ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಪ್ರಚಲಿತಗಳು ಸೆಪ್ 17

ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬಾರದು, ತನಿಖೆ ನಡೆಸಿ ಪ್ರಕರಣದ ನೈಜತೆ ಪರಿಶೀಲಿಸಿದ ನಂತರ ಬಂಧಿಸಬೇಕು ಎಂಬ ತನ್ನ ಮೊದಲಿನ ಆದೇಶವನ್ನು ಸುಪ್ರೀಂಕೋರ್ಟ್‌ ಪರಿಷ್ಕರಿಸಿದೆ.
ಆರೋಪಿ ಮತ್ತು ಆತನ ಕುಟುಂಬ ಸದಸ್ಯರನ್ನು ಬಂಧಿಸುವ ಕುರಿತಾದ ನಿರ್ಧಾರವನ್ನು ಕೋರ್ಟ್‌ ಪೊಲೀಸರಿಗೇ ಬಿಟ್ಟಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಕೂಡಲೇ ಬಂಧಿಸುವ ಅವಕಾಶ ಇರುವ ಹಳೆ ನಿಯಮವೇ ಜಾರಿಗೆ ಬಂದಂತಾಗಿದೆ.
ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶದಿಂದ ವರದಕ್ಷಿಣೆ ನಿಯಂತ್ರಣ ಕಾನೂನು ದುರ್ಬಲವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಡೆ ಅನುಸರಿಸಿದೆ.
ಇದೇ ವೇಳೆ, ಖೊಟ್ಟಿ ಕೇಸ್‌ಗಳ ಮೂಲಕ ಪುರುಷರನ್ನು ಕಿರುಕುಳಕ್ಕೆ ಗುರಿಪಡಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಆರೋಪಿ ಮತ್ತು ಆತನ ಕುಟುಂಬ ಸದಸ್ಯರ ತಕ್ಷಣ ಬಂಧನ ಕುರಿತಾಗಿ ಯಾವುದೇ ಆದೇಶ ಅಥವಾ ನಿರ್ದೇಶನ ನೀಡದೆ ಸುಪ್ರೀಂ ಕೋರ್ಟ್‌ ಸಮತೋಲನದ ನಡೆ ಅನುಸರಿಸಿದೆ.
ವರದಕ್ಷಿಣೆ ವಿರೋಧಿ ಕಾನೂನು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ತೀರ್ಪು ಮರುಪರಿಶೀಲನೆ ಮಾಡಬೇಕೆಂದು ಕೋರಿ 'ನ್ಯಾಯಾಧಾರ್‌' ಹೆಸರಿನ ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ.ಎಂ. ಖನ್ವೀಲ್ಕರ್‌ ಮತ್ತು ನ್ಯಾ. ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ, ಏ. 23ರಂದು ತೀರ್ಪನ್ನು ಕಾಯ್ದಿರಿಸಿತ್ತು.
''ವರದಕ್ಷಿಣೆ ಎನ್ನುವುದು ಜೀವನದ ಮೇಲೆ ಅತೀವ ಪರಿಣಾಮ ಬೀರುವುದರಿಂದ ಮಹಿಳೆಯರಿಗೆ ಲಿಂಗಾಧಾರಿತವಾಗಿ ನ್ಯಾಯ ದೊರಕಿಸಿಕೊಡಬೇಕು. ಇದೇ ವೇಳೆ, ಪುರುಷನ ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು,'' ಎಂದು ನ್ಯಾಯಪಪೀಠ ಅಭಿಪ್ರಾಯಪಟ್ಟಿದೆ.
