ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸ್ವಾತಂತ್ರ್ಯದಿನಕ್ಕೆ ಮಹಾ ಸಿಹಿ, | ಕೆ. ರಾಘವ ಶರ್ಮ

ನವದೆಹಲಿ: ರಾಜ್ಯದಲ್ಲಿ ದಶಕಗಳಿಂದ ಮಾರ್ದನಿಸುತ್ತಿದ್ದ ಉತ್ತರ ಕರ್ನಾಟಕದ ಮಹದಾಯಿ ಹೋರಾಟಕ್ಕೆ ಕೊನೆಗೂ ತಕ್ಕಮಟ್ಟಿನ ಸ್ಪಂದನೆ ಸಿಕ್ಕಿದೆ. ಮಹದಾಯಿ ಮತ್ತು ಮಲಪ್ರಭಾ ಕಣಿವೆ ಜನರ ವೇದನೆ ತಣಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಮಂಗಳವಾರ ನ್ಯಾಯಾಧಿಕರಣದಿಂದ ಸಿಹಿ ಸುದ್ದಿ ಹೊರಬಿದ್ದಿದೆ. ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಹದಾಯಿ ನದಿಯಿಂದ ಮಲಪ್ರಭಾ ಕಣಿವೆಗೆ ನೀರು ತಿರುಗಿಸಬಹುದೆಂಬ ಐತಿಹಾಸಿಕ ತೀರ್ವನವನ್ನು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧಿಕರಣ ಪ್ರಕಟಿಸಿದೆ.
ಬಂಡೂರಿ ನಾಲೆಯಿಂದ 2.18 ಟಿಎಂಸಿ, ಕಳಸಾ ನಾಲೆಯಿಂದ 1.72 ಟಿಎಂಸಿ ನೀರನ್ನು ಮಲಪ್ರಭಾಕ್ಕೆ ತಿರುಗಿಸಲು ನ್ಯಾಯಾಧಿಕರಣ ಅವಕಾಶ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಸೇರಿ ಸುತ್ತಮುತ್ತಲಿನ ಭಾಗದ ಜನರಿಗೆ ಕುಡಿಯುವ ಉದ್ದೇಶಕ್ಕಾಗಿ ಈ ನೀರನ್ನು ಬಳಸಿಕೊಳ್ಳಬಹುದಾಗಿದೆ. 3.90 ಟಿಎಂಸಿ ನೀರಿನ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸದಾಗಿ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಧಿಕರಣ ಸಲಹೆ ನೀಡಿದೆ. ಒಟ್ಟು 12 ಸಂಪುಟಗಳಲ್ಲಿ ತೀರ್ಪನ್ನು ಬರೆಯಲಾಗಿದೆ.
2015ರಲ್ಲಿ ನೀರಿನ ಅಭಾವ ಎದುರಾಗಿದ್ದಾಗ ರಾಜ್ಯ ಸರ್ಕಾರ ಇದೇ ಬೇಡಿಕೆ ಮುಂದಿಟ್ಟು, 7.5 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ತಿರುಗಿಸಲು ಅನುಮತಿ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆದರೆ ಪರಿಸರ ಹಾನಿ, ಯೋಜನೆಯ ಸಾಧ್ಯತೆಗಳ ಬಗ್ಗೆ ಅನುಮಾನಪಟ್ಟಿದ್ದ ನ್ಯಾಯಾಧಿಕರಣ ರಾಜ್ಯದ ಬೇಡಿಕೆಯನ್ನು ತಳ್ಳಿಹಾಕಿತ್ತು. ಹಾಗಿದ್ದರೂ, ಅಂತಿಮ ತೀರ್ಪಿನಲ್ಲಿ ರಾಜ್ಯದ ಮನವಿಗೆ ಸಮ್ಮತಿಸಿರುವ ನ್ಯಾಯಾಧಿಕರಣ ಕುಡಿವ ನೀರಿನ ಉದ್ದೇಶಕ್ಕಾಗಿ ಒಂದು ನದಿಯಿಂದ ಮತ್ತೊಂದು ನದಿಯ ನೀರಿನ ತಿರುಗಿಸುವಿಕೆಗೆ ಅನುಮತಿ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಅಂತರ್ ಕಣಿವೆಗೆ ನೀರು ತಿರುಗಿಸಲು ಅವಕಾಶ ನೀಡಲೇಬಾರದು ಎಂದು ಗೋವಾ ಸರ್ಕಾರ ಪ್ರಬಲ ವಾದ ಮಂಡಿಸಿದ್ದರೂ, ಈ ವಿಚಾರದಲ್ಲಿ ಫಾಲಿ ನಾರಿಮನ್ ನೇತೃತ್ವದ ರಾಜ್ಯದ ವಕೀಲರ ತಂಡ ನ್ಯಾಯಾಧಿಕರಣವನ್ನು ತೃಪ್ತಿಪಡಿಸುವಲ್ಲಿ ಯಶಸ್ವಿಯಾಗಿರುವುದು ಎದ್ದುಕಾಣುತ್ತಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಒಂದು ನದಿಯಿಂದ ಮತ್ತೊಂದು ನದಿಗೆ ನೀರು ತಿರುಗಿಸುವ ಯೋಜನೆಗೆ ಇದುವರೆಗೆ ಅನುಮತಿ ಸಿಕ್ಕಿರಲಿಲ್ಲ. ಆದರೆ, ಈ ಜಲವ್ಯಾಜ್ಯದಲ್ಲಿ ನ್ಯಾಯಾಧಿಕರಣ ತೆಗೆದುಕೊಂಡಿರುವ ನಿಲುವು ಬೇರೆ ವ್ಯಾಜ್ಯಗಳ ಮೇಲೂ ಪ್ರಭಾವ ಬೀರುವ ಲಕ್ಷಣಗಳು ಕಂಡುಬಂದಿವೆ.
