ಸಕ್ಕರೆಯ ಪ್ರಮಾಣ ಈಗ 100 ಇದ್ದರೆ ಇನ್ನೊಂದು ಗಂಟೆಯಲ್ಲಿ 100 ಆಗಬೇಕು. ಮತ್ತೊಂದು ಗಂಟೆಯಲ್ಲಿ 120 ಆಗಬೇಕು. ರಕ್ತದೊತ್ತಡವೂ ಹಾಗೆಯೇ. ಎಲ್ಲರಿಗೂ ಒಂದೇ ರೀತಿ ಇರಬಾರದು. ಅದು ಕೂಡ ಏರಿಳಿತವಾಗುತ್ತಿರಬೇಕು. ಆದರೆ ಈಗಿನ ಎಷ್ಟೋ ಡಾಕ್ಟರ್ಗಳು ರಕ್ತದೊತ್ತಡದಲ್ಲಿ ತುಸು ಏರಿಕೆಯಾದರೂ ಸಂಖ್ಯೆಯನ್ನು ತೋರಿಸಿ ಹೆದರಿಸುತ್ತಾರೆ. ಇವೆಲ್ಲ ರೇಖಾನುಕ್ರಮದ ಅಂಕಿಅಂಶಗಳು (ಜ್ಞಿಛಿಚ್ಟ ಠಠಿಚಠಿಜಿಠಠಿಜ್ಚಿಠ). ಬಹಳಷ್ಟು ಸಲ ಈ ರಿಪೋರ್ಟ್ಗಳಿಗೆ ಅರ್ಥವಿಲ್ಲ. ಇದರಿಂದ ಸುಮ್ಮನೆ ಮನಸ್ಸನ್ನು ಹಾಳುಮಾಡಿಕೊಳ್ಳುತ್ತೇವೆ. ಇಂಥದ್ದಕ್ಕೆ ವೈದ್ಯಜನ್ಯ ಕಾಯಿಲೆ (ಜಿಚಠ್ಟಿಟಜಛ್ಞಿಜ್ಚಿ ಛಜಿಠಛಿಚಠಛಿ) ಎನ್ನುತ್ತಾರೆ. ಇದರಿಂದ ನಾವು ಬಳಲಬೇಕಾಗುತ್ತದೆ. ಕಾಯಿಲೆ ಇದ್ದ ವ್ಯಕ್ತಿಗೆ ಸಂತೋಷದಿಂದ ಔಷಧ ನೀಡಬಲ್ಲೆ, ಆದರೆ ತನಗೆ ಕಾಯಿಲೆ ಇದೆ ಎಂದು ಭಾವಿಸಿಕೊಂಡ ಮನುಷ್ಯನಿಗೆ ಔಷಧ ಕೊಡುವುದು ಬಹಳ ಕಷ್ಟ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ.
ಒಮ್ಮೆ ಪ್ರಸಿದ್ಧ ವಿಮಾನಯಾನ ಸಂಸ್ಥೆಯ ಹಿರಿಯ ಕಮಾಂಡರ್ ಒಬ್ಬರು ನನ್ನನ್ನು ಭೇಟಿಯಾದರು. ಅವರಿಗೆ ವೃತ್ತಿಯಲ್ಲಿ ಬಡ್ತಿ ಸಿಗಬೇಕೆಂದರೆ ನಿಯತವಾಗಿ ಆರೋಗ್ಯ ಪರೀಕ್ಷೆ ಮಾಡಿಸಬೇಕಾಗುತ್ತದೆ. ಹೀಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡರು. ಹೀಗೆ ಸ್ಟ್ರೆಸ್ ಟೆಸ್ಟ್, ಆಂಜಿಯೋಗ್ರಾಮ್ ಮುಂತಾದವುಗಳನ್ನೆಲ್ಲ ಮಾಡಿಸಿದರು. ‘ಎರಡು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ಬೈಪಾಸ್ ಸರ್ಜರಿ ಮಾಡಿಸಿಕೊಂಡು ಬನ್ನಿ. ಅಷ್ಟಾದರೆ ಮಾತ್ರ ಸರ್ಟಿಫೈ ಮಾಡುತ್ತೇನೆ’ ಎಂದರು ವೈದ್ಯರು.
