ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸುದ್ದಿಸಂಸ್ಥೆ ಎಎನ್ಐಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಹಲವು ಆರೋಪಗಳಿಗೆ ಉತ್ತರ ನೀಡಿದ್ದಾರೆ. ಲಿಂಚಿಂಗ್, ಎನ್ಆರ್ಸಿ ಸಹಿತ ಹಲವು ಪ್ರಚಲಿತ ವಿದ್ಯಮಾನ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂದರ್ಶನದ ಪ್ರಮುಖ ಅಂಶಗಳನ್ನು ಅವರದೇ ಮಾತಿನಲ್ಲಿ ಓದಿ…..
ಹೊಸ ಉದ್ಯೋಗ ಸೃಷ್ಟಿ
ಕಳೆದ ಒಂದು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಹೊಸ ಉದ್ಯೋಗ ಸೃಷ್ಟಿಯಾಗಿದೆ. ಮುದ್ರಾ ಮತ್ತಿತರ ಯೋಜನೆಯಲ್ಲಿ 12 ಕೋಟಿಗೂ ಅಧಿಕ ಜನರಿಗೆ ಸಾಲ ವಿತರಣೆ ಮಾಡಲಾಗಿದೆ. ಭಾರತದ ಅರ್ಥ ವ್ಯವಸ್ಥೆ ತ್ವರಿತ ಗತಿಯಲ್ಲಿ ಪ್ರಗತಿ ಕಾಣುತ್ತಿದೆ. ರಸ್ತೆ, ರೈಲ್ವೆ, ವಿದ್ಯುತ್ ಉತ್ಪಾದನೆ ಮತ್ತಿತರ ಕ್ಷೇತ್ರಗಳಲ್ಲಿ ದಾಖಲೆಯ ಹೂಡಿಕೆಯಾಗಿದೆ. ವಿದೇಶಿ ಹೂಡಿಕೆಯಲ್ಲೂ ವ್ಯಾಪಕ ಏರಿಕೆ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಹೊಸ ಉದ್ಯೋಗ ಸೃಷ್ಟಿಯಲ್ಲೂ ಏರಿಕೆ ಕಂಡುಬರುತ್ತಿದೆ. ಉದ್ಯೋಗಕ್ಕೆ ಸಂಬಂಧಿಸಿದ ಸಂಪೂರ್ಣ ಡೇಟಾ ಇನ್ನೂ ಸಿಕ್ಕಿಲ್ಲ. ಇದನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹಳೆಯ ಡೇಟಾಗಳನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ.
ಮೈತ್ರಿಕೂಟಕ್ಕೆ ಬಲ
– ಎನ್ಡಿಎ ಮೈತ್ರಿಕೂಟ ಇನ್ನಷ್ಟು ಬಲಗೊಂಡಿದೆ. ಇತ್ತೀಚೆಗೆ ನಡೆದ ಅವಿಶ್ವಾಸ ಮತ ಮಂಡನೆಗೆ ಸೋಲಾಗಿರುವುದು ಹಾಗೂ ರಾಜ್ಯಸಭೆಯ ಉಪಸಭಾಪತಿ ಚುನಾವಣೆಯಲ್ಲಿ ಎನ್ಡಿಎ ಗೆಲುವು ಸಾಧಿಸಿರುವುದು ಇದಕ್ಕೆ ಸಾಕ್ಷಿ. ಯಾವ ಮೈತ್ರಿಕೂಟ ಹೆಚ್ಚು ಬಲವಾಗಿದೆ, ಯಾವ ಮೈತ್ರಿಕೂಟ ದುರ್ಬಲವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ. ವಿಪಕ್ಷಗಳ ಮಹಾಮೈತ್ರಿಕೂಟಕ್ಕೆ ದೇಶದ ಅಭಿವೃದ್ಧಿ ಬದಲು ಕುಟುಂಬ ರಾಜಕಾರಣ ಮುಖ್ಯವಾಗಿದೆ. ಇದು ಚುನಾವಣೆಗೆ ಮುನ್ನ ಒಡೆಯುತ್ತದೆಯೇ ಅಥವಾ ನಂತರ ಒಡೆಯುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.
