ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ರಫೆಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಎನ್ಡಿಎ ಸರ್ಕಾರ ರದ್ದುಗೊಳಿಸಲು ಕಾರಣವೇನು ಎಂಬುದನ್ನು ರಾಷ್ಟ್ರೀಯ ಮಾಧ್ಯಮವೊಂದು ಬಯಲು ಮಾಡಿದೆ.
ಫ್ರಾನ್ಸ್ನ ಡಸಲ್ಟ್ ಏವಿಯೇಷನ್ಸ್ ಕಂಪನಿ ಉತ್ಪಾದಿಸುವ 126 ರಫೆಲ್ ಯುದ್ಧವಿಮಾನ ಖರೀದಿಗೆ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ 2015ರಲ್ಲಿ ಈ ಒಪ್ಪಂದವನ್ನು ಎನ್ಡಿಎ ಸರ್ಕಾರ ರದ್ದುಗೊಳಿಸಿತ್ತು. ಬದಲಿಗೆ ಕಾರ್ಯಾಚರಣೆಗೆ ಸಿದ್ಧಗೊಂಡಿರುವ 36 ಯುದ್ಧ ವಿಮಾನಗಳನ್ನು ಮಾತ್ರ ಖರೀದಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿತ್ತು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.
ಕೇಂದ್ರ ಸರ್ಕಾರದ ಟಿಪ್ಪಣಿ ಪ್ರಕಾರ, ಯುಪಿಎ ಸರ್ಕಾರ ಕರೆದಿದ್ದ ಟೆಂಡರ್ನಲ್ಲಿ ಅತಿ ಕಡಿಮೆ ಬಿಡ್ ಮಾಡಿರುವ ಕಾರಣಕ್ಕೆ ಡಸಲ್ಟ್ ಏವಿಯೇಷನ್ಸ್ಗೆ ಯುದ್ಧವಿಮಾನ ಪೂರೈಕೆ ಗುತ್ತಿಗೆ ಸಿಕ್ಕಿತ್ತು. ಆದರೆ ಈಗ ಸರ್ಕಾರಿ ಸ್ವಾಮ್ಯದ ಬೆಂಗಳೂರು ಮೂಲದ ಎಚ್ಎಎಲ್ನಲ್ಲಿ ಹಲವು ವಿಮಾನಗಳು ತಯಾರಾಗುತ್ತಿದ್ದು, ಡಸಲ್ಟ್ ಏವಿಯೇಷನ್ಸ್ ಕಂಪನಿಗಿಂತಲೂ ಕಡಿಮೆ ವೆಚ್ಚದಲ್ಲಿ ಯುದ್ಧ ವಿಮಾನಗಳನ್ನು ಉತ್ಪಾದಿಸಬಹುದಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾಕ್ಕೆ ಒತ್ತು ಸಿಗುತ್ತದೆ ಎಂಬುದು ಎನ್ಡಿಎ ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ.
ಪ್ರಸ್ತುತ ನಿವ್ವಳ ಮೌಲ್ಯದ ಆಧಾರದಲ್ಲಿ ರಫೆಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡಲು 2011ರ ನವೆಂಬರ್ನ ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇಂದು ಈ ವೆಚ್ಚ ಹಾಗೂ ಸನ್ನಿವೇಶದಲ್ಲಿ ಸಾಕಷ್ಟು ಬದಲಾವಣೆ ಆಗಿರುವ ಕಾರಣ, ರಫೆಲ್ ಯುದ್ಧ ವಿಮಾನ ಖರೀದಿ ದುಬಾರಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಮಧ್ಯೆ ಇಎಡಿಎಸ್ ಕಂಪನಿ ಉತ್ಪಾದಿಸುವ ಯುರೋಫೈಟರ್ ವಿಮಾನ ರಫೆಲ್ಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಯುರೋಫೈಟರ್ನ್ನು ಎಚ್ಎಎಲ್ ಸಹಾಯದಿಂದ ಭಾರತದಲ್ಲಿ ಉತ್ಪಾದಿಸಿದರೆ ರಫೆಲ್ಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದೆ.
ರಫೆಲ್ ಡೀಲ್ ಯಾವಾಗ ಏನಾಗಿತ್ತು?
