1. ಭಾರತದ ಕೆಳಗಿನ ಯಾವ
ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದೆ?
1. ತ್ರಿಪುರ
2. ತಮಿಳುನಾಡು
3. ಕರ್ನಾಟಕ
4. ಆಂಧ್ರಪ್ರದೇಶ
Correct Answer: option3
Justification: ದೇಶದಲ್ಲಿ
ಅತಿ ಹೆಚ್ಚು ಆತ್ಮಹತ್ಯೆ
ಪ್ರಕರಣಗಳು ವರದಿಯಾಗುವ ರಾಜ್ಯಗಳಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ತ್ರಿಪುರ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕ್ರಮವಾಗಿ ನಂತರ ಸ್ಥಾನದಲ್ಲಿದೆ. 1990-2016ರ ಅವಧಿಯಲ್ಲಿ ಜಾಗತೀಕ ಆರೋಗ್ಯ ಸಮಸ್ಯೆಗಳು &ಪರಿಣಾಮ ಕುರಿತು ನಡೆಸಿದ ಈ ಅಧ್ಯಯನ ವರದಿ ಲ್ಯಾಸ್ಪೆಟ್
ಪಬ್ಲಿಕ್ ಹೆಲ್ತ್ ಜನರಲ್‍ನಲ್ಲಿ ಪ್ರಕಟವಾಗಿದೆ.
2. ನರೇಗಾ ಯೋಜನೆಯ
ಅನುಷ್ಠಾನದಲ್ಲಿ ರಾಜ್ಯದ ಕೆಳಗಿನ ಯಾವ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.?
1. ಮೈಸೂರು
2. ಮಂಡ್ಯ
3. ಧಾರವಾಡ
4. ತುಮಕೂರು
Correct Answer: option2
Justification: ಮಹಾತ್ಮ ಗಾಂಧಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಯೋಜನೆಯನ್ನು ಪರಿಣಾಮಕಾರಿ
ಅನುಷ್ಟಾನಕ್ಕಾಗಿ ಮಂಡ್ಯ ಜಿಲ್ಲೆ ಗೆ ರಾಷ್ಟೀಯ ಪ್ರಶಸ್ತಿ ದೊರೆತಿದೆ.
3. ಇತ್ತೀಚಿಗೆ
ಅಲಿಸ್ಟೈರ್ ಕುಕ್ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಇವರು ಕೆಳಗಿನ ಯಾವ ರಾಷ್ಟ್ರದವರು?
1. ದಕ್ಷಿಣ ಆಫ್ರಿಕಾ
2. ವೆಸ್ಟ್ ಇಂಡಿಸ್
3. ಇಂಗ್ಲೆಂಡ್
4. ನ್ಯೂಜಿಲ್ಯಾಂಡ್
Correct Answer: option3
Justification: ಇಂಗ್ಲೆಂಡ್
ಕ್ರಿಕೆಟ್ ತಂಡದ ನಾಯಕ ಅಲಿಸ್ಟೈರ್ ಕುಕ್ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಭಾರತದ ವಿರುದ್ದದ ಟೆಸ್ಟ್ ಸರಣಿಯ ಇವರ
ಕೋನೆಯ ಪಂದ್ಯವಾಗಿದೆ.
4. ರಾಜ್ಯದ ಎಷ್ಟು
ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ?
1. 50
2. 75
3. 86
4. 95
Correct Answer: option3
Justification: ಕರ್ನಾಟಕ ರಾಜ್ಯ ಸರ್ಕಾರವು 2018ರ ಸಾಲಿನಲ್ಲಿ 80 ತಾಲ್ಲೂಕುಗಳನ್ನು ಬರಪೀಡಿತ, ತಾಲ್ಲೂಕು ಎಂದು ಘೋಷಿಸಿದೆ.
5. 2018ರ ಸಾಲಿನಲ್ಲಿ
ಮುಕುಲ್ ಮುದ್ಗಲ್‍ರವರನ್ನು ಕೆಳಗಿನ ಯಾವ ಸಮಿತಿಯ ಮುಖ್ಯಸ್ಥರಾಗಿ ಮಾಡಲಾಗಿದೆ?
1. 2017ರ IPL ಸ್ಟಾಟ್‍ಷಿಕ್ಸಿಂಗ್ ಹಗರಣದ ತನಿಖೆ ನಡೆಸುವ ಸಮಿತಿ
ಮುಖ್ಯಸ್ಥಾರಾಗಿ.
