ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಪ್ರಚಲಿತಗಳು ಸೆಪ್ 11

: ಈ ಬಾರಿಯ ವಿಶ್ವ ತುಳು ಸಮ್ಮೇಳನ ನವೆಂಬರ್‌ 23 ಹಾಗೂ24ರಂದು ದುಬೈನಲ್ಲಿ ನಡೆಯಲಿದೆ.

ನಗರದಲ್ಲಿ ಸೆಪ್ಟೆಂಭರ್ 10 ರ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದ ಅಖಿಲ ಭಾರತ
ತುಳು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ‘ಕೊಲ್ಲಿ ರಾಷ್ಟ್ರದ ತುಳು
ಭಾಷಿಕರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಬಾರಿ ದುಬೈನ ಆಲ್‌ನಸಾರ್‌ ಲೀಸರ್‌ ಲ್ಯಾಂಡ್‌
ಐಸ್‌ರಿಂಗ್‌ ಸಭಾಂಗಣದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ
ಉದ್ದೇಶವೂ ಇದೆ. ದುಬೈನ ಬಿ.ಆರ್‌.ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಯಾಗಿ
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಮಂಗಳೂರಿನ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಅವರಿಗೆ ಊಟ–ವಸತಿ ವ್ಯವಸ್ಥೆ
ಕಲ್ಪಿಸಲಾಗುವುದು. ವಿವಿಧ ರಾಜ್ಯಗಳಿಂದ ತುಳು ಭಾಷಿಕರು ಬರಲಿದ್ದಾರೆ’ ಎಂದು ತಿಳಿಸಿದರು.

➖➖➖➖➖➖➖➖➖➖

: ಯುದ್ಧವಿಮಾನಗಳ ಕಾರ್ಯಾಚರಣೆಗೆ ಪೂರಕವಾದ ಆಕಾಶ ಮಾರ್ಗದಲ್ಲೇ ಇಂಧನ ತುಂಬಿಸುವ ತಾಲೀಮನ್ನು
ದೇಶೀ ನಿರ್ಮಿತ ತೇಜಸ್ ಯುದ್ಧವಿಮಾನ ಯಶಸ್ವಿಯಾಗಿ ಪೂರ್ತಿಗೊಳಿಸಿದೆ.

ಸೋಮವಾರ ಲಘು ಯುದ್ಧವಿಮಾನ ತೇಜಸ್‌ಗೆ ವಾಯುಪಡೆಯ ಐಎಲ್‌-78ಮಿಡ್‌ಏರ್ ಟ್ಯಾಂಕರ್
ಏರ್‌ಕ್ರಾಫ್ಟ್‌ ಮೂಲಕ ಇಂಧನ ಭರ್ತಿಗೊಳಿಸಲಾಗಿದೆ. ಪೂರ್ಣ ಪ್ರಮಾಣದ ಕಾರ್ಯಾಚರಣೆಗೂ ಮೊದಲು
ತೇಜಸ್ ಹಲವು ಪರೀಕ್ಷೆಗಳನ್ನು ಪೂರ್ತಿಗೊಳಿಸಬೇಕಿದ್ದು, ಅದರನ್ವಯ ಮಾರ್ಗಮಧ್ಯದಲ್ಲಿಯೇ ಇಂಧನ
ಭರ್ತಿಯನ್ನು ಯಶಸ್ವಿಯಾಗಿ ಪೂರೈಸಿದೆ.

ಸೆ. 4 ಮತ್ತು 6ರಂದು ತೇಜಸ್ ಇಂಧನ ಭರ್ತಿಗೆ ಯತ್ನಿಸಿತ್ತು. ಸೆಪ್ಟೆಂಬರ್ 10ರ ಸೋಮವಾರ
ತೇಜಸ್‌ ಎಲ್‌ಎಸ್‌ಪಿ-8 ವಿಮಾನಕ್ಕೆ ಮಾರ್ಗಮಧ್ಯದಲ್ಲೇ1900 ಕೆಜಿ ಇಂಧನವನ್ನು
ಪೂರೈಸಲಾಗಿದೆ. ತೇಜಸ್‌ನ ಎಲ್ಲ ಆಂತರಿಕ ಮತ್ತು ಡ್ರಾಪ್ ಟ್ಯಾಂಕ್‌ಗಳಲ್ಲಿ ಇಂಧನ
ಭರ್ತಿಯಾಗಿದೆ.

