ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ನಾಡಿಗೆ ಬಂತು ನಾಗರ ಪಂಚಮಿ, | ಮಂಡಗದ್ದೆ ಪ್ರಕಾಶಬಾಬು ಕೆ.ಅರ್

ಗೀತೆಯಲ್ಲಿ ‘ನವನಾಗಗಳಲ್ಲಿ ಅನಂತನಾಗ ನಾನಾಗಿದ್ದೇನೆ’ ಎಂದು ಶ್ರೀಕೃಷ್ಣ ಹೇಳಿರುವನು. ಪ್ರತಿ ವರ್ಷ ನಾಗರ ಪಂಚಮಿ ಹಬ್ಬ ಬರುವುದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ. ಹಿಂದೆ ದ್ರಾವಿಡ ಜನಾಂಗ ಮತ್ತು ಆರ್ಯರು ಸಹ ಈ ಹಬ್ಬವನ್ನು ಆಚರಿಸುತ್ತಿದ್ದರು.
ನಾಗದೇವತೆಯು ವಿಷ್ಣುವನ್ನು ಶಯನಿಸಿಕೊಂಡು ಆದಿಶೇಷನಾದರೆ, ಶಿವನು ನಾಗದೇವತೆಯನ್ನು ತನ್ನ ಕಂಠಾಭರಣವನ್ನಾಗಿಸಿಕೊಂಡು ಹಾಗೂ ತನ್ನ ತೋಳು, ಭುಜ, ಕೈಗಳಿಗೂ ಆಭರಣ ಮಾಡಿಕೊಂಡ. ಗಣಪತಿ ಹೊಟ್ಟೆಯಲ್ಲಿರುವ ಮೋದಕ ಹೊರ ಬೀಳದಂತೆ ಉದರ ರಕ್ಷಣೆಗೆ ಹಾವನ್ನೇ ಸುತ್ತಿಕೊಂಡ, ಗುರು ವಿದ್ಯಾರಣ್ಯರಿಗೆ ವಿಜಯನಗರ ಸ್ಥಾಪಿಸಲು ಪ್ರೇರೇಪಿಸಿದ್ದು ಕಪ್ಪೆಗೆ ನೆರಳು ನೀಡಿದ ಸರ್ಪದ ಹೆಡೆಯೇ ಆಗಿದೆ. ಸರ್ಪ ನಮ್ಮ ಜೀವನದ ಇತಿಹಾಸ-ಪುರಾಣಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಜಾನಪದ ಕಥೆ: ಕಡು ಬಡವಳಾದ ಓರ್ವ ಹೆಣ್ಣು ಮಗಳು ದೇವರ ಕೃಪೆಯಿಂದ ಶ್ರೀಮಂತ ಪತಿಯನ್ನು ಪಡೆದಿದ್ದಳು. ಪ್ರತಿ ವರ್ಷದಂತೆ ಆ ವರ್ಷವೂ ತಂಗಿಯನ್ನು ತವರುಮನೆಗೆ ಕರೆದುಕೊಂಡು ಹೋಗಲು ಅಣ್ಣನು ಬಂದಿದ್ದನು. ಇಬ್ಬರೂ ಮನೆಗೆ ಬರುತ್ತಿರುವಾಗ ದಾರಿಯ ಮಧ್ಯದಲ್ಲಿ ತಂಗಿ ಧರಿಸಿದ ಆಭರಣಗಳ ಮೇಲೆ ಆಸೆ ಉಂಟಾಗಿ ತಂಗಿಯನ್ನು ಕಲ್ಲಿನಿಂದ ಹೊಡೆಯಲು ಹೋದಾಗ ಒಂದು ನಾಗರ ಹಾವು ಅಣ್ಣನ ಕಾಲಿಗೆ ಕಚ್ಚಿತು. ಆತ ಮರಣಾವಸ್ಥೆ ತಲುಪಿದ. ಆಗ ತಂಗಿಯು ನಾಗದೇವನನ್ನು ಪ್ರಾರ್ಥಿಸಿ, ನಾಗನಿಗೆ ಪೂಜೆ ಮಾಡಿ ಅಣ್ಣನನ್ನು ಬದುಕಿಸಿಕೊಂಡಳು. ಇದು ನಡೆದದ್ದು ಶ್ರಾವಣ ಪಂಚಮಿಯಂದೇ. ಹಾಗಾಗಿ, ಈ ಹಬ್ಬವನ್ನು ಅಣ್ಣ-ತಂಗಿ ಹಬ್ಬ ಎನ್ನುವರು.
