ರಿಪ್ಪನ್ಪೇಟೆ: ತಂಗಿಯ ಜೀವ ಉಳಿಸಿದ ಹೊಸನಗರ ತಾಲೂಕು ಕಲ್ಲೂರು ಗ್ರಾಮದ ಯಾಲಕ್ಕಿಕೊಪ್ಪದ ಬಾಲಕ ಕೆ.ಯು.ನಿಶಾಂತ್ ಕೇಂದ್ರ ಸರ್ಕಾರ ನೀಡುವ ಜೀವನ್ ರಕ್ಷಾ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.
ವಿಧಾನಸೌಧದ ಗೃಹಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ನಿಶಾಂತ್ಗೆ 1 ಲಕ್ಷ ರೂ. ಮೊತ್ತದ ಚೆಕ್, ಜೀವನ್ ರಕ್ಷಾ ಪದಕ, ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಸ್ತುತ ಹೆದ್ದಾರಿಪುರದ ರಾಮಕೃಷ್ಣ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಂತ್ ಶುಭಾ-ಉಮಾಕಾಂತ ದಂಪತಿ ಪುತ್ರ.
ಘಟನೆ ಹಿನ್ನೆಲೆ: ಈ ಘಟನೆ ನಡೆದಿದ್ದು 2015ರಲ್ಲಿ, ಆಗ ನಿಶಾಂತ್ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗಣೇಶ ಚತುರ್ಥಿಯಲ್ಲಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಹೊಳೆಯಲ್ಲಿ ವಿಸರ್ಜನೆ ಮಾಡಿದ್ದನ್ನು ನೋಡಿದ್ದ ಮಕ್ಕಳು, ತಾವೂ ಗಣಪತಿ ತಯಾರಿಸಿ ತೋಟದಲ್ಲಿಯೇ ಪ್ರತಿಷ್ಠಾಪಿಸಿ ನೀರಿಗೆ ಬಿಡಲು ಮುಂದಾಗಿದ್ದರು. ನಿಶಾಂತ್ನ 3 ವರ್ಷದ ತಂಗಿ ಎಂಟು ಅಡಿ ಅಳದ ಕೃಷಿಹೊಂಡಕ್ಕೆ ಬಿದ್ದಿದ್ದಳು. ಕೂಡಲೆ ನಿಶಾಂತ್ ಆಕೆ ಮುಳುಗದಂತೆ ತಲೆಕೂದಲನ್ನು ಹಿಡಿದು, ಸಹಾಯಕ್ಕಾಗಿ ಕೂಗಿದ. ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಜನರು ಇದನ್ನು ಕೇಳಿ ಅಲ್ಲಿಗೆ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದರು.
ಈ ವಿಷಯ ‘ವಿಜಯವಾಣಿ’ಯಲ್ಲಿ ಪ್ರಕಟವಾದ ಬಳಿಕ ಪೊಲೀಸ್ ಇಲಾಖೆ ಪ್ರಶಸ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ನಿಶಾಂತ್ಗೆ ಜೀವನ್ ರಕ್ಷಾ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯ ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ತಾಯಿ ಶುಭಾ, ಕಲ್ಲೂರು ನಾಗೇಂದ್ರಪ್ಪ ಇನ್ನಿತರರಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