ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: 🇮🇳💐🇮🇳🍀ಇತಿಹಾಸ ಎಂದೂ ಮರೆಯದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು 🇮🇳🇮🇳

⭕ ರಾಣಿ_ಲಕ್ಷ್ಮೀಬಾಯಿ ⭕
ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಭಾರತದ ಸ್ವಾತಂತ್ರ್ಯ ಹೋರಾಟದ ಹೆಸರುಗಳಲ್ಲಿ ಪ್ರಮುಖವಾದದ್ದು . 1857ರ ಸಿಪಾಯಿ ದಂಗೆ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಝಾನ್ಸಿಯ ಆಳ್ವಿಕೆಯನ್ನು ಬ್ರಿಟಿಷರು ಲಕ್ಷ್ಮಿಬಾಯಿಗೆ ವಹಿಸಿದ್ದರು . 1858ರ ಮಾರ್ಚ್ 25ರಂದು ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ಬಗ್ಗೆ ಇದ್ದ ನಿಲುವು ಬದಲಾಯಿಸಲು ಕಾರಣವಾಯಿತು . ಸುಮಾರು 2 ವಾರಗಳ ಉಗ್ರ ಹೋರಾಟ ನಡೆಸಿ ..ದಂಗೆಕೋರ ತಾತ್ಯಾಟೋಪಿ ಮುಖಂಡನಾಗಿ ಯುದ್ಧ ಮಾಡಿ ಝಾನ್ಸಿ ಸ್ವತಂತ್ರವಾಗಲು ಸಹಕರಿಸಿದ್ದ. ಹೀಗೆ ದಿಟ್ಟತನದಿಂದ ಹೋರಾಡಿದ್ದ ಝಾನ್ಸಿ ಲಕ್ಷ್ಮೀಬಾಯಿ 1858, ಜೂನ್ 18ರಂದು ಸಾವನ್ನಪ್ಪಿದ್ದಳು . ರಾಣಿಯ ತಂದೆ ಮೊರೋಪಂತ್ ತಂಬೆ ಅವರನ್ನು ಝಾನ್ಸಿಯ ಸೋಲಿನ ನಂತರ ಸೆರೆಹಿಡಿದು, ಗಲ್ಲಿಗೇರಿಸಿದ್ದರು .
⭕ ಸರೋಜಿನಿ ನಾಯ್ಡು ⭕
ಉರ್ದು , ತೆಲುಗು , ಇಂಗ್ಲಿಷ್ , ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಸರೋಜಿನಿ ನಾಯ್ಡು ಭಾರತದ ಕೋಗಿಲೆ ಎಂದು ಹೆಸರು ಪಡೆದಿದ್ದರು , ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು . ಉತ್ತರಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು . 1949ರ ಮಾರ್ಚ್ 2 ರಂದು ನಿಧನರಾಗಿದ್ದರು.
⭕ ಬೇಗಂ ಹಝರತ್ ಮಹಲ್ ⭕
1857ರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬೇಗಂ ಹಝರತ್ ಬೇಗಂ ಮಹಲ್ ಅವರ ಹೋರಾಟ ಪ್ರಮುಖವಾಗಿತ್ತು . ಈಕೆ ನವಾಬ್ ವಾಜಿದ್ ಅಲಿ ಷಾ ಅವರ 2 ನೇ ಪತ್ನಿ .ಕೋಲ್ಕತಾದಿಂದ ಷಾನನ್ನು ಗಡಿಪಾರು ಮಾಡಲಾಗಿತ್ತು . ಬಳಿಕ ಹಝರತ್ ಬೇಗಂ ಅವಾಧ್ ಆಡಳಿತ ನೋಡಿಕೊಳ್ಳುವುದರ ಜೊತೆಗೆ ಲಕ್ನೋವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಳು . ತದನಂತರ ಲಕ್ನೋ ಹಾಗೂ ಔಧ್ ಅನ್ನು ಬ್ರಿಟಿಷರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಹಝರತ್ ಳನ್ನು ಬಲವಂತದಿಂದ ಅಧಿಕಾರದಿಂದ ಕೆಳಗಿಳಿಸಿದ್ದರು . ಕೊನೆಗೆ ಈಕೆ ನೇಪಾಳದಲ್ಲಿ ಆಶ್ರಯ ಪಡೆದಿದ್ದು , 1879ರಲ್ಲಿ ಕಾಠ್ಮುಂಡುವಿನಲ್ಲಿ ಸಾವನ್ನಪ್ಪಿದ್ದಳು .
⭕ ಕಿತ್ತೂರು ರಾಣಿ ಚೆನ್ನಮ್ಮ ⭕
ಸ್ವಾತಂತ್ಯಕ್ಕಾಗಿ ಬ್ರಿಟಿಷರ ಬೃಹತ್ ಸೈನ್ಯದ ವಿರುದ್ಧ ಸೆಟೆದು ನಿಂತು ಹೋರಾಟ ನಡೆಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ . ಆಕೆಯ ಧೈರ್ಯ , ಸಾಹಸ , ಕೆಚ್ಚು ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕ . ದಿಟ್ಟ ಹೋರಾಟದ ನಂತರ 1824ರ ಡಿಸೆಂಬರ್ 5 ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಹಾಗೂ ಜಾನಕಿಬಾಯಿಯರ ಜೊತೆ ಕೈದಿಯಾಗುತ್ತಾಳೆ . ಡಿಸೆಂಬರ್ 12ರಂದು ಚೆನ್ನಮ್ಮ ಹಾಗೂ ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ . ಅಲ್ಲಿ 4 ವರ್ಷ ಸೆರೆಮನೆವಾಸ ಅನುಭವಿಸಿ 1829ರ ಫೆಬ್ರುವರಿ 2 ರಂದು ನಿಧನ ಹೊಂದಿದ್ದಳು .
