ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಭಾರತ ಈಗ ಅಭಿವೃದ್ಧಿಯ ನೆಲ ಎಂದ ಪ್ರಧಾನಿ ಮೋದಿ

ದೆಹಲಿ: ದೇಶಕ್ಕೆ ಇಂದು 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕೇಸರಿ ರುಮಾಲು ಧರಿಸಿ ದೆಹಲಿಯ ಕೆಂಪು ಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ಗೌರವ ವಂಧನೆ ಸ್ವೀಕರಿಸಿದರು. ಅಲ್ಲಿಂದ ಕೆಂಪುಕೋಟೆಯ ಮೇಲೆ ತೆರಳಿ ಭಾರತದ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳನ್ನು ದೇಶದ ಜನರೆದು ಪ್ರಸ್ತುತ ಪಡಿಸಿದರು. ತಮ್ಮ ಸರ್ಕಾರದ ಜಾರಿಗೆ ತಂದ ಕಾರ್ಯಕ್ರಮಗಳು, ಯೋಜನೆಗಳನ್ನು ತಮ್ಮ ಭಾಷಣದುದ್ದಕ್ಕೂ ಪ್ರಸ್ತಾಪಿಸಿದರು. ತಮ್ಮ ಅಧಿಕಾರವಧಿಯ ಅಂತ್ಯ ಭಾಗದಲ್ಲಿರುವ ಮೋದಿ ಅವರಿಗೆ, ಇದು ತಮ್ಮ ಅಧಿಕಾರವಧಿಯಲ್ಲಿನ ಕೊನೆಯ ಸ್ವಾತಂತ್ರ್ಯೋತ್ಸವವೂ ಹೌದು.
ದೇಶದ ಅಭಿವೃದ್ಧಿಯ ವಿಚಾರಗಳನ್ನೇ ಹೆಚ್ಚು ಪ್ರಸ್ತಾಪಿಸಿದ ಮೋದಿ ಅವರು, ಭಾರತ ಈಗ ಅಭಿವೃದ್ಧಿಯ ನೆಲ ಎಂದು ಬಣ್ಣಿಸಿದರು. ಇದೇ ವೇಳೆ ದೇಶದ 50 ಕೋಟಿ ಬಡ ವರ್ಗದ ಜನರಿಗೆ  ಉಚಿತ ಆರೋಗ್ಯ ಸೇವೆ ಕಲ್ಪಿಸುವ ಯೋಜನೆಯನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಿದರು. ಈ ಯೋಜನೆ ಸೆ. 25ರಿಂದ ಜಾರಿಗೆ ಬರುವುದಾಗಿ ಪ್ರಧಾನಿ ತಿಳಿಸಿದರು.
ಇನ್ನು ಸಮಾರಂಭದಲ್ಲಿ ಹಲವು ಗಣ್ಯರು, ವಿರೋಧ ಪಕ್ಷಗಳ ನಾಯಕರು, ಸಚಿವರು ಭಾಗವಹಿಸಿದ್ದರು.
ಕೆಂಪುಕೋಟೆ, ದೆಹಲಿ 8.56AM: ಸುಪ್ರೀಂ ಕೋರ್ಟ್​ನ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಮೂವರು ಮಹಿಳಾ ನ್ಯಾಯಮೂರ್ತಿಗಳು ನ್ಯಾಯದಾನ ಮಾಡುವಂತಾಗಿದೆ.  ಇದಿಷ್ಟೇ ಅಲ್ಲ, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಸರ್ಕಾರದ ಸಂಪುಟದಲ್ಲಿ ಇಷ್ಟು ಮಂದಿ ಹೆಣ್ಣುಮಕ್ಕಳು ಮಂತ್ರಿಗಳಾಗಿದ್ದೂ ಕೂಡ ಇದೇ ಮೊದಲು ಎನ್ನುವ ಮೂಲಕ ಮೋದಿ ಅವರು  ಮಹಿಳಾ ಪ್ರಾತಿನಿಧ್ಯದ ಕುರಿತು ಬಣ್ಣಿಸಿದರು.
