ಕೆ.ರಾಘವ ಶರ್ಮ
ನವದೆಹಲಿ: 1992ರ ಇಂದ್ರಾ ಸಾವ್ನಿ ಮತ್ತು 2006 ಎಂ.ನಾಗರಾಜು ತೀರ್ಪಿನಲ್ಲಿ ದಾಖಲಿಸಲಾಗಿ ರುವ ಕೆನೆಪದರ ತತ್ವವು ಇತರ ಹಿಂದುಳಿದ ವರ್ಗಗಳಂತೆ ಎಸ್ಸಿ-ಎಸ್ಟಿ ಸಮುದಾಯಗಳ ಸರ್ಕಾರಿ ನೌಕರರಿಗೂ ಅನ್ವಯವಾಗಬೇಕು ಎಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಈ ಸಮುದಾಯಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲು ನೀಡಿಕೆ ಕಡ್ಡಾಯವೇನಲ್ಲ. ಅದು ಸರ್ಕಾರಗಳ ವಿವೇಚನೆಗೆ ಬಿಟ್ಟದ್ದು ಎಂದೂ ಸ್ಪಷ್ಟಪಡಿಸಿದೆ.
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಎಂ.ನಾಗರಾಜು ಪ್ರಕರಣದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ಬೇರೆ ಸಮುದಾಯಗಳ ಜನರಂತೆಯೇ ಪರಿಶಿಷ್ಟರೂ ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ಏಕಮೇವ ಉದ್ದೇಶದಿಂದ ಮೀಸಲಾತಿಗೆ ಆದ್ಯತೆ ನೀಡಲಾಯಿತು. ಹಾಗೆಂದ ಮಾತ್ರಕ್ಕೆ ‘ಹಿಂದುಳಿದಿರುವಿಕೆಯಿಂದ ಹೊರಬಂದ’ ಪರಿಶಿಷ್ಟ ನೌಕರರಿಗೆ ಮತ್ತೆ ಮತ್ತೆ ಮೀಸಲಾತಿ ನೀಡುವುದು ಸ್ವಾಗತಾರ್ಹ ಎನಿಸುವುದಿಲ್ಲ. ಇದರಿಂದ ಅರ್ಹರು ಅವಕಾಶ ವಂಚಿತರಾಗುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಬಡ್ತಿ ಮೀಸಲಾತಿ ನೀತಿ ಅನುಷ್ಠಾನ ವೇಳೆ ಕೆನೆಪದರ ತತ್ವವನ್ನು ಅಳವಡಿಸಿಕೊಳ್ಳುವುದೆ ಸೂಕ್ತ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.
ಎಂ.ನಾಗರಾಜು ಪ್ರಕರಣವನ್ನು 7 ಸದಸ್ಯರ ಪೀಠಕ್ಕೆ ವರ್ಗಾಯಿಸಬೇಕು ಎಂಬ ಕೇಂದ್ರ ಸರ್ಕಾರದ ಬೇಡಿಕೆ ತಳ್ಳಿಹಾಕಿದ ಪೀಠ, ಎಸ್ಸಿ-ಎಸ್ಟಿ ಸಮುದಾಯ ಹಿಂದುಳಿದಿದೆ ಎಂಬುದನ್ನು ಪ್ರತ್ಯೇಕವಾಗಿ ಕಂಡುಕೊಳ್ಳಬೇಕಿಲ್ಲ. ಹಿಂದುಳಿದಿರುವಿಕೆ ಗುರುತಿಸಲು ಸಮಗ್ರ ದತ್ತಾಂಶಗಳೂ ಬೇಕಾಗಿಲ್ಲ. ಆ ಸಮುದಾಯಗಳಿಗೆ/ಗುಂಪುಗಳಿಗೆ ಪ್ರಾತಿನಿಧಿತ್ವದ ಕೊರತೆಯಿದ್ದಾಗ ಮಾತ್ರ (ಎಂ.ನಾಗರಾಜು ತೀರ್ಪಿನಲ್ಲಿ ತಿಳಿಸಿರುವಂತೆ) ರಾಜ್ಯಗಳು ಅದಕ್ಕೆ ಸಂಬಂಧಿಸಿದ ದತ್ತಾಂಶ ಸಂಗ್ರಹಿಸಬಹುದು ಮತ್ತು ಇದನ್ನು ಕೋರ್ಟ್ಗಳು ಕೂಡ ಪರೀಕ್ಷಿಸಬಹುದು ಎಂದು ತಿಳಿಸಿದೆ. ಬಡ್ತಿ ಮೀಸಲು ವೇಳೆ ಈ ಸಮುದಾಯಗಳು ಮತ್ತು ಅವುಗಳ ವ್ಯಾಪ್ತಿಗೆ ಬರುವ ಉಪ ಗುಂಪುಗಳ ಪ್ರಾತಿನಿಧ್ಯದ ಕೊರತೆ ಮತ್ತು ನೌಕರರ ಆಡಳಿತಾತ್ಮಕ ಸಾಮರ್ಥ್ಯ ಪರಿಗಣಿಸಿಯೇ ಮೀಸಲಾತಿ ನೀತಿ ಅಳವಡಿಸಬೇಕು ಎಂದು ನಾಗರಾಜು ತೀರ್ಪಿನಲ್ಲಿ ದಾಖಲಾಗಿದ್ದ ಅಂಶವನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿರುವುದು ದೇಶವ್ಯಾಪಿ ಮಹತ್ವ ಪಡೆದುಕೊಳ್ಳಲಿದೆ.