ಜಲಾಶಯ ನಿರ್ಮಾಣ : ನ್ಯಾಯಾಧಿಕರಣ 8.2 ಟಿಎಂಸಿ ನೀರನ್ನು ಜಲ ವಿದ್ಯುತ್ ಯೋಜನೆಗಳಿಗೆ ನಿಗದಿಪಡಿಸಿರುವುದರಿಂದ ಕರ್ನಾಟಕ-ಗೋವಾ ಗಡಿಭಾಗದಲ್ಲಿ ರಾಜ್ಯ ಸರ್ಕಾರ ಜಲಾಶಯ ನಿರ್ಮಾಣ ಮಾಡುವುದು ಅನಿವಾರ್ಯವಾಗಲಿದೆ. ಗಡಿಭಾಗದಲ್ಲಿ ಜಲಾಶಯ ನಿರ್ವಣಕ್ಕೆ ಪರಿಸರವಾದಿಗಳು, ಗೋವಾ ವಿರೋಧ ವ್ಯಕ್ತಪಡಿಸಿದ್ದರೂ, ಜಲ ವಿದ್ಯುತ್ ಯೋಜನೆಗಳು ಸಾಕಾರಗೊಳ್ಳಲು ಜಲಾಶಯದ ಮೂಲಕ ನೀರು ಸಂಗ್ರಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ನ್ಯಾಯಾಧಿಕರಣದ ಕ್ರಮ ರಾಜ್ಯದ ಮಟ್ಟಿಗೆ ಸ್ವಾಗತಾರ್ಹ ಎಂದೇ ವಿಶ್ಲೇಷಿಸಲಾಗುತ್ತಿದೆ.
1979-80ರಲ್ಲಿ ಗುಂಡೂರಾವ್ ಸರ್ಕಾರವಿದ್ದಾಗ ಎಸ್.ಆರ್. ಬೊಮ್ಮಾಯಿ ವಿಪಕ್ಷ ನಾಯಕರಾಗಿದ್ದರು. ಅವರ ನೇತೃತ್ವದಲ್ಲಿ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರನ್ನು ಭೇಟಿ ಮಾಡಿದ್ದ ನಿಯೋಗ, ಜಲ ವಿದ್ಯುತ್ ಯೋಜನೆಗೆ ಪರಸ್ಪರ ಒಪ್ಪಿಗೆ ಪಡೆದುಕೊಂಡು, ವಿದ್ಯುತ್ತನ್ನು ಹಂಚಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಪರಿಸರವಾದಿಗಳ ವಿರೋಧದಿಂದಾಗಿ ಈ ಚಿಂತನೆ ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೆ ಈಗ ನ್ಯಾಯಾಧಿಕರಣದ ಈ ಕ್ರಮ ಕೇಂದ್ರ ಪರಿಸರ ಇಲಾಖೆಗೆ ಪರಿಸರ ಸಮ್ಮತಿ ನೀಡಲು ಪೂರಕ ದಾಖಲೆಯಾಗಿ ಪರಿಣಮಿಸಲಿದೆ.