ಸೋಮವಾರದ ಕಾರ್ಯಾಚರಣೆಯ ಸಂದರ್ಭ ತೇಜಸ್ ತಯಾರಕ ಸಂಸ್ಥೆ ಎಚ್‌ಎಎಲ್ ಮತ್ತು ಏರೋನಾಟಿಕಲ್
ಡೆವಲಪ್‌ಮೆಂಟ್ ಏಜೆನ್ಸಿಯ ತಜ್ಞರು ಮತ್ತು ನ್ಯಾಶನಲ್ ಫ್ಲೈಟ್ ಟೆಸ್ಟ್‌ ಸೆಂಟರ್‌ನ
ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೀಮು ಯಶಸ್ವಿಯಾಗುವುದರೊಂದಿಗೆ ಮಾರ್ಗಮಧ್ಯದಲ್ಲೇ ಇಂಧನ ತುಂಬಿಸುವ ಏರ್‌ ಟು ಏರ್
ವ್ಯವಸ್ಥೆ ಹೊಂದಿರುವ ಮಿಲಿಟರಿ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ.

➖➖➖➖➖➖➖➖➖➖

ಬೀಜಿಂಗ್‌: ಚೀನಾದ ಅತ್ಯಂತ ಶ್ರೀಮಂತ ಉದ್ಯಮಿ, ಇ-ಕಾಮರ್ಸ್‌ ದಿಗ್ಗಜ ಅಲಿಬಾಬಾ ಕಂಪನಿಯ
ಸ್ಥಾಪಕ ಜಾಕ್‌ ಮಾ, ಮುಂದಿನ ವರ್ಷ ಕಂಪನಿಯ ಅಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗುವುದಾಗಿ
ಘೋಷಿಸಿದ್ದಾರೆ.

ಜಾಕ್‌ ಮಾ ಸೆಪ್ಟೆಂಬರ್‌ 10ರಂದು 54ನೇ ಜನ್ಮ ದಿನಾಚರಣೆಯ ಸಂದರ್ಭ, ತಮ್ಮ
ಉತ್ತರಾಧಿಕಾರಿಯಾಗಿ ಕಂಪನಿಯ ಸಿಇಒ ಡೇನಿಯಲ್‌ ಜಾಂಗ್‌ ಆಯ್ಕೆಯಾಗಿರುವುದನ್ನೂ ಘೋಷಿಸಿದರು.

2020ರಲ್ಲಿ ಷೇರುದಾರರ ಸಭೆಯ ತನಕ ಜಾಕ್‌ ಮಾ ಕಂಪನಿಯ ನಿರ್ದೇಶಕರಾಗಿಯೂ
ಮುಂದುವರಿಯಲಿದ್ದಾರೆ. ಡೇನಿಯಲ್‌ ಜಾಂಗ್‌ (46) ಮುಂದಿನ 12 ತಿಂಗಳಿನಲ್ಲಿ
ಉತ್ತರಾಧಿಕಾರಿಯಾಗಲಿದ್ದಾರೆ. ಇದರೊಂದಿಗೆ ಜಾಕ್‌ ಮಾ ನಿವೃತ್ತಿಯ ಬಗ್ಗೆ ಉಂಟಾಗಿದ್ದ ಎಲ್ಲ
ಊಹಾಪೋಹಗಳಿಗೆ ತೆರೆ ಬಿದ್ದಿದೆ. ಆರಂಭದಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿದ್ದ ಜಾಕ್‌ ಮಾ,
ನಂತರ ಇಂಟರ್‌ನೆಟ್‌ ಬಗ್ಗೆ ಆಸಕ್ತಿ ವಹಿಸಿ ಇ-ಕಾಮರ್ಸ್‌ ಉದ್ದಿಮೆ ಆರಂಭಿಸಿದ್ದರು. ನಂತರ
ಭಾರಿ ಯಶಸ್ಸು ಗಳಿಸಿದರು. 1999ರಲ್ಲಿ ಅಲಿಬಾಬಾ ಕಂಪನಿಯನ್ನು ಸ್ಥಾಪಿಸಿದ್ದರು.

