ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಕರಾಳ ಸುನಾಮಿ: ಇಂಡೋನೇಷ್ಯಾದಲ್ಲಿ ರಕ್ಕಸ ಅಲೆಗೆ 430 ಬಲಿ,

ಸರಣಿ ಪ್ರಾಕೃತಿಕ ವಿಕೋಪಗಳ ಇತಿಹಾಸದಿಂದಲೇ ಕುಖ್ಯಾತಿ ಪಡೆದಿರುವ ಇಂಡೋನೇಷ್ಯಾ ಮತ್ತೆ ಭೀಕರ ಭೂಕಂಪ, ಸುನಾಮಿಗೆ ಬೆಚ್ಚಿದೆ. ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿದ ಸುಲವೇಸಿ ದ್ವೀಪದ ಪಲುವಿನಲ್ಲಿ 430ಕ್ಕೂ ಹೆಚ್ಚು ಶವಗಳು ಪತ್ತೆಯಾಗಿದ್ದು, ಇಡೀ ನಗರ ಅಕ್ಷರಶಃ ಸ್ಮಶಾನವಾಗಿದೆ. ಸಾವಿರಾರು, ಮನೆ, ಕಟ್ಟಡಗಳು ನೆಲಕ್ಕುರುಳಿದ್ದು, ಸಾವಿನ ಸಂಖ್ಯೆ ಸಾವಿರ ಮುಟ್ಟುವ ಸಾಧ್ಯತೆ ಗೋಚರಿಸಿದೆ. ನಾಪತ್ತೆಯಾಗಿರುವ ನೂರಾರು ಜನರಿಗಾಗಿ ಶೋಧ ಕಾರ್ಯ ಆರಂಭವಾಗಿದ್ದು, ಗಾಯಾಳುಗಳು, ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ.
ಎಲ್ಲಿ ಭೂಕಂಪ – ಸುಲವೇಸಿ ದ್ವೀಪದ ಪಲು ನಗರ
ಯಾವಾಗ – ಶುಕ್ರವಾರ ಸಂಜೆ
ಏನಾಯ್ತು? – 7.5ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಳಿಕ ಸುನಾಮಿ ಆರ್ಭಟ
ಕಂಡಲೆಲ್ಲ ಶವ
ಪ್ರಮುಖ ಜನನಿಬಿಡ ಪ್ರದೇಶಗಳ ರಸ್ತೆಗಳ ಎಲ್ಲೆಂದರಲ್ಲಿ ಶವಗಳ ಸಾಲು ಕಂಡು ಬರುತ್ತಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಎಂದು ಅಧಿಕಾರಿಗಳು ಹೇಳಿದ್ದಾರೆ.
5 -18 ಅಡಿ ಅಲೆ ಆರ್ಭಟ
3.50 ಲಕ್ಷ ಜನಸಂಖ್ಯೆ ಇರುವ ಸುಲವೇಸಿ ದ್ವೀಪದಲ್ಲಿ ಬೀಚ್ ಫೆಸ್ಟಿವಲ್ ಸಂಭ್ರಮದ ಸಿದ್ಧತೆ ನಡೆದಿತ್ತು. ಇದ್ದಕ್ಕಿದಂತೆ 5ರಿಂದ 18 ಅಡಿ ಎತ್ತರದವರೆಗೆ ಬಂದ ಸಮುದ್ರದ ಅಲೆಯಲ್ಲಿ ನೂರಾರು ಜನ ಕೊಚ್ಚಿಹೋದರು. ನಾಪತ್ತೆಯಾಗಿರುವವರನ್ನು ಬಿಟ್ಟು 600 ಜನ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುನಾಮಿಗೆ 400 ಬಲಿ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಗೆ 430ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
