ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಡಾ.ಎಸ್.ರಾಜೇಂದ್ರಪ್ರಸಾದ್ ಹಾಗೂ ಧಾರವಾಡ ಕೃಷಿ ವಿವಿಗೆ ಡಾ. ಎಂ.ಬಿ.ಛೆಟ್ಟಿ ಅವರನ್ನು ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲ ವಿ.ಆರ್.ವಾಲಾ ಆದೇಶ ಹೊರಡಿಸಿದ್ದಾರೆ.
ಡಾ. ಎಸ್. ರಾಜೇಂದ್ರಪ್ರಸಾದ್ ಅವರನ್ನು ಮುಂದಿನ 4 ವರ್ಷದ ಅವಧಿಗೆ ನೇಮಕ ಮಾಡಿ ಆದೇಶಿಸ ಲಾಗಿದೆ. ರಾಜೇಂದ್ರಪ್ರಸಾದ್ ಮೂಲತಃ ಮದ್ದೂರು ತಾಲೂಕು ಅಣ್ಣೂರು ಗ್ರಾಮದವರು. ಸ್ವಾತಂತ್ರ್ಯ್ರ ಹೋರಾಟಗಾರ, ಭಾರತೀ ಎಜುಕೇಷನ್ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಯಾಗಿದ್ದ ಎಸ್.ಸಿದ್ದೇಗೌಡ ಅವರ ಕಿರಿಯ ಪುತ್ರರಾದ ಇವರು, ಈವರೆಗೆ 295 ವೈಜ್ಞಾನಿಕ ವರದಿ ಪ್ರಕಟಿಸಿದ್ದಾರೆ. 7 ಪಿಎಚ್ಡಿ, 14 ಎಂಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಕೃಷಿ ವಿವಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇವರು ವಿದ್ಯಾರ್ಥಿ ಪ್ರಧಾನಮಂತ್ರಿ ಫೆಲೋಶಿಪ್ ಪಡೆದಿದ್ದಾರೆ. ಥೈಲೆಂಡ್, ನೆದರ್ಲೆಂಡ್, ಫಿಲಿಪೈನ್ಸ್ ದೇಶಗಳಲ್ಲಿ ಬೀಜೋತ್ಪಾದನೆ ಕುರಿತು ಫೆಲೋಶಿಪ್ನ ಉನ್ನತ ತರಬೇತಿ ಪಡೆದಿದ್ದಾರೆ. 18ಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳಿಗೆ ಪ್ರಧಾನ ಸಂಶೋಧಕರಾಗಿದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅಂಗ ಸಂಸ್ಥೆಯಾದ ಭಾರತೀಯ ಬೀಜ ಸಂಶೋಧನಾ ಸಂಸ್ಥೆಯಲ್ಲಿ ನಿರ್ದೇಶಕ ರಾಗಿ ಕಾರ್ಯನಿರ್ವಹಿಸಿ ಸದ್ಯ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಕೃಷಿ ಕಾಲೇಜಿನ ಡೀನ್ ಆಗಿದ್ದಾರೆ.
ಬೇಸಾಯ ಪದ್ಧತಿ ಬಗ್ಗೆ ಮಗ ಅಧ್ಯಯನ ಮಾಡಬೇಕು ಎಂಬುದು ನಮ್ಮ ತಂದೆಯ ಆಶಯ ವಾಗಿತ್ತು. ಅವರ ಕನಸನ್ನು ರಾಜೇಂದ್ರಪ್ರಸಾದ್ ನನಸು ಮಾಡಿದ್ದಾರೆ ಎಂದು ಅವರ ಸಹೋದರ, ಭಾರತೀ ಎಜುಕೇಷನ್ ಟ್ರಸ್ಟ್ ಸದಸ್ಯ ಎಸ್. ಜಯರಾಮು ವಿಜಯವಾಣಿಗೆ ತಿಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