2017ರ ಜುಲೈನಲ್ಲಿ ಸುಪ್ರೀ ಕೋರ್ಟ್‌ನ ದ್ವಿಸದಸ್ಯ ಪೀಠ ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಯ ತಕ್ಷಣ ಬಂಧನಕ್ಕೆ ತಡೆ ನೀಡಿತ್ತು. ಎರಡೂ ಕಡೆಯ ಕುಟುಂಬ ಸದಸ್ಯರನ್ನು ಒಳಗೊಂಡ ವಿಶೇಷ ಸಮಿತಿಯನ್ನು ರಚಿಸಿ, ಪ್ರಕರಣದ ಸಾಚಾತನ ಖಚಿತಪಟ್ಟ ನಂತರವಷ್ಟೇ ಆರೋಪಿ ಮತ್ತು ಆತನ ಕುಟುಂಬ ಸದಸ್ಯರನ್ನು ಬಂಧಿಸಬೇಕೆಂದು ಸೂಚಿಸಿತ್ತು. ಖೊಟ್ಟಿ ಕೇಸ್‌ಗಳ ಮೂಲಕ ಪುರುಷರನ್ನು ಸಿಕ್ಕಿಸುವ ಪ್ರವೃತ್ತಿ ಹೆಚ್ಚಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಾನೂನಿನಲ್ಲಿ ಮಧ್ಯ ಪ್ರವೇಶ ಮಾಡಿತ್ತು.
〰〰〰〰〰〰〰〰〰〰〰
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇನ್ನೊಂದು ಮೈಲಿಗಲ್ಲು ಮುಟ್ಟಿದ್ದು, ಮೊದಲ ಖಾಸಗಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ.
ಬ್ರಿಟನ್​ನ 2 ಖಾಸಗಿ ನೋವಾಸರ್ ಹಾಗೂ ಎಸ್1-4 ಎಂಬ ಉಪಗ್ರಹಗಳನ್ನು ಸೆಪ್ಟೆಂಬರ್ 16 ರ ಭಾನುವಾರ ರಾತ್ರಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
ಅತಿ ಕಡಿಮೆ ಬೆಲೆಯ S​ ಬ್ಯಾಂಡ್​ ಹೊಂದಿರುವ ಉಪಗ್ರಹಗಳು 889 ಕೆ.ಜಿ ಭಾರ ಹೊತ್ತು ಕಕ್ಷೆಗೆ ಸೇರಲಿರುವ ಉಪಗ್ರಹಗಳು ಅರಣ್ಯ ಮ್ಯಾಪಿಂಗ್, ಹವಾಮಾನ ವೈಪರೀತ್ಯ ಎಚ್ಚರಿಕೆ ಸಂದೇಶ ನೀಡಲಿವೆ.
➖➖➖➖➖➖➖➖➖➖➖
ನಕಲಿ ಕಂಪನಿಗಳನ್ನು ಗುರ್ತಿಸಿ ಅಕ್ರಮ ವಹಿವಾಟನ್ನು ತಡೆಯುವ ಕೇಂದ್ರ ಸರಕಾರದ ಸಮರ ಮುಂದುವರಿದಿದೆ. ನಾನಾ ಕಂಪನಿಗಳ ಸುಮಾರು 21 ಲಕ್ಷ ನಿರ್ದೇಶಕರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಕಲಿ ಕಂಪನಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇದರ ಒಂದು ಭಾಗವಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಲು ಕಂಪನಿಗಳ ನಿರ್ದೇಶಕರಿಗೆ ಸೂಚನೆ ನೀಡಲಾಗಿತ್ತು. ಸೆಪ್ಟೆಂಬರ್ 15 ರ ಗಡುವು ಮುಕ್ತಾಯವಾಗಿದ್ದು, ದೇಶದ 33 ಲಕ್ಷ ನಿರ್ದೇಶಕರ ಪೈಕಿ 21 ಲಕ್ಷ ಮಂದಿ ಕೆವೈಸಿ ವಿವರಗಳನ್ನು ದಾಖಲಿಸಿಲ್ಲ. ಇಂಥವರ ನಿರ್ದೇಶಕತ್ವವು ರದ್ದಾಗಲಿದ್ದು, ಇವರು 'ಡಮ್ಮಿ' ನಿರ್ದೇಶಕರೇ ಎನ್ನುವ ನಿಟ್ಟಿನಲ್ಲಿ ಸರಕಾರ ತನಿಖೆ ನಡೆಸಲಿದೆ.