2011 ಏಪ್ರಿಲ್ – 126 ಯುದ್ಧ ವಿಮಾನ ಖರೀದಿಗಾಗಿ ಡಸಲ್ಟ್ನ ರಫೆಲ್, ಯುರೋಫೈಟರ್ ಟೈಪೂನ್ನ್ನು ಆಯ್ಕೆ ಮಾಡಿದ ಭಾರತೀಯ ವಾಯುಪಡೆ
2012 ಜನವರಿ – ಅತಿ ಕಡಿಮೆ ಮೊತ್ತ ನಮೂದಿಸಿದ್ದ ಡಸಲ್ಟ್ನ ರಫೇಲ್ಗೆ ಟೆಂಡರ್. ಆದರೆ ವಿಮಾನ ಉತ್ಪಾದನೆಗೆ ಸಂಬಂಧಿಸಿದಂತೆ ಕಂಪನಿ ಹಾಗೂ ಅಂದಿನ ಯುಪಿಎ ಸರ್ಕಾರ ನಡುವೆ ಭಿನ್ನಮತ
2014 ಏಪ್ರಿಲ್ – ಶೇ. 10 ರಿಯಾಯಿತಿ ನೀಡುವುದಾಗಿ ಯುರೋಫೈಟರ್ ಘೋಷಣೆ. ಆದರೆ ಇದನ್ನು ಕಡೆಗಣಿಸಿದ ಯುಪಿಎ ಸರ್ಕಾರ
2015 ಜೂನ್ – ಯುಪಿಎ ಸರ್ಕಾರದ ಒಪ್ಪಂದವನ್ನು ರದ್ದುಗೊಳಿಸಿದ ಎನ್ಡಿಎ ಸರ್ಕಾರ
2016 ಸೆಪ್ಟೆಂಬರ್ – ಹೊಸ ರಫೆಲ್ ಡೀಲ್ಗೆ ಸಹಿ. 62 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾರ್ಯಾಚರಣೆಗೆ ಸಿದ್ಧಗೊಂಡಿರುವ 36 ಯುದ್ಧವಿಮಾನ ಖರೀದಿದೆ ಒಪ್ಪಂದ
ರದ್ದತಿಗೆ ಎನ್ಡಿಎ ಕೊಟ್ಟ ಕಾರಣಗಳು
?126 ಯುದ್ಧವಿಮಾನಗಳ ನಿರ್ವಹಣೆ ಸಹಿತ ಎಲ್ಲ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಕಂಪನಿ ಹಿಂದೇಟು ಹಾಕಿರುವುದು ?ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಂಪನಿ ವಾರಂಟಿ ನೀಡಲು ಸಿದ್ಧವಿಲ್ಲದಿರುವುದು. ಒಟ್ಟು ವ್ಯವಹಾರದ ಮೊತ್ತದ ಶೇ. 5ನ್ನು ಬಾಂಡ್ ರೂಪದಲ್ಲಿ ಗ್ಯಾರೆಂಟಿಯಾಗಿ ನೀಡಬೇಕು ಎಂಬ ಕೇಂದ್ರ ಸರ್ಕಾರದ ಬೇಡಿಕೆಯನ್ನು ಕಂಪನಿ ತಿರಸ್ಕರಿಸಿತ್ತು ?ಭಾರತದಲ್ಲಿ ರಫೆಲ್ಯುುದ್ಧ ವಿಮಾನ ಉತ್ಪಾದನೆ ಮಾಡಲು ಟೆಕ್ನೊ ಕಮರ್ಷಿಯಲ್ ಪರವಾನಗಿ ನೀಡಲು ಸಮಯಮಿತಿ ನಿಗದಿ ಮಾಡದಿರುವುದು ?ಎಚ್ಎಎಲ್ ಸಹಭಾಗಿತ್ವದಲ್ಲಿ ರಫೆಲ್ ಉತ್ಪಾದಿಸಲು ಒಪ್ಪಂದ ವೇಳೆ ಉಲ್ಲೇಖಿಸಲಾಗಿದ್ದ ಸಮಯಕ್ಕಿಂತಲೂ 2.7 ಪಟ್ಟು ಹೆಚ್ಚಿನ ಸಮಯ ಬೇಕಾಗಿತ್ತು ?ಇದರಿಂದ ವಿಮಾನದ ಉತ್ಪಾದನೆ ವೆಚ್ಚದಲ್ಲೂ ಏರಿಕೆಯಾಗುತ್ತದೆ. ಆಗ ಯುರೋಫೈಟರ್ಗಿಂತಲೂ ರಫೆಲ್ ದುಬಾರಿಯಾಗುತ್ತದೆ.
ಮೋದಿ ಸರ್ಕಾರದ ವಿರುದ್ಧ 30 ದಿನ ಕಾಂಗ್ರೆಸ್ ಪ್ರತಿಭಟನೆ
ರಫೆಲ್ ಖರೀದಿ ಹಗರಣ ಸೇರಿ ಅನೇಕ ಹಗರಣಗಳನ್ನು ಮಾಡಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಒಂದು ತಿಂಗಳು ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಶನಿವಾರ ನಿರ್ಧರಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಫೆಲ್ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಬೇಕೆಂಬ ಆಗ್ರಹ ನಮ್ಮದು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.
ಕಾಂಗ್ರೆಸ್ ಟಾಸ್ಕ್ಫೋರ್ಸ್
ಹಿರಿಯ ಕಾಂಗ್ರೆಸ್ ಮುಖಂಡ ಜೈಪಾಲ್ ರೆಡ್ಡಿ ನೇತೃತ್ವದಲ್ಲಿ ಆರು ಸದಸ್ಯರ ಟಾಸ್ಕ್ ಫೋರ್ಸನ್ನು ರಾಹುಲ್ ಗಾಂಧಿ ರಚಿಸಿದ್ದಾರೆ. ರಫೆಲ್ ಒಪ್ಪಂದದಲ್ಲಿನ ಹಗರಣವನ್ನು ಬಯಲಿಗೆಳೆಯುವ ಕೆಲಸ ಇವರಿಗೆ ನೀಡಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