ಆಚರಣೆ: ನಾಗಪಂಚಮಿಯ ದಿನ ಬೆಳಗ್ಗೆ ಉಷಾಕಾಲದಲ್ಲಿ ಎಲ್ಲರೂ ಎದ್ದು, ಹೆಂಗಳೆಯರು ಮನೆಯ ಅಂಗಳವನ್ನು ಸಾರಿಸಿ, ರಂಗೋಲಿ ಇಡಬೇಕು. ಪ್ರತಿಯೊಬ್ಬರೂ ಅಭ್ಯಂಜನ ಸ್ನಾನ ಮಾಡಿ ಮಡಿವಸ್ತ್ರವನ್ನು ಧರಿಸುತ್ತಾರೆ. ಹುರಿಗಡಲೆ, ಎಳ್ಳುಂಡೆ, ತಂಬಿಟ್ಟು, ಹೂವು, ಗೆಜ್ಜೆವಸ್ತ್ರ, ನಾಗರ ಬೋಟು, ನೀರು ತೆಗೆದುಕೊಂಡು ನಾಗಪ್ಪನ ಗುಡಿಗೆ ಹೋಗುತ್ತಾರೆ. ಬೆಲ್ಲದ ಹಾಲು ಹಾಕಿ ಅರಳು ಏರಿಸಿ ನೈವೇದ್ಯ ಮಾಡಿ ಭಕ್ತಿಯಿಂದ ಕೈಮುಗಿಯುತ್ತಾರೆ. ಮರುದಿನ (ಪಂಚಮಿ) ಮಣ್ಣಿನ ನಾಗಪ್ಪನನ್ನು ತರುತ್ತಾರೆ. ಚೌತಿ ದಿನ ರಂಗೋಲಿಯನ್ನು ನಾಗಪ್ಪ ಮನೆ ಒಳಗೆ ಬರುವಂತೆ ಹಾಕಿದರೆ, ಪಂಚಮಿ ದಿನ ನಾಗಪ್ಪ ಹೊರಹೋಗುವ ಹಾಗೆ ಚಿತ್ರಿಸುತ್ತಾರೆ. ಕೆಲವು ಕಡೆ ಜೀವಂತ ನಾಗಗಳಿಗೆ ಹಾಲೆರೆಯುವ ಪದ್ಧತಿ ಇದೆ. ಆ ನಾಗನನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಊರ ಹೊರಗೆ ದಿಗ್ಬಂಧನ ಮಾಡಿ ಬಿಟ್ಟು ಬರುತ್ತಾರೆ. ಇನ್ನು ಕೆಲವರು ಹುತ್ತದ ಬಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸಹೋದರ-ಸಹೋದರಿಯ ಹಬ್ಬ ಆಗಿರುವುದರಿಂದ ಸಹೋದರನ ಬೆನ್ನಿಗೆ ಮತ್ತು ಹೊಟ್ಟೆಗೆ ಹಾಲಿನಿಂದ ತನಿ ಎರೆಯುತ್ತಾರೆ. ಇದರಿಂದ ಬೆನ್ನು ಗಟ್ಟಿಯಾಗಲಿ, ಹೊಟ್ಟೆ ತಂಪಾಗಲಿ ಎಂದು ಹಾರೈಸಲಾಗುತ್ತದೆ. ಅವರಿಬ್ಬರ ಸಂಬಂಧ ಶಾಶ್ವತವಾಗಿರಲಿ ಎಂಬುದು ಇದರ ಒಳ ಅರ್ಥ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ನಾಗದೋಷ: ಮದುವೆ ಆಗದೆ ಇರುವುದು, ಸಂತಾನ ಭಾಗ್ಯ ಇಲ್ಲದಿರುವುದು, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆ. ಹೀಗೆ ಅನೇಕ ತೊಂದರೆಗಳು ನಾಗದೋಷದಿಂದ ಬರಬಹುದು. ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಸರ್ಪಸಂಸ್ಕಾರ, ನಾಗಶಾಂತಿಯನ್ನು ಮಾಡಿಕೊಂಡರೆ ಇಂಥ ದೋಷ ಪರಿಹಾರ ಆಗುವುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...