ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಜಿನ್ಸನ್ ರಿಲೇ ತಂಡಕ್ಕೆ ಬಂಗಾರ

ಇಂಚೋನ್ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಗೆದ್ದ ಸ್ವರ್ಣ ಹಾಗೂ ಪದಕಗಳ ಸಂಖ್ಯೆಯ ಗಡಿಯನ್ನು ದಾಟಿಸಿದ ಸಾಹಸದೊಂದಿಗೆ ಹಾಲಿ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಅಥ್ಲೆಟಿಕ್ಸ್ ಅಭಿಯಾನ ಕೊನೆಗೊಂಡಿದೆ. ಪುರುಷರ 1500 ಮೀಟರ್ ಓಟದಲ್ಲಿ ಜಿನ್ಸನ್ ಜಾನ್ಸನ್ ಹಾಗೂ ಮಹಿಳೆಯರ 4/400 ಮೀಟರ್ ರಿಲೇಯಲ್ಲಿ ಕನ್ನಡತಿ ಎಂಆರ್ ಪೂವಮ್ಮ ಒಳಗೊಂಡ ಭಾರತ ತಂಡ ಸ್ವರ್ಣ ಗೆಲ್ಲುವುದರೊಂದಿಗೆ 2014ರಲ್ಲಿ ಗೆದ್ದಿದ್ದ ಏಷ್ಯಾಡ್ ಸ್ವರ್ಣ ಸಂಖ್ಯೆಯನ್ನು ದಾಟಿತು. ಉಳಿದಂತೆ ಅಥ್ಲೆಟಿಕ್ಸ್ ಸ್ಪರ್ಧೆಯ ಅಂತಿಮ ದಿನ 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆಲ್ಲುವ ಮೂಲಕ ಹಾಲಿ ಗೇಮ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 59ಕ್ಕೇರಿದ್ದು, ಈವರೆಗಿನ 2ನೇ ಅತ್ಯುತ್ತಮ ಏಷ್ಯಾಡ್ ನಿರ್ವಹಣೆ ಎನಿಸಿದೆ.
 ಏಷ್ಯಾಡ್​ನ 12ನೇ ದಿನ ಬೆಳಗಿನ ಅವಧಿಯಲ್ಲಿ ಒಂದೂ ಪದಕ ಗೆಲ್ಲದ ಭಾರತ, ದಿನದ ಅಂತ್ಯದಲ್ಲಿ ಎರಡು ಸ್ವರ್ಣದೊಂದಿಗೆ ಐದು ಪದಕ ಗೆದ್ದುಕೊಂಡಿತು. ಹಿಮಾ ದಾಸ್, ಕರ್ನಾಟಕದ ಎಂಆರ್ ಪೂವಮ್ಮ, ಸರಿತಾ ಬೆನ್ ಗಾಯಕ್ವಾಡ್ ಹಾಗೂ ವಿಸ್ಮಯಾ ವಿಕೆ ಇದ್ದ ಮಹಿಳೆಯರ 4/400 ಮೀಟರ್ ರಿಲೇ ತಂಡ ಸತತ 5ನೇ ಬಾರಿಗೆ ಏಷ್ಯಾಡ್ ಸ್ವರ್ಣ ಜಯಿಸಿತು. 3 ನಿಮಿಷ 28.72 ಸೆಕೆಂಡ್​ನಲ್ಲಿ ಗುರಿ ಕ್ರಮಿಸುವ ಮೂಲಕ ಭಾರತದ 13ನೇ ಸ್ವರ್ಣ ಜಯಿಸಿತು. ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಅದ್ಭುತ ನಿರ್ವಹಣೆ ನೀಡುತ್ತಿರುವ ಬಹರೇನ್, 3 ನಿಮಿಷ 30.61 ಸೆಕೆಂಡ್​ನಲ್ಲಿ ಗುರಿ ಕ್ರಮಿಸಿ ಬೆಳ್ಳಿ ಜಯಿಸಿದರೆ, ವಿಯೆಟ್ನಾಂ 3 ನಿಮಿಷ 33.23 