ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಇ-ಹಾಸ್ಪಿಟಲ್​ಗಿಲ್ಲ ಶುಶ್ರೂಷೆ..!,

ವಿಲಾಸ ಮೇಲಗಿರಿ, ಬೆಂಗಳೂರು
ಸರ್ಕಾರಿ ಆಸ್ಪತ್ರೆ ಎಂದರೆ ಅದಿಲ್ಲ-ಇದಿಲ್ಲ ಎಂಬ ದೂರು ಸರ್ವೆ ಸಾಮಾನ್ಯ. ಆದರೆ, ಎಲ್ಲ ಇದ್ದೂ ಕಾರ್ಯ ನಿರ್ವಹಿಸುತ್ತಿಲ್ಲ ಎಂದರೆ ಯಾರನ್ನು ದೂರಬೇಕು..?

ಇ-ಆಸ್ಪತ್ರೆ ಯೋಜನೆಯಡಿ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಬರೋಬ್ಬರಿ 65 ಕಂಪ್ಯೂಟರ್/ಮಾನಿಟರ್, 10 ಟ್ಯಾಬ್, 160 ಬ್ಯಾಟರಿ, 10 ಪ್ರಿಂಟರ್, 10 ಕಂಪ್ಯೂಟರ್ ಆಪರೇಟರ್​ಗಳಿದ್ದಾರೆ. ಇಷ್ಟೆಲ್ಲ ಇದ್ದೂ ಬಳಕೆ ಆಗುತ್ತಿರುವುದು ಐದೋ ಹತ್ತೋ ಕಂಪ್ಯೂಟರ್​ಗಳು ಮಾತ್ರ. ಇನ್ನು ಅನೇಕ ಕಡೆ ನೆಟ್​ವರ್ಕ್ ಸಂಪರ್ಕ ಇಲ್ಲದೆ ಕಂಪ್ಯೂಟರ್/ಮಾನಿಟರ್, ಬ್ಯಾಟರಿಗಳು ಬರ್ಬಾದ್ ಆಗುತ್ತಿವೆ. ಆಸ್ಪತ್ರೆಗಳನ್ನು ಹೈಟೆಕ್ ಮಾಡುವ, ರೋಗಿಗಳ ಸಮಗ್ರ ಮಾಹಿತಿ ಕಂಪ್ಯೂಟರೀಕರಿಸುವ ಯೋಜನೆಗೆ ಶುಶ್ರೂಷೆ ಇಲ್ಲದಾಗಿದೆ.
2016-17ನೇ ಸಾಲಿನಲ್ಲಿ 47 ಆಸ್ಪತ್ರೆಗಳಲ್ಲಿ ಇ-ಹಾಸ್ಪಿಟಲ್ ಯೋಜನೆ ಜಾರಿಗೊಳಿಸಲು ಸರ್ಕಾರ 34 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ, ಈ ಹಣ ಸಂಪೂರ್ಣ ಸದ್ಬಳಕೆಯಾಗಿಲ್ಲ. ಇ-ಹಾಸ್ಪಿಟಲ್ ಯೋಜನೆ ಜಾರಿಗೊಳಿಸಿರುವ ಪೈಕಿ ಬಹುತೇಕ ಆಸ್ಪತ್ರೆಗಳು ಹೊರ-ಒಳ ರೋಗಿಗಳ ಡೇಟಾ ಎಂಟ್ರಿಗಷ್ಟೇ ಸೀಮಿತ ಆಗಿವೆ. ಡೇಟಾ ಎಂಟ್ರಿಗೆ ಬಳಸಿ ಉಳಿದ ಕಂಪ್ಯೂಟರ್, ಬ್ಯಾಟರಿಗಳು ನಿರುಪಯುಕ್ತವಾಗುತ್ತಿವೆ. ಟ್ಯಾಬ್​ಗಳನ್ನು ಬಳಸುತ್ತಿಲ್ಲ. ಕೆಲವಕ್ಕೆ ಕೇಬಲ್-ನೆಟ್ ಸಂಪರ್ಕ ಪರಿಪೂರ್ಣಗೊಂಡಿಲ್ಲ, ಎಲೆಕ್ಟ್ರಿಕ್ ಕೆಲಸವೂ ಆಗಿಲ್ಲ. ಕಂಪ್ಯೂಟರ್ ಟೇಬಲ್-ಚೇರ್​ಗಳನ್ನು ಒದಗಿಸಿಲ್ಲ.
2016ರಲ್ಲೇ ಮೊದಲ ಹಂತ ಮುಗಿದು ಈ ವೇಳೆಗಾಗಲೇ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳೂ ಇ-ಹಾಸ್ಪಿಟಲ್ ಸಂಪರ್ಕ ಪಡೆಯಬೇಕಿತ್ತು. ಆದರೆ, ಇನ್ನೂ 47 ಆಸ್ಪತ್ರೆಗಳಲ್ಲೇ ಯೋಜನೆ ಕುಂಟುತ್ತ ಸಾಗಿದೆೆ.