ನೋಂದಾಯಿತ ಕಂಪನಿಯ ಅರ್ಹ ನಿರ್ದೇಶಕರಿಗೆ ಸರಕಾರವು 'ನಿರ್ದೇಶಕರ ಗುರುತು ಸಂಖ್ಯೆ'ಯನ್ನು(ಡಿಐಎನ್‌) ನೀಡುತ್ತದೆ. ಈ ವಿಶಿಷ್ಠ ಸಂಖ್ಯೆಯನ್ನು ನೀಡುವ ಸಲುವಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಗಡುವಿನಲ್ಲಿ ವಿವರ ಸಲ್ಲಿಸದ ನಿರ್ದೇಶಕರ ಹುದ್ದೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದಾಗ್ಯೂ, ಅಸಲಿ ನಿರ್ದೇಶಕರು ಸಕಾರಣದ ಮನವಿಯೊಂದಿಗೆ ವಿವರಗಳನ್ನು ಸಲ್ಲಿಸಿದರೆ 5000 ರೂ. ಶುಲ್ಕವನ್ನು ಪಡೆದು ಸರಕಾರವು ನಿರ್ದೇಶಕತ್ವವನ್ನು ಮರು ಸಕ್ರಿಯಗೊಳಿಸುತ್ತದೆ.
ನಕಲಿ ಕಂಪನಿಗಳ ಪತ್ತೆಗೆ ಕಾರ್ಪೊರೇಟ್‌ ವ್ಯವಹಾರ ಸಚಿವಾಲಯವು ಅನುಸರಿಸಿರುವ ಹೊಸ ನಡೆ ಇದಾಗಿದ್ದು, ಅನುಮಾನಾಸ್ಪದ ವಹಿವಾಟಿನ ಸುಳಿವು ಸಿಕ್ಕಿದರೆ ಕಂಪನಿಗಳ ವಿರುದ್ಧ ತನಿಖೆ ನಡೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
''ಕಳೆದ ಜೂನ್‌ನಲ್ಲಿ ಈ ಕೆವೈಸಿ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. 33 ಲಕ್ಷ ಸಕ್ರಿಯ ನಿರ್ದೇಶಕರ ಪೈಕಿ ಕೇವಲ 12.16 ಲಕ್ಷ ನಿರ್ದೇಶಕರಷ್ಟೇ ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. 21 ಲಕ್ಷ ಉಳಿಕೆ ನಿರ್ದೇಶಕರು ಕೆವೈಸಿ ಪ್ರಕ್ರಿಯೆಯಲ್ಲಿ ವಿಫಲರಾಗಿದ್ದಾರೆ. ಇಂಥವರ ಡಿಐಎನ್‌ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ವಾರದೊಳಗೆ ಮುಗಿಯಲಿದೆ,'' ಎಂದು ಸಚಿವಾಲಯ ಹೇಳಿದೆ.
ಕಳೆದ ವರ್ಷ ಸಚಿವಾಲಯವು ಸುಮಾರು 3 ಲಕ್ಷ ಜನರ ನಿರ್ದೇಶಕತ್ವವನ್ನು ರದ್ದುಗೊಳಿಸಿತ್ತು. ಈ ನಿಷ್ಕ್ರಿಯ ನಿರ್ದೇಶಕರನ್ನು ಒಳಗೊಂಡ ಕಂಪನಿಗಳು ಸುದೀರ್ಘ ಕಾಲದಿಂದ ವ್ಯವಹಾರ ನಡೆಸದಿರುವುದು ನಂತರದ ತನಿಖೆ ವೇಳೆ ಬಯಲಾಗಿತ್ತು.