ಸೆಕೆಂಡ್​ನಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದಿತು. ಮಹಿಳಾ ರಿಲೇ ತಂಡ 2002ರಿಂದಲೂ ಸತತವಾಗಿ ಏಷ್ಯಾಡ್ ಸ್ವರ್ಣ ಜಯಿಸಿದೆ. ಗೇಮ್್ಸ ದಾಖಲೆಯನ್ನೂ ಹೊಂದಿರುವ ಭಾರತ ತಂಡಕ್ಕೆ ಆರಂಭದಲ್ಲಿಯೇ ಹಿಮಾ ದಾಸ್ ಮುನ್ನಡೆ ತಂದುಕೊಟ್ಟರು. 6ನೇ ಲೇನ್​ನಿಂದ ರೇಸ್ ಆರಂಭಿಸಿದ ಹಿಮಾ, ಬ್ಯಾಟನ್ ವರ್ಗಾಯಿಸುವ ಮುನ್ನ ದೊಡ್ಡ ಅಂತರದ ಮುನ್ನಡೆ ನೀಡಿದ್ದರು. ಕ್ರಮವಾಗಿ ನಂತರ ಓಡಿದ ಎಂಆರ್ ಪೂವಮ್ಮ, ಸರಿತಾಬೆನ್ ಹಾಗೂ ವಿಸ್ಮಯಾ ಈ ಮುನ್ನಡೆಯನ್ನು ಉಳಿಸಿಕೊಂಡು ಗೆಲುವಿಗೆ ನೆರವಾದರು. ಇದಕ್ಕೂ ಮುನ್ನ ಪುರುಷರ 1500 ಮೀಟರ್ ಓಟದಲ್ಲಿ ಜಿನ್ಸನ್ ಜಾನ್ಸನ್ ಭಾರತಕ್ಕೆ 12ನೇ ಸ್ವರ್ಣ ಗೆದ್ದುಕೊಟ್ಟರು. 800 ಮೀಟರ್ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಜಿನ್ಸನ್, 3 ನಿಮಿಷ 44.72 ಸೆಕೆಂಡ್​ನಲ್ಲಿ ಗುರಿ ಮುಟ್ಟುವ ಮೂಲಕ 56 ವರ್ಷಗಳ ಬಳಿಕ ಈ ವಿಭಾಗದಲ್ಲಿ ಸ್ವರ್ಣ ಜಯಿಸಿದ ಮೊದಲ ಭಾರತೀಯ ಎನಿಸಿದರು. 1962ರಲ್ಲಿ ಮೋಹಿಂದರ್ ಸಿಂಗ್ 1500 ಮೀ. ಸ್ವರ್ಣ ಗೆದ್ದ ಬಳಿಕ ಭಾರತದ ಯಾವೊಬ್ಬ ಅಥ್ಲೀಟ್ ಕೂಡ ಈ ಸಾಧನೆ ಮಾಡಿರಲಿಲ್ಲ. ಈ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಭಾರತದ ಇನ್ನೊಬ್ಬ ಅಥ್ಲೀಟ್ ಮಂಜಿತ್ ಸಿಂಗ್ 4ನೇ ಸ್ಥಾನ ಪಡೆದರು. -ಪಿಟಿಐ/ಏಜೆನ್ಸೀಸ್
ಪುರುಷರ ರಿಲೇ ತಂಡಕ್ಕೆ ಬೆಳ್ಳಿ
 ಮಹಿಳಾ ತಂಡದ ಯಶಸ್ಸನ್ನು ಪುನರಾವರ್ತಿಸಲು ಪುರುಷರ 4/400 ಮೀಟರ್ ರಿಲೇ ತಂಡ ವಿಫಲವಾಯಿತು. ಹಾಗಿದ್ದರೂ, 4ನೇ ಸ್ಥಾನದಿಂದ ಮೇಲೆದ್ದು, ಬೆಳ್ಳಿ ಪದಕ ಗೆಲ್ಲುವಲ್ಲಿ ಯಶ ಕಂಡಿದ್ದು ಸಾಧನೆ. ಕನ್ಹು ಮೊಹಮದ್, ಧಾರುಣ್ ಅಯ್ಯಸ್ವಾಮಿ, ಮೊಹಮದ್ ಅನಾಸ್, ರಾಜೀವ್ ಅರೋಕಿಯಾ ಇದ್ದ ತಂಡ 3ನಿಮಿಷ 1.85 ಸೆಕೆಂಡ್​ನಲ್ಲಿ ಗುರಿ ಮುಟ್ಟಿ ಬೆಳ್ಳಿ ಜಯಿಸಿತು. ಕತಾರ್ ತಂಡ ಗೇಮ್್ಸ ದಾಖಲೆಯೊಂದಿಗೆ ಚಿನ್ನ ಗೆದ್ದಿತು.