I am proud of the fact that three women judges in Supreme Court are delivering justice. Since independence, this is the first cabinet where so many women are a part of the cabinet: PM Modi  #IndiaIndependenceDay,   pic.twitter.com/tWuFh0CFxk,
— ANI (@ANI)  August 15, 2018,
#WATCH, : PM Narendra Modi addresses the nation from the Red Fort in Delhi.  #IndependenceDayIndia,   https://t.co/G1rLxtfBrY,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 8.24AM: ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಪಡೆಯುವ, ಬಡವರ್ಗದವರಿಗೆ ಆರೋಗ್ಯ ಭದ್ರತೆ ನೀಡುವ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನವನ್ನು ಇದೇ ಸೆಪ್ಟಂಬರ್​ 25ರಿಂದ ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ. ಈ ಮೂಲಕ ಐವತ್ತು ಕೋಟಿ ಭಾರತೀಯರಿಗೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ ಎಂದು ಮೋದಿ ತಿಳಿಸಿದ್ದಾರೆ.
The healthcare initiatives of the government will have a positive impact on 50 crore Indians. It is important to ensure that we free the poor of India from poverty due to which they cannot afford healthcare: PM Narendra Modi  #IndependenceDayIndia,   pic.twitter.com/abGIxiNj4p,
— ANI (@ANI)  August 15, 2018,
Pradhan Mantri Jan Arogya Abhiyaan will be launched on 25th September this year. It is high time we ensure that the poor of India get proper access to good quality and affordable healthcare: PM Modi  pic.twitter.com/TDIc5qwnsx,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 8.20AM: ಭಾರತದ ಕೋಟ್ಯಂತರ ಕುಟುಂಬಗಳಿಗೆ ಆರೋಗ್ಯ ಭದ್ರತೆ ಒದಗಿಸುವ ‘ಆಯುಷ್ಮಾನ್​ ಭಾರತ್​’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯ ಮೂಲಕ ಘೋಷಣೆ ಮಾಡಿದ್ದಾರೆ.
ಕೆಂಪುಕೋಟೆ, ದೆಹಲಿ 8.15AM: ಬಾಹ್ಯಾಕಾಶ ರಂಗದಲ್ಲಿ ಅನ್ವೇಷಣೆಯಲ್ಲಿ ತೊಡಗಿರುವ ಮತ್ತು ಸಾಧನೆ ಮಾಡುತ್ತಿರುವ ವಿಜ್ಞಾನಿಗಳನ್ನು ಭಾರತ ಅಭಿನಂದಿಸುತ್ತದೆ.  2022ರ ಹೊತ್ತಿಗೆ ಅಥವಾ ಅದಕ್ಕೂ ಮೊದಲೇ ಭಾರತ ಅಂತರಿಕ್ಷದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ನಾವು ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.
India is proud of our scientists, who are excelling in their research and are at the forefront of innovation. In the year 2022 or if possible before, India will unfurl the tricolour in space: PM Narendra Modi  #IndiaIndependenceDay,   pic.twitter.com/MwvBXmUY8x,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 8.10AM: ಭಾರತ ಇಂದು ಅಭಿವೃದ್ಧಿಯ ನೆಲವಾಗಿದೆ. ಆರ್ಥಿಕ ಅಭಿವೃದ್ಧಿಯಲ್ಲಿ ನಾವು ಹೊಸ ಮನ್ವಂಥರವನ್ನೇ ಸಾಧಿಸಿದ್ದೇವೆ. ಈ ಹಿಂದೆ ಅವಕಾಶಗಳೇ ಇರದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಂದು ಭಾರತವೂ ಸೇರಿದೆ. ಈ ಮೂಲಕ ದೇಶ ಅಭಿವೃದ್ಧಿಯ ವೇಗದಲ್ಲಿದೆ ಎಂದು ಮೋದಿ ಹೇಳಿದ್ದಾರೆ.
ಕೆಂಪುಕೋಟೆ, ದೆಹಲಿ 8.05AM: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ), ಸಮಾನ ಹುದ್ದೆ ಸಮಾನ ಪಿಂಚಣಿ (ಒಆರ್​ಒಪಿ) ಹಲವು ವರ್ಷಗಳ ಕಾಲ ಜಾರಿಯಾಗಿರಲಿಲ್ಲ. ಆದರೆ ನಮ್ಮ ಸರ್ಕಾರ ಅವುಗಳನ್ನು ವಾಸ್ತವಕ್ಕೆ ತಂದಿದೆ ಎಂದು ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಉಲ್ಲೇಖಿಸುತ್ತಲೇ ಮೋದಿ ಮಾತನಾಡಿದರು.
