ಕೇರಳವನ್ನು ಪ್ರವಾಹದಲ್ಲಿ ಮುಳುಗಿಸಿರುವ ಶತಮಾನದಲ್ಲೇ ಕಂಡು ಕೇಳರಿಯದ ಅನಾಹುತಕಾರಿ ಮಳೆಗೆ ಜಾಗತಿಕ ತಾಪಮಾನ ಹೆಚ್ಚಳವೇ ಕಾರಣವಾಗಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ವಿಶ್ವಕ್ಕೇ ಗಂಡಾಂತರ ಎದುರಾಗುವುದು ನಿಶ್ಚಿತ ಎಂದು ವಿಶ್ವ ವಿಜ್ಞಾನಿಗಳು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
ಮುಂಬೈ ಮತ್ತು ಜರ್ಮನಿಯ ಹವಾಮಾನ ಅಧ್ಯಯನ ಸಂಸ್ಥೆಗಳು ಹಾಗೂ ವಿಶ್ವಬ್ಯಾಂಕ್ನ ‘ಸೌತ್ ಏಷ್ಯಾ ಹಾಟ್ಸ್ಪಾಟ್ಸ್’ ವರದಿ ಈ ಎಚ್ಚರಿಕೆಗೆ ಅಧ್ಯಯನಪೂರ್ಣ ಪುರಾವೆಗಳನ್ನು ನೀಡಿವೆ. ಜಾಗತಿಕ ತಾಪಮಾನ ನೈಸರ್ಗಿಕ ವೇಳಾಪಟ್ಟಿಯನ್ನು ಅಲುಗಾಡಿಸುತ್ತಿದ್ದು,ಇದರಿಂದ ವಿನಾಶಕಾರಿ ಮಳೆ ಉಂಟಾಗುತ್ತಿದೆ. ಅರಬ್ಬಿ ಸಮುದ್ರ ಮತ್ತು ಇದರ ಸನಿಹದ ಭೂಪ್ರದೇಶದಲ್ಲಿ ಮುಂಗಾರು ಮಾರುತದಲ್ಲಿ ತೀವ್ರತರಹದ ಬದಲಾವಣೆ ಉಂಟಾಗುತ್ತಿದೆ. ಸಾಂದ್ರೀಕೃತ ಮೋಡಗಳು ನಿರ್ದಿಷ್ಟ ಭೂಪ್ರದೇಶದಲ್ಲಿ ಮೇಘಸ್ಪೋಟವಾಗಿ ಮೂರ್ನಾಲ್ಕು ದಿನ ಕುಂಭದ್ರೋಣ ಮಳೆಗೆ ಕಾರಣವಾಗುತ್ತಿದೆ. ಕೇರಳದಲ್ಲೂ ಇದೇ ಆಗಿದೆ ಎಂದು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ.
ಮಳೆ 3 ಪಟ್ಟು ಹೆಚ್ಚಳ: 1950ರಿಂದ 2017ರ ಅವಧಿಯಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದಾಗಿಯೇ ಮಳೆೆ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದ ದೊಡ್ಡ ಮಟ್ಟದಲ್ಲಿ ಪ್ರವಾಹಗಳು ಉಂಟಾಗುತ್ತಿವೆ ಎಂದು ಮುಂಬೈ ಸಮೀಪದ ಪಶಾನ್ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯೊರಾಲಜಿ ಹೇಳಿದೆ.
ವಾಯುಮಾಲಿನ್ಯ ಇದೇ ರೀತಿ ಮುಂದುವರಿದಲ್ಲಿ ವಿಪ್ಲವಗಳು ಮನುಷ್ಯನ ನಿರ್ವಹಣೆಗೆ ನಿಲುಕದೆ ವಿನಾಶಕಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಲಾಗಿದೆ.
ವಿಪರೀತ ಪರಿಣಾಮ
ಭಾರತದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆಗಾಲದಲ್ಲಿ ವಿಪರೀತ ಮಳೆ, ಚಳಿಗಾಲದಲ್ಲಿ ಮರಗಟ್ಟುವ ಕೊರೆತ, ಬೇಸಿಗೆಯಲ್ಲಿ ಅಸಹನೀಯ ಸೆಖೆಯನ್ನು ಉಂಟುಮಾಡುತ್ತದೆ ಎಂದು ಜರ್ಮನಿಯ ಪೋಸ್ಟ್ಡ್ಯಾಂ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೆಟ್ ಇಂಪ್ಯಾಕ್ಟ್ ರಿಸರ್ಚ್ ಸಂಸ್ಥೆಯ ವಿಜ್ಞಾನಿ ಕಿರಾ ವಿಂಕೆ ಹೇಳಿದ್ದಾರೆ.
