ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಕೈ ಹಿಡಿಯುವ ಸಂವಹನ ಕಲೆ, | ಡಾ.ಕೆ.ಪಿ. ಪುತ್ತೂರಾಯ

ಆಂಗ್ಲ ಭಾಷೆಯಲ್ಲಿ ಇದನ್ನೇ ಕಮ್ಯುನಿಕೇಷನ್ ಸ್ಕಿಲ್ ಅಂತಾರೆ. ಮನುಷ್ಯ ಸಂಘಜೀವಿ. ಅಂದ
ಮೇಲೆ ಇತರರ ಜತೆಗಿನ ಸಂಭಾಷಣೆ ಅವಶ್ಯಕ ಹಾಗೂ ಅನಿವಾರ್ಯ. ತನ್ನ ಅನಿಸಿಕೆಗಳನ್ನು, ಮಾತುಗಳ
ಮೂಲಕ ಸಮರ್ಪಕವಾಗಿ ಒಬ್ಬರು ಇನ್ನೊಬ್ಬರಿಗೆ ರವಾನಿಸುವ ಕಲೆಯನ್ನೇ ಸಂವಹನ ಎನ್ನಬಹುದು. ಇದರ
ಕೊರತೆಯನ್ನು ಕಮ್ಯುನಿಕೇಷನ್ ಗ್ಯಾಪ್ ಎನ್ನಲಾಗುತ್ತದೆ.

ಇದಕ್ಕೊಂದು ಒಳ್ಳೆಯ ಉದಾಹರಣೆ ಹೀಗಿದೆ. ಒಮ್ಮೆ ನಮ್ಮ ಮನೆಯ ನಾಯಿಯ ಎರಡು ಮರಿಗಳ ಪೈಕಿ
ಒಂದನ್ನು ನನ್ನ ಗೆಳೆಯನಿಗೆ ಕೊಟ್ಟೆ. ತಿಂಗಳಾದರೂ ಕೊಟ್ಟ ನಾಯಿಮರಿ ಹೇಗಾಗಿದೆಯೆಂದು ನನಗೆ
ತಿಳಿಯಲೇ ಇಲ್ಲ. ಒಂದು ದಿನ ವಾಕ್ ಮಾಡುವಾಗ, ಆ ಮನೆಯ ಕೆಲಸದಾಕೆ ಸಿಕ್ಕಿದಳು. ‘ನಾನು ಕೊಟ್ಟ
ನಾಯಿ ಮರಿ ಹೇಗಿದೆ?’ ಎಂದು ಕೇಳಿದ್ದಕ್ಕೆ ಆಕೆ, ‘ನಾಯಿಮರಿ ಬಲು ಚೆನ್ನಾಗಿದೆ. ದಿನಾ ನಮ್ಮ
ಜತೆ ಆಟವಾಡುತ್ತಿರುತ್ತೆ. ಆ ನಾಯಿಮರಿ ಮುಖ ನೋಡಿದಾಗಲೆಲ್ಲ ನಿಮ್ಮ ಮುಖ ನೆನಪಾಗುತ್ತೆ’
ಅನ್ನೋದೆ.

‘ದಿನವೂ ನಾಯಿ ಮರಿ ನೋಡಿದಾಗ ನಿಮ್ಮನ್ನು ಆಗಾಗ ನೆನೆಸಿಕೊಳ್ಳುತ್ತೇವೆ’ ಎಂದು
ಹೇಳಬೇಕಿದ್ದ ಆಕೆ ಸಂವಹನದ ಕೊರತೆಯಿಂದ ಹೀಗೆ ಹೇಳಿದಳು.

