ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಪಶ್ಚಿಮಘಟ್ಟಕ್ಕೆ ಆಪತ್ತು

ಪ್ರವಾಹದ ವಿಪತ್ತು, ಕೊಡಗು, ಕೇರಳದ ಪ್ರವಾಹ ಮತ್ತು ಅದು ಸೃಷ್ಟಿಸಿರುವ ಭೀಕರ ಪರಿಸ್ಥಿತಿ ಸಂಕಷ್ಟಗಳ ಜತೆಗೆ ಭಾರಿ ಹಾನಿಯನ್ನು ಸೃಷ್ಟಿಸಿದೆ. ಇದು ನಿಸರ್ಗದ ವಿಕೋಪ ಮಾತ್ರವಲ್ಲ, ನಿಸರ್ಗದಲ್ಲಿ ಮನುಷ್ಯನ ಅತಿಯಾದ ಹಸ್ತಕ್ಷೇಪದಿಂದ ಉಂಟಾದ ಸನ್ನಿವೇಶ ಎಂದು ತಜ್ಞರು ಬೊಟ್ಟು ಮಾಡಿದ್ದಾರೆ. ಪಶ್ಚಿಮಘಟ್ಟ ಶ್ರೇಣಿಯಂತೂ ಅಗಾಧ ಜೀವವೈವಿಧ್ಯದ ತಾಣ. ಅಭಿವೃದ್ಧಿ ಯೋಜನೆಗಳ ಹೆಸರಲ್ಲಿ ಇಲ್ಲೂ ಆಘಾತಗಳು ಒದಗುತ್ತಿವೆ. ಇದು ಹೀಗೇ ಮುಂದುವರಿದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅಭಿವೃದ್ಧಿ ಬೇಕು ಎಂಬುದೇನೋ ನಿಜ. ಆದರೆ, ಪರಿಸರ ಮತ್ತು ಅಭಿವೃದ್ಧಿಯಲ್ಲಿ ಸೂಕ್ತವಾದ ಸಮತೋಲನ ಹೊಂದಬೇಕೆಂಬ ಪಾಠ ಕಲಿಯಲು ಇದು ಸಕಾಲ. ಪಶ್ಚಿಮಘಟ್ಟದ ವೈಶಿಷ್ಟ್ಯ ಹಾಗೂ ಅದರ ಸುತ್ತ ನಡೆದಿರುವ ಚಟುವಟಿಕೆಗಳ ಕುರಿತಾದ ಅವಲೋಕನ ಇಲ್ಲಿದೆ.
|ಸುಭಾಸ ಧೂಪದಹೊಂಡ
ಕಾರವಾರ: ಭಾರಿ ಮಳೆಯಿಂದ ಕೇರಳದಲ್ಲಿ ಅನಾಹುತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಎಲ್ಲರೂ ಹೇಳುತ್ತಿರುವ ಮಾತು. ಆದರೆ, ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ‘ಕೇರಳದ ಈ ಪರಿಸ್ಥಿತಿ ಮಾನವ ನಿರ್ವಿುತ’ ಎಂದು ವಿಶ್ಲೇಷಿಸಿದ್ದಾರೆ. ಮುಂದೆ ಗೋವಾಕ್ಕೆ ಇದೇ ಪರಿಸ್ಥಿತಿ ಎದುರಾಗಲಿದೆ ಎಂದೂ ಎಚ್ಚರಿಸಿದ್ದಾರೆ. 2011 ರಲ್ಲಿ ಈ ಕುರಿತು ಗಾಡ್ಗೀಳ್ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸುಗಳನ್ನು ಸ್ಥಳೀಯ ಸರ್ಕಾರಗಳು ನಿರ್ಲಕ್ಷಿಸಿರುವುದು ಹಾಗೂ ಕೇಂದ್ರ ಸರ್ಕಾರವೂ ಈ ಕುರಿತು ಕ್ರಮ ವಹಿಸದಿರುವ ಕುರಿತು ಅವರು ಪ್ರಸ್ತಾಪಿಸಿದ್ದಾರೆ. ಗಾಡ್ಗೀಳ್ ಹೇಳಿಕೆ ಗೋವಾದಲ್ಲಿ ಮಾತ್ರವಲ್ಲ ಕರ್ನಾಟಕದ ಪಶ್ಚಿಮ ಘಟ್ಟ, ಕರಾವಳಿಯ ತಪ್ಪಲಿನ ಜನರಲ್ಲೂ ಆತಂಕ ಸೃಷ್ಟಿಸುವಂತೆ ಮಾಡಿದೆ.