ಈ ರಕ್ತನಾಳ ಹೆಪ್ಪುಗಟ್ಟುವುದಕ್ಕೂ ಹೃದಯಾಘಾತಕ್ಕೂ ಯಾವ ಸಂಬಂಧವೂ ಇಲ್ಲ. ಇರಲಿ. ಐದು ಲಕ್ಷ ಖರ್ಚು ಮಾಡಿ ಬೈಪಾಸ್ ಸರ್ಜರಿ ಮಾಡಿಸಿಕೊಂಡು ಬಂದ ನಂತರ ಆ ವ್ಯಕ್ತಿಗೆ ಹೃದಯಾಘಾತ ಸಂಭವಿಸಿತು. ಅದು ಗುಣವಾದ ಮೇಲೆ ಕೆಲಸಕ್ಕೆ ಹೋದರೆ ಅಲ್ಲಿ, ‘ನಿಮ್ಮ ಛ್ಜಿಛ್ಚಿಠಿಜಿಟ್ಞ fಚ್ಚಠಿಜಿಟ್ಞ (ಹೃದಯದಿಂದ ರಕ್ತ ಸಂಚಾರವಾಗುವ ಪ್ರಮಾಣ) ಕಡಿಮೆ ಇದೆ. ಹಾಗಾಗಿ ನಿಮಗೆ ವಿಮಾನ ಚಾಲನೆ ಸಾಧ್ಯವಿಲ್ಲ. ಅದನ್ನು ಹೆಚ್ಚಿಸಿಕೊಂಡು ಬಂದರೆ ವಿಮಾನಚಾಲನೆ ಮಾಡಬಹುದು’ ಎಂದರು. ಕಮಾಂಡರ್ ಪುಸ್ತಕದಲ್ಲಿ ಆ ಪ್ರಮಾಣ 50 ಆಗಬೇಕು.
49 ಇದ್ದರೂ ವಿಮಾನಚಾಲನೆಗೆ ಅನುಮತಿ ಕೊಡುವುದಿಲ್ಲ. ಹೀಗಾಗಿ ಆ ಕಮಾಂಡರ್ ನನ್ನ ಬಳಿ ಬಂದರು. ‘ನಾನು ಸಾಕಷ್ಟು ಕಡೆಗಳಲ್ಲಿ ಪರೀಕ್ಷೆ ಮಾಡಿಸಿದೆ. ಎಲ್ಲೂ ಏರಿಕೆ ಸಾಧ್ಯವಾಗಲಿಲ್ಲ. ಕೊನೆಗೆ ನಿಮ್ಮ ಬಳಿ ಬಂದರೆ ಸಾಧ್ಯ ಎಂದು ಯಾರೋ ಹೇಳಿದರು. ಅದಕ್ಕೇ ಬಂದೆ’ ಎಂದರು. ‘ನಿಮ್ಮ ಹೃದಯಕ್ಕೆ ಏನಾದರೂ ತೊಂದರೆ ಆಗಿದ್ದರೆ ನಾನು ಪ್ರಯತ್ನಿಸುತ್ತೇನೆ’ ಎಂದು ಹೇಳಿ ಆ ನಿಟ್ಟಿನಲ್ಲಿ ಚಿಕಿತ್ಸೆ ನಡೆಸಿದೆ. ಕೊನೆಗೆ
ಆ ಪ್ರಮಾಣ 49ಕ್ಕೆ ಬಂದು ತಲುಪಿತು. ಆ ವಿವರವನ್ನು ಒಯ್ದರೆ, ಸಂಖ್ಯೆ ಐವತ್ತಕ್ಕೆ ಏರಲಿಲ್ಲ ಎಂಬ ಕಾರಣಕ್ಕೆ ವಿಮಾನಯಾನ ಸಂಸ್ಥೆಯವರು ಮತ್ತೆ ತಿರಸ್ಕರಿಸಿದರು.
