ವಾಜಪೇಯಿ ಪ್ರಚಂಡ ವಾಗ್ಮಿ. ಕಲ್ಲನ್ನೂ ಕರಗಿಸುವ ಶಕ್ತಿ ಅವರ ಮಾತುಗಾರಿಕೆಯಲ್ಲಿತ್ತು. ಜಗತ್ತಿನ ಯಾವುದೇ ಭಾಗದ ಜನಸಾಗರದ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿದರೂ ಅವರ ಮನಸ್ಸನ್ನು ತಟ್ಟುವ ಶಕ್ತಿ, ಆರ್ದ್ರಗೊಳಿಸುವ ತಾಕತ್ತು ಅಟಲ್ ಮಾತುಗಳಿಗಿತ್ತು. ಅಲ್ಲದೆ, ಕವಿಯೂ ಹೌದು. ಮಾತುಗಳ ಮಧ್ಯವೇ ಕವಿತೆ ಹೇಳುತ್ತಿದ್ದರು.
ಅವರ ಭಾಷಣವೆಂದರೆ ಅದೊಂದು ರಸದೌತಣವೇ ಸರಿ. ಗಾಂಭೀರ್ಯ, ಹಾಸ್ಯ, ಅಕ್ಕರೆ, ಚಟಾಕಿ ಎಲ್ಲವೂ ಮಿಶ್ರಣಗೊಂಡ ಸಂಕ್ರಾಂತಿ ಎಳ್ಳು ಬೆಲ್ಲದ ಮಿಶ್ರಣದಂತಿರುತ್ತಿತ್ತು. ಹೀಗಾಗಿಯೇ, ‘ಅಟಲ್ ಭಾಷಣದ ಮುಂದೆ ನಾವು ಮಾತನಾಡೋಕೆ ನಿಂತರೆ ಕೀಳರಿಮೆ ಉಂಟಾಗುತ್ತದೆ’ ಎಂದು ಆಡ್ವಾಣಿ ಹೇಳಿದ್ದರು.
ಪತ್ರಿಕಾಗೋಷ್ಠಿಗಳೂ ಅಷ್ಟೇ, ಪತ್ರಕರ್ತರಿಗೆ ಅವು ತಲೆನೋವು ಎನಿಸುತ್ತಿರಲಿಲ್ಲ. ಎಷ್ಟೇ ಮುಜುಗರವಾದ ಪ್ರಶ್ನೆಗಳನ್ನು ಕೇಳಿದರೂ ಅದಕ್ಕೆ ತಿಳಿಹಾಸ್ಯದ ಲೇಪನ ನೀಡುತ್ತಿದ್ದರು. ಕೆಲವೊಮ್ಮೆ ಉತ್ತರ ಹೇಳಲಾಗದ ಸ್ಥಿತಿಯಿದ್ದರೆ, ಮಗುವಿನಂತೆ ಮುಗ್ಧ ನಗು ನಕ್ಕು ಸುಮ್ಮನಾಗುತ್ತಿದ್ದರು. ಅದರಲ್ಲೇ ಉತ್ತರ ಅಡಗಿರುತ್ತಿತ್ತು.
ಕೆಲವೊಮ್ಮೆ ಪ್ರಾಸಂಗಿಕವಾಗಿ ಅರ್ಥಪೂರ್ಣ ಪನ್‌ಗಳನ್ನು ಮಾಡುತ್ತಿದ್ದರು ಎಂಬುದಕ್ಕೆ ಉದಾಹರಣೆ- ಒಮ್ಮೆ ಚುನಾವಣಾ ಭಾಷಣ ಮಾಡಲು ಬೃಹತ್ ಸಮಾವೇಶಕ್ಕೆ ಆಗಮಿಸಿದ್ದರು. ಆಗ ಅಭಿಮಾನಿಗಳು ಹಾರ ಹಾಕಲು ಬಂದರು. ಅಟಲ್ ಹೇಳಿದ್ದಿಷ್ಟು: ‘ಮೈ ಹಾರ್(ಹಾರ ಅಥವಾ ಮಾಲೆ/ ಹಿಂದಿಯಲ್ಲಿ ಹಾರ್ ಪದಕ್ಕೆ ಸೋಲೂ ಎನ್ನುವ ಅರ್ಥವೂ ಇದೆ) ನಹಿ, ಜೀತ್ ಲೇನೇ ಆಯಾ ಹೂಂ (ಗೆಲುವು ಸಾಧಿಸಲು ಬಂದಿದ್ದೇನೆ).