➖➖➖➖➖➖➖➖➖➖

ಹೊಸದಿಲ್ಲಿ: ಎಥೆನಾಲ್‌ ಘಟಕಗಳು ಆರಂಭಗೊಂಡ ಬಳಿಕ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 55ರೂ
ಹಾಗೂ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 50 ರೂ.ನಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸಾರಿಗೆ
ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಕೇಂದ್ರ ಸರಕಾರ ದೇಶದಲ್ಲಿ ಒಟ್ಟಾರೆ 5 ಎಥೆನಾಲ್‌ ಉತ್ಪಾದನಾ ಘಟಕಗಳನ್ನು ತೆರೆಯಲಿದ್ದು,
ಇವುಗಳು ಕಾರ್ಯಾರಂಭಗೊಂಡ ಬಳಿಕ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಲಿವೆ ಎಂದು ಅವರು
ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಘಟಕದಲ್ಲಿ ಇಂಧನ ಉತ್ಪತ್ತಿ
ಮಾಡಲಾಗುತ್ತದೆ. ಭತ್ತ ಹಾಗೂ ಗೋಧಿಯ ಹುಲ್ಲು, ಕಬ್ಬು ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ
ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಬಹುದಾಗಿದೆ. ಪ್ರಸ್ತುತ 8 ಲಕ್ಷ ಕೋಟಿ ರೂ.
ಮೌಲ್ಯದ ಪೆಟ್ರೋಲ್‌ ಹಾಗೂ ಡೀಸಲ್‌ನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಡಾಲರ್‌ ಎದುರು
ರೂಪಾಯಿ ಕುಸಿತವಾಗುತ್ತಿರುವುದರಿಂದ ಇಂಧನ ಬೆಲೆ ಏರುತ್ತಿದೆ. ಆದಿವಾಸಿ, ರೈತರು
ಅರಣ್ಯವಾಸಿಗಳ ಸಹಾಯದಿಂದ ಎಥನಾಲ್‌, ಮೆಥನಾಲ್‌, ಬಯೋ ಇಂಧನಗಳನ್ನು ಉತ್ಪತ್ತಿ ಹೆಚ್ಚು
ಅವಕಾಶಗಳಿವೆ. ವಿಮಾನ ಹಾರಾಟಕ್ಕೂ ಬಳಕೆ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಬಯೋ ಡೀಸೆಲ್‌, ಸಿಎನ್‌ಜಿಗಳನ್ನು ಬಳಸುವ ಟಾಕ್ಸಿ, ಬಸ್‌, ಆಟೊ ರಿಕ್ಷಾಗಳಿಗೆ ಪ್ರತ್ಯೇಕ
ಪರವಾನಗಿ ಪಡೆಯುವುದು ಈಗ ಅಗತ್ಯವಿಲ್ಲ. ಇದರಿಂದ ಭಾರತ ಅವಲಂಬನೆಯ ಮೇಲೆ ನಿಯಂತ್ರಣ
ಸಾಧಿಸುತ್ತದೆ ಎಂದು ಅವರು ಹೇಳಿದ್ದಾರೆ.

➖➖➖➖➖➖➖➖➖➖

ದುಡಿಯುವ ವ್ಯಕ್ತಿಗಳ ಪೈಕಿ ಶೇ 33ರಷ್ಟು ಜನರು ಮಾತ್ರ ನಿವೃತ್ತಿ ಬದುಕಿನ ಅಗತ್ಯಗಳಿ
ಗಾಗಿ ಉಳಿತಾಯ ಮಾಡುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ತಕ್ಷಣದ ಹಣಕಾಸು ಅಗತ್ಯಗಳು ಮತ್ತು ನಿವೃತ್ತ ಬದುಕಿನ ನಿರ್ವಹಣೆಗೆ ಅಗತ್ಯ ಇರುವ ಹಣದ ಬಗ್ಗೆ
ಹೆಚ್ಚಿನ ತಿಳಿವಳಿಕೆ ಇಲ್ಲದಿರುವ ಕಾರಣಕ್ಕೆ ಬಹುತೇಕರು  ಉಳಿತಾಯ ಮಾಡಲು ಮುಂದಾಗುವುದಿಲ್ಲ
ಎಂದು ಎಚ್‌ಎಸ್‌ಬಿಸಿ ನಡೆಸಿದ ‘ನಿವೃತ್ತಿಯ ಭವಿಷ್ಯ’ ಕುರಿತ ಸಮೀಕ್ಷೆಯಲ್ಲಿ ತಿಳಿದು
ಬಂದಿದೆ.

