ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸ್ವರ್ಣ ಗೆದ್ದ ತೇಜಿಂದರ್

ರಾಷ್ಟ್ರೀಯ ಹಾಗೂ ಏಷ್ಯನ್ ಗೇಮ್್ಸ ದಾಖಲೆಯೊಂದಿಗೆ ಅಬ್ಬರಿಸಿದ ತೇಜಿಂದರ್ ಪಾಲ್ ಸಿಂಗ್ ಟೂರ್ ಪುರುಷರ ಶಾಟ್​ಪುಟ್ ವಿಭಾಗದಲ್ಲಿ ಸ್ವರ್ಣ ಪದಕ ಸಾಧನೆ ಮಾಡಿದ್ದಾರೆ. ಇದು ಹಾಲಿ ಏಷ್ಯನ್ ಗೇಮ್ಸ್​ನಲ್ಲಿ ಭಾರತದ 7ನೇ ಸ್ವರ್ಣ ಪದಕ. ಶನಿವಾರ ನಡೆದ ಸ್ಪರ್ಧೆಗಳಲ್ಲಿ ಭಾರತ 1 ಚಿನ್ನ, ಹಾಗೂ ಮೂರು ಕಂಚಿನ ಪದಕ ಸಾಧನೆ ಮಾಡಿದ್ದಲ್ಲದೆ, ಪದಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿತು. ಮೂರೂ ಕಂಚಿನ ಪದಕಗಳು ಸ್ಕಾ್ವಷ್ ವಿಭಾಗದಲ್ಲಿ ಬಂದರೆ, ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್್ಸ ಕಣದಲ್ಲಿ ಆಡಿಸಲಾಗುತ್ತಿರುವ ಕಾರ್ಡ್ ಗೇಮ್ ಬ್ರಿಜ್​ನಲ್ಲಿ ಎರಡು ಪದಕ ಖಚಿತಗೊಂಡಿದೆ. ಗೆಲೊರಾ ಬಂಗ್ ಕನೋ ಸ್ಟೇಡಿಯಂನಲ್ಲಿ ಶನಿವಾರ ಆರಂಭವಾದ ಅಥ್ಲೆಟಿಕ್ಸ್ ಸ್ಪರ್ಧೆಯ ಮೊದಲ ದಿನವೇ ಮಿಂಚಿನ ನಿರ್ವಹಣೆ ನೀಡಿರುವ ಭಾರತ ಬಂಗಾರದ ಬೇಟೆ ಆಡುವಲ್ಲೂ ಯಶ ಕಂಡಿತು. 23 ವರ್ಷದ ಪಂಜಾಬ್ ಅಥ್ಲೀಟ್ ತೇಜಿಂದರ್ ಪಾಲ್ ಸಿಂಗ್ ಟೂರ್, ಮೊದಲ ಯತ್ನದಲ್ಲಿಯೇ 9 ಸ್ಪರ್ಧಿಗಳ ಫೈನಲ್​ನಲ್ಲಿ ಅಗ್ರಸ್ಥಾನಕ್ಕೇರಿದರೆ, 5ನೇ ಯತ್ನದಲ್ಲಿ ಏಷ್ಯನ್ ಗೇಮ್ಸ್​ನ ದಾಖಲೆಯನ್ನು ಮುರಿದರು. 20.75 ಮೀಟರ್ ದೂರ ಶಾಟ್​ಪುಟ್​ಅನ್ನು ಎಸೆಯುವ ಮೂಲಕ ಅಗ್ರಸ್ಥಾನವನ್ನು ಖಚಿತ ಮಾಡಿಕೊಂಡರು. 