ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ತಿಳಿಗಂಜಿಯ ಮಂಡನೆ!, *| ಡಾ. ಗಿರಿಧರ ಕಜೆ

ಎಂ.ಡಿ.(ಆಯು)*

ಆಯುರ್ವೆದದಲ್ಲಿ ಬೃಹತ್​ತ್ರಯೀ ಎಂದು ಪ್ರಖ್ಯಾತವಾದ ಮೂರು ಹಿರಿದಾದ ಗ್ರಂಥಗಳ ಬಳಿಕ ಬೆಳಕು
ಕಂಡ ಭಾವಪ್ರಕಾಶ, ಶಾರಂಗಧರ ಸಂಹಿತೆ, ಮಾಧವ ನಿದಾನಗಳೆಂಬ ಆಕಾರದಲ್ಲಿ ಅಲ್ಪ ಕಿರಿದಾದರೂ
ಮಹತ್ವಪೂರ್ಣವಾದ ಗ್ರಂಥಗಳಿಗೆ ಲಘುತ್ರಯೀ ಎಂದು ಹೆಸರು. ಭಾವಪ್ರಕಾಶದಲ್ಲಿರುವ
ಕೃತಾನ್ನವರ್ಗಕ್ಕೆ ಹೊಂದಿಕೊಂಡಂತೆ ಶಾರಂಗಧರ ಸಂಹಿತೆಯ ಕ್ವಾಥಕಲ್ಪನಾವೆಂಬ ವಿಭಾಗದಲ್ಲಿ
ಕೃತಾನ್ನಗಳ ವರ್ಣನೆಯಿದೆ. ಗಂಜಿತಯಾರಿ, ವಿಭಿನ್ನ ತಿಳಿಗಂಜಿಗಳ ಬಣ್ಣನೆಯು ಹಸನಾದ ಬದುಕು
ಅಪೇಕ್ಷಿತರಿಗೆ ಹಾಗೂ ಬೇಗನೆ ರೋಗಮುಕ್ತಿ ಬಯಸುವ ವ್ಯಾಧಿಪೀಡಿತರಿಗೆ ಹೇಳಿಮಾಡಿಸಿದಂತಿದೆ.
ಗ್ರುಯೆಲ್ ಎಂದರೆ ಗಂಜಿ, ಅಂಬಲಿ, ಶಕ್ತಿಗುಂದಿಸು ಎಂಬೆಲ್ಲ ಅರ್ಥಗಳಿದ್ದರೂ ಈ ಗಂಜಿಗಳೆಲ್ಲಾ
ಶಕ್ತಿಗುಂದಿಸುವುದಿಲ್ಲ, ಬದಲಾಗಿ ಶಕ್ತಿವರ್ಧಕಗಳಾಗಿವೆ!

ಅನ್ನ ಮಾಡುವ ಭಿನ್ನ ವಿಧಾನವನ್ನೂ ಇಲ್ಲಿ ಹೇಳಲಾಗಿದೆ. ಅಕ್ಕಿಗೆ 14 ಪಟ್ಟು ನೀರು ಹಾಕಿ
ಮೃದು ಅನ್ನವಾಗುವ ತನಕ ಬೇಯಿಸಬೇಕು. ತಿಳಿ ಗಂಜಿ ತೆಗೆದು ಅನ್ನ ಉಣ್ಣಬೇಕು. ಇದಕ್ಕೆ ಮಧುರ
ರಸವಿದ್ದು ಬೇಗನೆ ಜೀರ್ಣವಾಗುವ ಗುಣ ಹೊಂದಿದೆ. ಹೀಗೆ ಅನ್ನ ತಯಾರಿಸಿದಾಗ ಅನ್ನ ಬಿಟ್ಟು
ಉಳಿಯುವ ತಿಳಿಗಂಜಿಗೆ ಶುದ್ಧಮಂಡ ಎಂಬ ಹೆಸರು. ಈ ತಿಳಿಗಂಜಿಗೆ ಒಣಶುಂಠಿ, ಸೈಂಧವ ಉಪ್ಪು
ಸೇರಿಸಿ ಸೇವಿಸಿದರೆ ಹಸಿವು ಹೆಚ್ಚಾಗುವುದರ ಜೊತೆಗೆ ಜೀರ್ಣಶಕ್ತಿಯೂ ಉತ್ತಮವಾಗುತ್ತದೆ. ಇದೇ
ವಿಧಾನದಲ್ಲಿ ಅನ್ನ ಮಾಡುವಾಗ ಅಕ್ಕಿಗೆ ಕೊತ್ತಂಬರಿ, ಒಣಶುಂಠಿ, ಹಿಪ್ಪಲಿ, ಕಾಳುಮೆಣಸು,
ಸೈಂಧವ ಉಪ್ಪು, ಹೆಸರುಕಾಳು, ನೀರು ಸೇರಿಸಿ ತಿಳಿಗಂಜಿ ತಯಾರಿಸಬಹುದು. ಕೊನೆಯಲ್ಲಿ
ಎಣ್ಣೆಯಲ್ಲಿ ಹುರಿದ ಹಿಂಗಿನ ಒಗ್ಗರಣೆ ಹಾಕಿದರೆ ಎಂಟು ದ್ರವ್ಯಗಳ ಸಾರದಿಂದ ಕೂಡಿದ
ತಿಳಿಗಂಜಿಗೆ ಅಷ್ಟಗುಣ ಮಂಡ ಎಂದು ಹೆಸರು. ಹಸಿವನ್ನೂ ಹೆಚ್ಚಿಸಿ ಪ್ರಾಣಕ್ಕೆ ತ್ರಾಣ ನೀಡಿ
ರಕ್ತವರ್ಧಕವಾಗಿ ಕಾರ್ಯನಿರ್ವಹಿಸುವುದು. ಜ್ವರವಿದ್ದಾಗ ಹಿತಕರವಾಗಿದ್ದು ವಾತ, ಪಿತ್ತ, ಕಫ
ದೋಷಗಳನ್ನು ಹತೋಟಿಯಲ್ಲಿಡುವುದು. ಮೂತ್ರಾಶಯದ ಕಾರ್ಯಕ್ಷಮತೆಯನ್ನೂ ವರ್ಧಿಸುವುದು.