2. ದ್ರೋಣಾಚಾರ್ಯ
ಮತ್ತು ಧ್ಯಾನಚಂದ್ರ ಪುರಸ್ಕರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ
3. ಮಕ್ಕಳ ಮೇಲೆ
ಲೈಂಗೀಕ ದೌರ್ಜನ ನಡೆಸುವರಿಗೆ ಶಿಕ್ಷೆ ನಿರ್ಧಾರಿಸುವ ಸಮಿತಿ ಮುಖ್ಯಸ್ಥರಾಗಿ
4. ಮೇಲಿನ ಯಾವುದು
ಅಲ್ಲ
Correct Answer: option2
Justification: ನಿವೃತ್ತ
ನ್ಯಾಯಾಮೂರ್ತಿ ಮುಕುಲ್ ಮುದ್ಗಲ್ ಅವರು ಈ ಬಾರಿಯ ದ್ರೋಣಾಚಾರ್ಯ ಮತ್ತು ಧ್ಯಾನಚಂದ್ರ ಪುರಸ್ಕರ
ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ. ಕ್ರೀಡಾ ಸಚಿವಾಲಯವು 11 ಮಂದಿಯ ಆಯ್ಕೆ ಸಮಿತಿಯನ್ನು ಅಂತಿಮಗೊಳಿಸಿದ್ದು
ಮುದ್ಗಲ್ ಅವರನ್ನು ಮುಖ್ಯಸ್ಥರನಾಗಿ ನೇಮಿಸಿದೆ.
6. ವೋಸ್ಟೋಕ್ -2018 ಬೃಹತ್ ಸೇನಾ ಕಸರತ್ತುನ್ನು ಕೆಳಗಿನ ಯಾವ
ರಾಷ್ಟ್ರದಲ್ಲಿ ನಡೆಸಲಾಗುತ್ತಿದೆ?
1. ರಷ್ಯಾ
2. ಚೀನಾ
3. ಅಮೇರಿಕಾ
4. ಉತ್ತರ ಕೊರಿಯಾ
Correct Answer: option1
Justification: -ಇತಿಹಾಸದಲ್ಲೇ
ಬೃಹತ್ ಸೇನಾ ಕಸರತ್ತು ರಷ್ಯಾ ನಡೆಸಿದೆ
- ಪೂರ್ವ
ಸೈಬೀರಿಯಾದಲ್ಲಿ ನಡೆದ ಪ್ರದರ್ಶನದಲ್ಲಿ 3500 ಚೀನಾ ಪಡೆಗಳು ಭಾಗಿಯಾಗಿದ್ದು.
-ರಷ್ಯಾ ತನ್ನ
ಅತ್ಯಾಧುನಿಕ ಉಪಕರಣ ಅನಾವರಣಗೊಳಿಸಿದೆ.
ಅಣುಸ್ತ್ರ ಸಿಡಿತಲೆ
ಹೊತ್ತೊಯ್ಯವ ಸಾಮಥ್ರ್ಯದ ಇಸ್ಕಾಂಡರ.
-T- 80 ಹಾಗೂ T-
90 ಟ್ಯಾಂಕರಗಳು
- SU- 34, SU- 35 ಯುದ್ಧ ವಿಮಾನಗಳು
- ಕ್ಯಾಲಚ್ರಿ
ಕ್ಷಿಪಣಿ ಅಳವಡಿಸಿರುವ ಯುದ್ಧ ನೌಕೆಗಳು
7. ಸಾಗರ್ಮಾಥ ಸ್ನೇಹ 2 ಜಂಟಿ ಸಮರಾಭ್ಯಾಸವನ್ನು ಕೆಳಗಿನ ಯಾವ ರಾಷ್ಟ್ರಗಳು
ನಡೆಸುತ್ತಿವೆ?
1. ಚೀನಾ- ಭಾರತ
2. ಚೀನಾ- ಪಾಕಿಸ್ತಾನ
3. ಚೀನಾ- ನೇಪಾಳ
4. ಚೀನಾ- ರಷ್ಯಾ
Correct Answer: option3
Justification: ಚೀನಾದ ಸಿಚುವಾನ
ಪ್ರಾಂತ್ಯದಲ್ಲಿ ಸಾಗರ್ಮಾಥ ಸ್ನೇಹ-2 ಸಮರಾಭ್ಯಾಸವನ್ನು
ಚೀನಾ ನೇಪಾಳ ರಾಷ್ಟ್ರಗಳು ಸೆಪ್ಪೆಂಬರ್ 17 ರಿಂದ 10 ದಿನಗಳ ಕಾಲ ನಡೆಯುಲ್ಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