ವಿರೋಧಿಗಳನ್ನೂ ಮೆಚ್ಚುವ ನಿಷ್ಕಪಟಿ
ವಾಜಪೇಯಿ ಸಂಸತ್‌ನಲ್ಲಿ ಮಾತನಾಡುತ್ತಾರೆಂದರೆ ಎಲ್ಲರ ಕಿವಿ ನೆಟ್ಟಗಾಗುತ್ತಿದ್ದವು. ಕವಿತ್ವಪೂರ್ಣ ಮಾತುಗಳಲ್ಲಿ ವಿಷಯ ಪ್ರತಿಪಾದನೆಯ ನಡುವೆಯೇ ಹಾಸ್ಯ, ವ್ಯಂಗ್ಯೋಕ್ತಿಗಳು ಸೇರಿರುತ್ತಿದ್ದವು. ಒಳ್ಳೆಯ ಕೆಲಸಗಳನ್ನು ಮಾಡಿದರೆ ತಮ್ಮ ವಿರೋಧಿಗಳನ್ನೂ ಮೆಚ್ಚುವ ನಿಷ್ಕಪಟ ಮನಸ್ಸು ಅವರದು. ಅಂತಹ ಹಲವು ಪ್ರಸಂಗಗಳಿಗೆ ಸಂಸತ್ ಸಾಕ್ಷಿಯಾಗಿದೆ.
ಅವರು ಮೊದಲು ಸಂಸತ್ ಪ್ರವೇಶಿಸಿದಾಗ ನೆಹರು ಪ್ರಧಾನಿಯಾಗಿದ್ದರು. ನೆಹರು ಅವರ ವರ್ಚಸ್ಸು ವಿಶ್ವದಾದ್ಯಂತ ಹರಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಪ್ರಭಾವಿ ನಾಯಕರಾಗಿ ನೆಹರು ಸ್ಥಾನ ಗಳಿಸಿದ್ದರು. ವಾಜಪೇಯಿ ಇದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನೆಹರು ಅವರ ವಿದೇಶಾಂಗ ನೀತಿಯನ್ನು ಕೊಂಡಾಡಿದರು. ಹಾಗೆಯೇ ತಾವು ವಿದೇಶಾಂಗ ಮಂತ್ರಿಯಾದಾಗಲೂ ಅಷ್ಟೆ. ಸಂಸತ್ತಿನಲ್ಲಿ ಮಾಡಿದ ಮೊಟ್ಟಮೊದಲ ಭಾಷಣದಲ್ಲಿ ‘ ಇಷ್ಟರವರೆಗಿನ ನನ್ನ ಸಂಸದೀಯ ಜೀವನದಲ್ಲಿ ಹಲವು ವಿದೇಶಾಂಗ ಖಾತೆ ಸಚಿವರ ಮಾತುಗಳನ್ನು ಕೇಳಿದ್ದೇನೆ. ಅದಕ್ಕೆ ಸಂಬಂಧಿಸಿ ಹಲವು ಟೀಕೆ-ಟಿಪ್ಪಣಿಗಳನ್ನು ಮಾಡಿದ್ದೇನೆ. ಆದರೆ, ಅವರ ಕಷ್ಟ ಏನು ಎಂಬುದು ಈಗ ನನಗೆ ಅರ್ಥವಾಗುತ್ತಿದೆ. ಏಕೆಂದರೆ ಆ ಸ್ಥಾನದಲ್ಲಿ ಈಗ ನಾನಿದ್ದೇನೆ’ ಎಂದು ಹೇಳಿದವರೇ ಈ ಹಿಂದಿನ ಎಲ್ಲ ವಿದೇಶಾಂಗ ಖಾತೆ ಸಚಿವರಿಗೂ ಗೌರವ ಸಲ್ಲಿಸುತ್ತೇನೆ. ಅವರೆಲ್ಲರೂ ತಮ್ಮ ಶಕ್ತ್ಯಾನುಸಾರ ದೇಶದ ಸೇವೆ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಾನು ಅವರೆಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ ಎಂದಾಗ ಇಡೀ ಲೋಕಸಭೆ ವಾಜಪೇಯಿ ಅವರ ಹೃದಯವೈಶಾಲ್ಯಕ್ಕೆ ಸೋತು ಶರಣಾಗಿತ್ತು.