ಬಾರ್ಲಿಗೆ ಸಂಸ್ಕೃತದಲ್ಲಿ ಯವ ಎನ್ನಲಾಗುತ್ತದೆ. ಕುಟ್ಟಿ ಪುಡಿಮಾಡಿದ ಅಥವಾ ಹುರಿದ
ಬಾರ್ಲಿಗೆ 14 ಪಟ್ಟು ನೀರು ಹಾಕಿ ಕುದಿಸಿ ಮಾಡಿದ ಬಾರ್ಲಿಯ ಅಂಬಲಿಗೆ ವಾಟ್ಯಮಂಡವೆಂಬ
ಹೆಸರಿದೆ. ಇದು ಕಫ, ಪಿತ್ತವನ್ನು ಕಡಿಮೆ ಮಾಡುವುದಲ್ಲದೆ ರಕ್ತಸ್ರಾವ ನಿಯಂತ್ರಣಕ್ಕೆ
ಹಿತಕರ. ಗಂಟಲಿನ ತೊಂದರೆ ನಿವಾರಿಸುತ್ತದೆ. ಭತ್ತವನ್ನು ನೀರಿನಲ್ಲಿ ನೆನೆಸಿಟ್ಟು
ಹೊರತೆಗೆದು ಹುರಿದಾಗ ಹೊಟ್ಟಿನ ಒಳಗಿರುವ ಅಕ್ಕಿಯು ಉಬ್ಬಿ ಹೂವಿನಂತೆ ಅರಳುತ್ತದೆ. ಇದರಿಂದ
ಹೊಟ್ಟನ್ನು ಪ್ರತ್ಯೇಕಿಸಿದರೆ ಸಿಗುವ ಆಹಾರದ್ರವ್ಯಕ್ಕೆ ಅರಳು ಎನ್ನುತ್ತೇವೆ. ಆಯುರ್ವೆದ
ಇದನ್ನು ಲಾಜ ಎಂದು ಗುರುತಿಸುತ್ತದೆ. ಇದನ್ನು ಬೇಯಿಸಿದಾಗ ದೊರೆಯುವ ತಿಳಿಗಂಜಿಯೇ ಲಾಜಮಂಡ.
ಕಫ ಹಾಗೂ ಪಿತ್ತವನ್ನು ಕಡಿಮೆಗೊಳಿಸುತ್ತದೆ. ಜ್ವರವನ್ನೂ ಶಮನಗೊಳಿಸುತ್ತದೆ.
ಬಾಯಾರಿಕೆಯನ್ನು ಶಾಂತಗೊಳಿಸಲು ಪ್ರಶಸ್ತ. ಕರುಳುಗಳು ಆಹಾರದ್ರವ್ಯಗಳ ಸಾರಾಂಶಗಳನ್ನು
ಸಮರ್ಪಕವಾಗಿ ಒಳಹೀರಿಕೊಳ್ಳಲೂ ನೆರವಾಗುತ್ತದೆ. ಭತ್ತದ ಅರಳು ದೇಹತೂಕ ಇಳಿಸಲು ಹಾಗೂ
ಮಧುಮೇಹದಿಂದ ಬಳಲುತ್ತಿರುವವರಿಗೆ ಅತ್ಯುಪಕಾರಿ. ಅಂಬಲಿಯ ಹಂಬಲಿಗಳಾಗಿ ತಿಳಿಗಂಜಿಯ
ತಿಳಿಯಿರಿ.

*ಪಂಚಸೂತ್ರಗಳು*

ಶತಾವರಿ ಬೇರು: ನರರೋಗ ಚಿಕಿತ್ಸೆಗೆ ಸಹಕಾರಿ.

ದಾರೆಹುಳಿ/ಕರಂಬೋಲ: ಮೈನವೆ ನಿವಾರಕ.

ಒಂದೆಲಗ ಸೊಪ್ಪು: ಹೃದಯಕ್ಕೆ ಹಿತಕರ.

ಹಲಸಿನಬೀಜ: ಮಲಬದ್ಧತೆ ಉಂಟುಮಾಡುತ್ತದೆ.

ಸಾಸಿವೆ: ವಿಷಸೇವನೆ ಆದಾಗ ವಾಂತಿ ಮಾಡಿಸಲು ಉಪಯುಕ್ತ.

*ಕೊನೇ ಹನಿ*

ವಾಟೆಹುಳಿ/ಉಂಡೆಹುಳಿ ಮರದ ತೊಗಟೆಯ ಕಷಾಯದಿಂದ ತೊಳೆದರೆ ಮೊಡವೆ ಬೇಗನೆ ಶಮನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....