ಕೆಂಪುಕೋಟೆ, ದೆಹಲಿ 8.01AM: ದೇಶದ ರೈತರಿಂದ ಹಿಡಿದು ರಾಜಕಾರಣಿಗಳ ವರೆಗೆ ಎಲ್ಲರೂ ಬಹುದಿನಗಳಿಂದಲೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆಒತ್ತಾಯಿಸಿದ್ದರು. ಆದರೆ ಏನೂ ಆಗಿರಲಿಲ್ಲ. ಆದರೆ, ನಮ್ಮ ಸರ್ಕಾರ ರೈತರ ಆಶೀರ್ವಾದದೊಂದಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
The demand for higher MSP was pending for years. From farmers to political parties to agriculture experts, everybody was asking about it but nothing happened. With blessings of the farmers, the decision on MSP was taken by our Government: PM Modi  #IndependenceDayIndia,   pic.twitter.com/r8a4jMYk1E,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 7.58AM: 2013ರ ಅವಧಿಯಲ್ಲಿ ಇದ್ದ ವೇಗದಲ್ಲೇ ನಾವು ದೇಶವನ್ನು ನಡೆಸಿಕೊಂಡು ಹೋಗಿದ್ದರೆ, ಅಂದು ಶೌಚಾಲಯಗಳು ನಿರ್ಮಾಣವಾಗುತ್ತಿದ್ದ ವೇಗದಲ್ಲೇ ನಾವು ಮುಂದೆ ನಡೆದಿದ್ದರೆ, ಅಂದು ವಿದ್ಯುಚ್ಛಕ್ತಿಯನ್ನು ವಿಸ್ತರಿಸುತ್ತಿದ್ದ ವೇಗಲ್ಲೇ ನಾವು ಹೆಜ್ಜೆ ಹಾಕಿದ್ದರೆ ಭಾರತವನ್ನು ಅಭಿವೃದ್ಧಿ ಮಾಡಲು ಇನ್ನೂ ದಶಕಗಳು ಬೇಕಾಗಿತ್ತು ಎನ್ನುವ ಮೂಲಕ ಮೋದಿ ಅವರು ಹಿಂದಿನ ಯುಪಿಎ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು. ಅಲ್ಲದೆ, ಎನ್​ಡಿಎ ಸರ್ಕಾರದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದೆ ಎಂದು ಪ್ರತಿಪಾದಿಸಿದರು.
If we had continued at the same pace at which toilets were being constructed in 2013, the pace at which electrification was happening in 2013, then it would have taken us decades to complete: PM Modi  #IndependenceDayIndia,   pic.twitter.com/uZ7qvp4i2e,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 7.48AM: ಡಾ. ಬಿ.ಆರ್​ ಅಂಬೇಡ್ಕರ್​ ಅವರು ಈ ದೇಶಕ್ಕೆ ಸಂವಿಧಾನ ನೀಡಿದರು. ಸಂವಿಧಾನ ನಮಗೆಲ್ಲರಿಗೂ ನ್ಯಾಯ ಕಲ್ಪಿಸಿದೆ. ದೇಶದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವುದು ನಮ್ಮ ಹೊಣೆ. ಆ ಮೂಲಕ ದೇಶ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುವಂತೆ ನಾವು ಮಾಡಬೇಕಾಗಿದೆ ಎನ್ನುವ ಮೂಲಕ ಮೋದಿ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮಂಡಿಸಿದರು.
The Constitution given to us by Dr. Babasaheb Ambedkar has spoken about justice for all. We have to ensure social justice for all and create an India that is developing rapidly: PM Modi  #IndiaIndependenceDay,   pic.twitter.com/3Ti2a9f4DK,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 7.46AM: ಜಲಿಯನ್​ವಾಲಾ ಬಾಗ್​ ದುರಂತಕ್ಕೆ ಮುಂದಿನ ವರ್ಷ ನೂರು ವರ್ಷಗಳಾಗಲಿವೆ. ಅಂದು ಮಡಿದ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಗಳಿಗೆ ನಾನು ನಮನ ಸಲ್ಲಿಸಲು ಬಯಸುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಮೋದಿ ನೆನೆದಿದ್ದಾರೆ.
