ಸುಳ್ಳು ಸುದ್ದಿಗಳ ಮೂಲಕ ಸಮಾಜ ದಲ್ಲಿ ಅಶಾಂತಿ ಹರಡಲು ಕಾರಣವಾಗುತ್ತಿರುವ ವಾಟ್ಸ್ಆಪ್ ವಿರುದ್ಧ ಕೇಂದ್ರ ಸರ್ಕಾರ ಇನ್ನಷ್ಟು ಗರಂ ಆಗಿದ್ದು, ಕಾಲಮಿತಿಯಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ ಪ್ರಚೋದನೆಗೆ ನೆರವು ನೀಡಿದ ಆರೋಪದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹಾಗೂ ವಾಟ್ಸ್ಆಪ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕ್ರಿಸ್ ಡೇನಿಯಲ್ ನಡುವಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದೆ. ಕೇಂದ್ರ ಸರ್ಕಾರದ ನೋಟಿಸ್ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿರುವ ಡೇನಿಯಲ್, 5 ದಿನಗಳವರೆಗೆ ಸರಣಿ ಸಭೆ ನಡೆಸಲಿದ್ದಾರೆ.
ಭಾರತ ಸರ್ಕಾರವು ವಾಟ್ಸ್ಆಪ್ಗೆ ಪ್ರಮುಖವಾಗಿ 4 ಸೂಚನೆ ನೀಡಿರುವುದಾಗಿ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಭಾರತದಲ್ಲಿ ಕಾನೂನು ಸಮಸ್ಯೆಯಾದಾಗ ಅಮೆರಿಕಕ್ಕೆ ಬಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ವ್ಯವಹಾರ ಮಾಡುವ ಆಸಕ್ತಿ ಇದ್ದಾಗ ಇಲ್ಲಿಯ ಕಾನೂನುಗಳಿಗೆ ಬದ್ಧವಾಗಿರಬೇಕು. ಈ ಹಿಂದೆಯೆ ತಿಳಿಸಿದಂತೆ ಸುಳ್ಳು ಸುದ್ದಿ ನಿಯಂತ್ರಣಕ್ಕೆ ತಾಂತ್ರಿಕ ಪರಿಹಾರ ಕಂಡುಕೊಳ್ಳಲೇಬೇಕು. ಇಲ್ಲವಾದಲ್ಲಿ ಭಾರತೀಯ ದಂಡ ಸಂಹಿತೆ ಪ್ರಕಾರ ಕಾನೂನು ಸುವ್ಯವಸ್ಥೆ ಹಾಳುಗೆಡವಲು ಪ್ರಚೋದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ವಾಟ್ಸ್ಆಪ್ ಸಿಇಒಗೆ ಅಂತಿಮ ಎಚ್ಚರಿಕೆ ನೀಡಲಾಗಿದೆ.
ಸುಳ್ಳು ಸುದ್ದಿಯ ಜತೆಗೆ ಅಶ್ಲೀಲ
ವಿಡಿಯೋ ಆಧರಿಸಿದ ಅಪರಾಧ ಸಂಖ್ಯೆ ಕೂಡ ಹೆಚ್ಚುತ್ತಿದೆ. ಈ ಬಗೆಗೂ ಎಚ್ಚರಿಕೆ ವಹಿಸಬೇಕು. ಭಾರತದಲ್ಲಿ ಶಿಕ್ಷಣ, ಸಂವಹನ, ಆರ್ಥಿಕ ವ್ಯವಹಾರ ಸೇರಿ ಕೆಲ ವಿಚಾರಗಳಲ್ಲಿ
ವಾಟ್ಸ್ಆಪ್ ಉತ್ತಮ ಸಾಧನೆ ಮಾಡಿದೆ. ಆದರೆ ಋಣಾತ್ಮಕ ವಿಚಾರಗಳು ದೇಶದ ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿವೆ. ಇದಕ್ಕೆ ನಿಯಂತ್ರಣ ಹೇರುವುದು ಅನಿವಾರ್ಯ ಎಂದು ಡೇನಿಯಲ್ಗೆ ತಿಳಿಸಿರುವುದಾಗಿ ರವಿಶಂಕರ್ ಪ್ರಸಾದ್ ವಿವರಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