ಜಾಗತಿಕ ತಾಪಮಾನ ಹೆಚ್ಚಳದಿಂದ ಸಮುದ್ರ ಮಟ್ಟ ಏರುತ್ತಿದ್ದು, ಇದು ಹೀಗೇ ಮುಂದುವರಿ ದರೆ ಇನ್ನು 10 ವರ್ಷದಲ್ಲಿ್ಲ ಥಾಯ್ಲೆಂಡ್ನ ರಾಜಧಾನಿ ಬ್ಯಾಂಕಾಕ್ ಭಾಗಶಃ ಮುಳುಗಡೆಯಾಗಲಿದೆ ಎಂದು ವಿಶ್ವ ಬ್ಯಾಂಕ್ನ ವರದಿ ಎಚ್ಚರಿಕೆ ನೀಡಿದೆ.
ಬ್ಯಾಂಕಾಕ್ ಸಮುದ್ರ ಮಟ್ಟದಿಂದ ಐದು ಅಡ್ಡಿ ಎತ್ತರದ (1.5 ಮೀಟರ್) ಜವುಗು ಪ್ರದೇಶದಲ್ಲಿ ನಿರ್ವಣವಾಗಿರುವ ನಗರ. ಸಮುದ್ರ ಮಟ್ಟದಲ್ಲಿ ಏರಿಕೆಯಾದರೆ ಮೊದಲು ಮುಳುಗಡೆಯಾಗಲಿದೆ ಎಂದು ವರದಿ ತಿಳಿಸಿದೆ. ಬ್ಯಾಂಕಾಕ್ ಕೊಲ್ಲಿಯ ಸುತ್ತ ಇರುವ ಸಮುದ್ರಗಳ ಮಟ್ಟ ಪ್ರತಿ ವರ್ಷ ನಾಲ್ಕು ಮಿಲಿಮೀಟರ್ನಷ್ಟು ಏರುತ್ತಿದೆ. ಹೀಗಾಗಿ ಬ್ಯಾಂಕಾಕ್ ಪ್ರತಿ ವರ್ಷ ಎರಡು ಸೆಂಟಿಮೀಟರ್ನಷ್ಟು ಮುಳುಗುತ್ತಿದೆ.ತಾಪಮಾನ ಏರಿಕೆಯಿಂದ ಮಳೆ ಋತು ಮತ್ತು ಹವಾಮಾನದಲ್ಲಿ ಭಾರಿ ಬದಲಾವಣೆ ಆಗುತ್ತಿದ್ದು, ಬಲಿಷ್ಠ ಚಂಡಮಾರುತ, ಅತಿಯಾದ ಮಳೆ ಮತ್ತು ಪ್ರವಾಹಕ್ಕೆ ತುತ್ತಾದರೆ 2030ರ ಹೊತ್ತಿಗೆ ಬ್ಯಾಂಕಾಕ್ನ ಶೇ. 40 ಪ್ರದೇಶಗಳು ಸಮುದ್ರದ ಪಾಲಾಗುವ ಅಪಾಯ ಇದೆ ಎಂದು ಗ್ರೀನ್ಪೀಸ್ ಸಂಘಟನೆಯ ತಾರಾ ಬ್ಯೂಕಂಸ್ರಿ ಹೇಳಿದ್ದಾರೆ.
ಪೂರ್ವಭಾವಿ ಸಭೆ: ಈ ಎಚ್ಚರಿಕೆಯ ಕಾರಣ ಈ ವರ್ಷಾಂತ್ಯಕ್ಕೆ ಪೋಲೆಂಡ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಕುರಿತು ಸಮ್ಮೇಳನದಲ್ಲಿ ಹಸಿರು ಮನೆ ಅನಿಲ ಹೊರಸೂಸುವಿಕೆಗೆ ಯಾವ ರೀತಿ ಕಡಿವಾಣ ಹಾಕಬೇಕು, ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಪರಿಷ್ಕೃತ ನೀತಿ ರೂಪಿತವಾಗಬೇಕು ಮತ್ತು ಜಾಗತಿಕ ತಾಪಮಾನ ಅಡ್ಡಪರಿಣಾಮಕ್ಕೆ ನಲುಗುವ ದೇಶಗಳಿಗೆ ಹೆಚ್ಚು ಪರಿಸರ ಪ್ರದೂಷಣೆ ಮಾಡುವ ರಾಷ್ಟ್ರಗಳಿಂದ ಅನುದಾನ ಕೊಡಿಸಬೇಕು ಎಂಬ ವಿಚಾರಗಳ ಪ್ರಸ್ತಾಪವಾಗಲಿವೆ. ಈ ಬಗ್ಗೆ ಬ್ಯಾಂಕಾಕ್ನಲ್ಲಿ ಪೂರ್ವಭಾವಿ ಸಭೆ ಈಗಾಗಲೇ ನಡೆದಿವೆ. ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ವಿಶ್ವಸಂಸ್ಥೆಯ ಆಶ್ರಯದಲ್ಲಿ 2015ರಲ್ಲಿ ಪ್ಯಾರಿಸ್ನಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. -ಏಜೆನ್ಸೀಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