ಶಿವಕುಮಾರ ಮೆಣಸಿನಕಾಯಿ,
ಬೆಂಗಳೂರು: ಹನ್ನೊಂದು ವರ್ಷಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಡವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸರ್ಕಾರಿ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಅವರು ಮತ್ತೆ ಸಿಎಂ ಆಗಿದ್ದು, ಮದ್ಯ ಮಾರಾಟ ಪ್ರಮಾಣ ರಾಜ್ಯದಲ್ಲಿ 400 ಪಟ್ಟು ಹೆಚ್ಚಳವಾಗಿದೆ. ಅಂದರೆ, ಸರ್ಕಾರಿ ಆದಾಯ ನಿಂತಿದೆ. ಖಾಸಗಿ ಮದ್ಯದ ಕಂಪನಿಗಳಿಗೆ ಕರ್ನಾಟಕ ಫೇವರಿಟ್ ರಾಜ್ಯ ಎನಿಸಿದೆ.
ಅಬಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ 2007-08ರಲ್ಲಿ 4,800 ಕೋಟಿ ರೂ. ಇದ್ದ ಸಾರಾಯಿ/ಮದ್ಯ ಮಾರಾಟದ ಆದಾಯ 2018-19ನೇ ಸಾಲಿಗೆ 19,750 ಕೋಟಿ ರೂ.ಗೆ ತಲುಪಿದೆ. ಅಂದರೆ ಆದಾಯದಲ್ಲಿ 400 ಪಟ್ಟು ಹೆಚ್ಚಳವಾಗಿದ್ದು, ಕುಡಿತದ ಪ್ರಮಾಣ ತಗ್ಗಿಲ್ಲ ಎಂಬುದು ಸಾಬೀತಾಗಿದೆ.
ಬಡವರ ಜೇಬಿಗೆ ಬಿದ್ದ ಕತ್ತರಿ ಎಷ್ಟು?: 2007ರ ಜುಲೈ 1ರಂದು ಸಾರಾಯಿ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸಲಾಗಿತ್ತು. ಅಲ್ಲಿಯವರೆಗೆ ಸರ್ಕಾರಕ್ಕೆ ಸಾರಾಯಿಯಿಂದ 552 ಕೋಟಿ ರೂ., ದೇಶೀಯ ಮದ್ಯ ಉತ್ಪಾದನೆ ಕಂಪನಿಗಳ ಮದ್ಯ ಮಾರಾಟದಿಂದ 4,300 ಕೋಟಿ ರೂ. ಸೇರಿ ಒಟ್ಟು 4,800 ಕೋಟಿ ರೂ. ಆದಾಯ ಬರುತ್ತಿತ್ತು. ಆಗ 10 ರೂ.ಗೆ 1 ಪ್ಯಾಕೆಟ್ ಸಾರಾಯಿ ಸೇವಿಸುತ್ತಿದ್ದ ಬಡವರು, ನಿಷೇಧದ ಬಳಿಕ ಸರಾಸರಿ 40 ರೂ.ಗೆ ದೇಶೀಯ ಮದ್ಯ ಕುಡಿಯಲು ಆರಂಭಿಸಿದರು. ಹೀಗಾಗಿ ಖಾಸಗಿ ಮದ್ಯ ಕಂಪನಿಗಳು ರಾಜ್ಯದಲ್ಲಿ ಚಿಗುರತೊಡಗಿದವು. ಇದರಿಂದ ಬಡವರ ಜೇಬಿಗೆ ಕತ್ತರಿ ಬಿತ್ತೇ ಹೊರತು ಮದ್ಯ ಸೇವನೆರಹಿತ ರಾಜ್ಯ ನಿರ್ಮಾಣ ಆಗಲಿಲ್ಲ.
