ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಮಕ್ಕಳಲ್ಲಿ ಮಾನಸಿಕ ಆರೋಗ್ಯದ ರಕ್ಷಣೆ

*|ಡಾ.ಬಿ.ಎಂ. ಹೆಗ್ಡೆ, ಖ್ಯಾತ ಹೃದ್ರೋಗ ತಜ್ಞರು*

ವಿದೇಶಗಳಲ್ಲಿ ಅದರಲ್ಲೂ ಅಮೆರಿಕದಂತಹ ದೇಶಗಳಲ್ಲಿ ಮಕ್ಕಳು ಗುಂಡು ಹಾರಿಸಿ ಸಹಪಾಠಿಗಳನ್ನು,
ಶಿಕ್ಷಕರನ್ನು ಕೊಲ್ಲುವುದರ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಭಾರತದಲ್ಲೂ ಅಪರೂಪಕ್ಕೆ
ಇಂತಹ ಘಟನೆಗಳು ವರದಿಯಾಗಿವೆ. ಇದು ಬಹಳ ದುಃಖ ತರುವಂತಹ ಸಂಗತಿ.
ಈ ಬಗ್ಗೆ ಸ್ವಲ್ಪ ಚಿಂತಿಸೋಣ.

ಮುದ್ದು ಮಗುವಿಗೆ ಗೊತ್ತಿರುವುದು ಪ್ರೀತಿ ಮಾತ್ರ. ಅದಕ್ಕೆ ಬೇರೇನೂ ಗೊತ್ತಿಲ್ಲ. ಅಂಥ ಮಗು
ಹೀಗೆ ಕ್ರೂರಿಯಾಗಿ ತನ್ನದೇ ಸಹಪಾಠಿಗಳನ್ನು, ತನ್ನ ಗುರುಗಳನ್ನು ಕೊಲ್ಲುವಂತಹ ಪರಿಸ್ಥಿತಿ
ಯಾಕೆ ಬಂತು? ಇದು ಯೋಚಿಸಬೇಕಾದ ಅಂಶ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ‘ಗುರುಬರ್Åಹ್ಮಾ
ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ
ಗುರವೇ ನಮಃ’, ‘ಆಚಾರ್ಯದೇವೋ ಭವ’ ಎಂದೆಲ್ಲ ಮಕ್ಕಳಿಗೆ ಹೇಳಿಕೊಡುತ್ತೇವೆ. ಆಗ ಗುರುಗಳ
ಬಗ್ಗೆ ಭಯ-ಭಕ್ತಿ ಎರಡೂ ಇತ್ತು. ಈಗ ಬಹಳ ಕಡೆಗಳಲ್ಲಿ ಅದನ್ನು ಹೇಳಿಕೊಡುವುದಿಲ್ಲ. ಹಾಗೆ
ಹೇಳಿಕೊಟ್ಟರೆ ಪ್ರತಿಗಾಮಿಗಳು ಎಂಬ ಅಪವಾದ ಎದುರಿಸಬೇಕಾಗುತ್ತದೆ.



ಈಗ ನಾವು ಬಹಳ ಮುಂದುವರಿದಿದ್ದೇವೆ ಎಂದು ಪಾಶ್ಚಾತ್ಯರು ಭಾವಿಸುತ್ತಾರೆ. ನಮಗೆ ಮಕ್ಕಳ
ಮನಸ್ಸು ಗೊತ್ತು, ನಾವು ಎಲ್ಲ ತಿಳಿದುಕೊಂಡಿದ್ದೇವೆ, ಮನಃಶಾಸ್ತ್ರ ಗೊತ್ತಿದೆ ಎಂದೆಲ್ಲ
ಹೇಳುತ್ತೇವೆ. ಹಾಗಾಗಿ ಹೊಸ ಹೊಸ ಕಾಯಿಲೆಗಳನ್ನು ಹುಟ್ಟುಹಾಕಿದ್ದೇವೆ. ಮಗು ಶಾಲೆಯಲ್ಲಿ
ಶಿಕ್ಷಕರು ಕಲಿಸಿದ್ದನ್ನು ಸರಿಯಾಗಿ ಕೇಳದಿದ್ದರೆ ಅಥವಾ ತರಗತಿಯಲ್ಲಿ ಗಮನ ಹರಿಸದಿದ್ದರೆ,
ಅದರ ಗಮನ ಬೇರೆ ಎಲ್ಲಿಯಾದರೂ ಹೋದರೆ ಅಥವಾ ಅದು ತುಂಬ ಕಷ್ಟದ ಪ್ರಶ್ನೆಯನ್ನು ಕೇಳಿದರೆ
ನಾವು ಕೂಡಲೇ ಮನಶ್ಶಾಸ್ತ್ರಜ್ಞರ ಬಳಿಗೆ ಕಳಿಸುತ್ತೇವೆ.