ಮೀಸಲಾತಿ ಅಂತ್ಯ ಇಲ್ಲ
ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಇನ್ನೂ ಈಡೇರಿಲ್ಲ. ಇದನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ. ಮೀಸಲಾತಿ ಜಾರಿ ಇದಕ್ಕೆ ಪೂರಕವಾಗಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಯಶಸ್ವಿಯಾಗಬೇಕಿದ್ದರೆ ಬಡವರು, ಹಿಂದುಳಿದವರು, ದಲಿತರು, ಬುಡಕಟ್ಟು ಜನರ ಅಭಿವೃದ್ಧಿಯಾಗಬೇಕು. ಪ್ರಮುಖ ಚುನಾವಣೆ ಎದುರಾಗುತ್ತಿರುವ ಸಂದರ್ಭದಲ್ಲಿ ಕೆಲವರು ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುತ್ತಾರೆ. ಮೀಸಲಾತಿ ವ್ಯವಸ್ಥೆ ನಿಲ್ಲಿಸಲಾಗುವುದಿಲ್ಲ. ಇದರಲ್ಲಿ ಯಾವುದೇ ಸಂದೇಹ ಬೇಡ.
ರಾಹುಲ್ ಗಾಂಧಿ ಅಪ್ಪುಗೆ
ಸಂಸತ್ನಲ್ಲಿ ರಾಹುಲ್ ಗಾಂಧಿ ನನ್ನನ್ನು ಅಪ್ಪಿಕೊಂಡಿದ್ದು ಬಾಲಿಶತನ ಹೌದೊ, ಅಲ್ಲವೊ ಎಂಬುದನ್ನು ಜನರು ನಿರ್ಧರಿಸುತ್ತಾರೆ. ಅವರು ಕಣ್ಣು ಮಿಟುಕಿಸಿದ ದೃಶ್ಯ ನೋಡಿದ ಎಲ್ಲರಿಗೂ ಇದು ಅರ್ಥವಾಗುತ್ತದೆ. ನಾನು ಈ ದೇಶಕ್ಕಾಗಿ ಕೆಲಸ ಮಾಡುವ ‘ಕಾಮ್ಾರ್’. ಆದರೆ, ಅವರ (ರಾಹುಲ್ ಗಾಂಧಿ) ಶೈಲಿಯೇ ಬೇರೆ.
ಲಿಂಚಿಂಗ್ ಖಂಡನೀಯ
ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಲಿಂಚಿಂಗ್(ಗುಂಪು ಹಲ್ಲೆ ಮತ್ತು ಹತ್ಯೆ)ನಂಥ ಪ್ರಕರಣಗಳು ಖಂಡನೀಯ. ಸಮಾಜದಲ್ಲಿ ಶಾಂತಿ ಹಾಗೂ ಒಗ್ಗಟ್ಟು ನೆಲೆಸು ವಂತಾಗಲು ನಾಯಕರು ರಾಜಕೀಯ ಚೌಕಟ್ಟಿನಿಂದ ಹೊರಬಂದು ಕೆಲಸಮಾಡಬೇಕು. ಇಂಥ ವಿಚಾರವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ.
2019ರ ಚುನಾವಣೆಯಲ್ಲಿ ಪ್ರಮುಖ ಅಂಶಗಳು
ಅಭಿವೃದ್ಧಿಯೇ ಪ್ರಮುಖ ಕಾರ್ಯಸೂಚಿಯಾಗಿರಲಿದೆ. ತ್ವರಿತ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇದರ ಆಧಾರದ ಮೇಲೆ ಮತಯಾಚನೆ, ಪ್ರಚಾರ ನಡೆಸಲಾಗುತ್ತದೆ. 2019ರ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ.
ಎನ್ಆರ್ಸಿ ವಿವಾದ
ನಿಜವಾದ ಭಾರತೀಯರು ದೇಶ ತೊರೆಯುವ ಅಗತ್ಯವಿಲ್ಲ. ಕಾನೂನು ಪ್ರಕಾರ ಎಲ್ಲರಿಗೂ ಅವಕಾಶ ನೀಡಲಾಗುವುದು. ಯಾರಿಗೆ ಜನರ ಬೆಂಬಲ ಕಳೆದುಕೊಳ್ಳುವ ಭಯ ಇರುತ್ತದೆಯೋ? ತಮ್ಮ ಮೇಲೆ ನಂಬಿಕೆ ಇರುವುದಿಲ್ಲವೋ ಅವರು ಹಿಂಸಾಚಾರ, ದೇಶ ಒಡೆಯುವ,ಅಂತರ್ಯುದ್ಧದ ಬಗ್ಗೆ ಮಾತನಾಡುತ್ತಾರೆ. ಅವರಿಗೆ (ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ) ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