ಹಾಗೆಯೇ ಸಂಸತ್ತಿನ ಹೊರಗಿನ ಒಂದು ಪ್ರಸಂಗ. ಪಂಡಿತ್ ಗೋವಿಂದ ವಲ್ಲಭ ಪಂತ್ ಹೆಸರಿನಲ್ಲಿ 1987ರಲ್ಲಿ ವಾಜಪೇಯಿಗೆ ‘ಶ್ರೇಷ್ಠ ಸಂಸದೀಯ ಪಟು’ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಲು ಎದ್ದುನಿಂತ ವಾಜಪೇಯಿ, ಹಿಂದಿನ ವರ್ಷ ಈ ಪ್ರಶಸ್ತಿಯನ್ನು ನನ್ನ ಹಿರಿಯ ಮಿತ್ರ ಕಮ್ಯುನಿಸ್ಟ್ ಕಾಮ್ರೇಡ್ ಇಂದ್ರಜಿತ್ ಗುಪ್ತಾ ಅವರಿಗೆ ನೀಡಲಾಗಿತ್ತು. ಅವರಿಗೆ ಈ ಪ್ರಶಸ್ತಿ ನೀಡಿದ್ದು ಅತ್ಯಂತ ಯೋಗ್ಯವಾಗಿತ್ತು. ಅವರಲ್ಲಿ ಇದನ್ನು ಸ್ವೀಕರಿಸಲು ಬೇಕಾದ ಎಲ್ಲ ಅರ್ಹತೆಗಳೂ ಇವೆ. ಆದರೆ, ನನಗೆ ಆ ಅರ್ಹತೆ ಇಲ್ಲ. ಆದರೂ ಪ್ರಶಸ್ತಿ ನೀಡುತ್ತಿದ್ದಾರೆ ಎಂದರು. ವೈಚಾರಿಕವಾಗಿ ಕಡು ವಿರೋಧಿಗಳೆನಿಸಿದ್ದ ಕಮ್ಯುನಿಷ್ಟರ ಬಗ್ಗೆಯೂ ಅವರು ವ್ಯಕ್ತಪಡಿಸಿದ ಸದ್ಭಾವನೆ ಅಲ್ಲಿದ್ದರನ್ನು ಮೂಕವಿಸ್ಮಿತರನ್ನಾಗಿಸಿತ್ತು.
ಅಟಲ್ ನೆಚ್ಚಿನ ಉಡುಪು
ಧೋತಿ ಕುರ್ತಾ ಅಥವಾ ನೆಹರು ಶೈಲಿಯ ಜಾಕೆಟ್ ಧರಿಸುತ್ತಿದ್ದರು. ಪಾಶ್ಚಾತ್ಯ ಶೈಲಿಯ ಉಡುಪು ಧರಿಸುವ ಇಚ್ಛೆ ಅವರಿಗಿತ್ತು. ಆದರೆ, ರಾಜಕೀಯದಲ್ಲಿದ್ದ ಕಾರಣ, ಅಂತಹ ಉಡುಪು ತೊಡುತ್ತಿರಲಿಲ್ಲ.
ಥ್ರಿಲ್ ಕೊಟ್ಟ ಕ್ಷಣ
ಇತರ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ಬಹುಮತ ಇಲ್ಲದಿದ್ದರೂ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಸರ್ಕಾರ ರಚಿಸಲು ಆಹ್ವಾನಿಸಿದ್ದು.
ಬೇಸರದ ಕ್ಷಣ
1999ರ ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಒಂದೇ ಒಂದು ಮತದಿಂದ ಸರ್ಕಾರ ಬಿದ್ದದ್ದು.
ಇಷ್ಟದ ವಿಷಯಗಳು
ನಾಯಿ ಜತೆ ಸಮಯ ಕಳೆಯುವುದೆಂದರೆ ಅಟಲ್‌ಗೆ ಪಂಚಪ್ರಾಣ.
ಕಿಚಡಿ, ಪೂರಿ ಖಚೋರಿ, ಮೊಸರೊಡೆ, ಪರಾಠ, ಖೀರ್ ಮತ್ತು ಚೈನೀಸ್ ತಿನಿಸುಗಳು.
ಸದಾ ಹಸನ್ಮುಖಿಯಾದ ನಿಮಗೆ ಸಿಟ್ಟು ಬರುವುದಿಲ್ಲವೇ ಎಂದರೆ, ಪ್ರತಿದಿನವೂ ಸಿಟ್ಟು ಬರುತ್ತದೆ ಎನ್ನುತ್ತಿದ್ದರು.
ಭಾರತದಲ್ಲಿ ಮನಾಲಿ ಮತ್ತು ಆಲ್ಮೋರಾ ಇವರ ನೆಚ್ಚಿನ ತಾಣ. ಕೆನಡಾದ ವ್ಯಾಂಕೂವರ್ ಖುಷಿ ಕೊಡುವ ಸ್ಥಳ. ಚಳಿಗಾಲವನ್ನು ತುಂಬಾ ಇಷ್ಟಪಡುತ್ತಿದ್ದರು. ಸಫ್ದರ್‌ಜಂಗ್ ರಸ್ತೆಯಲ್ಲಿದ್ದ ತಮ್ಮ ಹಳೇ ಬಂಗಲೆಯಲ್ಲಿ ಬಿಸಿಲಿನಲ್ಲಿ ಚಳಿ ಕಾಯಿಸಿಕೊಳ್ಳುವುದೆಂದರೆ ಆಪ್ಯಾಯಮಾನವಾಗಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