ಗಾಡ್ಗೀಳ್ ವರದಿ ಹೇಳಿದ್ದೇನು?: ಡಾ.ಮಾಧವ ಗಾಡ್ಗೀಳ್ ಅಧ್ಯಕ್ಷತೆಯ ಒಟ್ಟು 14 ಸದಸ್ಯರಿರುವ (ಐವರು ನಿವೃತ್ತ ಅಧಿಕಾರಿಗಳು, 9 ಜನ ತಜ್ಞರು) ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿ ಕರ್ನಾಟಕ, ಕೇರಳ, ಗೋವಾ ಮಹಾರಾಷ್ಟ್ರ ರಾಜ್ಯಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶಗಳಿಗೆ ಹೋಗಿ ಅಧ್ಯಯನ ನಡೆಸಿ 2011 ರ ಆಗಸ್ಟ್​ನಲ್ಲಿ 522 ಪುಟಗಳ ಸಮಗ್ರ ವರದಿಯನ್ನು ಕೇಂದ್ರ ಪರಿಸರ ಸಚಿವಾಲಯಕ್ಕೆ ನೀಡಿತ್ತು. ಪಶ್ಚಿಮ ಘಟ್ಟದ 134 ತಾಲೂಕುಗಳನ್ನು ಪರಿಸರ ‘ಸೂಕ್ಷ್ಮ ಪ್ರದೇಶಗಳು’ ಎಂದು ಘೊಷಿಸಲು ಈ ವರದಿ ಶಿಫಾರಸು ಮಾಡಿದೆ. ಅಲ್ಲಿ ಹೊಸ ಗಣಿಗಾರಿಕೆಗಳನ್ನು ಪ್ರಾರಂಭಿಸಬಾರದು. ಪರಿಸರ ನಾಶದ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿತ್ತು. ಗಣಿಗಾರಿಕೆ, ಯೋಜನೆಗಳಿಗಾಗಿ ಗುಡ್ಡಗಳನ್ನು ಕಡಿದು ಅಭದ್ರ ಮಾಡುವುದು, ಅರಣ್ಯ ನಾಶ, ನದಿಗಳ ನೀರಿನ ಹರಿವು ತಡೆಯುವುದು ಮುಂದೆ ಪ್ರವಾಹಕ್ಕೆ ಕಾರಣವಾಗಬಹುದು ಎಂದು ವರದಿಯಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿದೆ. ಆದರೆ ಅದನ್ನೆಲ್ಲ ಸರ್ಕಾರಗಳು ಕಡೆಗಣಿಸಿದವು.
ಎಲ್ಲೆಲ್ಲಿ ಗಣಿಗಾರಿಕೆ?
ಉತ್ತರ ಗೋವಾ ಜಿಲ್ಲೆಯ ಬಿಚೋಲಿಂ, ದಕ್ಷಿಣ ಗೋವಾ ಜಿಲ್ಲೆಯ ಸತಾರಿ, ಸಾಂಗ್ಯಂ, ಕ್ಯುಪೆಂ ತಾಲೂಕುಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸುಮಾರು 90 ಗಣಿಗಳಿದ್ದು, 150 ರಿಂದ 200 ಚದರ ಕಿಮೀ ವ್ಯಾಪ್ತಿಯಲ್ಲಿ ವಿಸ್ತರಿಸಿವೆ. 2005 ರಿಂದ 2009 ರ ವ್ಯಾಪ್ತಿಯಲ್ಲಿ ಗಣಿಗಾರಿಕೆಗಾಗಿ 169 ಪರಿಸರ ಪರವಾನಗಿಗಳನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಪಡೆಯಲಾಗಿತ್ತು.