‘ರಕ್ತ ಸಂಚಾರವಾಗುವ ಪ್ರಮಾಣ ಎನಿಸಿದ 49ಕ್ಕೂ 50ಕ್ಕೂ ಏನೂ ವ್ಯತ್ಯಾಸವಿಲ್ಲ. ಅದು 50 ಇದ್ದರೂ ಹೃದಯಾಘಾತ ಆಗಬಹುದು. 49 ಆಗಿದ್ದರೂ ಹೃದಯಾಘಾತ ಆಗಬಹುದು. ಈ ವ್ಯಕ್ತಿಯನ್ನು ನೀವು ಕಮಾಂಡರ್ ಮಾಡದಿದ್ದರೆ ಪರವಾಗಿಲ್ಲ. ಕೋ ಪೈಲೆಟ್ ಮಾಡಬಹುದು. ಏನೂ ತೊಂದರೆ ಇಲ್ಲ. ಇವರನ್ನೇ ಕಮಾಂಡರ್ ಮಾಡಿದರೆ 50 ಇದ್ದ ಇನ್ನೊಬ್ಬ ಪೈಲಟ್ಗೂ ಒತ್ತಡ ಆಯಾಸಗಳಿಂದ ಹೃದಯಾಘಾತ ಸಂಭವಿಸಬಹುದು. ಹಾಗಾಗಿ ದಯವಿಟ್ಟು ಈ ವ್ಯಕ್ತಿಯ ಕೆಲಸವನ್ನು ಕಳೆಯಬೇಡಿ. ಇದು ಅನ್ಯಾಯ’ ಎಂದು ನಾನು ಆ ಸಂಸ್ಥೆಗೆ ಒಂದು ಕಾಗದ ಬರೆದೆ.
ಅದಕ್ಕೆ ಆ ಸಂಸ್ಥೆಯವರೂ ಒಪ್ಪಿ ಆ ವ್ಯಕ್ತಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಆ ವ್ಯಕ್ತಿ ಬಂದು ಅಕ್ಷರಶಃ ಕಾಲು ಹಿಡಿದ ಎನ್ನಬೇಕು. ಏಕೆಂದರೆ ಆ ವ್ಯಕ್ತಿ ವಿಮಾನಚಾಲನೆ ಮಾಡದಿದ್ದರೆ ಸಿಗುವುದ ಕೇವಲ ಮೂವತ್ತು ಸಾವಿರ ರೂ. ಒಮ್ಮೆ ಪೈಲಟ್ ಸೀಟಿನಲ್ಲಿ ಕುಳಿತುಕೊಂಡ ಎಂದಾದರೆ ನಾಲ್ಕು ಲಕ್ಷ ರೂ ಸಿಗುತ್ತದೆ. ವ್ಯತ್ಯಾಸ ಹೇಗಿದೆ ನೋಡಿ? ಹೀಗೆ ಉತ್ಪ್ರೇಕ್ಷಿತ ರಿಪೋರ್ಟ್ಗಳನ್ನು ನಂಬಿ ಎಷ್ಟೋ ಸಲ ಕಷ್ಟಕ್ಕೀಡಾಗಬೇಕಾಗುತ್ತದೆ. ಎಲ್ಲ ಹಣಕ್ಕಾಗಿ. ಹೀಗಾಗಿ ರಿಪೋರ್ಟ್ ನಂಬಿ ಚಿಕಿತ್ಸೆ ಪಡೆಯುವ ಮುನ್ನ ಯೋಚಿಸಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