ಹೇಳಿದ್ದೊಂದು, ಕೇಳಿದ್ದೊಂದು, ಅರ್ಥೈಸಿಕೊಂಡದ್ದು ಮತ್ತೊಂದು. ಆದರೆ ಅದು ಸಂವಹನದ ಕೊರತೆಗೆ
ಎಡೆಮಾಡಿಕೊಡುತ್ತದೆ. ಮಾತು ಬೇರೆ; ಮಾತುಕತೆ ಬೇರೆ. ನಾವು ಹಲವರ ಜತೆ ಆಗಾಗ
ಮಾತನಾಡುತ್ತೇವೆ; ಅಂತೆಯೇ ಇತರರೂ ನಮ್ಮ ಜತೆ ಮಾತನಾಡುತ್ತಿರುತ್ತಾರೆ. ಆದರೆ ಎಷ್ಟೋ
ಮಾತುಕತೆಗಳು ಫಲಪ್ರದವಾಗುವುದಿಲ್ಲ. ಕಾರಣ ಒಂದೋ ಅವು ಏಕಮುಖವಾಗಿರುತ್ತವೆ. ಇಲ್ಲವೇ
ಸಂಪೂರ್ಣ ಸಮರ್ಪಕವಾಗಿರುವುದಿಲ್ಲ.

ಸಂವಹನವೆಂಬುದು ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಇಲ್ಲವೇ ಓರ್ವ ವ್ಯಕ್ತಿಯಿಂದ
ಹಲವಾರು ವ್ಯಕ್ತಿಗಳ ನಡುವೆ ನಡೆಯುವ ಒಂದು ಪ್ರಕ್ರಿಯೆ. ಸಂವಹನದ ಅತ್ಯಮೂಲ್ಯ ಸಾಧನವೆಂದರೆ
ಮಾತು. ಮಾತುಗಳನ್ನು ಆಡಿದಾತ, ತನ್ನ ಮಾತುಗಳನ್ನು ಯಾವ ಅರ್ಥ-ಉದ್ದೇಶ-ಭಾವನೆಗಳಿಂದ
ಆಡಿರುತ್ತಾರೋ ಅವೆಲ್ಲವೂ ಕೇಳುಗ/ಕೇಳುಗರಿಗೂ ರವಾನೆಯಾದರೆ, ಅದನ್ನು ಒಳ್ಳೆಯ
ಸಂವಹನವೆನ್ನಬಹುದು. ಹೀಗಾಗದಿದ್ದರೆ ಅದು ವಿಫಲ ಸಂವಹನವಾಗಿ, ಅನೇಕ ತೊಂದರೆಗಳಿಗೂ
ಕಾರಣವಾಗಬಹುದು. ಮಾತ್ರವಲ್ಲ, ಕೆಲವೊಮ್ಮೆ ಸಂಬಂಧಗಳನ್ನೇ ಕೆಡಿಸಬಹುದು. ಒಮ್ಮೊಮ್ಮೆ ನಾವು
ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಲು ಅಸಮರ್ಥರಾಗುತ್ತೇವೆ. ಇಲ್ಲವೆ ಹೇಳಬೇಕಾದುದಕ್ಕಿಂತ
ಕೊಂಚ ಜಾಸ್ತಿಯೋ ಇಲ್ಲವೆ ಕಡಿಮೆನೋ ಹೇಳಿಬಿಟ್ಟಿರುತ್ತೇವೆ. ಪರಿಣಾಮ ಇವೆಲ್ಲವೂ
ಅನರ್ಥ-ಅಚಾತುರ್ಯಗಳಲ್ಲಿ ಕೊನೆಗೊಳ್ಳುತ್ತವೆ. ಹೀಗಾಗದಂತೆ ಎಲ್ಲರೂ ಎಲ್ಲ ಕಾಲದಲ್ಲಿ ಎಚ್ಚರ
ವಹಿಸಬೇಕಾಗುತ್ತದೆ. ಸಮರ್ಪಕ ಸಂವಹನ ಏರ್ಪಡಬೇಕಾದರೆ, ಕೆಲವು ಅಂಶಗಳನ್ನು
ಅನುಸರಿಸಬೇಕಾಗುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ.