ಅಥ್ಲೆಟಿಕ್ಸ್ ಅಭಿಯಾನ ಅಂತ್ಯ
ಭಾರತಕ್ಕೆ 7 ಚಿನ್ನ, 10 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆಲ್ಲಿಸಿಕೊಟ್ಟ ಸಾಧನೆಯೊಂದಿಗೆ ಹಾಲಿ ಏಷ್ಯಾಡ್​ನಲ್ಲಿ ಅಥ್ಲೆಟಿಕ್ಸ್ ವಿಭಾಗದ ಅಭಿಯಾನ ಕೊನೆಗೊಂಡಿದೆ. ಅದರೊಂದಿಗೆ ಭಾರತ ಈವರೆಗಿನ ಅತ್ಯಂತ ಯಶಸ್ವಿ ಏಷ್ಯನ್ ಗೇಮ್್ಸ ಇದಾಗುವ ನಿರೀಕ್ಷೆಯೂ ಹರಡಿದೆ.
ಚಿತ್ರಾ, ಸೀಮಾಗೆ ಕಂಚಿನ ಪದಕ
 ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಸೀಮಾ ಪೂನಿಯಾ ದಿನದ ಮೊದಲ ಪದಕವನ್ನು ಗೆದ್ದುಕೊಟ್ಟರು. ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಇಂಚೋನ್ ಏಷ್ಯಾಡ್​ನಲ್ಲಿ ಸ್ವರ್ಣ ಗೆದ್ದಿದ್ದ ಸೀಮಾ 62.26 ಮೀಟರ್ ದೂರ ಡಿಸ್ಕಸ್ ಎಸೆದು ಕಂಚಿನ ಪದಕ ಜಯಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇನ್ನೊಬ್ಬ ಅಥ್ಲೀಟ್ ಸಂದೀಪ್ ಕುಮಾರಿ 54.61 ಮೀಟರ್ ಸಾಧನೆಯೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಸೀಮಾ ಪದಕ ಗೆದ್ದ ಕೆಲ ಕ್ಷಣದಲ್ಲಿಯೇ ಕೇರಳದ ಪಿಯು ಚಿತ್ರಾ, ಮಹಿಳೆಯರ 1500 ಮೀಟರ್ ಓಟದಲ್ಲಿ ಕಂಚಿನ ಪದಕ ಜಯಿಸಿದರು. ಏಷ್ಯನ್ ಚಾಂಪಿಯನ್ ಕೂಡ ಆಗಿರುವ ಚಿತ್ರಾ ಹಾಲಿ ಋತುವಿನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಅಥ್ಲೀಟ್ ಎನಿಸಿದ್ದರೂ, 4 ನಿಮಿಷ 12.56 ಸೆಕೆಂಡ್​ನಲ್ಲಿ ಗುರಿ ಮುಟ್ಟಿ 3ನೇ ಸ್ಥಾನ ಪಡೆದರು.
ಹಾಕಿಯಲ್ಲಿ ಆಘಾತ ಎದುರಿಸಿದ ಭಾರತ
 ಜಕಾರ್ತ: ಹಾಲಿ ಚಾಂಪಿಯನ್ ಆಗಿದ್ದ ಭಾರತ ತಂಡ ಏಷ್ಯನ್ ಗೇಮ್ಸ್​ನ ಸ್ವರ್ಣ ಪದಕದ ಹೋರಾಟದಿಂದ ಹೊರಬಿದ್ದಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತನಗಿಂತ ಏಳು ಸ್ಥಾನ ಕೆಳಗಿರುವ ಮಲೇಷ್ಯಾ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ 6-7ರಿಂದ ಸೋಲು ಕಂಡು ನಿರಾಸೆ ಎದುರಿಸಿತು. ಲೀಗ್ ಹಂತದಲ್ಲಿ ಬರೋಬ್ಬರಿ 76 ಗೋಲು ಬಾರಿಸಿದ್ದ ಭಾರತ, ಉಪಾಂತ್ಯ ಪಂದ್ಯದ ನಿಗದಿತ ಅವಧಿಯ ಕೊನೆಯ ನಿಮಿಷದಲ್ಲಿ ಮಲೇಷ್ಯಾಗೆ ಗೋಲು ಬಿಟ್ಟುಕೊಟ್ಟು ನಿರಾಸೆ ಕಂಡಿತು. ಸೆ. 