ಪಲು ನಗರದ ಸುತ್ತಲಿನ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪನದಿಂದ 5ರಿಂದ 18 ಅಡಿ ಎತ್ತರದ ಸುನಾಮಿ ಅಲೆಗಳು ಸೃಷ್ಟಿಯಾಗಿದ್ದವು. ಅಲೆಗೆ ಸಿಲುಕಿ 400ಕ್ಕೂ ಅಧಿಕ ಜನ ಮೃತಗೊಂಡಿದ್ದರೆ, ಭೂಕಂಪನಕ್ಕೆ 30ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. ಸುಮಾರು 600 ಜನ ತೀವ್ರ ಗಾಯಗೊಂಡಿದ್ದು, 29 ಜನ ನಾಪತ್ತೆಯಾಗಿರುವ ವರದಿಯಾಗಿದೆ. ಪಲು ನಗರದಲ್ಲಿನ ಬಹುತೇಕ ಮನೆಗಳು ಸುನಾಮಿಗೆ ಕೊಚ್ಚಿಹೋಗಿವೆ. 3.50 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಪಲು ನಗರದ ಕಡಲ ತೀರಕ್ಕೆ ಅಪ್ಪಳಿಸಿದ ಬೃಹತ್ ಅಲೆಗಳಿಂದ ಶಾಪಿಂಗ್ ಮಾಲ್, ಮಸೀದಿ, ಮನೆಗಳನ್ನು ಜಲಾವೃತಗೊಂಡಿವೆ. ಬಹುತೇಕ ಕಟ್ಟಡಗಳು ಶಿಥಿಲ ಗೊಂಡಿವೆ. ಪಲು ಭಾಗದಲ್ಲಿ ತುರ್ತು ಪರಿಹಾರ ಕೇಂದ್ರಗಳನ್ನು ತೆರೆದಿರುವ ಇಂಡೋನೇಷ್ಯಾ ಸರ್ಕಾರ, ಸೇನೆಯನ್ನು ಕಳುಹಿಸಿಕೊಟ್ಟಿದೆ. ವಿಮಾನ ನಿಲ್ದಾಣ ಕೂಡ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಸೇನೆಯ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ತಪ್ಪಿದ ಭಾರಿ ಅನಾಹುತ: ದ್ವೀಪ ನಗರಿ ಸುಲವೇಸಿ, ಡೊಂಗ್ಗಾಲಾದಲ್ಲಿ ಭೂಕಂಪ ಕೇಂದ್ರೀತವಾಗಿತ್ತು. ಪಲುನಲ್ಲಿ ಸುನಾಮಿ ಎಚ್ಚರಿಕೆಯನ್ನೂ ನೀಡಲಾ ಗಿತ್ತು. ಆದಾಗ್ಯೂ ಪಲು ನಗರದ ಕಡಲ ತೀರದಲ್ಲಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ತಯಾರಿ ನಡೆಸಲಾಗುತ್ತಿತ್ತು. ಶುಕ್ರವಾರ ಸಂಜೆಯ ನಂತರ ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಬರುವವರಿದ್ದರು. ಆದರೆ ಕಾರ್ಯಕ್ರಮದ ತಯಾರಿ ಸಂದರ್ಭದಲ್ಲಿಯೇ ಸುನಾಮಿ ಅಪ್ಪಳಿಸಿದೆ. ಇದರಿಂದ ಸಾವಿನ ಸಂಖ್ಯೆ ಕಡಿಮೆ ಯಾಗಿದೆ ಎಂದು ಇಂಡೋನೇಷ್ಯಾ ಪ್ರಕೃತಿ ವಿಕೋಪ ಇಲಾಖೆ ತಿಳಿಸಿದೆ. ಆದರೆ ಈ ಕಾರ್ಯಕ್ರಮದ ಬಹುತೇಕ ಆಯೋಜಕರು ಈಗ ನಾಪತ್ತೆಯಾಗಿದ್ದಾರೆ.
ಭಾರತ, ವಿಶ್ವಸಂಸ್ಥೆ ನೆರವು: ಸುನಾಮಿಯಿಂದ ತತ್ತರಿಸಿರುವ ಇಂಡೋನೇಷ್ಯಾಕ್ಕೆ ಭಾರತ ಹಾಗೂ ವಿಶ್ವಸಂಸ್ಥೆ ನೆರವು ಘೋಷಿಸಿವೆ. ಪರಿಹಾರ ಕಾರ್ಯಾಚರಣೆ ಹಾಗೂ ಮರು ನಿರ್ವಣಕ್ಕೆ ನೆರವು ನೀಡುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.