ಗೋವಾ ಬಗ್ಗೆ ವರದಿಯಲ್ಲಿ ಹೇಳಿದ್ದು
ಗೋವಾ ಧಾರಣಾ ಸಾಮರ್ಥ್ಯವನ್ನು ಮೀರಿದೆ. ಅಲ್ಲಿ ಗಣಿಗಾರಿಕೆಯಿಂದ 1988 ರಿಂದ 1997 ರ ಅವಧಿಯಲ್ಲಿ 2500 ಹೆಕ್ಟೇರ್ ಅರಣ್ಯ ನಾಶವಾಗಿದೆ. ಗೋವಾದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳು ಪರಿಸರ ಪರವಾನಗಿ ಪಡೆಯುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿವೆ. ಗೋವಾದಲ್ಲಿ ಹುಟ್ಟುವ ಹಲವು ಸಣ್ಣ ನದಿ, ಹಳ್ಳಗಳ ಮಾಹಿತಿ ಮುಚ್ಚಿಟ್ಟಿವೆ. ಇದರಿಂದ ತೀವ್ರ ಹಾನಿಯಾಗಿದೆ. ಗೋವಾದ ವಿವಿಧ ನದಿಗಳಿಗೆ ಸೇತುವೆ, ಅಳಿವೆ ಪ್ರದೇಶದಲ್ಲಿ ಜಟ್ಟಿಗಳನ್ನು ನಿರ್ಮಾಣ ಮಾಡಿದ್ದರಿಂದ ನೀರಿನ ಸಹಜ ಹರಿವಿಗೆ ತೊಂದರೆ ಉಂಟಾಗುತ್ತಿದೆ. ಅದಿರು ರಾಶಿಗಳು ಕೊಚ್ಚಿ ಹೋಗಿ ನದಿ ಸೇರಿ ನದಿಗಳಲ್ಲಿ ಹೂಳು ತುಂಬಿದೆ. ಇದರಿಂದ ನೆರೆ ಸಂಭವಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಆದ್ದರಿಂದ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು. ಸಂರಕ್ಷಿತ ಅಭಯಾರಣ್ಯಗಳ ಸುತ್ತ ಗಣಿಗಾರಿಕೆಯನ್ನು ತಕ್ಷಣ ಬಂದ್ ಮಾಡಬೇಕು ಎಂದು ಶಿಫಾರಸು ಮಾಡಲಾದೆ.
ಸಣ್ಣ ರಾಜ್ಯ
ಕೇವಲ 3,702 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಗೋವಾ ರಾಜ್ಯ ವಿಸ್ತೀರ್ಣದಲ್ಲಿ ದೇಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಪ್ರವಾಸೋದ್ಯಮದಿಂದ ಇಡೀ ವಿಶ್ವದ ಗಮನ ಸೆಳೆದಿದೆ. 1 ಕೋಟಿ 81 ಲಕ್ಷ ಜನಸಂಖ್ಯೆ ಹೊಂದಿರುವ ಇಲ್ಲಿ ಪ್ರವಾಸೋದ್ಯಮ ಮತ್ತು ಗಣಿಗಾರಿಕೆ ಆದಾಯ ತಂದುಕೊಡುವ ಉದ್ಯಮ. ಆದರೆ, ಇವೆರಡೂ ಉದ್ಯಮಗಳಿಂದ ಪರಿಸರಕ್ಕೆ ತುಂಬ ಹಾನಿಯಾಗುತ್ತಿದೆ. ಮೂರು ದಿಕ್ಕುಗಳಲ್ಲಿ ಸಮುದ್ರವನ್ನೇ ಹೊಂದಿರುವ ಈ ಪುಟ್ಟ ರಾಜ್ಯಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುದು ಪರಿಸರ ತಜ್ಞರ ಅಭಿಮತ.