ಮಿತಿ ಏರಿಕೆಗೆ ನಕಾರ!: ಎಸ್ಸಿ-ಎಸ್ಟಿ ಜನಸಂಖ್ಯೆ ಆಧರಿಸಿ ಮೀಸಲು ಏರಿಕೆಗೆ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಪ್ರಕಾರ ಶೇ.18ರಿಂದ ಶೇ.24ಕ್ಕೆ ಏರಿಸುವ ಪ್ರಸ್ತಾವನೆಯಿತ್ತು. ಇದನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಈಗಿರುವ ಮೀಸಲು ವ್ಯವಸ್ಥೆ ಮುಂದುವರಿಯುವುದು ಒಳಿತು. ಯಾವುದೇ ಕಾರಣಕ್ಕೂ ಮೀಸಲು ಮಿತಿ ಶೇ.50 ದಾಟುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಮೀಸಲು ಏರಿಕೆ ಪ್ರಸ್ತಾಪಕ್ಕೆ ಭಾರಿ ಹಿನ್ನಡೆಯಾಗಿದೆ.
ಇಂದಿರಾ ಸಾಹ್ನಿ ತೀರ್ಪಲ್ಲೇನಿತ್ತು?
ಮೀಸಲಾತಿ ನಿಗದಿಪಡಿಸುವ ವೇಳೆ ಹಿಂದುಳಿದಿರುವಿಕೆಯ ದತ್ತಾಂಶಗಳ ಅಗತ್ಯವಿಲ್ಲ. ಪರಿಶಿಷ್ಟ ಜಾತಿ/ಪಂಗಡಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಅನುಮೋದಿಸಿದ ಪಟ್ಟಿ ಪ್ರಕಾರವಾಗಿ ಮೀಸಲಾತಿ ನೀಡಬಹುದು
ಮೀಸಲಾತಿ ಮೂಲಕ ಸರ್ಕಾರಿ ಸೌಲಭ್ಯ/ಸವಲತ್ತು/ನೌಕರಿ ಪಡೆದುಕೊಂಡ ಬಳಿಕ ಆ ವ್ಯಕ್ತಿ ಕೆನೆಪದರ ವ್ಯಾಪ್ತಿಗೆ ಬಂದಂತೆ
ನಾಗರಾಜು ತೀರ್ಪಿನಲ್ಲೇನಿತ್ತು?
ಬಡ್ತಿ ಮೀಸಲಾತಿ ವೇಳೆ ನೌಕರರ ಆಡಳಿತಾತ್ಮಕ ಸಾಮರ್ಥ್ಯವನ್ನೂ ಪರಿಗಣಿಸಬೇಕು
ಬಡ್ತಿ ಮೀಸಲಾತಿ ನಿಗದಿಪಡಿಸುವ ವೇಳೆ ಹಿಂದುಳಿದಿರುವಿಕೆಯ ದತ್ತಾಂಶಗಳು ಅಗತ್ಯ
ಅ.3ರವರೆಗೂ ರಾಜ್ಯದಲ್ಲಿ ಯಥಾಸ್ಥಿತಿ
ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೊಸದಾಗಿ ಜ್ಯೇಷ್ಠತಾ ಪಟ್ಟಿ ಮಾಡಿ ಅದರಂತೆ ಹಿಂಬಡ್ತಿ, ಮುಂಬಡ್ತಿಗೊಳಿಸುವಂತೆ ಸೂಚಿಸಿತ್ತು. ಆ ಪ್ರಕಾರ, ಕೆಲವು ಇಲಾಖೆಗಳಲ್ಲಿ ಹಿಂಬಡ್ತಿ- ಮುಂಬಡ್ತಿ ಪ್ರಕ್ರಿಯೆ ನಡೆದಿತ್ತು. ಈ ಮಧ್ಯೆ ಸರ್ಕಾರ ಜಾರಿಗೆ ತಂದ ಬಡ್ತಿ ರಕ್ಷಿಸುವ ಕಾನೂನನ್ನು ಪ್ರಶ್ನಿಸಿ ಅರ್ಜಿ ಮತ್ತು ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಅನುಷ್ಠಾನ ಮಾಡದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆದಿದೆ. ಇದರೊಟ್ಟಿಗೆ ಎಸ್ಸಿ-ಎಸ್ಟಿ ನೌಕರರು ಕಾನೂನು ಜಾರಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳು ಅ.3ರಂದು ವಿಚಾರಣೆಗೆ ಬರಲಿದೆ. ಅಲ್ಲಿಯವರೆಗೂ ಯಥಾಸ್ಥಿತಿಯೇ ಮುಂದುವರಿಯಲಿದೆ. ರಾಜ್ಯದಲ್ಲಿ ಬಡ್ತಿ ಮೀಸಲಾತಿ ರದ್ದುಪಡಿಸಿದ್ದ ಸುಪ್ರೀಂಕೋರ್ಟ್ ತೀರ್ಪು ಬದಿಗೊತ್ತಿ, ಹಿಂದಿನ ಸರ್ಕಾರ ಸುಗ್ರೀವಾಜ್ಞೆ ಮೂಲಕ ಪರಿಶಿಷ್ಟ ನೌಕರರ ಪರ ಕಾಯ್ದೆ ಜಾರಿಗೆ ತಂದಿತ್ತು. ಆದರೆ ಗುರುವಾರದ ತೀರ್ಪು ಆಧರಿಸಿ, ರಾಜ್ಯದ ಪ್ರಕರಣವನ್ನು ನ್ಯಾ.