ಗೋವಾ, ಮಹಾ ಪಾಲು
24 ಟಿಎಂಸಿ- ಗೋವಾಗೆ ಸಿಕ್ಕ ಪಾಲು
1.5-ಮಹಾರಾಷ್ಟ್ರ ಬಳಕೆಗೆ ಸಿಕ್ಕಿದ್ದು
ಹೊಸ ಸಂಪ್ರದಾಯ
ಸಾಮಾನ್ಯವಾಗಿ ನ್ಯಾಯಾಧಿಕರಣಗಳು ತಮ್ಮ ಕಚೇರಿಯಲ್ಲೇ ಐತೀರ್ಪನ್ನು ಪ್ರಕಟಿಸುತ್ತವೆ. ಆದರೆ ಮೊದಲ ಬಾರಿಗೆ ಮಹದಾಯಿ ನ್ಯಾಯಾಧಿಕರಣ ಐತೀರ್ಪನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಹಸ್ತಾಂತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಕೇಂದ್ರ ಜಲ ಸಚಿವ ನಿತಿನ್ ಗಡ್ಕರಿ ಅವರನ್ನು ಸಚಿವಾಲಯದಲ್ಲಿ ಭೇಟಿ ಮಾಡಿದ ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ನ್ಯಾಯಪೀಠ ಐತೀರ್ಪಿನ ಕುರಿತ ವಿವರಣೆಗಳನ್ನು ಹಂಚಿಕೊಂಡಿತು. ನಿಗದಿತ ಅವಧಿಯಲ್ಲಿ ತೀರ್ಪು ಪ್ರಕಟಿಸಿದ್ದಕ್ಕೆ ಸಚಿವ ಗಡ್ಕರಿ ನ್ಯಾಯಾಧಿಕರಣಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮಹದಾಯಿ ಹನಿ ನೀರಾವರಿ ಯೋಜನೆ ಕುರಿತು ರ್ಚಚಿಸಲು ಬಂದಿದ್ದ ಬೆಂಗಳೂರಿನ ಸಹ್ಯಾದ್ರಿ ಜಲಜನ ಸೊಸೈಟಿ ಸದಸ್ಯರು ಗಡ್ಕರಿ ಅವರನ್ನು ಭೇಟಿ ಮಾಡಿ ಪ್ರಸ್ತಾವನೆಗಳನ್ನು ಸಲ್ಲಿಸಿದರು.
ತೀರ್ಪು ಸಂತಸ ತಂದಿದೆ. ಆದರೆ, ಮಹದಾಯಿ ನೀರು ಮಲಪ್ರಭೆಗೆ ಹರಿಯುವವರೆಗೂ ನಮ್ಮ ಹೋರಾಟ ನಿಲ್ಲಲ್ಲ. ತೀರ್ಪಿನ ಪ್ರತಿ ತರಿಸಿ ಯಾವ ಯೋಜನೆಗೆ ಎಷ್ಟು ಟಿಎಂಸಿ ನೀರು ಬಿಡಲಾಗಿದೆ ಎಂಬ ಕುರಿತು ತಿಳಿದುಕೊಳ್ಳುತ್ತೇನೆ. ಬಳಿಕ ಹೋರಾಟ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
| ವೀರೇಶ ಸೊಬರದಮಠ, ಅಧ್ಯಕ್ಷ, ರಾಜ್ಯ ರೈತ ಸೇನಾ
ರಾಜ್ಯಕ್ಕೇನು ಲಾಭ?
ಮಹದಾಯಿ ಉಪಕಾಲುವೆಗಳಾದ ಕಳಸಾ, ಬಂಡೂರಿ ಜೋಡಣೆಗೆ ಒಪ್ಪಿಗೆ
ನಾಲೆ ಜೋಡಣೆಯಿಂದ ಉ.ಕರ್ನಾಟಕದ 12 ತಾಲೂಕುಗಳ ನೀರಿನ ಸಮಸ್ಯೆಗೆ ತೆರೆ
ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು ಹಂಚಿಕೆ ಆಗಿರುವುದರಿಂದ ಅಣೆಕಟ್ಟು ನಿರ್ವಣಕ್ಕೆ ಒಪ್ಪಿಗೆ ನೀಡಿದಂತಾಗಿದೆ.
