ಐ-ಪ್ಯಾಕ್ ಸರ್ವೆ >>
ನವದೆಹಲಿ: ರಾಷ್ಟ್ರದ ಹಿತ ಕಾಯುವ ನಾಯಕತ್ವ ಗುಣ ಕುರಿತಂತೆ ಆನ್ಲೈನ್ನಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇದ್ದಾರೆ.
ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪ್ಯಾಕ್) ‘ನ್ಯಾಷನಲ್ ಅಜೆಂಡಾ ಫೋರಂ’ ಹೆಸರಿನಲ್ಲಿ ಈ ಸರ್ವೆ ನಡೆಸಿದ್ದು, 57 ಲಕ್ಷ ಮಂದಿ ಅನ್ಲೈನ್ ಮೂಲಕ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಗೆ ಶೇ. 48 ಮಂದಿ ಜೈ ಎಂದಿದ್ದರೆ, ರಾಹುಲ್ ಗಾಂಧಿಗೆ ಶೇ. 11.2 ಮತ್ತು ಅರವಿಂದ ಕೇಜ್ರಿವಾಲ್ಗೆ ಶೇ. 9.3 ಜನರ ಬೆಂಬಲ ದೊರೆತಿದೆ.
ಈ ಸರ್ವೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಶ್ವಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಬಿಹಾರದ ಸಿಎಂ ನಿತೀಶ್ ಕುಮಾರ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಜತೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಅಂತರ್ಜಾಲ ಬಳಕೆದಾರರು ತಮ್ಮ ನೆಚ್ಚಿನ ನಾಯಕನನ್ನು ನಮೂದಿಸಿ ವೋಟ್ ಮಾಡುವ ಅವಕಾಶವನ್ನೂ ನೀಡಲಾಗಿತ್ತು.
10 ವಿಷಯಗಳಲ್ಲಿ ನಾಯಕತ್ವ ಗುಣವನ್ನು ವಿಶ್ಲೇಷಿಸಿ ವೋಟ್ ಮಾಡಬೇಕಿತ್ತು. ಮಹಿಳೆಯರು, ರೈತರು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ, ಆರ್ಥಿಕ ಅಸಮತೋಲನ, ಶಿಕ್ಷಣ ಮತ್ತು ನೈರ್ಮಲ್ಯ, ಕೋಮು ಸೌಹಾರ್ದತೆ, ಸ್ಥಳೀಯ ಭಾಷೆಗಳಿಗೆ ನೀಡುತ್ತಿರುವ ಉತ್ತೇಜನ, ಗ್ರಾಮೀಣ ಶೌಚಾಗೃಹ ಮುಂತಾದವು ಈ ಪಟ್ಟಿಯಲ್ಲಿ ಇದ್ದವು.
ಮಹಾತ್ಮಗಾಂಧಿ ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ ಗಾಂಧಿ ಅವರ ‘ಸ್ವರಾಜ್’ ಪರಿಕಲ್ಪನೆ ಹಿನ್ನೆಲೆಯಲ್ಲಿ ‘ನ್ಯಾಷನಲ್ ಅಜೆಂಡಾ ಫೋರಂ’ ಅಭಿಯಾನವನ್ನು ಐ-ಪ್ಯಾಕ್ ಕಳೆದ ಜುಲೈನಲ್ಲಿ ನಡೆಸಿತ್ತು. ಇದರಲ್ಲಿ ದೇಶದ 500 ಜಿಲ್ಲೆಗಳ 1,500ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗವಹಿಸಿದ್ದರು. -ಏಜೆನ್ಸೀಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