ಕರ್ನಾಟಕದ 22 ಅಣೆಕಟ್ಟುಗಳ ದುರಸ್ತಿ ಹಾಗೂ ಅಭಿವೃದ್ಧಿಗೆ 581 ಕೋಟಿ ರೂ.ಗಳ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ವಿಶ್ವಬ್ಯಾಂಕ್ ನೆರವಿನಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, 2020ರ ಜೂನ್ ಒಳಗೆ ಕಾಮಗಾರಿ ಮುಗಿಸಬೇಕಿದೆ. ಈ ಹಿಂದಿನ ಯೋಜನೆಯಲ್ಲಿ 276 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಆದರೆ ಪರಿಷ್ಕೃತ ಯೋಜನೆಯಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ -ಠಿ; 305 ಕೋಟಿ ದೊರೆತಿದೆ. ಒಟ್ಟಾರೆ ದೇಶಾದ್ಯಂತ 198 ಅಣೆಕಟ್ಟುಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 3466 ಕೋಟಿ ರೂಪಾಯಿ ಮೊತ್ತದ ಪರಿಷ್ಕೃತ ಯೋಜನೆಯನ್ನು ಘೋಷಿಸಿದೆ. ಹಿಂದಿನ ಯೋಜನೆ ಪ್ರಕಾರ 2100 ಕೋಟಿ ರೂಪಾಯಿ ವೆಚ್ಚ ನಿಗದಿಯಾಗಿತ್ತು. ಪರಿಷ್ಕೃತ ಯೋಜನೆ ಪ್ರಕಾರ ವಿಶ್ವಬ್ಯಾಂಕ್ನಿಂದ 2628 ಕೋಟಿ ರೂಪಾಯಿ, ಕೇಂದ್ರದಿಂದ 91 ಕೋಟಿ ರೂಪಾಯಿ ದೊರೆಯಲಿದೆ. ರಾಜ್ಯ ಸರ್ಕಾರಗಳು 747 ಕೋಟಿ ರೂಪಾಯಿಯನ್ನು ತಾವೇ ಭರಿಸಿಕೊಳ್ಳಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕಬ್ಬು ಪ್ಯಾಕೇಜ್ ಮುಂದಕ್ಕೆ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ 4500 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸುವ ವಿಚಾರ ಯಾವುದೇ ನಿರ್ಣಯವಾಗಿಲ್ಲ. ಮುಂದಿನ ಸಭೆಯಲ್ಲಿ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.
ಮಹಿಳಾ ಉಡುಗೊರೆ
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ ಯರ ಜತೆಗೆ ನಡೆಸಿದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಗೌರವ ಧನ ಹೆಚ್ಚಳ ಹಾಗೂ ಸಾಮಾಜಿಕ ಭದ್ರತಾ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅ.1ರಿಂದ ಈ ಆದೇಶಗಳು ಅನ್ವಯವಾಗಲಿವೆ. ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ಮೇಲೆ 2019-20ನೇ ಆರ್ಥಿಕ ವರ್ಷದವರೆಗೆ -ಠಿ;11,874.38 ಕೋಟಿ ಆರ್ಥಿಕ ಹೊರೆ ಬೀಳಲಿದೆ.
ಆಶಾ ಕಾರ್ಯಕರ್ತೆಯರಿಗೆ
# 1.06 ಕೋಟಿ ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ
# 9.57 ಲಕ್ಷ ಆಶಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ
# 10.22 ಲಕ್ಷ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ಕನಿಷ್ಠ 2 ಸಾವಿರ ರೂ. ಗೌರವ ಧನ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಇತರ ಪ್ರೋತ್ಸಾಹ ಧನ ಹೊರತುಪಡಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ
# ಅಂಗನವಾಡಿ ಕಾರ್ಯಕರ್ತೆಯರಿಗೆ 4500 ರೂ. ಮಾಸಿಕ ಗೌರವ ಧನ
# ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 3500 ರೂ. ಮಾಸಿಕ ಗೌರವ ಧನ
# ಸಹಾಯಕಿಯರಿಗೆ 2250 ರೂಪಾಯಿ ಮಾಸಿಕ ಗೌರವ ಧನ
# ಸಹಾಯಕಿಯರಿಗೆ 250-500 ರೂಪಾಯಿವರೆಗೆ ಪ್ರೋತ್ಸಾಹ ಧನ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