ಮೊದಲ ಹಂತದಲ್ಲೇ ವೈಫಲ್ಯ: ಇ-ಹಾಸ್ಪಿಟಲ್ ಬಗ್ಗೆ ಅಧಿಕಾರಿಗಳಲ್ಲಿ ಮೊದಲಿದ್ದ ಉತ್ಸುಕತೆ ಈಗಿಲ್ಲ. ನಿರ್ವಹಣೆ ಹೊಣೆ ಹೊತ್ತಿರುವ ಖಾಸಗಿ ಏಜೆನ್ಸಿಯೂ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಕನಿಷ್ಠ ಪಕ್ಷ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಶಿಫಾರಸು ಮಾಡಿದಾಗ ಅದರ ಮಾಹಿತಿ ಇ-ಹಾಸ್ಪಿಟಲ್ ಯೋಜನೆ ಮೂಲಕ ಆಗಬೇಕು. ಅದೂ ಸರಿಯಾಗಿ ಆಗುತ್ತಿಲ್ಲ. ಮೊದಲ ಹಂತದಲ್ಲೇ ಯೋಜನೆ ಮುಗ್ಗರಿಸಿದ್ದರೂ ಎರಡನೇ ಹಂತದ ಇ-ಹಾಸ್ಪಿಟಲ್ ಯೋಜನೆಗೆ ಸರ್ಕಾರ 66.88 ಕೋಟಿ ರೂ. ಬಿಡುಗಡೆ ಮಾಡಿದೆ. ಮತ್ತೊಂದೆಡೆ ಇ-ಹಾಸ್ಪಿಟಲ್ ಕಂಪ್ಯೂಟರ್ ಜಾಲಕ್ಕೆ ಆಸ್ಪತ್ರೆಯ ಬಳಕೆದಾರರ ನಿಧಿಯಿಂದಲೇ ನೆಟ್ ಸಂಪರ್ಕ ಬಳಸುವಂತೆ ಸರ್ಕಾರ ಸೂಚಿಸಿದೆ. ಆದರೆ, ಅನೇಕ ಕಡೆ ಈ ನಿಧಿಯಲ್ಲಿ ಹಣವೇ ಇಲ್ಲದ್ದರಿಂದ ಆಸ್ಪತ್ರೆಯ ಅಧಿಕಾರಿ ವರ್ಗಕ್ಕೂ ಇದರ ಉಸಾಬರಿ ಬೇಡ ಎಂಬಂತಾಗಿದೆ. 5 ವರ್ಷದ ನಿರ್ವಹಣೆ ಹೊಣೆ ಹೊತ್ತಿರುವ ಏಜೆನ್ಸಿಗೂ ಸರ್ಕಾರ ಹಣ ಬಿಡುಗಡೆ ಮಾಡದ್ದರಿಂದ ಕಂಪ್ಯೂಟರ್​ಗಳು ಕೊಳೆಯುತ್ತಿವೆ. ಇ-ಹಾಸ್ಪಿಟಲ್​ನಲ್ಲಿ 15 ಮಾಡ್ಯೂಲ್​ಗಳಿದ್ದು, ಸದ್ಯ ಒಪಿಡಿ, ಐಪಿಡಿ, ಬಿಲ್ಲಿಂಗ್, ಅಪಘಾತ, ಕೆಲವೆಡೆ ಫಾರ್ಮಸಿ, ಲ್ಯಾಬೋರೇಟರಿ ಸೇರಿ ಐದಾರು ಮಾಡ್ಯೂಲ್​ಗಳಷ್ಟೇ ಜಾರಿಯಲ್ಲಿವೆ. ಕೇಂದ್ರ ಸರ್ಕಾರ ಸಾಫ್ಟ್​ವೇರ್ ಅಭಿವೃದ್ಧಿಪಡಿಸದಿರುವುದೂ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಅಡ್ಡಿಯಾಗಿದೆ.
ಇ-ಹಾಸ್ಪಿಟಲ್ ಪ್ರಯೋಜನ
ಆಸ್ಪತ್ರೆಗಳ ಹೊರ ರೋಗಿ ವಿಭಾಗ, ವಾರ್ಡ್ ದಾಖಲೆ, ಹೊರ ರೋಗಿಗಳ ಪುನರ್ ಭೇಟಿ, ಅಪಘಾತ, ತುರ್ತು ನೋಂದಣಿ, ಬಿಲ್ ಪಾವತಿ, ಔಷಧ ದಾಸ್ತಾನು, ಪ್ರಯೋಗಾಲಯ ಮಾಹಿತಿ, ರೇಡಿಯಾಲಜಿ ಇನ್ಪಮೇಷನ್ ಸಿಸ್ಟಮ್ ಡಿಸ್​ಚಾರ್ಜ್ ಸಮ್ಮರಿ, ರಕ್ತ ನಿಧಿ ಕೇಂದ್ರ, ರಕ್ತ ದಾಸ್ತಾನು ವಿವರ, ಶಸ್ತ್ರ ಚಿಕಿತ್ಸೆ, ವಾರ್ಡ್ ಗಳ ನಿರ್ವಹಣೆ, ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ಸ್, ರೇಡಿಯಾಲಜಿ, ಇಮೇಜಿಂಗ್, ಶಸ್ತ್ರ ಚಿಕಿತ್ಸೆ ನಿರ್ವಹಣೆ, ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ ಇ-ಹಾಸ್ಪಿಟಲ್​ನಲ್ಲಿ ಸಿಗಲಿವೆ.