ಕೇರಳದ ಮಹಾಮಳೆಗೆ ಒಂದೇ ಕಾರಣವಿಲ್ಲ. ಇದಕ್ಕೆ ಜಾಗತಿಕ ತಾಪಮಾನದ ಏರಿಕೆ ಹಲವು ಬಗೆಯಲ್ಲಿ ಕಾರಣವಾಗಿದೆ. ಇದರ ಪರಿಣಾಮ ಹವಾಮಾನದಲ್ಲಿ ವಿಪರೀತವಾದ ಬದಲಾವಣೆಗಳು ಆಗುತ್ತಿದ್ದು, ಇದು ಭಯಾನಿಕ ರೀತಿಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಉಂಟು ಮಾಡುತ್ತಿದೆ.
| ರಾಕ್ಸಿ ಮಾಥ್ಯೂ ಕೊಲ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯೊರಾಲಜಿಯ ವಿಜ್ಞಾನಿ
ದಕ್ಷಿಣ ಏಷ್ಯಾ ಹಾಟ್ಸ್ಪಾಟ್ಸ್ ವರದಿ
ಭೂ ಮೇಲ್ಮೈನ ಸರಾಸರಿ ತಾಪಮಾನದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಏರಿದರೂ ದಕ್ಷಿಣ ಏಷ್ಯಾದಲ್ಲಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಲಿವೆ ಎಂದು ವಿಶ್ವಬ್ಯಾಂಕ್ನ ಱಸೌತ್ ಏಷ್ಯಾ ಹಾಟ್ಸ್ಪಾಟ್ಸ್’ ವರದಿ ತಿಳಿಸಿದೆ.
4 ತಿಂಗಳಲ್ಲಿ 170 ಸಾವು!
ಬೆಂಗಳೂರು: ರಾಜ್ಯದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದು ತಲ್ಲಣ ಮೂಡಿಸಿದೆ. ಆ.14ರ ನಂತರ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೇ ನೆರೆ, ಭೂಕುಸಿತಕ್ಕೆ 24ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲಿ ಕಳೆದ 3 ವರ್ಷದಲ್ಲೇ ಸಂಭವಿಸಿದ ಅತ್ಯಧಿಕ ಸಾವು-ನೋವಿನ ಪ್ರಕರಣಗಳಾಗಿವೆ.
ಕೊಡಗಿನಲ್ಲೇ ಅತ್ಯಧಿಕ!: ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಕೇಂದ್ರದ ವರದಿ ಪ್ರಕಾರ ಪ್ರಸಕ್ತ ಮುಂಗಾರಿನಲ್ಲಿ ಕೊಡಗಿನಲ್ಲೇ 21 ಜನ ಮೃತಪಟ್ಟಿದ್ದು, 1,118 ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ತಲಾ 11 ಜನ, ಉಡುಪಿಯಲ್ಲಿ 9 ಜನ, ಬೀದರ್, ವಿಜಯಪುರ, ಧಾರವಾಡದಲ್ಲಿ ತಲಾ 8, ಬೆಳಗಾವಿ, ಶಿವಮೊಗ್ಗ, ತುಮಕೂರು, ಯಾದಗಿರಿಯಲ್ಲಿ ತಲಾ 7 ಜನ, ಕಲಬುರಗಿ, ಗದಗ, ಹಾಸನ, ಮಂಡ್ಯ, ಉತ್ತರ ಕನ್ನಡದಲ್ಲಿ ತಲಾ 6 ಜನ ಮೃತಪಟ್ಟಿದ್ದಾರೆ.
ಭಾರಿ ಗಾಳಿ ಮಳೆ, ಭೂಕುಸಿತಕ್ಕೆ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಏಪ್ರಿಲ್ 1ರಿಂದ ಇಲ್ಲಿಯವರೆಗೂ ದಕ್ಷಿಣ ಕನ್ನಡದಲ್ಲಿ 2,200ಕ್ಕೂ ಅಧಿಕ ಮನೆ, ಬೆಳಗಾವಿಯಲ್ಲಿ 1,245, ಕೊಪ್ಪಳದಲ್ಲಿ 1,239, ಕೊಡಗಿನಲ್ಲಿ 1,118, ರಾಯಚೂರಿನಲ್ಲಿ 1,121, ಉಡುಪಿಯಲ್ಲಿ 1,052 ಮನೆಗೆ ಹಾನಿಯಾಗಿದೆ.
2009ರಲ್ಲಿ 364 ಜನ ಮೃತ!
2009ರಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಸಂಭವಿಸಿದ್ದ ಕೃಷ್ಣ ನದಿ ಪ್ರವಾಹದಿಂದ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 300ಕ್ಕೂ ಅಧಿಕ ಜನ ಮೃತಪಟ್ಟಿದ್ದರು. 2009ರಲ್ಲಿ ಕರ್ನಾಟಕದಲ್ಲಿ ಪ್ರಾಕೃತಿಕ ವಿಕೋಪಕ್ಕೆ 12 ತಿಂಗಳಲ್ಲಿ 364 ಜನ ಮೃತಪಟ್ಟಿದ್ದರು. ಇದಾದ ನಂತರ 2014ರಲ್ಲಿ ತೀವ್ರ ಬರ ಸೇರಿ ಇತರೆ ನೈಸರ್ಗಿಕ ವಿಕೋಪಕ್ಕೆ 218 ಜನ ಮೃತಪಟ್ಟಿದ್ದರು. 2015ರಲ್ಲಿ 128 ಜನ, 2016ರಲ್ಲಿ 113, 2017ರಲ್ಲಿ 160 ಜನ ಮೃತಪಟ್ಟಿದ್ದರು.
ಕೊಡಗಿಗೆ ಮಳೆ ಭೀತಿ: ಇಂದಿನಿಂದ 3 ದಿನ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು: ನೆರೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕೊಡಗು ಸೇರಿದಂತೆ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಆ.29ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿದೆ. ಆ.26ರಿಂದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವ ಆ.29ರ ನಂತರ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