ರಸ್ತೆಯಲ್ಲೇ ಚಿಕಿತ್ಸೆ
ಸುನಾಮಿ ಅಲೆಗೆ ಬಲಿಯಾದ ಪ್ರಾಣಿಗಳು, ಜಲಚರಗಳ ಮೃತದೇಹ ಪಲು ನಗರದ ರಸ್ತೆಗಳಲ್ಲಿ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿವೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಸ್ಥಳವಿಲ್ಲದಂತಾಗಿದೆ. ವೈದ್ಯರು ರಸ್ತೆ ಮಧ್ಯದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
2.30 ಲಕ್ಷ ಜನರ ಬಲಿ ಪಡೆದಿದ್ದ ಸುನಾಮಿ!
ಸುನಾಮಿ ಎಂದಾಕ್ಷಣ ಹಿಂದು ಮಹಾಸಾಗರದ ಸುತ್ತಲಿನ ಭಾರತ, ಇಂಡೋನೇಷ್ಯಾ, ಶ್ರೀಲಂಕಾದ ಜನರನ್ನು ಬೆಚ್ಚಿಬೀಳಿಸುವುದು 2004ರ ಘಟನೆ. ಸುಮಾತ್ರಾ ದ್ವೀಪದಲ್ಲಿ ಕೇಂದ್ರಿತವಾದ 9.1 ತೀವ್ರತೆಯ ಭೂಕಂಪನದ ಪರಿಣಾಮದಿಂದಾಗಿ 108 ಅಡಿಗಳ ಎತ್ತರದ ಸುನಾಮಿ ಅಲೆಗಳು ಇಂಡೋನೇಷ್ಯಾದ ನಗರಗಳನ್ನು ಆಹುತಿ ಪಡೆದುಕೊಂಡಿದ್ದವು. ಇಂಡೋನೇಷ್ಯಾ ಒಂದರಲ್ಲೇ 1.7 ಲಕ್ಷಕ್ಕೂ ಅಧಿಕ ಜನ ಮೃತರಾಗಿದ್ದರು. ತಮಿಳುನಾಡಿನ ಕೆಲ ಪ್ರದೇಶಗಳಿಗೂ ರಕ್ಕಸ ಅಲೆಗಳು ಅಪ್ಪಳಿಸಿದ್ದವು. 20 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಒಟ್ಟಾರೆ 2004 ಸುನಾಮಿಗೆ 2.30 ಲಕ್ಷ ಜನ ಬಲಿಯಾಗಿ, ವಿಶ್ವದ ಅತ್ಯಂತ ಭೀಕರ ಪ್ರಾಕೃತಿಕ ವಿಕೋಪ ಎಂದು ಗುರುತಿಸಲಾಗಿತ್ತು.
ಸರಣಿ ಭೂಕಂಪನ
ಇಂಡೋನೇಷ್ಯಾದ ಪಾಲಿಗೆ ಭೂಕಂಪನ ಹಾಗೂ ಸುನಾಮಿ ಕಾಯಂ ಶತ್ರುವಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ಮೂರನೇ ಭೂಕಂಪ. ಲಾಂಬಾಕ್ ನಗರದಲ್ಲಿ ಜುಲೈ ಹಾಗೂ ಆಗಸ್ಟ್​ನಲ್ಲಿ ಸಂಭವಿಸಿದ್ದ ಸರಣಿ ಭೂಕಂಪಕ್ಕೆ 520ಕ್ಕೂ ಅಧಿಕ ಜನ ಬಲಿಯಾಗಿದ್ದರು. ಪಲು ನಗರಕ್ಕೆ 1927, 1968ರಲ್ಲಿ ಸುನಾಮಿ ಅಪ್ಪಳಿಸಿತ್ತು. ಈಗ ಸುಮಾರು 5 ದಶಕಗಳ ಬಳಿಕ ಮತ್ತೆ ಜನರಿಗೆ ಸುನಾಮಿ ಕಾಡಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...