ನವದೆಹಲಿ: ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ವಿಧೇಯಕವನ್ನು ಲೋಕಸಭೆ ಗುರುವಾರ ಅವಿರೋಧವಾಗಿ ಅಂಗೀಕರಿಸಿದೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಾತಿ ದಾಳಗಳನ್ನು ಉರುಳಿಸುತ್ತಿರುವ ಆಡಳಿತಾರೂಢ ಬಿಜೆಪಿಗೆ ಹಿಂದುಳಿದ ವರ್ಗಗಳ ಆಯೋಗದ ಸಾಂವಿಧಾನಿಕ ಸ್ಥಾನಮಾನವು ಇನ್ನೊಂದು ಮುನ್ನಡೆಯಾಗಿದೆ.
ಕಳೆದ ವರ್ಷ ರಾಜ್ಯಸಭೆಯಲ್ಲಿ ಕೆಲ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮತ್ತೆ ಲೋಕಸಭೆಗೆ ಕಳುಹಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಅವಿರೋಧವಾಗಿ ಸಂವಿಧಾನ ತಿದ್ದುಪಡಿಯ ವಿಧೇಯಕಕ್ಕೆ ಮನ್ನಣೆ ನೀಡಲಾಗಿದೆ. ರಾಜ್ಯಸಭೆಯಲ್ಲಿ ಮಾಡಿದ್ದ ಎಲ್ಲ ತಿದ್ದುಪಡಿಗಳನ್ನು ಕೈಬಿಡಲಾಗಿದೆ. ಈ ವಿಧೇಯಕದ ಪರವಾಗಿ 406 ಮತಗಳು ಬಿದ್ದಿವೆ. ಈ ಸಂವಿಧಾನ ತಿದ್ದುಪಡಿಯಿಂದ ಹಿಂದುಳಿದ ಆಯೋಗಕ್ಕೂ ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯೋಗಕ್ಕೆ ಇರುವಂತೆಯೇ ಸಾಂವಿಧಾನಿಕ ಮಾನ್ಯತೆ ಸಿಗಲಿದೆ. ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ ಸಿಗಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