ಅದಕ್ಕೇ ಈಗ ಅಮೆರಿಕದಲ್ಲಿ ‘ಸ್ಕೂಲ್ ಕೌನ್ಸೆಲರ್ಸ್’ ಇದ್ದಾರೆ. ಅವರು ಈ ಮಕ್ಕಳನ್ನು
ಮಾತಾಡಿಸುತ್ತಾರೆ. ಯಾವ ಮಗು, ತನಗೆ ಶಾಲೆಗೆ ಬರಲು ಆಸಕ್ತಿಯಿಲ್ಲ ಎನ್ನುತ್ತದೆಯೋ ಅದನ್ನು
ಎ.ಡಿ.ಎಚ್.ಡಿ. ಲಕ್ಷಣಗಳಿರುವ ಮಗು ಎಂದು ಗುರುತಿಸುತ್ತಾರೆ. ಹಿಂದಿನ ಕಾಲದ ಬಹಳಷ್ಟು
ಬುದ್ಧಿವಂತರೆಲ್ಲ ಈ ಕಾಯಿಲೆಯುಳ್ಳವರೇ. ಶಾಲೆಯಲ್ಲಿ ಹೇಳಿಕೊಟ್ಟಷ್ಟನ್ನೇ ಕಲಿತರೆ ಅವನು
ಹೆಡ್ಡ, ಸ್ವತಃ ಆಲೋಚನೆ ಮಾಡಿದರೆ ಬುದ್ಧಿವಂತ. ಆದರೆ ಈಗ ಆಲೋಚನೆ ಮಾಡಿದರೆ ಆ ಮಗುವಿಗೆ
ಎ.ಡಿ.ಎಚ್.ಡಿ. ಇದೆ ಎಂದುಬಿಡುತ್ತಾರೆ. ಹಾಗಾಗಿ ಈ ಲಕ್ಷಣಗಳು ಕಾಣಿಸಿದ ಕೂಡಲೇ
ಮನಃಶಾಸ್ತ್ರಜ್ಞರ ಬಳಿಗೆ ಕಳಿಸಿಬಿಡುತ್ತಾರೆ. ಅಲ್ಲಿ ಹೋದ ತಕ್ಷಣ ಅವರು ಔಷಧ ಕೊಡುತ್ತಾರೆ.

ಅಮೆರಿಕದಲ್ಲಿ ನಡೆದ 51 ಗುಂಡಿನ ದಾಳಿಗಳನ್ನು ವಿಶ್ಲೇಷಿಸಲಾಗಿದೆ. ಹೀಗೆ ದಾಳಿ ಮಾಡಿದ
ಪ್ರತೀ ಮಗು ಕೂಡ ಈ ಎ.ಡಿ.ಎಚ್.ಡಿ.ಗೆ, ಖಿನ್ನತೆಗೆ ಔಷಧ ಸೇವಿಸುತ್ತಿತ್ತು. ಈಗ ಕೆಲವು
ದಿನಗಳ ಹಿಂದೆ 17 ಜನರನ್ನು ಕೊಂದ ಒಬ್ಬ ಹುಡುಗನು ಕೂಡ ಈ ಔಷಧ ಸೇವಿಸುತ್ತಿದ್ದ. ಅಲ್ಲದೆ
ಅಮೆರಿಕದಲ್ಲಿ ಗನ್ ಖರೀದಿಸುವುದೂ ಸುಲಭ. ಮಗುವೇ ಖರೀದಿಸದಿದ್ದರೂ ಬಹುತೇಕರ ಮನೆಗಳಲ್ಲಿ ಗನ್
ಇದ್ದೇ ಇರುತ್ತದೆ. ಮಕ್ಕಳು ತಂದೆ-ತಾಯಿಯ ಗನ್ ಹಿಡಿದುಕೊಂಡು ಶಾಲೆಗೆ ಬರುತ್ತಾರೆ. ಈ
ಪ್ರವೃತ್ತಿ ನಿಧಾನವಾಗಿ ಭಾರತಕ್ಕೂ ಬರುತ್ತಿದೆ ಎಂಬುದು ದುಃಖದ ವಿಚಾರ.
ಒಂದು ವರ್ಷದ ಹಿಂದೆ ದೆಹಲಿ ಶಾಲೆಯಲ್ಲಿ ಮನೆಯಿಂದ ಗನ್ ತಂದ ಮಗು ಹಲವರನ್ನು ಸಾಯಿಸಿತು.
ನಮ್ಮ ದೇಶದಲ್ಲಿ ಗನ್ ಖರೀದಿ ಸುಲಭವಲ್ಲ. ಇರಲಿ, ಇಷ್ಟಾದರೂ ಎ.ಡಿ.ಎಚ್.ಡಿ. ಲಕ್ಷಣ
ಕಂಡುಬಂದರೆ ಮಗುವನ್ನು ಮನೋವೈದ್ಯರ ಬಳಿಗೆ ಕಳಿಸಿ ಔಷಧ ಕೊಡುವ ಪ್ರಯತ್ನ ಮಾಡುತ್ತೇವೆ.
ಆದರೆ ಒಂದು ಸಂಗತಿಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಎಲ್ಲ ಕಾಯಿಲೆಗಳು ಇದ್ದರೂ
ಅದು ಇರುವುದು ಮನಸ್ಸಿನಲ್ಲಿ. ಆದರೆ ಈ ಮನಸ್ಸು ಎಂಬುದು ಮಿದುಳು ಅಥವಾ ಯಾವುದೇ ಒಂದು
ನಿರ್ದಿಷ್ಟ ಅಂಗದಲ್ಲಿಲ್ಲ. ಹೀಗಾಗಿ ನಾವು ಕೆಮಿಕಲ್ ಮದ್ದುಗಳನ್ನು ನೀಡಿ ಮನಸ್ಸನ್ನು
ಸರಿಪಡಿಸಲು ಸಾಧ್ಯವಿಲ್ಲ. ಮನಸ್ಸು ಎಂದರೆ ನಮ್ಮ ಪ್ರಜ್ಞೆ (ಟ್ಞಠ್ಚಜಿಟ್ಠಠ್ಞಛಿಠಠ).
ಅದಕ್ಕೆ ಯಾವುದೇ ಕೆಮಿಕಲ್ ಹೋಗುವುದಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....