ಉತ್ತರ ಕನ್ನಡಕ್ಕೂ ಅಪಾಯ ತಪ್ಪಿದ್ದಲ್ಲ
ಕಾರವಾರ: ಕೇರಳ, ಮಡಿಕೇರಿಯ ನೆರೆಯ ಪರಿಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಜನರ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಪಶ್ಚಿಮ ಘಟ್ಟಗಳ ಸಾಲು, ಕರಾವಳಿಯ ಸೆರಗನ್ನು ಹೊಂದಿರುವ ಜಿಲ್ಲೆಯಲ್ಲಿಯೂ ಅಂಥದ್ದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು 2009 ರಲ್ಲೇ ಭಾರತೀಯ ವಿಜ್ಞಾನ ಸಂಸ್ಥೆ ಡಾ.ಟಿ.ವಿ.ರಾಮಚಂದ್ರ, ಡಾ.ಎಂ.ಡಿ.ಸುಭಾಷ್​ಚಂದ್ರನ್ ಅವರಿದ್ದ ಸಮಿತಿ ವರದಿ ನೀಡಿತ್ತು. ಸುರಕ್ಷತಾ ಕ್ರಮಗಳನ್ನು ಸೂಚಿಸಿತ್ತು. ಆದರೆ, ಅದ್ಯಾವುದನ್ನೂ ಆಡಳಿತ ಕೈಗೊಳ್ಳದೆ ಮತ್ತಷ್ಟು ಅವೈಜ್ಞಾನಿಕ ಕಾಮಗಾರಿಗಳು ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಡು ನಾಶ
10,24,679 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 8,13,595 ಹೆಕ್ಟೇರ್ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು. 1956 ರ ನಂತರ 61,860.852 ಹೆಕ್ಟೇರ್ ಅರಣ್ಯ ಭೂಮಿಯನ್ನು ವಿವಿಧ ಉದ್ದೇಶಗಳಿಗೆ  ಮಂಜೂರು ಮಾಡಲಾಗಿದೆ. 9718.5 ಹೆಕ್ಟೇರ್ ಭೂಮಿ ಸಾಗುವಳಿಗೆ ಮಂಜೂರಾಗಿದ್ದರೆ 30,443.059 ಹೆಕ್ಟೇರ್ ಭೂಮಿ ಕಾಳಿ, ಶರಾವತಿ ನದಿಯ ಅಣೆಕಟ್ಟೆಗಳು, ಕೊಂಕಣ ರೈಲ್ವೆ ಯೋಜನೆ, ಕೈಗಾ ಅಣು ವಿದ್ಯುತ್ ಸ್ಥಾವರ, ಸೀಬರ್ಡ್ ನೌಕಾ ಯೋಜನೆ ಹೀಗೆ ವಿವಿಧ ಯೋಜನೆಗಳು ಹಾಗೂ ಅದರ ಪುನರ್ವಸತಿಗಾಗಿ ನೀಡಲಾಗಿದೆ.
ಮಿತಿ ಮೀರಿದ ಹಸ್ತಕ್ಷೇಪ
ಕಾಸರಗೋಡು: ತೀವ್ರ ಸ್ವರೂಪದ ವಿಪತ್ತು ಎಂದು ಕೇಂದ್ರ ಸರ್ಕಾರ ಘೊಷಿಸಿರುವ ಕೇರಳದ ಜಲಪ್ರಳಯ, ದೇವರ ಸ್ವಂತ ನಾಡನ್ನು ದಿಕ್ಕಾಪಾಲು ಮಾಡಿದೆ. ರಾಜ್ಯದಲ್ಲಿ 8 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ತೆರೆಯಲಾಗಿರುವ 4 ಸಾವಿರಕ್ಕೂ ಹೆಚ್ಚು ನಿರಾಶ್ರಿತರ ಶಿಬಿರಗಳಲ್ಲಿ ನೆಲೆಸಿದ್ದಾರೆ. 6200 ಮೈಲು ರಸ್ತೆಗೆ ಹಾನಿಯಾಗಿದೆ, ಸಾವಿರಾರು ಮನೆಗಳು ನಾಶವಾಗಿವೆ. ಇಡುಕ್ಕಿ, ಎರ್ನಾಕುಳಂ, ಆಲೆಪ್ಪಿ, ಪತ್ತನಂತಿಟ್ಟ, ಮಲಪ್ಪುರಂ, ಕೋಳಿಕ್ಕೋಡ್, ವಯನಾಡ್, ತೃಶ್ಯೂರ್, ಕೊಲ್ಲಂ, ವಯನಾಡ್ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶ ಸಂರಕ್ಷಣೆಗೆ ಸರ್ಕಾರದ ನಿರ್ಲಕ್ಷ್ಯ ಅನಧಿಕೃತ ನಿರ್ಮಾಣ ಹಾಗೂ ಕಲ್ಲು ಗಣಿಗಾರಿಕೆಗೆ ವ್ಯಾಪಕ ಅನುಮತಿ ನೀಡಿರುವುದು ಭಾರಿ ಭೂಕುಸಿತದಂತಹ ಅನಾಹುತಕ್ಕೆ ಕಾರಣವಾಗಿದೆ ಎನ್ನುವುದು ಪರಿಸರ ಪ್ರೇಮಿಗಳ ವಾದ.