2ನೇ ಸ್ಥಾನ ಪಡೆದ ಚೀನಾದ ಯಾಂಗ್ ಲು, ತೇಜಿಂದರ್​ಗಿಂತ 1.23 ಮೀಟರ್ ಕಡಿಮೆ ಅಂತರಕ್ಕೆ ಶಾಟ್​ಪುಟ್ ಎಸೆದಿದ್ದರು. ಯಾಂಗ್ 19.52 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಪಡೆದರೆ, 19.40 ಮೀಟರ್ ಸಾಧನೆ ಮಾಡಿದ ಕಜಾಕಿಸ್ತಾನದ ಇವಾನೊವ್ ಕಂಚಿನ ಪದಕ ಗಳಿಸಿದರು. 2010ರ ಏಷ್ಯನ್ ಗೇಮ್್ಸ ನಲ್ಲಿ ಸೌದಿ ಅರೇಬಿಯಾದ ಸುಲ್ತಾನ್ ಅಲ್ ಹೆಬಾಶಿ 20.57 ಮೀಟರ್ ದೂರ ಎಸೆದು ಚಿನ್ನ ಗೆದ್ದಿದ್ದು ಈವರೆಗಿನ ಏಷ್ಯನ್ ಗೇಮ್್ಸ ದಾಖಲೆಯಾಗಿ ಉಳಿದಿತ್ತು. ತೇಜಿಂದರ್ ಈ ದಾಖಲೆಯನ್ನು ಅಳಿಸಿದ್ದಾರೆ. ಕೇವಲ 0.17 ಮೀಟರ್ ದೂರದಿಂದ ಏಷ್ಯನ್ ದಾಖಲೆಯನ್ನು ಒಲಿಸಿಕೊಳ್ಳುವ ಅವಕಾಶ ಕೈ ತಪ್ಪಿತು. 2009ರಲ್ಲಿ ದೋಹಾದಲ್ಲಿ ನಡೆದ ಕೂಟದಲ್ಲಿ ಸುಲ್ತಾನ್ ಅಲ್ ಹೆಬಾಶಿ 21.13 ಮೀಟರ್ ದೂರ ಶಾಟ್​ಪುಟ್ ಎಸೆದಿದ್ದು ಏಷ್ಯನ್ ದಾಖಲೆಯಾಗಿದ್ದರೆ, ವಿಶ್ವದಾಖಲೆ ಅಮೆರಿಕದ ರ್ಯಾಂಡಿ ಬಾರ್ನೆಸ್ (23.12ಮೀ) ಹೆಸರಲ್ಲಿದೆ. ತೇಜಿಂದರ್ ಪಾಲ್, ಸ್ಪರ್ಧೆಯ ವೇಳೆ 3ನೇ ಎಸೆತವನ್ನು ಮಾತ್ರವೇ ಫೌಲ್ ಮಾಡಿದರೆ, 2ನೇ ಎಸೆತದಲ್ಲಿ 19.15 ಮೀಟರ್ ದೂರ ಎಸೆದಿದ್ದೇ ಅವರ ಕನಿಷ್ಠವಾಗಿತ್ತು. 6ನೇ ಹಾಗೂ ಕೊನೇ ಎಸೆತದಲ್ಲಿ 20 ಮೀಟರ್ ಸಾಧನೆ ಮಾಡಿದ್ದರು. ಸ್ಪರ್ಧೆಯಲ್ಲಿದ್ದ ಯಾರೊಬ್ಬರೂ ತೇಜಿಂದರ್ ಪಾಲ್ ಮೊದಲ ಯತ್ನದಲ್ಲಿಯೇ ಮಾಡಿದ್ದ 19.96 ಮೀ. ಸಾಧನೆಯನ್ನು ಹಿಂದಿಕ್ಕಲು ಯಶಸ್ವಿಯಾಗಲಿಲ್ಲ. ಸ್ಕಾ್ವಷ್​ನಲ್ಲಿ 3 ಕಂಚಿನ ಸಮಾಧಾನ
ಸ್ಕಾ್ವಷ್ ತಂಡದ ಏಷ್ಯನ್ ಗೇಮ್್ಸ ಸಿಂಗಲ್ಸ್ ವಿಭಾಗದ ಅಭಿಯಾನ ಮೂರು ಕಂಚಿನ ಪದಕದೊಂದಿಗೆ ಅಂತ್ಯ ಕಂಡಿದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೌರವ್ ಘೋಶಾಲ್ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ದೀಪಿಕಾ ಪಲ್ಲಿಕಲ್, ಜೋಶ್ನಾ ಚಿನ್ನಪ್ಪ ಸೆಮಿಫೈನಲ್ ಹಂತದಲ್ಲಿ ಸೋಲು ಕಂಡಿದ್ದರಿಂದ ಭಾರತ ಕಂಚಿನ ಸಮಾಧಾನ ಕಂಡಿತು. ಇದರಿಂದಾಗಿ ಏಷ್ಯನ್ ಗೇಮ್್ಸ