〰〰〰〰〰〰〰〰〰〰〰
ಸಂಪನ್ಮೂಲ ಕ್ರೂಡೀಕರಣಕ್ಕಾಗಿ ಎಮ್ಮೆಗಳ ಹರಾಜಿಗೆ ಮುಂದಾಗಿರುವ ಪಾಕಿಸ್ತಾನ ಸರಕಾರವು, ಈಗ ರೈಲ್ವೆ ಇಲಾಖೆಯನ್ನು ಋುಣಮುಕ್ತಗೊಳಿಸಲು ರೈಲ್ವೆ ಭೂಮಿ ಮಾರಾಟ ಮಾಡಲು ತೀರ್ಮಾನಿಸಿದೆ.
ಹೊಸ ರೈಲುಗಳ ಸೇರ್ಪಡೆಯಿಂದ ಪಾಕ್‌ ರೈಲ್ವೆ ಸದ್ಯ 37 ಶತಕೋಟಿ ರೂ.  ಸಾಲದಲ್ಲಿದೆ. ನಿರ್ವಹಣೆಯಲ್ಲಿ ಹೆಚ್ಚುತ್ತಿರುವ ಖರ್ಚು ಮತ್ತು ಅನುತ್ಪಾದಕ ಸ್ವತ್ತುಗಳು ರೈಲ್ವೆಯನ್ನು ಸಾಲದ ಕೂಪಕ್ಕೆ ತಳ್ಳಿವೆ. ಹಲವು ವರ್ಷಗಳಿಂದಲೂ ಪಾಕಿಸ್ತಾನ ರೈಲ್ವೆ ನಷ್ಟದಲ್ಲಿಯೇ ಸಾಗುತ್ತಿದೆ. ಇದರಿಂದ ಹೊರಬರಲು ಆಸ್ತಿ ಮಾರಾಟವೊಂದೇ ಮಾರ್ಗ ಎಂಬ ತೀರ್ಮಾನಕ್ಕೆ ರೈಲ್ವೆ ಸಚಿವ ಶೇಖ್‌ ರಶೀದ್‌ ಅಹಮದ್‌, ಈ ಕುರಿತು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿವಿಧ ನಗರಗಳಲ್ಲಿ ರೈಲ್ವೆ ಇಲಾಖೆ ಒಡೆತನದಲ್ಲಿರುವ ಭೂಮಿಗಳ ವಿವರ ನೀಡುವಂತೆ ಪ್ರಧಾನಿ ನಿರ್ದೇಶನ ನೀಡಿದ್ದಾರೆ. ರೈಲ್ವೆ ಬೃಹತ್‌ ಪ್ರಮಾಣದ ಭೂಮಿಯನ್ನು ಹೊಂದಿದೆ. ಕೆಲವು ಕಡೆ ಈ ಭೂಮಿಯನ್ನು ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಪ್ರಧಾನಿ ನಿರ್ದೇಶನದ ಮೇರೆಗೆ ರೈಲ್ವೆ ಭೂಮಿಯಲ್ಲಿ ವಾಸವಾಗಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅಹಮದ್‌ ತಿಳಿಸಿದ್ದಾರೆ.
ರೈಲ್ವೆ ಉದ್ಯೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ರೈಲ್ವೆ ಆಸ್ಪತ್ರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲು ಚಿಂತನೆ ನಡೆಯುತ್ತಿದೆ. ರೈಲ್ವೆ ಆಸ್ಪತ್ರೆಗಳನ್ನು ಸೇನಾ ವೈದ್ಯಕೀಯ ಮಂಡಳಿಯ ನಿಯಂತ್ರಣಕ್ಕೆ ನೀಡುವ ನಿಟ್ಟಿನಲ್ಲಿಯೂ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
➖➖➖➖➖➖➖➖➖➖➖
ರಾಜ್ಯದಲ್ಲಿ ಪೆಟ್ರೋಲ್ -ಡೀಸೆಲ್‌ ಪ್ರತಿ ಲೀಟರ್‌ಗೆ 2 ರೂ. ಕಡಿಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪೆಟ್ರೋಲ್ -ಡೀಸೆಲ್‌ ದರ ಇಳಿಕೆ ಪ್ರಕಟಿಸಿದರು.