1 ರಂದು ಕಂಚಿನ ಪದಕದ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಜಿಬಿಕೆ ಹಾಕಿ ಫೀಲ್ಡ್​ನಲ್ಲಿ ಗುರುವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 2-2 ರಿಂದ ಸಮಬಲ ಸಾಧಿಸಿತ್ತು. ಆ ಬಳಿಕ ಫಲಿತಾಂಶ ನಿರ್ಧಾರಕ್ಕೆ ತಲಾ 5 ಅವಕಾಶಗಳ ಪೆನಾಲ್ಟಿ ಶೂಟೌಟ್ ನೀಡಲಾಗಿತ್ತು. ಈ ಹಂತದಲ್ಲಿಯೂ ಎರಡೂ ತಂಡಗಳು 2-2 ಗೋಲುಗಳ ಸಮಬಲ ಕಂಡಿದ್ದರಿಂದ ಸಡನ್ ಡೆತ್ ನಿಯಮ ಅಳವಡಿಸ ಲಾಗಿತ್ತು. ಮೊದಲ ನಾಲ್ಕು ಅವಕಾಶಗಳಲ್ಲಿ ಎರಡೂ ತಂಡಗಳು ಗೋಲು ಸಿಡಿಸಿದರೂ, 5ನೇ ಅವಕಾಶದಲ್ಲಿ ಮಲೇಷ್ಯಾ ಬಾರಿಸಿದ ಗೋಲಿಗೆ ಸಮಬಲ ತರುವಲ್ಲಿ ಭಾರತ ವಿಫಲವಾಯಿತು.   ಕರ್ನಾಟಕದ ಎಸ್​ವಿ ಸುನೀಲ್ ತೆಗೆದುಕೊಂಡ ಪೆನಾಲ್ಟಿ ಸ್ಟ್ರೋಕ್​ಅನ್ನು ಮಲೇಷ್ಯಾ ಗೋಲ್ಕೀಪರ್ ಕುಮಾರ ಸುಬ್ರಹ್ಮಣ್ಯಂ ಯಶಸ್ವಿಯಾಗಿ ತಡೆದು ತಂಡದ ಗೆಲುವಿಗೆ ಕಾರಣರಾದರು. ಇಡೀ ಪಂದ್ಯದಲ್ಲಿ ಭಾರತದ ಡಿಫೆಂಡರ್​ಗಳು ನಿರಾಶಾದಾಯಕ ನಿರ್ವಹಣೆ ತೋರಿದರು. ಎರಡು ಬಾರಿ ಮುನ್ನಡೆ ಕಂಡಿದ್ದ ತಂಡ, ಡಿಫೆಂಡರ್​ಗಳ ಪ್ರಮಾದಕ್ಕೆ ಬೆಲೆ ಕಟ್ಟಿತು. ನಿಗದಿತ ಅವಧಿಯಲ್ಲಿ ಹರ್ವನ್​ಪ್ರೀತ್ ಸಿಂಗ್ (33ನೇ ನಿಮಿಷ) ಹಾಗೂ ವರುಣ್ ಕುಮಾರ್ (40)ಗೋಲು ಬಾರಿಸಿದರೆ, ಮಲೇಷ್ಯಾ ಪರ ಫೈಜಲ್ ಸಾರ್ರಿ (24) ಹಾಗೂ ಮೊಹಮದ್ ರಾಜಿ (59) ಗೋಲು ಬಾರಿಸಿದ್ದರು.
150 ಜಿನ್ಸನ್ ಜಾನ್ಸನ್ ಸ್ವರ್ಣದೊಂದಿಗೆ ಭಾರತ ತಂಡ ಒಟ್ಟಾರೆ ಏಷ್ಯನ್ ಗೇಮ್ಸ್​ನಲ್ಲಿ 150 ಸ್ವರ್ಣ ಪದಕಗಳ ಗಡಿ ಮುಟ್ಟಿತು. 1951ರ ನವದೆಹಲಿ ಏಷ್ಯನ್ ಗೇಮ್ಸ್​ನಲ್ಲಿ 15 ಸ್ವರ್ಣ ಗೆದ್ದಿದ್ದ ಭಾರತ, ಆ ನಂತರ ನಡೆದ ಎಲ್ಲಾ ಗೇಮ್ಸ್​ಗಳಲ್ಲಿ ಕನಿಷ್ಠ ಒಂದಾದರೂ ಸ್ವರ್ಣ ಪದಕ ಜಯಿಸಿದೆ. 1990ರ ಬೀಜಿಂಗ್ ಏಷ್ಯಾಡ್​ನಲ್ಲಿ 1 ಸ್ವರ್ಣ ಗೆದ್ದಿದ್ದು ಭಾರತದ ಈವರೆಗಿನ ಕಳಪೆ ದಾಖಲೆ.
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...