ಹಲವು ಸಂಶಯ
ರಾಷ್ಟ್ರೀಯ ಆರೋಗ್ಯ ಅಭಿಯಾನ ಈ ಯೋಜನೆ ಜಾರಿಗೊಳಿಸಿದ್ದು, ಕಾಟಾಚಾರಕ್ಕೆ ಹಣ ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ. 1ನೇ ಹಂತದ ಯೋಜನೆ ಫಲಿತಾಂಶವೇ ಫಲಕಾರಿ ಆಗದಿರುವಾಗ 2ನೇ ಹಂತದ ಯೋಜನೆಯಡಿ ತಾಲೂಕು ಆಸ್ಪತ್ರೆ ಒಳಗೊಂಡಂತೆ 122 ಆಸ್ಪತ್ರೆಗಳಿಗೆ ಇ-ಹಾಸ್ಪಿಟಲ್ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ರೋಗಿ-ವೈದ್ಯ ಇಬ್ಬರಿಗೂ ಉಪಯೋಗ
ರೋಗಿ ಕಾಯುವ ಅವಧಿ ಕಡಿಮೆ, ಪ್ರತಿ ರೋಗಿಗೆ ಆಧಾರ್ ಆಧಾರಿತ ಪ್ರತ್ಯೇಕ ನೋಂದಣಿ ಸಂಖ್ಯೆ, ಕ್ಷಣ ಮಾತ್ರದಲ್ಲಿ ರೋಗಿಯ ಸಮಗ್ರ ಮಾಹಿತಿ ಲಭಿಸುತ್ತದೆ. ಟೋಕನ್ ನಂಬರ್, ಮುದ್ರಿತ ಹೊರ ರೋಗಿ ಚೀಟಿ, ಸಂರ್ಪಸಬೇಕಾದ ವೈದ್ಯರ ವಿವರ ರೋಗಿಗೆ ಸರಾಗವಾಗಿ ಸಿಗುತ್ತದೆ. ಎಲ್ಲ ಹಣಕಾಸು ವ್ಯವಹಾರ ಗಣಕೀಕೃತ ಆಗಿರುತ್ತದೆ. ರೋಗಿಯ ಸ್ಥಳ, ಮೊಬೈಲ್ ಸಂಖ್ಯೆ ಮತ್ತಿತರ ವಿವರಗಳು ಇರುತ್ತವೆ. ರೋಗಿ ಪುನಃ ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ನೀಡಲು ವೈದ್ಯರಿಗೆ ಇ-ಹಾಸ್ಪಿಟಲ್​ನಿಂದ ಹೆಚ್ಚು ಅನುಕೂಲ. ರೋಗಿಯ ಎಲ್ಲ ಮಾಹಿತಿ ಆನ್​ಲೈನ್​ನಲ್ಲೇ ಲಭಿಸುತ್ತದೆ. ಚೀಟಿ ಬರೆಯುವ ಮುನ್ನ ಆಸ್ಪತ್ರೆಯ ಔಷಧ ದಾಸ್ತಾನಿನ ಮಾಹಿತಿಯೂ ವೈದ್ಯರಿಗೆ ಸಿಗುತ್ತದೆ.
ಸಮನ್ವಯ ಸಮಸ್ಯೆ
ಆರೋಗ್ಯ ಕರ್ನಾಟಕದನ್ವಯ ಪ್ರಾಥಮಿಕ ಹಂತದಿಂದ ತೃತೀಯ ಹಂತದ ಚಿಕಿತ್ಸೆಯವರೆಗೆ ರೋಗಿಯ ಅನುಸರಣೆ (ಟ್ರಾ್ಯಕಿಂಗ್), ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರೋಗಿಯ ಶಿಫಾರಸಿಗೆ ಇ-ಹಾಸ್ಪಿಟಲ್ ವ್ಯವಸ್ಥೆ ಅಗತ್ಯ. ಆದರೆ, ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲೇ ಪೂರ್ಣ ಪ್ರಮಾಣದಲ್ಲಿ ಸಂಪರ್ಕ ಸಾಧ್ಯವಿಲ್ಲದಿರುವಾಗ ಖಾಸಗಿ ಆಸ್ಪತ್ರೆಯ ಜತೆ ಸಮನ್ವಯ ಸದ್ಯಕ್ಕಂತೂ ಕಷ್ಟ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...