ನವದೆಹಲಿ: ಅತ್ಯಾಚಾರ ಸಂತ್ರಸ್ತರ ಚಿತ್ರ ಪ್ರಕಟಣೆ ಹಾಗೂ ಸಂದರ್ಶನವನ್ನು ಪ್ರಸಾರ ಮಾಡುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಿಷೇಧಿಸಿದೆ.
ಸಂತ್ರಸ್ತ ಮಹಿಳೆಯ ಚಿತ್ರವನ್ನು ಯಾವುದೇ ರೂಪದಲ್ಲಿಯೂ ಪ್ರಕಟಿಸ ಕೂಡದು. ಇನ್ನು ಅಪ್ರಾಪ್ತ ಸಂತ್ರಸ್ತರ ಸಂದರ್ಶನವನ್ನು ಮಾಧ್ಯಮಗಳು ಮಾಡ ಬಾರದು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಮಾತ್ರ ಸಂದರ್ಶಿಸುವ ಅಧಿಕಾರ ಹೊಂದಿದ್ದಾರೆ ಎಂದು ನ್ಯಾಯ ಪೀಠ ಸ್ಪಷ್ಟಪಡಿಸಿದೆ. ಕೋರ್ಟ್ ನಿರ್ದೇಶನದ ಹೊರತಾಗಿಯೂ ಮಾಧ್ಯಮಗಳು ಸಂತ್ರಸ್ತರ ಚಿತ್ರಗಳನ್ನು ಮಸುಕುಗೊಳಿಸಿ ಪ್ರಕಟಿಸುತ್ತಿವೆ. ಸಂತ್ರಸ್ತರ ಮುಖಮುಚ್ಚಿ ಸಂದರ್ಶನ ಪ್ರಸಾರ ಮಾಡಲಾಗುತ್ತಿವೆೆ. ಕೆಲ ಮಹಿಳಾ ಆಯೋಗದ ಸದಸ್ಯರು ಕೂಡ ಸಂದರ್ಶಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಯಾವುದೇ ಕೃತ್ಯವನ್ನು ಕೋರ್ಟ್ ಸಹಿಸುವುದಿಲ್ಲ ಎಂದು ನ್ಯಾಯಪೀಠ ಎಚ್ಚರಿಸಿದೆ.
ಅತ್ಯಾಚಾರದ ವಿಚಾರದಲ್ಲಿ ರಾಜಕೀಯ ಬೆರಕೆ ಕುರಿತು ಕಠಿಣ ನಿಲುವು ತಳೆದಿರುವ ಕೋರ್ಟ್, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ವಿಚಾರದಲ್ಲಿ ರಾಜಕೀಯ ಪ್ರವೇಶವನ್ನು ಒಪ್ಪುವುದಿಲ್ಲ. ದೆಹಲಿ ಮಹಿಳಾ ಆಯೋಗ, ಮುಜಾಫರ್ಪುರ ಘಟನೆಗೆ ಯಾವುದೇ ಸಂಬಂಧವಿಲ್ಲ. ಅನವಶ್ಯಕವಾಗಿ ಮೂಗು ತೂರಿಸುವ ಪ್ರಯತ್ನ ಬೇಡ ಎಂದು ಹೇಳಿದೆ.
ಬಿಹಾರ ಸರ್ಕಾರಕ್ಕೆ ತರಾಟೆ: ಈ ಅಮಾನವೀಯ ಘಟನೆಗೆ ಕಾರಣವಾಗಿರುವ ಎನ್ಜಿಒಗೆ ಸರ್ಕಾರದಿಂದ ಹೇಗೆ ಅನುದಾನ ನೀಡಲಾಗುತ್ತಿದೆ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ? ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸದೇ ಅನುದಾನ ನೀಡುತ್ತಿದ್ದವೇ ಎಂದು ಕೋರ್ಟ್ ಪ್ರಶ್ನಿಸಿದೆ. ಇಶ್ರತ್ ಜಹಾನ್ ಪ್ರಕರಣ ಶಂಕಿತ ಭಯೋತ್ಪಾದಕಿ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ದೋಷಮುಕ್ತ ಗೊಳಿಸುವಂತೆ ಕೋರಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ಅರ್ಜಿಯನ್ನು ಸಿಬಿಐ ಕೋರ್ಟ್ ತಿರಸ್ಕರಿಸಿದೆ. ಗುಜರಾತ್ ಪೊಲೀಸ್ನ ಹಿರಿಯ ಅಧಿಕಾರಿಗಳಾದ ಡಿ.ಜಿ.ವಂಜಾರಾ ಹಾಗೂ ಎನ್.ಕೆ.ಅಮೀನ್ ದೋಷಮುಕ್ತಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಪೊಲೀಸ್ ಮಹಾನಿರ್ದೇಶಕ ಪಿ.ಪಿ.ಪಾಂಡೆ ಅವರನ್ನು ಇದೇ ಪ್ರಕರಣದಲ್ಲಿ ದೋಷಮುಕ್ತ ಎಂದು ಸಿಬಿಐ ಕೋರ್ಟ್ ಆದೇಶಿಸಿದ ಬಳಿಕ ಇಬ್ಬರು ಅಧಿಕಾರಿಗಳು ಕೂಡ ಅರ್ಜಿ ಸಲ್ಲಿಸಿದ್ದರು.
ಪ್ರತಿ 6 ಗಂಟೆಗೊಂದು ಅತ್ಯಾಚಾರ
ದೇಶದಲ್ಲಿ ಪ್ರತಿ 6 ಗಂಟೆಗೊಂದು ಅತ್ಯಾಚಾರ ನಡೆಯು ತ್ತಿದೆ. ಎನ್ಸಿಆರ್ಬಿ ಮಾಹಿತಿ ಪ್ರಕಾರ 2016ರಲ್ಲಿ 38,947 ಆತ್ಯಾಚಾರ ಪ್ರಕರಣಗಳು ನಡೆದಿವೆ. ಭಾರತದಲ್ಲಿ ಏನಾಗುತ್ತಿದೆ, ಮಹಿಳಾ ಸುರಕ್ಷತೆ ವಿಚಾರ ಏನಾಯಿತು ಎಂದು ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