ಎಂಎಸ್ಐಎಲ್ ಮೂಲಕ ಮತ್ತೆ ಮಾರಾಟ: ರಾಜ್ಯ ಸರ್ಕಾರ ಸಾರಾಯಿ ಮಾರಾಟ ನಿಲ್ಲಿಸಿತು. ಆದರೆ ಕಳೆದ 9 ವರ್ಷಗಳಿಂದ ಅಂದರೆ, 2009ರ ಸೆಪ್ಟೆಂಬರ್ನಿಂದ ಖಾಸಗಿ ಕಂಪನಿಗಳು ತಯಾರಿಸಿದ ಮದ್ಯವನ್ನು ಸರ್ಕಾರಿ ಒಡೆತನದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಮುಖಾಂತರ ಸರ್ಕಾರ ಮಾರಲಾರಂಭಿಸಿದ್ದು, ಸದ್ಯ ರಾಜ್ಯದಲ್ಲಿ 355 ಶಾಪ್ಗಳಿವೆ. ಒಂದೆಡೆ ಅಗ್ಗದ ದರದಲ್ಲಿ ಬಡವರಿಗೆ ಸಿಗುತ್ತಿದ್ದ ಸಾರಾಯಿ ನಿಲ್ಲಿಸಿ, ಮತ್ತೊಂದೆಡೆ ವಿದೇಶಿ ಮದ್ಯ ಮಾರಾಟ ಕಂಪನಿಗಳು ರಾಜ್ಯದಲ್ಲಿ ಉತ್ಪಾದಿಸುವ ಮದ್ಯ ಮಾರಲು ಸರ್ಕಾರವೇ ಮಳಿಗೆಗಳನ್ನು ತೆರೆಯಿತು. ಇನ್ನು ಸರ್ಕಾರವೇ ಲೈಸೆನ್ಸ್ ನೀಡಿರುವ 10,136 ಬಾರ್-ವೈನ್ಶಾಪ್ಗಳಿದ್ದು, ಇವುಗಳ ಮೂಲಕ 20 ಸಾವಿರ ಕೋಟಿ ರೂ. ಆದಾಯ ತೆರಿಗೆ ರೂಪದಲ್ಲಿ ಸರ್ಕಾರ ಸಂಗ್ರಹಿಸುತ್ತಿದೆ.
ಕರ್ನಾಟಕವೇ ಹಾಟ್ ಫೇವರಿಟ್: ರಾಜ್ಯದಲ್ಲಿ ಸಾರಾಯಿ ಮಾರಾಟ ಮುಕ್ತವಾಗಿದ್ದಾಗ ಸರ್ಕಾರದಿಂದ ಅನುಮತಿ ಪಡೆದ ಡಿಸ್ಟಿಲರಿಗಳ ಸಂಖ್ಯೆ ಕೇವಲ 22. ಆದರೆ ಈ ಸಲದ ಅಬಕಾರಿ ವರ್ಷದ ಅಂತ್ಯಕ್ಕೆ ಕರ್ನಾಟಕದಲ್ಲಿರುವ ಡಿಸ್ಟಿಲರಿಗಳ ಸಂಖ್ಯೆ ಬರೋಬ್ಬರಿ 112. ಇಲ್ಲಿನ ಸರ್ಕಾರಗಳು ‘ಮದ್ಯ ಸ್ನೇಹಿ’ ಎಂಬುದನ್ನು ಮನವರಿಕೆ ಮಾಡಿಕೊಂಡಿರುವ ಖಾಸಗಿ ಕಂಪನಿಗಳು, ಪ್ರತಿವರ್ಷ ರಾಜ್ಯ ಸರ್ಕಾರ ಅಬಕಾರಿಯಿಂದಲೇ ಹೆಚ್ಚು ಆದಾಯ ಸಂಗ್ರಹದ ಗುರಿ ಹೊಂದುವುದರಿಂದ ಅದಕ್ಕೆ ತಕ್ಕಂತೆ ಉತ್ಪಾದನೆ ಮತ್ತು ಮಾರಾಟ ದ್ವಿಗುಣ ಮಾಡಿಕೊಳ್ಳುತ್ತಿವೆ.
ಹಲ್ಲಿಲ್ಲದ ಹಾವು: ಇನ್ನು ಕರ್ನಾಟಕವನ್ನು ಸಂಪೂರ್ಣ ಮದ್ಯ ಮಾರಾಟ ಮುಕ್ತಗೊಳಿಸಬೇಕೆಂದು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಒತ್ತಾಯಿಸುತ್ತ ಬಂದಿದ್ದರೂ ಅದಕ್ಕೆ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಜತೆಗೆ ಮದ್ಯಪಾನ ಸಂಯಮ ಮಂಡಳಿ ಹಲ್ಲಿಲ್ಲದ ಹಾವಿನಂತಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