನಸಿನ ಭಾರತದಲ್ಲಿ ನಮ್ಮ ದೇಶದ ಪ್ರಮುಖ ಸೇವಕರಾದ ರೈತರು ಮತ್ತು ಸೈನಿಕರ ಎಲ್ಲ
ಸಮಸ್ಯೆಗಳು ಪರಿಹಾರ ಕಾಣುತ್ತವೆ. ಇಲ್ಲಿ ಯಾವುದೇ ಕಾರಣಕ್ಕೂ ಒಬ್ಬ ರೈತನೂ ಆತ್ಮಹತ್ಯೆ
ಮಾಡಿಕೊಳ್ಳುವ ಸ್ಥಿತಿ ಬರುವುದಿಲ್ಲ. ಇಲ್ಲಿ ರಾಜಕೀಯ ವ್ಯವಸ್ಥೆಗೆ ಕೆಲವು ನೀತಿ
ರೂಪಿಸಬೇಕು. ವೈದ್ಯಕೀಯ ಶಿಕ್ಷಣ ಸಚಿವ ಒಬ್ಬ ವೈದ್ಯನಾಗಿರಬೇಕು. ಕಾನೂನು ಮಂತ್ರಿ ಒಬ್ಬ
ಕಾನೂನು ಪದವೀಧರನಾಗಿರಬೇಕು. ವಾರ್ತಾ ಸಚಿವ ಒಬ್ಬ ಪದವೀಧರ ಪತ್ರಕರ್ತನಾಗಿರಬೇಕು. ಜಾತಿ,
ಧರ್ಮಗಳ ವಿಷಯಕ್ಕೆ ಕಾದಾಟ ನಡೆಯಬಾರದು.
| ಹಾರಿಸ್ ಸೋಕಿಲ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಎಸ್.ಡಿ.ಎಂ ಕಾಲೇಜು ಉಜಿರೆ
ದೇಶದ ವೈಶಿಷ್ಟ್ಯಳು ಜಗತ್ತಿಗೆ ತಿಳಿಯಲಿ
ನಮ್ಮ ದೇಶ ಅನೇಕ ವಿಚಾರದಲ್ಲಿ ಮುಂದಿದ್ದರೂ ಅದು ಜಗತ್ತಿಗೆ ಗೊತ್ತಾಗುತ್ತಿಲ್ಲ. ಭಾರತದ
ಕೊಡುಗೆ ಯೋಗದ ಮಹತ್ವ ಇತ್ತೀಚೆಗೆ ತಿಳಿಯುತ್ತಿದ್ದರೂ, ಹಲವಾರು ಆರೋಗ್ಯ ಸಂಬಂಧಿ
ವಿಷಯಕ್ಕೆ ಭಾರತದ ಕೊಡುಗೆ ಅಪಾರ. ನನ್ನ ಕನಸಿನ ಭಾರತದಲ್ಲಿ ಭಾರತೀಯ ಅಡುಗೆ ಮನೆಯ ಪ್ರತಿ
ವಸ್ತುವಿನ ಔಷಧೀಯ ಗುಣವೂ ಜಗತ್ತಿಗೆ ಕೌತುಕ ಮೂಡಿಸಬೇಕು. ಇಲ್ಲಿನ ಜೀವನಶೈಲಿ, ಕುಟುಂಬ
ಪದ್ಧತಿಯನ್ನು ವಿದೇಶಿಗರೂ ಅನುಕರಿಸುವಂತಾಗಬೇಕು. ಯುವಕರು ಹೆಚ್ಚು ಪ್ರಮಾಣದಲ್ಲಿ ಸೈನ್ಯ
ಸೇರಬೇಕು. ಈ ಬಗ್ಗೆ ಪಾಲಕರಲ್ಲಿ ದೇಶಪ್ರೇಮ ಜಾಗೃತಗೊಂಡಿರಬೇಕು. ಮುಂದುವರೆಯುತ್ತಿರುವ
ರಾಷ್ಟ್ರ ಎಂಬ ಹಣೆಪಟ್ಟಿ ಬದಲಾಗಿ ಮುಂದುವರಿದ ದೇಶವಾಗಬೇಕು.
| ಶೋಭಾ ಎ.ಸಿ., ಪತ್ರಿಕೋದ್ಯಮ ವಿಭಾಗ, ಎಂಪಿಎಂ ಸರ್ಕಾರಿ ಕಾಲೇಜು, ಕಾರ್ಕಳ
ಪ್ರತಿಭಾ ಪಲಾಯನ ಬೇಡ
ಇಂದಿನ ಯುವ ಪೀಳಿಗೆ ಪಣ ತೊಟ್ಟರೆ ಎಲ್ಲವನ್ನೂ ಸಾಧಿಸಬಹುದು. ಭಾರತೀಯರೆಲ್ಲರೂ
ಅಕ್ಷರಸ್ಥರಾಗಿ ಎಲ್ಲ ರೀತಿಯ ಸಾಮಗ್ರಿಗಳನ್ನು ಇಲ್ಲಿಯೇ ತಯಾರಿಸುವ ಸಾಮರ್ಥ್ಯ ಹೊಂದಬೇಕು.
ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅನ್ಯ ರಾಷ್ಟ್ರಗಳ ಮೊರೆ ಹೋಗದೆ ನಮ್ಮ ದೇಶದಲ್ಲೇ ಉತ್ತಮ
ಸಾಧನೆ ತೋರುವಂತಾಗಬೇಕು. ರಾಜಕೀಯದಲ್ಲಿ ಯುವಕರಿಗೂ ಪ್ರಾಮುಖ್ಯತೆ ಇದ್ದು, ಅವರಲ್ಲಿರುವ
ಕೌಶಲವನ್ನು ದೇಶದ ಹಿತಕ್ಕಾಗಿ ಬಳಸಿಕೊಂಡು ಭಾರತವು ಜಗತ್ತಿನ ಗಮನ ಸೆಳೆಯುವಂತಾಗಬೇಕು.
ಕಟ್ಟುನಿಟ್ಟಾದ ಕಾನೂನಿನ ಭಯವಿದ್ದರೆ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ
ಕಡಿಮೆಯಾಗುತ್ತದೆ.
| ಪೂರ್ಣಿಮಾ ಕಲಹಾಳ ಬೈಲಹೊಂಗಲ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