ಉದಯ್ ಲಲಿತ್ ನೇತೃತ್ವದ ನ್ಯಾಯಪೀಠ ಹೇಗೆ ವಿಶ್ಲೇಷಿಸಲಿದೆ? ಬಡ್ತಿ ಮೀಸಲಾತಿ ಸುಗಮಗೊಳಿಸುವ ಕಾಯ್ದೆ ರದ್ದುಪಡಿಸಲಿದೆಯೇ? ಅಥವಾ ಎಸ್ಸಿ-ಎಸ್ಟಿ ಸಮುದಾಯದವರನ್ನು ಕೆನೆಪದರ ವ್ಯಾಪ್ತಿಗೆ ತಂದು ಆಡಳಿತಾತ್ಮಕ ಸಾಮರ್ಥ್ಯ ಪರಿಗಣಿಸಿ ಮೀಸಲಾತಿ ಕಲ್ಪಿಸಬಹುದು ಎಂದು ಆದೇಶಿಸಲಿದೆಯೇ? ಕಾದುನೋಡಬೇಕಿದೆ.
ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂಕೋರ್ಟ್
ಬೆಂಗಳೂರು: ಕೊಪ್ಪಳ ಜಿಲ್ಲೆ ಆನೆಗೊಂದಿ ಗ್ರಾಮದ ನವವೃಂದಾವನದ 27.30 ಎಕರೆ ಜಮೀನು ವಿವಾದ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಧಾರವಾಡ ಸಿವಿಲ್ ಕೋರ್ಟ್ಗೆ ನಿರ್ದೇಶಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಉತ್ತರಾದಿ ಮಠ ಸಲ್ಲಿಸಿದ್ದ ಸಿವಿಲ್ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ಮಾನ್ಯ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ದಾಖಲೆಗಳನ್ನು ಉತ್ತರಾದಿ ಮಠ ಹಾಗೂ ಮಂತ್ರಾಲಯ ಮಠಗಳು ಧಾರವಾಡ ಸಿವಿಲ್ ಕೋರ್ಟ್ಗೆ ಸಲ್ಲಿಸಬೇಕು. ಈ ದಾಖಲೆಗಳ ಆಧಾರದ ಮೇಲೆ ಅಧೀನ ನ್ಯಾಯಾಲಯ ಪ್ರಕರಣದ ಮರು ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿರುವ ಸುಪ್ರೀಂಕೋರ್ಟ್, ಪ್ರಕರಣವನ್ನು ಮತ್ತೆ ಹೈಕೋರ್ಟ್ಗೆ ವರ್ಗಾಯಿಸಿದೆ.
ಪ್ರಕರಣ ಸಂಬಂಧ ಹಾಜರುಪಡಿಸಲಾಗುವ ಹೆಚ್ಚುವರಿ ದಾಖಲೆಗಳನ್ನು ಅಧೀನ ನ್ಯಾಯಾಲಯ ಕಾನೂನು ಪ್ರಕಾರ ದಾಖಲಿಸಿಕೊಂಡು, ತನ್ನ ಅಭಿಪ್ರಾಯದೊಂದಿಗೆ ಹೈಕೋರ್ಟ್ಗೆ ಸಲ್ಲಿಸಬೇಕು. ಈ ಕುರಿತು 2 ತಿಂಗಳೊಳಗೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಬೇಕು. ಅಧೀನ ನ್ಯಾಯಾಲಯ ನೀಡುವ ದಾಖಲೆಗಳು ಹಾಗೂ ವರದಿ ಆಧರಿಸಿ ಹೈಕೋರ್ಟ್ ಮರುವಿಚಾರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ವಿವರಿಸಿದೆ.
ಪ್ರಕರಣವೇನು?
ನವವೃಂದಾವನದ 27.30 ಎಕರೆ ಜಮೀನು ಉತ್ತರಾದಿ ಮಠಕ್ಕೆ ಸೇರಿರುವುದಾಗಿ ಧಾರವಾಡ ಸಿವಿಲ್ ಕೋರ್ಟ್ 2015ರ ಏ.22ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಪೀಠ, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಉತ್ತರಾದಿ ಮಠ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