ಉಳಿತಾಯ ಮಾಡಲು ಸಾಧ್ಯವಿಲ್ಲದ ಕಾರಣಕ್ಕೆ ತಮ್ಮ ವೃದ್ಧಾಪ್ಯದ ದಿನಗಳನ್ನು ದುಡಿಮೆಯಿಂದ
ನಿವೃತ್ತಿ ಎಂದೇನು ಹಲವರು ಪರಿಗಣಿಸಿಲ್ಲ. 60 ವರ್ಷಗಳ ನಂತರವೂ ಇನ್ನೂ ಕೆಲ ವರ್ಷ
ದುಡಿಯಬೇಕಾಗಬಹುದು ಎಂದೇ ಶೇ 69ರಷ್ಟು ಜನರು ಭಾವಿಸಿದ್ದಾರೆ.

 ‘ಅನೇಕರಿಗೆ ನಿವೃತ್ತಿಯ ನಂತರದ ಬದುಕು ದೀರ್ಘವಾಗಿರುತ್ತದೆ. ಅದೊಂದು ವ್ಯಕ್ತಿಯ
ಬದುಕಿನಲ್ಲಿನ ಮಹತ್ವದ ಘಟ್ಟವೂ ಆಗಿರುತ್ತದೆ. ವ್ಯಕ್ತಿಗೆ ವಯಸ್ಸಾದಂತೆ ಆತನ ಅಗತ್ಯಗಳೂ
ಬದಲಾಗುತ್ತವೆ. ಅವುಗಳ ಹಣಕಾಸು ಪರಿಣಾಮಗಳೂ ಭಿನ್ನವಾಗಿರುತ್ತವೆ’ ಎಂದು ಎಚ್‌ಎಸ್‌ಬಿಸಿ
ಇಂಡಿಯಾದ ಸಂಪತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ರಾಮಕೃಷ್ಣನ್‌ ಎಸ್‌ ಹೇಳಿದ್ದಾರೆ.

ಎಚ್‌ಎಸ್‌ಬಿಸಿ ಪರವಾಗಿ ಇಪ್ಸೊಸ್‌ ಸಂಸ್ಥೆಯು ಭಾರತವೂ ಸೇರಿದಂತೆ 16ದೇಶಗಳಲ್ಲಿ ಈ ಸಮೀಕ್ಷೆ
ನಡೆಸಿದೆ. ದುಡಿಯುವ ವರ್ಗದ ಶೇ 56ರಷ್ಟು ಜನರು ಜೀವನ ನಿರ್ವಹಣೆಗೆ ದಿನನಿತ್ಯದ
ದುಡಿಮೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಶೇ 53 ರಷ್ಟು ಜನರು ಅಲ್ಪಾವಧಿ
ಅಗತ್ಯಗಳಿಗಾಗಿ ಮಾತ್ರ ಉಳಿತಾಯ ಮಾಡುತ್ತಾರೆ.

ಭವಿಷ್ಯದ ಬದುಕಿನ ಅಗತ್ಯಗಳನ್ನು ಈಡೇರಿಸಲು ಉಳಿತಾಯ ಮಾಡುವ ಬದಲಿಗೆ ಇಂದಿನ ಬದುಕನ್ನು
ಅನುಭವಿಸಲು ಹಣ ವೆಚ್ಚ ಮಾಡಲು ತಾವು ಆದ್ಯತೆ ನೀಡುವುದಾಗಿ
ಶೇ 45ರಷ್ಟು ಜನರು ಹೇಳಿಕೊಂಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....