ಉದ್ರಿಕ್ತ ವಾತಾವರಣದಲ್ಲಿ ಉದ್ವಿಗ್ನ ಮನೋಸ್ಥಿತಿಯಲ್ಲಿ ಸಂವಹನ ಕೈಗೆತ್ತಿಕೊಳ್ಳಬಾರದು.
ಮನಸ್ಸು ತಿಳಿಯಾಗಿರಬೇಕು; ಶಾಂತವಾಗಿರಬೇಕು.

ಐಠಿ ಜಿಠ ಜಿಞಟಟ್ಟಠಿಚ್ಞಠಿ ಡಿಜಚಠಿ ಢಟ್ಠ ಠಚಢ; ಚ್ಠಿಠಿ ಛಿಟ್ಠಿಚ್ಝ್ಝ ಜಿಞಟಟ್ಟಠಿಚ್ಞಠಿ,
ಜಟಡಿ ಢಟ್ಠ ಠಚಢ ಜಿಠಿ ಎಂಬ ಮಾತಿನಂತೆ, ಏನನ್ನು ಹೇಳುತ್ತೇವೆ ಎನ್ನುವಷ್ಟೆ
ಹೇಳಬೇಕಾದುದನ್ನು ಹೇಗೆ ಹೇಳುತ್ತೇವೆ ಎನ್ನೋದೂ ಮುಖ್ಯವಾದ ವಿಷಯ. ಹೇಳುವ ಮಾತುಗಳು
ಮಿತವಾಗಿರಬೇಕು, ನೇರವಾಗಿರಬೇಕು; ಸ್ಪಷ್ಟವಾಗಿರಬೇಕು. ಅನಾವಶ್ಯಕ ಇಲ್ಲವೆ ನಾಟಕೀಯವಾದ
ಮಾತುಗಳು ಕೇಳುಗನನ್ನು ಕಿರಿಕಿರಿಗೊಳಿಸುತ್ತವೆ. ಅಂತೆಯೇ ಮಾತುಗಳು ಅವಶ್ಯಕತೆಗಿಂತ
ಅತಿಯಾದರೆ ಅದು ಅನಾವಶ್ಯಕವೂ ಆದೀತು, ಮಾತ್ರವಲ್ಲ. ಎಲ್ಲರ ಸಮಯವನ್ನು ವ್ಯರ್ಥಗೊಳಿಸೀತು.
ಹಾಗೂ ಕೇಳುವವನ ತಾಳ್ಮೆಯೂ ಕಳೆದುಹೋಗಿ, ಆತ ಕೇಳಿಸಿಕೊಂಡಿದ್ದನ್ನು ಮರೆತು ಹೋಗುವ
ಸಂದರ್ಭವನ್ನು ಉಂಟುಮಾಡೀತು.

ಇದೇ ರೀತಿ ಸಂವಹನದ ಕಾಲದಲ್ಲಿ ನಮ್ಮ ಮಾತುಗಳು ನಯವಾಗಿರಬೇಕು. ಅಂತೆಯೇ ಸುತ್ತಿ-ಬಳಸಿ
ಮಾತನಾಡುವ ರೀತಿಯೂ ಸರಿಯಲ್ಲ. ಮಾತುಗಳು ನೇರವಾಗಿರಲಿ, ಕೇಳುವವರಿಗೆ ಸುಲಭದಲ್ಲಿ ಅರ್ಥವಾಗುವ
ರೀತಿಯಲ್ಲಿರಲಿ. ಹಾಗೂ ಮಾತಿನಲ್ಲಿ ಅರ್ಥವಿರಲಿ. ಕೇಳುವವರಿಗೆ ಅವಮಾನವಾಗುವಂತಹ ಇಲ್ಲವೇ
ಅವರಿಗೆ ನೋವು, ಮುಜುಗರವನ್ನುಂಟು ಮಾಡುವ ಮಾತುಗಳಿಂದ ಉತ್ತಮ ಸಂವಹನ ಏರ್ಪಡದು. ಸಂವಹನವು
ಸ್ನೇಹದ, ಆತ್ಮೀಯತೆಯ ವಾತಾವರಣದಲ್ಲಿ ನಡೆದರೆ ಮಾತ್ರ ಶುಭಫಲವನ್ನು ನೀಡುತ್ತದೆ.