ದೇಶದಲ್ಲಿ  ಪೆಟ್ರೋಲ್‌ ಬೆಲೆ ಏರಿಕೆ ತೀವ್ರಗತಿ ತಲುಪಿದ್ದು, ರಾಜ್ಯದಲ್ಲಿ ಪೆಟ್ರೋಲ್‌ ಬೆಲೆ 84.39 ರೂ. ಆಗಿತ್ತು. ಪೆಟ್ರೋಲ್‌ಗೆ ಈಗಾಗಲೇ ರಾಜಸ್ಥಾನದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಪಶ್ಚಿಮ ಬಂಗಾಳದಲ್ಲಿ ಒಂದು ರೂ. ಇಳಿಕೆಯಾಗಿದೆ.
〰〰〰〰〰〰〰〰〰〰〰
ಪ್ಯಾರಿಸ್​: ವಿಶ್ವದ ಅತ್ಯಂತ ವೇಗದ ಓಟಗಾರ ಎಂದೇ ಖ್ಯಾತರಾಗಿರುವ ಮತ್ತು ಒಲಂಪಿಕ್ಸ್​ನಲ್ಲಿ 8 ಚಿನ್ನದ ಪದಕ ಗೆದ್ದಿರುವ ಉಸೇನ್​ ಬೋಲ್ಟ್​ ಈಗ ಮತ್ತೊಂದು ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ.
ಹೌದು ಭೂಮಿಯ ಮೇಲಿನ ಶರವೇಗದ ಸರದಾರ ಅಂತರಿಕ್ಷದಲ್ಲೂ ತಮ್ಮ ಕಾಲ್ಚಳಕವನ್ನು ತೋರಿದ್ದು, ಜೀರೋ ಗ್ರಾವಿಟಿಯಲ್ಲಿ ನಡೆದ ರೇಸ್​ನಲ್ಲಿ ಗೆಲುವು ಸಾಧಿಸಿದ್ದಾರೆ. ಗುರುತ್ವಾಕರ್ಷಣ ಬಲ ಇಲ್ಲದ ವಾತಾವರಣದ ಅನುಭವ ಪಡೆಯಲು ವಿಶೇಷವಾಗಿ ನಿರ್ಮಿಸಿರುವ ಏರ್​ಬಸ್​ ಜೀರೋ ಗ್ರಾವಿಟಿ ಪ್ಲೇನ್​ನಲ್ಲಿ ಉಸೇನ್​ ಬೋಲ್ಟ್​ ರೇಸ್​ನಲ್ಲಿ ಪಾಲ್ಗೊಂಡಿದ್ದರು.
ಫ್ರಾನ್ಸ್​ನ ಅಂತರಿಕ್ಷಯಾತ್ರಿ ಜೇನ್​ ಫ್ರಾಂಕೋಯಿಸ್​ ಕ್ಲರ್ವೆ ಮತ್ತು ನೋವೆಸ್ಪೇಸ್​ನ ಸಿಇಒ ಹಾಗೂ ಫ್ರಾನ್ಸ್​ನ ಇಂಟೀರಿಯರ್​ ಡಿಸೈನರ್​ ಆಕ್ಟೇವ್ ದೆ ಗೌಲೆ ಅವರೊಂದಿಗೆ ಉಸೇನ್​ ರೇಸ್​ನಲ್ಲಿ ಪಾಲ್ಗೊಂಡಿದ್ದರು. ರೇಸ್​ನಲ್ಲಿ ಗೆದ್ದ ಬೋಲ್ಟ್​ ಎಂದಿನಂತೆ ತಮ್ಮದೇ ಶೈಲಿನಲ್ಲಿ ವಿಶಿಷ್ಟವಾಗಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...