ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಆಗಮ ಸಂಧಿ

ಮೇಲೆ ಹೇಳಿದ ಲೋಪಸಂಧಿಯನ್ನು ಅರ್ಥವು ಕೆಡದಂತಿದ್ದರೆ ಮಾತ್ರ ಮಾಡಬೇಕು, ಇಲ್ಲದಿದ್ದರೆ ಮಾಡಬಾರದು ಎಂದು ತಿಳಿದಿದ್ದೀರಿ.
ಮನೆ + ಅನ್ನು ಎಂಬಲ್ಲಿ ಲೋಪ ಮಾಡಿದರೆ ಮನನ್ನು ಆಗುವುದು,
ಗುರು + ಅನ್ನು ಎಂಬಲ್ಲಿ ಲೋಪ ಮಾಡಿದರೆ ಗುರನ್ನು ಆಗುವುದು
ಎಂಬುದನ್ನು ಹಿಂದೆ ತಿಳಿದಿದ್ದೀರಿ.  ಹಾಗಾದರೆ ಮನೆ + ಅನ್ನು, ಗುರು + ಅನ್ನು ಇವು ಕೂಡುವಾಗ ಪದದ ಮಧ್ಯದಲ್ಲಿ ಸ್ವರದ ಮುಂದೆ ಸ್ವರ ಬಂದಿದೆಯಾದ್ದರಿಂದ ಅವನ್ನು ಬಿಡಿ ಬಿಡಿಸಿ ಅನ್ನಲೂ ಕೂಡ ಯೋಗ್ಯವಾಗುವುದಿಲ್ಲ.  ಆಗ ಆ ಎರಡೂ ಸ್ವರಗಳ ಮಧ್ಯದಲ್ಲಿ ಕೂಡಿಸಿ ಹೇಳಲು ಅನುಕೂಲವಾಗುವಂತಹ ಯ್ಕಾರವನ್ನೋ, ವ್ ಕಾರವನ್ನೋ ಹೊಸದಾಗಿ ಸೇರಿಸಿದಾಗ ಉಚ್ಚಾರಮಾಡಲು ಅನುಕೂಲವಾಗುವುದು.  ಹೀಗೆ ಹೊಸದಾಗಿ ಸೇರುವ ಅಕ್ಷರವೇ ಆಗಮಾಕ್ಷರ.  ಹಾಗೆ ಹೊಸ ಅಕ್ಷರವನ್ನು ಸೇರಿಸಿ ಹೇಳುವ ಸಂಧಿಯೇ ಆಗಮಸಂಧಿ.  ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-
ಯಕಾರಾಗಮ ಬರುವುದಕ್ಕೆ
ತೆನೆ
+
ಅನ್ನು
=
ತೆನೆ
+
ಯ್
+
ಅನ್ನು
=
ತೆನೆಯನ್ನು
ಕೈ
+
ಅನ್ನು
=
ಕೈ
+
ಯ್
+
ಅನ್ನು
=
ಕೈಯನ್ನು
ಚಳಿ
+
ಅಲ್ಲಿ
=
ಚಳಿ
+
ಯ್
+
ಅಲ್ಲಿ
=
ಚಳಿಯಲ್ಲಿ
ಮಳೆ
+
ಇಂದ
=
ಮಳೆ
+
ಯ್
+
ಇಂದ
=
ಮಳೆಯಿಂದ
ಗಾಳಿ
+
ಅನ್ನು
=
ಗಾಳಿ
+
ಯ್
+
ಅನ್ನು
=
ಗಾಳಿಯನ್ನು
ಕೆರೆ
+
ಅಲ್ಲಿ
=
ಕೆರೆ
+
ಯ್
+
ಅಲ್ಲಿ
=
ಕೆರೆಯಲ್ಲಿ
ಮರೆ
+
ಇಂದ
=
ಮರೆ
+
ಯ್
+
ಇಂದ
=
ಮರೆಯಿಂದ
ವಕಾರಾಗಮ ಬರುವುದಕ್ಕೆ
ಗುರು
+
ಅನ್ನು
=
ಗುರು
+
ವ್
+
ಅನ್ನು
=
ಗುರುವನ್ನು
ಪಿತೃ
+
ಅನ್ನು
=
ಪಿತೃ
+
ವ್
+
ಅನ್ನು
=
ಪಿತೃವನ್ನು
ಮಗು
+
ಇಗೆ
=
ಮಗು
+
ವ್
+
ಇಗೆ
=
ಮಗುವಿಗೆ