ನಲ್ಲಿ ಶನಿವಾರ ಭಾರತ 3 ಕಂಚಿನ ಪದಕಗಳನ್ನಷ್ಟೇ ಗೆಲ್ಲುವಲ್ಲಿ ಯಶ ಕಂಡಿದ್ದು, ಸ್ವರ್ಣ ಹಾಗೂ ಬೆಳ್ಳಿಯ ಪದಕಗಳ ಯಾವ ಪ್ರಯತ್ನವೂ ಯಶ ಕೊಡಲಿಲ್ಲ. 2014ರಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸೌರವ್ ಘೋಶಾಲ್ ಈ ಬಾರಿಯೂ ಫೈನಲ್​ಗೇರುವ ಮೂಲಕ ಬೆಳ್ಳಿಯನ್ನಾದರೂ ಉಳಿಸಿಕೊಳ್ಳುವ ಹಾದಿಯಲ್ಲಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಎರಡು ಗೇಮ್ಳ ಮುನ್ನಡೆಯಲ್ಲಿದ್ದ ಭಾರತದ ಅಗ್ರ ಆಟಗಾರ ನಂತರದ ಮೂರೂ ಗೇಮ್ಲ್ಲಿ ಹಿನ್ನಡೆ ಕಂಡು 12-10, 13-11, 6-11, 6-11, 6-11 ರಿಂದ ಹಾಂಕಾಂಗ್​ನ ಚುನ್ ಮಿಂಗ್ ಔ ವಿರುದ್ಧ ಆಘಾತಕಾರಿ ಸೋಲು ಕಂಡರು. ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮೂವರೂ ಸ್ಪರ್ಧಿಗಳು ಸೋಲು ಕಂಡರೂ, ಸ್ಕಾ್ವಷ್​ನ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಈವರೆಗಿನ ಅತ್ಯುತ್ತಮ ನಿರ್ವಹಣೆ ಇದಾಗಿದೆ. ಇದಕ್ಕೂ ಮುನ್ನ 2014ರ ಗೇಮ್್ಸ ನಲ್ಲಿ 2 ಪದಕ ಗೆದ್ದಿದ್ದೇ ಸಾಧನೆಯಾಗಿತ್ತು. ಇಂಚೋನ್ ಏಷ್ಯಾಡ್​ನಲ್ಲಿ ಸೌರವ್ ಘೋಶಾಲ್ ಬೆಳ್ಳಿ ಪದಕ ಜಯಿಸಿದ್ದರೆ, ದೀಪಿಕಾ ಪಲ್ಲಿಕಲ್ ಕಂಚಿನ ಪದಕ ಗೆದ್ದಿದ್ದರು. 