Next year on Baisakhi, it will be 100 years of Jallianwala Bagh massacre. I pay tribute to those who sacrificed their lives: PM Narendra Modi  #IndependenceDayIndia,   pic.twitter.com/u2ud1N8k6y,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 7.45AM: ಈ ಬಾರಿ ದೇಶಾದ್ಯಂತ ಉತ್ತಮ ಮುಂಗಾರು ಸುರಿದಿದೆ. ಆದರೆ, ಕೆಲವೆಡೆ ಅತಿವೃಷ್ಟಿವುಂಟಾಗಿ ಜನತೆ ಸಮಸ್ಯೆಗೆ ಸಿಲುಕಿದ್ದಾರೆ. ತೊಂದರೆಗೆ ಸಿಲುಕಿದ ಕುಟುಂಬಗಳೊಂದಿಗೆ ನಾನು ಇರಲಿದ್ದೇನೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ ಎನ್ನುವ ಮೂಲಕ ನೆರೆ ಪ್ರದೇಶಗಳ ನಾಗರಿಕರ ರಕ್ಷಣೆಗೆ ಬದ್ಧ ಎಂದು ಮೋದಿ ತಿಳಿಸಿದ್ದಾರೆ.
ಕೆಂಪುಕೋಟೆ, ದೆಹಲಿ 7.44AM:  ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್​ನ ಮುಂಗಾರು ಅಧಿವೇಶನ ಸಾಮಾಜಿಕ ನ್ಯಾಯಕ್ಕೇ ಮೀಸಲಿದ್ದ ಅಧಿವೇಶನವಾಗಿತ್ತು. ಹಿಂದುಳಿದ ವರ್ಗಗಳ ಆಯೋಗ ರಚಿಸುವ ಮಸೂದೆಯನ್ನು ಈ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.
The recently concluded monsoon session of Parliament was one devoted to social justice. The Parliament session witnessed the passage of the bill to create an OBC Commission: PM Narendra Modi  #IndependenceDayIndia,   pic.twitter.com/Hp3v9H28hg,
— ANI (@ANI)  August 15, 2018,
WATCH live via ANI FB: PM Narendra Modi addresses the nation from the Red Fort in Delhi  #IndependenceDayIndia,   https://t.co/s6NjZ0Ry3Q,   pic.twitter.com/MGTXUyFWAB,
— ANI (@ANI)  August 15, 2018,
PM Narendra Modi unfurls the tricolour at Red Fort.  #IndiaIndependenceDay,   pic.twitter.com/sTogztX64z,
— ANI (@ANI)  August 15, 2018,
ಕೆಂಪುಕೋಟೆ, ದೆಹಲಿ 7.00AM: ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋವದಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ ಸಿಂಗ್​, ಎಚ್​.ಡಿ ದೇವೇಗೌಡ, ಕೇಂದ್ರ ಸಚಿವರಾದ ಜೆಪಿ ನಡ್ಡ, ಬಿಜೆಪಿ ವರಿಷ್ಠ ಎಲ್​.ಕೆ ಅಡ್ವಾಣಿ ಮತ್ತಿತರರು ಆಗಮಿಸಿದ್ದಾರೆ.
Former Prime Ministers Manmohan Singh & HD Deve Gowda, Union Minister JP Nadda & BJP leader LK Advani at the Red Fort.  #IndependenceDayIndia,   pic.twitter.com/HRYgZlEkNJ,
— ANI (@ANI)  August 15, 2018,
Delhi: Prime Minister Narendra Modi arrives at Red Fort, to address the nation shortly.  #IndependenceDayIndia,   pic.twitter.com/gPvCAgNb7o,
— ANI (@ANI)  August 15, 2018,
Delhi: Prime Minister Narendra Modi pays tribute to Mahatma Gandhi at Rajghat  #IndependenceDayIndia,   pic.twitter.com/Yko8pgJlUX,
— ANI (@ANI)  August 15, 2018,

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....