+
ಉಂಗುರ
=

+
ವ್
+
ಉಂಗುರ
=
ಆವುಂಗುರ

+
ಊರು
=

+
ವ್
+
ಊರು
=
ಆವೂರು

+
ಒಲೆ
=

+
ವ್
+
ಒಲೆ
=
ಆವೊಲೆ
ಪೂ
+
ಅನ್ನು
=
ಪೂ
+
ವ್
+
ಅನ್ನು
=
ಪೂವನ್ನು
ಮೇಲೆ ತೋರಿಸಿರುವ ಯಕಾರಗಮ, ವಕಾರಾಗಮ ಸಂಧಿ ಬಂದಿರುವ ಸ್ಥಳಗಳಲ್ಲೆಲ್ಲ ಲೋಪಸಂಧಿಯನ್ನು ಮಾಡಿ ಹೇಳಲೂಬಾರದು, ಬರೆಯಲೂ ಬಾರದು.  ಹಾಗೆ ಲೋಪ ಮಾಡಿದರೆ ಅರ್ಥವು ಹಾಳಾಗುವುದೆಂದು ಕಂಡಿದ್ದೀರಿ.  ಆದುದರಿಂದ ಈ ಆಗಮಸಂಧಿಗೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೧೭) ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು.
ಯಕಾರಾಗಮ ವಕಾರಾಗಮ ಎಲ್ಲೆಲ್ಲಿ ಬರುತ್ತವೆಂಬುದನ್ನು ತೀಳಿಯೋಣ:-
(೧) ಯಕಾರಾಗಮ ಸಂಧಿ:-
ಆ, ಇ, ಈ, ಎ, ಏ, ಐ ಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ಮಧ್ಯದಲ್ಲಿ ಯ್ ಕಾರವು ಆಗಮವಾಗುವುದು.
ಉದಾಹರಣೆಗೆ:-
[1]ಕಾ+ಅದೆ =ಕಾ+ಯ್+ಅದೆ=ಕಾಯದೆ
(ಆ+ಅ)
ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು
(ಇ+ಅ)
[2]ಮೀ+ಅಲು=ಮೀ+ಯ್+ಅಲು=ಮೀಯಲು
(ಈ+ಅ)
ಕೆರೆ+ಅನ್ನು=ಕೆರೆ+ಯ್+ಅನ್ನು=ಕೆರೆಯನ್ನು
(ಎ+ಅ)
[3]ಮೇ+ಇಸು=ಮೇ+ಯ್+ಇಸು=ಮೇಯಿಸು
(ಏ+ಇ)
ಮೈ+ಅನ್ನು=ಮೈ+ಯ್+ಅನ್ನು=ಮೈಯನ್ನು
(ಐ+ಅ)
(೨) ವಕಾರಾಗಮ ಸಂಧಿ:-
(i) ಉ, ಊ, ಋ, ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ವ್ ಕಾರವು ಆಗಮವಾಗಿ ಬರುವುದು.
ಉದಾಹರಣೆಗೆ:-
ಮಡು+ಅನ್ನು=ಮಡು+ವ್+ಅನ್ನು=ಮಡುವನ್ನು
(ಉ+ಅ)
ಪೂ+ಇಂದ=ಪೂ+ವ್+ಇಂದ=ಪೂವಿಂದ
(ಊ+ಇ)
ಮಾತೃ+ಅನ್ನು=ಮಾತೃ+ವ್+ಅನ್ನು=ಮಾತೃವನ್ನು
(ಋ+ಅ)
ಗೋ+ಅನ್ನು=ಗೋ+ವ್+ಅನ್ನು=ಗೋವನ್ನು
(ಓ+ಅ)
(ii) ಅಕಾರದ ಮುಂದೆ ಅಕಾರವೇ ಬಂದರೆ ವ್ ಕಾರಾಗಮವಾಗುವುದು. (ಪ್ರಕೃತಿ ಪ್ರತ್ಯಯ ಸೇರುವಾಗ ಮಾತ್ರ ಈ ಸಂಧಿಯಾಗುವುದು)
ಉದಾಹರಣೆಗೆ:-