ಪಶ್ಚಿಮಘಟ್ಟ ಸಂರಕ್ಷಣೆಗೆ ನಿರ್ಲಕ್ಷ್ಯ
ಕೇರಳದ ಮಲಬಾರ್ ಪ್ರದೇಶದಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಅನಧಿಕೃತ ನಿರ್ವಣ, ಗಣಿಗಾರಿಕೆಗಳನ್ನು ತಡೆಗಟ್ಟುವಂತೆ ಮಾಧವ ಗಾಡ್ಗೀಳ್ ನೀಡಿದ ವರದಿಯನ್ನು ನಿರ್ಲಕ್ಷಿಸಿದ ಕೇರಳ ಸರ್ಕಾರ, ಅಭಿವೃದ್ಧಿ ಹೆಸರಲ್ಲಿ ವ್ಯಾಪಕವಾಗಿ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಸರ್ಕಾರದ ಜವಾಬ್ದಾರಿ ರಹಿತ ಪರಿಸರ ನೀತಿ ಇಂದಿನ ಪ್ರಕೃತಿ ವಿಕೋಪಕ್ಕೆ ಕಾರಣವಾಗಿರುವುದರೆಡೆ ಪರಿಸರ ತಜ್ಞರು ಬೊಟ್ಟು ಮಾಡುತ್ತಿದ್ದಾರೆ. ರಾಜ್ಯದಲ್ಲಿ 11,309 ಚದರ ಕಿಲೋಮೀಟರ್ ಅರಣ್ಯ ಪ್ರದೇಶವಿದ್ದು, ಇದರಲ್ಲಿ 9,107 ಚ.ಕಿ.ಮೀ ರಕ್ಷಿತಾರಣ್ಯವಿದೆ. ಬಹುತೇಕ ಅರಣ್ಯ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣ ಕಾರ್ಯ, ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ರಾಜ್ಯವನ್ನು ಗಂಡಾಂತರಕ್ಕೆ ತಳ್ಳುತ್ತಿದೆ.
ಗಾಡ್ಗೀಳ್ ಎಚ್ಚರಿಕೆ
ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ವಿಪರೀತ ಪರಿಸರ ಹಾನಿ ಮತ್ತು ನೈಸರ್ಗಿಕ ಸಂಪನ್ಮೂಲದ ಅಸಮರ್ಪಕ ನಿರ್ವಹಣೆ ಇದೆ. ಈ ರಾಜ್ಯಗಳು ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ತಜ್ಞರ ಸಮಿತಿ 2011ರಲ್ಲಿ ನೀಡಿರುವ ವರದಿಯ ಶಿಫಾರಸನ್ನು ಕಡೆಗಣಿಸಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಕೇರಳ ಮಾದರಿಯಲ್ಲೆ ಪ್ರವಾಹ, ಭೂಕುಸಿತದ ಭೀತಿ ಎದುರಾಗುತ್ತದೆ ಎಂದು ಆ ಸಮಿತಿಯ ಅಧ್ಯಕ್ಷರೂ ಆಗಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್ ಎಚ್ಚರಿಸಿದ್ದಾರೆ. ಅತಿಯಾಗಿ ಮಳೆಯಾದರೆ ಪ್ರವಾಹ ಮತ್ತು ಭೂಕುಸಿತಗಳನ್ನು ತಡೆಯಲಾಗದಷ್ಟು ಪರಿಸರ ಹಾನಿ ಮಹಾರಾಷ್ಟ್ರದ ಸಹ್ಯಾದ್ರಿ ಶ್ರೇಣಿಯ ರತ್ನಗಿರಿ, ಸಿಂಧುದುರ್ಗ ಜಿಲ್ಲೆಗಳಲ್ಲಿ ಆಗಿದೆ. ಪುಣೆ ಜಿಲ್ಲೆಯ ಮಾಲಿನ್​ನಲ್ಲೂ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾರಣ 2014ರಲ್ಲಿ ದೊಡ್ಡ ಮಟ್ಟದ ಪ್ರವಾಹ, ಭೂಕುಸಿತ ಆಗಿತ್ತು ಎಂದು ಅವರು ನೆನಪಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....