ಹೇಳುವವರು ತಮ್ಮ ಕೇಳುಗರಿಗೆ ವಿಚಾರಧಾರೆಗಳನ್ನು ಹೇರಬಾರದು. ಮುಕ್ತ ಚರ್ಚೆಗೆ ಅವಕಾಶ
ಒದಗಿಸಿಕೊಡಬೇಕು. ಮಾತುಗಳು ಏಕಮುಖಿಯಾಗಿದ್ದರೆ, ಅಧಿಕಾರಶಾಹಿಯಾಗಿದ್ದರೆ ಅಥವಾ ದರ್ಪದಿಂದ
ಕೂಡಿದ್ದರೆ, ಸಂವಹನದ ಸಂತಸ ನೀಡದು. ದನಿ ಏರಿಸಿ ಮಾತನಾಡುವುದು ಕೂಡ. ಒಳ್ಳೆಯ ಸಂವಹನಕ್ಕೆ
ನೆರವಾಗದು. ನಮ್ಮ ದನಿ ಮತ್ತು ನಾವು ಬಳಸುವ ಭಾಷೆಯ ಬಗ್ಗೆಯೂ ಎಚ್ಚರವಿರಬೇಕು. ಅಂತೆಯೇ
ನಮ್ಮ ಹಾವಭಾವಗಳೂ ಕೂಡ ಇತಿಮಿತಿಯಲ್ಲಿದ್ದು ಆಕರ್ಷಕವಾಗಿದ್ದರೆ, ಸಂವಹನ
ಯಶಸ್ವಿಗೊಳ್ಳುತ್ತದೆ. ಮಾತಿಗೆ ಮಾತು ಬೆಳೆಸಿದರೆ ಎಲ್ಲವೂ ಕಷ್ಟ; ಎಲ್ಲವೂ ನಷ್ಟ. ಬದಲಾಗಿ
ಮಾತಿಗೆ ಮಾತು ಇಳಿಸಿದರೆ, ಎಲ್ಲವೂ ಸರಳ ಎಂಬ ಧೋರಣೆಯನ್ನು ಹೇಳುವವರು ಮತ್ತು
ಕೇಳುವವರಿಬ್ಬರಿಗೂ ಅನುಸರಿಸಿದರೆ ಮಾತ್ರ ಉತ್ತಮ ಸಂವಹನ ಏರ್ಪಡಲು ಸಾಧ್ಯ.