ಹೊಲ+ಅನ್ನು=ಹೊಲ+ವ್+ಅನ್ನು=ಹೊಲವನ್ನು
ನೆಲ+ಅನ್ನು= ನೆಲ+ವ್+ಅನ್ನು=ನೆಲವನ್ನು
ಕುಲ+ಅನ್ನು=ಕುಲ+ವ್+ಅನ್ನು=ಕುಲವನ್ನು
ತಿಲ+ಅನ್ನು=ತಿಲ+ವ್+ಅನ್ನು=ತಿಲವನ್ನು
ಮನ+ಅನ್ನು=ಮನ+ವ್+ಅನ್ನು=ಮನವನ್ನು
(iii) ಆ ಎಂಬ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ನಡುವೆ ವ ಕಾರವು ಆಗಮವಾಗಿ ಬರುವುದುಂಟು.  (ಸಂಧಿಯನ್ನು ಮಾಡದೆಯೂ ಹೇಳಬಹುದು)
ಉದಾಹರಣೆಗೆ:-
ಆ + ಉಂಗುರ = ಆ + ವ್ + ಉಂಗುರ = ಆವುಂಗುರ
ಆ + ಊಟ = ಆ + ವ್ + ಊಟ = ಆವೂಟ
ಆ + ಒಂಟೆ = ಆ + ವ್ + ಒಂಟೆ = ಆವೊಂಟೆ
ಆ + ಓಟ = ಆ + ವ್ + ಓಟ = ಆವೋಟ
ಸಂಧಿ ಮಾಡದಿರುವುದಕ್ಕೆ-ಆ ಉಂಗುರ, ಆ ಊಟ, ಆ ಒಂಟೆ, ಆ ಓಟ (ಹೀಗೂ ಹೇಳಬಹುದು)
(iv) ಈ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ, ಯಕಾರಾಗಮ ವನ್ನಾದರೂ ಮಾಡಬಹುದು; ಅಥವಾ ವಕಾರಾಗಮವನ್ನಾದರೂ ಮಾಡಬಹುದು
ಉದಾಹರಣೆಗೆ:-
ಈ + ಉದಕ = ಈ + ಯ್ + ಉದಕ
=
ಈಯುದಕ
ಈವುದಕ
ಈ + ಊರು = ಈ + ಯ್ + ಊರು
=
ಈಯೂರು
ಈವೂರು
ಈ + ಊಟ = ಈ + ಯ್ + ಊಟ
=
ಈಯೂಟ
ಈವೂಟ
ಈ + ಒಲೆ = ಈ + ಯ್ + ಒಲೆ
=
ಈಯೊಲೆ
ಈವೊಲೆ
ಈ + ಒಂಟೆ = ಈ + ಯ್ + ಒಂಟೆ
=
ಈಯೊಂಟೆ
ಈವೊಂಟೆ
ಈ + ಓಕುಳಿ = ಈ + ಯ್ + ಓಕುಳಿ
=
ಈಯೋಕುಳಿ
ಈವೋಕುಳಿ
ಈ + ಓಲೆ = ಈ + ಯ್ + ಓಲೆ
=
ಈಯೋಲೆ
ಈವೋಲೆ
ಈ ಮೇಲೆ ಹೇಳಿದ ಕಡೆಗಳಲ್ಲಿ ಸಂಧಿಗಳನ್ನು ಮಾಡದೆಯೆ ಈ ಉದಕ, ಈ ಊರು, ಈ ಒಂಟೆ, ಈ ಓಲೆ ಹೀಗೆಯೂ ಬರೆಯಬಹುದು
(v) ಓ ಕಾರದ ಮುಂದೆ ಸ್ವರ ಬಂದರೆ ವ ಕಾರಾಗಮ ಬರುವುದೆಂದು ಹಿಂದೆ ಹೇಳಿದೆಯಷ್ಟೆ.  ಆದರೆ ಕೆಲವು ಕಡೆ ಯಕಾರಾಗಮ ಬರುವುದುಂಟು.
ಉದಾಹರಣೆಗೆ:-
ಗೋ + ಅನ್ನು = ಗೋವನ್ನು (ವಕಾರಾಗಮ ಬಂದಿದೆ)
(ಓ + ಅ)
ನೋ + ಅಲು = ನೋಯಲು (ಯಕಾರಾಗಮ ಬಂದಿದೆ)
(ಓ + ಅ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...