ನವದೆಹಲಿ: ರಾಜಧಾನಿ ದೆಹಲಿ ಹೃದಯಭಾಗದಲ್ಲಿ ನಿರ್ಮಾಣ ಗೊಂಡಿರುವ ‘ಸರ್ ಎಂ. ವಿಶ್ವೇಶ್ವರಯ್ಯ ಮೋತಿಭಾಗ್ ಮೆಟ್ರೋ ರೈಲು ನಿಲ್ದಾಣ’ದಲ್ಲಿ ಸೋಮವಾರ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ನಿಲ್ದಾಣಕ್ಕೆ ಕರ್ನಾಟಕದ ಸಾಧಕರ ಹೆಸರಿಡಬೇಕೆಂಬ ದೆಹಲಿ ಕರ್ನಾಟಕ ಸಂಘದ ಅವಿರತ ಶ್ರಮಕ್ಕೆ ಫಲ ಸಿಕ್ಕಂತಾಗಿದೆ.
ಕೇಂದ್ರ ಮೆಟ್ರೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪೂರಿ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದರು. ಇದೊಂದು ಐತಿಹಾಸಿಕ, ಸ್ಮರಣೀಯ ಕ್ಷಣ ಎಂದ ಅನಂತ ಕುಮಾರ್, ವಿಶ್ವದ 70ಕ್ಕೂ ಹೆಚ್ಚು ನೀರಾವರಿ ಯೋಜನೆಗಳ ಹರಿಕಾರರು ವಿಶ್ವೇಶ್ವರಯ್ಯ. ಅವರ ಹೆಸರಿನ ಮೆಟ್ರೋ ನಿಲ್ದಾಣ ರಾಜಧಾನಿಯಲ್ಲಿ ಇರುವುದು ಕನ್ನಡಿಗರೆಲ್ಲರ ಹೆಮ್ಮೆ ಎಂದರು.
ವೆಂಕಯ್ಯನಾಯ್ಡು ನೆರವು: ದೆಹಲಿಯ ಆರ್.ಕೆ. ಪುರಂ ಬಳಿಯ ದೆಹಲಿ ಕರ್ನಾಟಕ ಸಂಘಕ್ಕೆ ಅಂಟಿಕೊಂಡಂತೆ ಮೆಟ್ರೋ ನಿಲ್ದಾಣ ನಿರ್ವಣಗೊಳಿಸಲು ಯೋಜಿಸಿದ್ದರಿಂದ ಇದಕ್ಕೆ ವಿಶ್ವೇಶ್ವರಯ್ಯ ಅವರ ಹೆಸರನ್ನಿಡಬೇಕು ಎಂದು ಸಂಘದ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿ ಸಿ.ಎಂ. ನಾಗರಾಜ್ ಮತ್ತು ಪದಾಧಿಕಾರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. 2014ರಲ್ಲಿ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಗಿನ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸಂಘದ ಮನವಿ ಸ್ವೀಕರಿಸಿ, ‘ನಿಮ್ಮ ಬೇಡಿಕೆ ಈಡೇರಿಸುವುದು ನನ್ನ ಜವಾಬ್ದಾರಿ’ ಎಂಬ ಭರವಸೆ ನೀಡಿದ್ದರು. ಅನಂತಕುಮಾರ್ ಮತ್ತು ಡಿ.ವಿ. ಸದಾನಂದ ಗೌಡ ಕೂಡ ಬೇಡಿಕೆ ಈಡೇರಿಸಲು ನೆರವಾಗಿದ್ದರು. ನಿಲ್ದಾಣದ ಎದುರು ಭಾಗದಲ್ಲಿ ದೆಹಲಿ ಕರ್ನಾಟಕ ಸಂಘದ ಸದಸ್ಯರು ಯಕ್ಷಗಾನ ಪ್ರದರ್ಶಿಸಿದರು.
ರಾಣಿ ಅಬ್ಬಕ್ಕ ಪ್ರಶಸ್ತಿಗೆ ಮನವಿ
ಪೋರ್ಚುಗೀಸರ ವಿರುದ್ಧ ಹೋರಾಡಿದ್ದ ವೀರರಾಣಿ ಅಬ್ಬಕ್ಕನ ಹೆಸರಲ್ಲಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಶೌರ್ಯ ಪ್ರಶಸ್ತಿ ನೀಡಬೇಕು ಎಂದು ಅನಂತಕುಮಾರ್ಗೆ ವಸಂತ ಶೆಟ್ಟಿ ಮನವಿ ಸಲ್ಲಿಸಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿ ಮಾಡಿ ಬೇಡಿಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