⭕ ಮೇಡಂ ಭಿಕಾಜಿ ಕಾಮಾ ⭕
ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧ್ರುವತಾರೆಯಾಗಿರುವ ಮಹಿಳೆಯರಲ್ಲಿ ಮುಂಬೈನ ಮೇಡಂ ಭಿಕಾಜಿ ಕಾಮಾ ಒಬ್ಬರಾಗಿದ್ದಾರೆ. ಓ ಮಹನೀಯರೇ ಏಳಿ , ಈ ಧ್ವಜಕ್ಕೊಂದಿಸಿ. ಈ ಧ್ವಜದ ಪ್ರತಿನಿಧಿಯಾಗಿ ಪ್ರಾರ್ಥಿಸುತ್ತೇನೆ . ಓ ವಿಶ್ವದೆಲ್ಲ ಸ್ವತಂತ್ರ್ಯರಾಧಕರೇ ಈ ಧ್ವಜದೊಡನೆ ಸಹಕರಿಸಿ, ಹೀಗೆಂದು ಜರ್ಮನಿಯ ಸ್ಟುವರ್ಟ್ ನಲ್ಲಿ 1907ರಲ್ಲಿ ನಡೆದಿದ್ದ ಸಮಾಜವಾದಿ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಭಾರತದ ಧ್ವಜಾರೋಹಣ ಮಾಡಿದ್ದರು. ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕಾಮಾ ಅವರು 1935ರಲ್ಲಿ ಬಾಂಬೆಗೆ ಆಗಮಿಸಿದ್ದರು . 1936ರ ಆಗಸ್ಟ್ 13ರಂದು ಪಾರ್ಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
⭕ ಸುಚೇತಾ ಕೃಪಾಲಾನಿ ⭕
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು ಸುಚೇತಾ ಕೃಪಾಲಾನಿ . ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು . ಉತ್ತರಪ್ರದೇಶದ ಸಿಎಂ ಆಗಿ 1963ರಿಂದ 67ರವರೆಗೆ ಕಾರ್ಯನಿರ್ವಹಿಸಿದ್ದರು . ಗಾಂಧಿ ಅನುಯಾಯಿಯಾಗಿದ್ದ ಕೃಪಾಲಾನಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದ್ದರು . 1971ರಲ್ಲಿ ರಾಜಕೀಯದಿಂದ ದೂರ ಸರಿದಿದ್ದರು . 1974ರಲ್ಲಿ ನಿಧನರಾಗಿದ್ದರು.
⭕ ಅರುಣಾ ಅಸಾಫ್ ಅಲಿ ⭕
ಅರುಣಾ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ದಿಟ್ಟ ಮಹಿಳೆ. 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮುಂಬೈಯ ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಫ್ಲ್ಯಾಗ್ ಅನ್ನು ಹಾರಿಸಿದ್ದರು . ಸ್ವಾತಂತ್ರ್ಯ ನಂತರ ರಾಜಕೀಯ ಪ್ರವೇಶಿಸಿದ್ದರು . 1958ರಲ್ಲಿ ದೆಹಲಿಯ ಮೊದಲ ಮೇಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1960ರಲ್ಲಿ ಮೀಡಿಯಾ ಪಬ್ಲಿಷಿಂಗ್ ಹೌಸ್ ಅನ್ನು ಆರಂಭಿಸಿದ್ದರು . ಭಾರತ ರತ್ನ ಪುರಸ್ಕಾರ ಪಡೆದಿದ್ದ ಅರುಣಾ ಗಂಗೂಲಿ ಅವರು 1996ರ ಜುಲೈ 29ರಂದು ನಿಧನರಾಗಿದ್ದರು.
⭕ ದುರ್ಗಾಬಾಯ್ ದೇಶ್ ಮುಖ್ ⭕
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದುರ್ಗಾಬಾಯಿ ದೇಶಮುಖ್ ತೊಡಗಿಸಿಕೊಂಡಿದ್ದರು . 12ನೇ ವಯಸ್ಸಿನಲ್ಲಿಯೇ ಇಂಗ್ಲಿಷ್ ಭಾಷೆ ಕಲಿಕೆಯ ವಿರುದ್ಧ ಸೆಟೆದು ವಿದ್ಯಾಭ್ಯಾಸ ಮೊಟಕುಗೊಳಿಸಿ ಹೊರಬಂದಿದ್ದರು . ಬಳಿಕ ರಾಜಮಂಡ್ರಿಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಬಾಲಿಕಾ ಹಿಂದಿ ಪಾಠಶಾಲೆಯನ್ನು ರಾಜಮಂಡ್ರಿಯಲ್ಲಿ ಆರಂಭಿಸಿದ್ದರು . ಮಹಾತ್ಮಗಾಂಧಿಯ ಅನುಯಾಯಿಯಾಗಿದ್ದ ದೇಶಮುಖ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದರು . ಈಕೆ ಯಾವತ್ತೂ ಚಿನ್ನಾಭರಣ ಧರಿಸಿರಲಿಲ್ಲ . 1981ರಲ್ಲಿ ದೇಶ್ ಮುಖ್ ಶ್ರೀಕಾಕುಳಂ🇮🇳🇮🇳🇮🇳💐

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...