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು, ಒಳ್ಳೆಯ ಸಂವಹನಕ್ಕೆ ಬೇಕಾದ ಇನ್ನೊಂದು ಸೂತ್ರ.
ಎಲ್ಲೋ ನೋಡಿ, ಯಾರನ್ನೋ ನೋಡಿ ಮಾತನಾಡುವುದರಿಂದ ಕೇಳುವವರ ಉತ್ಸಾಹ ಕಡಿಮೆಯಾಗಿ
ಸಂವಹನದಲ್ಲಿ ಆಸಕ್ತಿಯೇ ಇಲ್ಲದಂತಾಗಬಹುದು. ಅಂತೆಯೇ ಹೇಳಿದ್ದನ್ನು ಗಮನವಿಟ್ಟು
ಕೇಳಿಸಿಕೊಳ್ಳುವ ಹಾಗೂ ಕೇಳಿಸಿಕೊಳ್ಳುವವನ ಮಾತುಗಳನ್ನು ಗಮನವಿಟ್ಟು ಕೇಳುವ ವ್ಯವಧಾನ
ಇದ್ದಾಗ ಮಾತ್ರ ಸಮರ್ಪಕ ಸಂವಹನ ಸಾಧ್ಯ. ಕೆಲವರಿಗೆ ತಾವು ಮಾತ್ರ ತಮ್ಮ ಬಗ್ಗೆ ಮಾತ್ರ
ಹೇಳಿಕೊಳ್ಳುವ ಅಭ್ಯಾಸ. ಇತರರನ್ನು ಕೇಳಿಸಿಕೊಳ್ಳುವ ಆಸಕ್ತಿಯಾಗಲೀ, ವ್ಯವಧಾನವಾಗಲೀ ಇರೋದೇ
ಇಲ್ಲ. ಹೀಗಾದಾಗ ಮಾತುಕತೆಗಳು ಅರ್ಥಪೂರ್ಣವಾಗಿಯೂ, ಸ್ವಾರಸ್ಯಕರವಾಗಿಯೂ ಇರುವುದಿಲ್ಲ.
ಉತ್ತಮವಾದ ಸಂವಹನ ಏರ್ಪಡಬೇಕಿದ್ದರೆ ಹೇಳುವವರು ಹೇಳುತ್ತಲೇ ಇರಬಾರದು. ಇತರರನ್ನು ಕೇಳಬೇಕು.
ಹೇಳುವಾಗಲೂ ಹೇಳಿದ್ದನ್ನೇ  ಹೇಳಬಾರದು. ಹೇಳಲೇ ಬೇಕಾದುದನ್ನು ಮಾತ್ರ ಹೇಳಬೇಕು ಹಾಗೂ
ಕೆಲವೊಮ್ಮೆ ಕೇಳಿದರೆ ಮಾತ್ರ ಹೇಳಬೇಕು. ಕೆಲವರು ಕೇಳುವವರಿಗೆ ಅಸಹ್ಯವೆನಿಸುವಷ್ಟು
ಹೇಳುತ್ತಿರುತ್ತಾರೆ. ಇತರರಿಗೆ ಮಾತನಾಡಲು ಅವಕಾಶ ಕೊಡದೆ, ತಾವೊಬ್ಬರೇ
ಮಾತನಾಡುತ್ತಿರುತ್ತಾರೆ. ಅಪ್ಪಿತಪ್ಪಿ ಎದುರಿದ್ದವರೂ ಮಾತನಾಡಲು ಹೊರಟರೆ, ‘ನನಗೆ
ಕೇಳಿಸುತ್ತಿದೆ. ಹೇಳಬೇಕಾದ್ದನ್ನು ಹೇಳಿಬಿಡಿ’ ಎಂಬ ಕಾಟಾಚಾರದ ಮಾತುಗಳನ್ನಾಡುತ್ತಾರೆ.
ಹಾಗೂ ಅವರ ಮಾತುಗಳನ್ನು ಕೇಳುತ್ತಿರುವರಂತೆ ನಟಿಸುತ್ತಾರೆ. ವಾಸ್ತವದಲ್ಲಿ ಇವರಿಗೆ ಇತರರ
ಬಗ್ಗೆ ತಿಳಿದುಕೊಳ್ಳುವ, ಅವರ ವಿಚಾರಧಾರೆಗಳನ್ನು, ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಸಹನೆ,
ಆಸಕ್ತಿಯಾಗಲೀ ಇರುವುದೇ ಇಲ್ಲ. ಇದು, ಇತರರಿಗೂ ಬೇಗನೆ ಅರ್ಥವಾಗಿ ಅವರಿಗೆ ನೋವನ್ನುಂಟು
ಮಾಡುತ್ತದೆ. ಮಾತ್ರವೇ ಅಲ್ಲ. ಹೇಳುತ್ತಿರುವವರ ಮೇಲಿನ ಗೌರವವನ್ನು ಕಡಿಮೆ ಮಾಡುತ್ತದೆ.

