ವಾಷಿಂಗ್ಟನ್: ಚಂದ್ರನ ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಗಳ ರಾಶಿ ಇದೆ ಎಂದು ಭಾರತ ಉಡಾವಣೆ ಮಾಡಿರುವ ಚಂದ್ರಯಾನ-1 ಮಿಷನ್ ಖಾತ್ರಿ ಪಡಿಸಿದೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.
ಚಂದ್ರನ ಅಂಗಳದಲ್ಲಿ ನೀರು ಇರುವುದು ದೃಢವಾಗಿರುವುದರಿಂದ ಮುಂದಿನ ಚಂದ್ರಾನ್ವೇಷಣೆ ಯೋಜನೆಗಳು ಈ ನೀರಿನ ಮೂಲಗಳ ಹೆಚ್ಚಿನ ಅಧ್ಯಯನಕ್ಕೆ ದಾರಿ ಮಾಡಿಕೊಡಲಿದೆ. ಭವಿಷ್ಯದಲ್ಲಿ ಚಂದ್ರನಲ್ಲಿ ಮಾನವ ವಾಸದ ಸಾಧ್ಯತೆಯನ್ನು ಈ ಅಧ್ಯಯನಗಳು ತೆರೆದಿಡಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 10 ವರ್ಷ ಗಳ ಹಿಂದೆ ಚಂದ್ರಯಾನ-1 ಗಗನ ನೌಕೆ ಯನ್ನು ಉಡಾವಣೆ ಮಾಡಿತ್ತು. ಈ ನೌಕೆಯ ಅನ್ವೇಷಣೆ ಬಗ್ಗೆ ನಾಸಾದ ವಿಜ್ಞಾನಿಗಳು ಬರೆದ ವಿಶ್ಲೇಷಣಾತ್ಮಕ ಲೇಖನವನ್ನು ಪಿಎನ್ಎಎಸ್ ನಿಯತ ಕಾಲಿಕೆ ಪ್ರಕಟಿಸಿದೆ. ಈ ಲೇಖನದಲ್ಲಿ ವಿಜ್ಞಾನಿ ಗಳು, ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಚ್ಚಿನ ಮಂಜುಗಡ್ಡೆಗಳ ಆಕರ ಇವೆ. ಉತ್ತರ ಧ್ರುವದಲ್ಲಿ ಮಂಜುಗಡ್ಡೆಗಳು ವಿರಳವಾಗಿವೆ ಎಂದು ಹೇಳಿದ್ದಾರೆ.
ಅರ್ಧ ದಾರಿ ಕ್ರಮಿಸಿದ ಇನ್ಸೈಟ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮಂಗಳ ಗ್ರಹದ ಅನ್ವೇಷಣೆ ಗಾಗಿ 107 ದಿನಗಳ ಹಿಂದೆ ಉಡಾವಣೆ ಮಾಡಿರುವ ‘ಇನ್ಸೈಟ್’ ಗಗನ ನೌಕೆ ಅರ್ಧ ದಾರಿ (27.70 ಕೋಟಿ ಕಿ.ಮೀ.) ಕ್ರಮಿಸಿದ್ದು, ಇನ್ನು 98 ದಿನಗಳಲ್ಲಿ ಅಂಗಾರಕನ ಅಂಗಳದ ಎಲಿಸಿಯಂ ಪ್ಲಾನಿಟಿಯಾ ವಲಯದಲ್ಲಿ ಇಳಿಯಲಿದೆ. -ಪಿಟಿಐ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