ವಾರ್ಷಿಕ ನೀರಿನ ಲಭ್ಯತೆ
ಕೇಂದ್ರ ಜಲ ಆಯೋಗ ಹೇಳಿದ್ದು : 199.6 ಟಿಎಂಸಿ
ಕರ್ನಾಟಕ : 202 ಟಿಎಂಸಿ
ಗೋವಾ : 113 ಟಿಎಂಸಿ
ಮಹಾರಾಷ್ಟ್ರ: 206 ಟಿಎಂಸಿ
ನ್ಯಾಯಾಧಿಕರಣ ನಿಗದಿಪಡಿಸಿದ್ದು : 188.06 ಟಿಎಂಸಿ
ನ್ಯಾಯಾಧಿಕರಣದ,  ತೀರ್ಪು 12 ಸಂಪುಟಗಳಷ್ಟಿದ್ದು, ಅದನ್ನು ವಿಸ್ತೃತವಾಗಿ ಅಧ್ಯಯನ ನಡೆಸಿ, ನಂತರ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಮಹದಾಯಿ ತೀರ್ಪಿಗೆ ಸಂಬಂಧಿಸಿದ ನ್ಯಾಯಾಧಿ ಕರಣದ 12 ಸಂಪುಟ ಗಳ ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕ ಆದೇಶ ಒಪ್ಪಬೇಕೇ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಬೇಕೇ ಎಂಬುದನ್ನು ನಿರ್ಧರಿಸಲಾಗುವುದು.
| ಮೋಹನ್ ಕಾತರಕಿ, ರಾಜ್ಯದ ಪರ ವಕೀಲ
ಮಹದಾಯಿ ನೀರು ಹಂಚಿಕೆ ಸಂಬಂಧ ಗೋವಾ ಸಿಎಂ ಮನೋಹರ ಪರಿಕ್ಕರ್​ಗೆ ಮನವಿ ಮಾಡಿದ್ದೆ. ನೀರಿನ ವಿವಾದ ಬಗೆಹರಿಸಲು ಪರಿಕ್ಕರ್ ಸಮ್ಮತಿಸಿದ್ದರು. ಅಂತೆಯೇ ಈಗ ತೀರ್ಪು ಬಂದಿದೆ. ಈ ಮೂಲಕ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
| ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಗೋವಾಕ್ಕೆ ಹಿನ್ನಡೆ
ಮಹದಾಯಿ ನೀರಿನ ಬಳಕೆ ಕುರಿತ ಮಾಸ್ಟರ್ ಪ್ಲಾ್ಯನ್​ನಲ್ಲಿ ಗೋವಾ 94 ಟಿಎಂಸಿ ನೀರಿನ ಅಗತ್ಯದ ಬಗ್ಗೆ ಉಲ್ಲೇಖಿಸಿತ್ತು. ಆದರೆ ಸಮಗ್ರ ಯೋಜನಾ ವರದಿಯಲ್ಲಿ 37 ಟಿಎಂಸಿ ನೀರಿನ ಬಳಕೆಯ ಕುರಿತ ಯೋಜನೆಗಳ ಪಟ್ಟಿಯನ್ನಷ್ಟೇ ನ್ಯಾಯಾಧಿಕರಣಕ್ಕೆ ಸಲ್ಲಿಸಿತ್ತು. ಈ ನಡುವೆ ಮಹದಾಯಿಯಲ್ಲಿ 202 ಟಿಎಂಸಿ ನೀರು ಹರಿಯುತ್ತದೆ ಎಂದು ಕರ್ನಾಟಕ ವರದಿ ನೀಡಿದ ಹಿನ್ನೆಲೆಯಲ್ಲಿ ಗೋವಾ ತನ್ನ ನೀರಿನ ಬೇಡಿಕೆಯನ್ನು 144 ಟಿಎಂಸಿಗೆ ಏರಿಸಿತ್ತು. ಗೋವಾ ಸದ್ಯಕ್ಕೆ ಮಹದಾಯಿ ನೀರನ್ನು ಬಳಸಿಕೊಳ್ಳುತ್ತಿರುವ ಪ್ರಮಾಣ 9 ಟಿಎಂಸಿ ಮಾತ್ರ. ಹೀಗಾಗಿ, ಆ ಪ್ರಸ್ತಾವನೆಯಲ್ಲಿ ಸಾಕಷ್ಟು ಗೊಂದಲಗಳಿದ್ದರಿಂದ ನ್ಯಾಯಾಧಿಕರಣ 24 ಟಿಎಂಸಿಯನ್ನಷ್ಟೇ ಗೋವಾಕ್ಕೆ ನಿಗದಿಪಡಿಸಿದೆ. ಆದರೆ ಕರ್ನಾಟಕ ತನ್ನೆಲ್ಲಾ ಯೋಜನೆಗಳಿಗೆ ನೀರಿನ ಅಗತ್ಯ ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸಿದ್ದರಿಂದ 13.42 ಟಿಎಂಸಿ ನೀರು ಲಭಿಸಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...