ಪ್ರತಿಯೊಬ್ಬರಿಗೂ ಇತರರು ತನ್ನನ್ನು ಕೇಳಬೇಕೆಂಬ ಅಭಿಲಾಷೆ ಇರುತ್ತದೆ. ಕರೆದಾಗ ಓ
ಎನ್ನದಿರೋದರಿಂದ ಹಿಡಿದು, ನಮ್ಮ ಮಾತುಗಳನ್ನು ಗಮನವಿಟ್ಟು ಆಲಿಸದೆ, ನಿರಾಸಕ್ತಿಯಿಂದ
ಕೇಳುವುದು, ಸ್ಪಂದಿಸದೇ ಇರುವುದು-ಎಲ್ಲವೂ ಒಂದು ತೆರನಾದ ಉತ್ಪ್ರೇಕ್ಷೆಗಳೇ ಸರಿ.
ಆದ್ದರಿಂದ ಹೇಳುವವರು ಏನೇ ಹೇಳಲಿ, ಮಕ್ಕಳಿಂದಲೇ ಮೊದಲಾಗಿ, ಎಲ್ಲರನ್ನು ಸಾವಧಾನವಾಗಿ ಕೇಳುವ
ವ್ಯವಧಾನವಿರಲಿ. ಇದು ಉತ್ತಮ ಸಂವಹನಕ್ಕೆ ಒಳ್ಳೆಯ ಬುನಾದಿಯನ್ನು ನಿರ್ವಿುಸುತ್ತದೆ.
ಮಾತ್ರವೇ ಅಲ್ಲ. ತಮ್ಮ ಬಗ್ಗೆ ಕಾಳಜಿ-ಗೌರವಗಳಿವೆಯೆಂಬ ಭಾವನೆ ಹೇಳುವವರಲ್ಲೂ ಉಂಟಾಗಿ,
ಅದರಲ್ಲಿನ ಆತ್ಮಸ್ಥೈರ್ಯ, ಉತ್ಸಾಹಗಳನ್ನು ಹೆಚ್ಚಿಸುತ್ತದೆ. ಅಂತೆಯೇ ಸತತವಾಗಿ ಎಡೆಬಿಡದೆ
ಮಾತನಾಡುವವರಿಗೂ ಒಂದಿಷ್ಟು ವಿಶ್ರಾಂತಿ ಲಭ್ಯವಾಗಿ, ಮುಂದೆ ಮಾತನಾಡಬೇಕಾದ ವಿಷಯದ ಬಗ್ಗೆ
ಮಾಹಿತಿಯೂ ಲಭ್ಯವಾಗುತ್ತದೆ. ಚೆನ್ನಾಗಿ ಮಾತನಾಡೋದರಿಂದ ನಮ್ಮ ಘನತೆ, ಗೌರವಗಳು
ಹೆಚ್ಚಬಹುದು. ಆದರೆ, ಇತರರನ್ನು ಮಾತನಾಡಲೂ ಬಿಟ್ಟು ಅವರನ್ನು ಕೇಳಿಸಿಕೊಳ್ಳೋದರಿಂದ ನಮ್ಮ
ಸಭ್ಯತೆ-ಸೌಜನ್ಯತೆಗಳೂ ಪ್ರಕಟಗೊಳ್ಳುತ್ತವೆ. ನಾವು ಎಷ್ಟು ಚೆನ್ನಾಗಿ ಮಾತನಾಡುತ್ತೇವೆ
ಅನ್ನೋದರ ಜತೆ ಇತರರನ್ನು ಹೇಗೆ ಆಲಿಸುತ್ತೇವೆ ಎಂಬುದರ ಮೇಲೂ ಸಂವಹನದ ಯಶಸ್ಸು
ಅವಲಂಬಿತವಾಗಿರುತ್ತದೆ.

ಒಟ್ಟಿನಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡುವ ಬದಲು, ಒಬ್ಬರಿಗೊಬ್ಬರು
ಮಾತನಾಡಿಕೊಂಡರೆ ಜಗತ್ತಿನ ಅರ್ಧದಷ್ಟು ಸಮಸ್ಯೆಗಳು ಬಗೆಹರಿದೀತು. ಇದಕ್ಕೆ ಉತ್ತಮ
ಸಂವಹನವೊಂದೇ ನೆರವಾದೀತು; ಸಹಕಾರಿಯಾದೀತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...