2 ಗೇಮ್ ಮುನ್ನಡೆಯಲ್ಲಿದ್ದ ಸೌರವ್, 3ನೇ ಗೇಮ್ಲ್ಲಿ 6-5ರ ಮುನ್ನಡೆ ಕಂಡಿದ್ದರು. ಆದರೆ, ಚುಂಗ್ ವಿರುದ್ಧ ಸತತ 6 ಅಂಕ ಕಳೆದುಕೊಂಡ ಬಳಿಕ ಸೌರವ್ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆ ನಂತರದ ಎರಡೂ ಗೇಮ್ ಸೋತು ನಿರಾಸೆ ಎದುರಿಸಿದರು. ಇದಕ್ಕೂ ಮುನ್ನ ನಡೆದ ಮಹಿಳಾ ವಿಭಾಗದ ಸೆಮಿಫೈನಲ್​ಗಳಲ್ಲೂ ನಿರಾಸೆ ಎದುರಾಯಿತು. ದೀಪಿಕಾ ಪಲ್ಲಿಕಲ್ 7-11, 9-11, 6-11 ರಿಂದ ದಿಗ್ಗಜ ಆಟಗಾರ್ತಿ ಮಲೇಷ್ಯಾದ ನಿಕೋಲಾ ಡೇವಿಡ್ ವಿರುದ್ಧ ಸೋತರು. ಇನ್ನೊಂದು ಪಂದ್ಯದಲ್ಲಿ ಜೋಶ್ನಾ ಚಿನ್ನಪ್ಪ ತಮಗಿಂತ ರ್ಯಾಂಕಿಂಗ್​ನಲ್ಲಿ ಕೆಳ ಸ್ಥಾನದಲ್ಲಿರುವ ಮಲೇಷ್ಯಾದ ಆಟಗಾರ್ತಿ ಶಿವಶಂಕರಿ ಸುಬ್ರಮಣ್ಯಂ ವಿರುದ್ಧ 10-12, 6-11, 9-11 ರಿಂದ ಸೋಲು ಕಂಡರು.
ಹೊಸ ಕ್ರೀಡೆ ಬ್ರಿಜ್​ನಲ್ಲಿ 2 ಪದಕ ಖಚಿತ
ಕಾರ್ಡ್​ಗೇಮ್ ಬ್ರಿಜ್​ನಲ್ಲಿ ಭಾರತಕ್ಕೆ ಎರಡು ಪದಕ ಖಚಿತಗೊಂಡಿದೆ. ಪುರುಷರ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಭಾರತ ಸೆಮಿಫೈನಲ್​ಗೇರಿದ್ದು, ಸೋಲು ಕಂಡರೂ ಪದಕ ಸಿಗಲಿದೆ. ಅರ್ಹತಾ ಸುತ್ತಿನ ಅಂತ್ಯಕ್ಕೆ ಪುರುಷರ ತಂಡ 4ನೇ ಸ್ಥಾನಿಯಾಗಿ ಸೆಮಿಫೈನಲ್​ಗೇರಿದರೆ, ಮಿಶ್ರ ವಿಭಾಗದಲ್ಲಿ ಭಾರತ ಅಗ್ರಸ್ಥಾನದೊಂದಿಗೆ ಉಪಾಂತ್ಯಕ್ಕೇರಿದೆ. ಜಗ್ಗಿ ಶಿವದಾಸನಿ, ರಾಜೇಶ್ವರಿ ತಿವಾರಿ, ಅಜಯ್ ಖಾರೆ, ರಾಜು ತೊಲಾನಿ, ದೇವವೃತ ಮಜುಂದಾರ್ ಹಾಗೂ ಅಮಿತ್ ಮಿಖರ್ಜಿ 6 ಸದಸ್ಯರ ಭಾರತ ಪುರುಷರ ತಂಡದಲ್ಲಿದ್ದರೆ, ಮಿಶ್ರ ತಂಡ ವಿಭಾಗದಲ್ಲಿ ಕಿರಣ್ ನಾದರ್, ಹೇಮಾ ದಿಯೋರಾ, ಹಿಮಾನಿ ಖಾಂಡೆಲ್​ವಲ್, ಬಾಚಿರಾಜು ಸತ್ಯನಾರಾಯಣ, ಗೋಪಿನಾಥ್ ಮನ್ನಾ ಹಾಗೂ ರಾಜೀವ್ ಖಾಂಡೆಲ್​ವಲ್ ಇದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...