ಇದುವರೆಗೆ ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿಯೋ, ಆಗಮಸಂಧಿಯೋ ಆಗುವ ವಿಚಾರ ನೋಡಿದೆವು. ಈಗ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ‍್ಯ ನಡೆಯುವುದೆಂಬುದನ್ನು ತಿಳಿಯೋಣ.
ಮಳೆ + ಕಾಲ = ಮಳೆಗಾಲ (ಮಳೆ + ಗ್‌ಆಲ)
ಚಳಿ + ಕಾಲ = ಚಳಿಗಾಲ (ಚಳಿ +ಗ್‌ಆಲ)
ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್‌ಆವರೆ)
ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್‌ಎಟ್ಟು)
ಕಣ್ + ಪನಿ = ಕಂಬನಿ (ಕಂ + ಬ್‌ಅನಿ)
ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ. ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ. ಬೆಟ್ಟ + ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆ ದ ಕಾರ ಬಂದಿದೆ. [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ] ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ. ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು. ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.
(೧೮) ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು.
ಹಾಗಾದರೆ ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರುವುದು? ಎಂಬುದನ್ನು ವಿವರವಾಗಿ ತಿಳಿಯೋಣ.
(i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕ ತ ಪ ವ್ಯಂಜನಗಳಿಗೆ ಕ್ರಮವಾಗಿ ಗ ದ ಬ ವ್ಯಂಜನಗಳು ಆದೇಶವಾಗಿ ಬರುವುವು.
ಉದಾಹರಣೆಗೆ:-
ಹುಲ್ಲು + ಕಾವಲು
=
*ಹುಲ್ಲು + ಗ್ ಆವಲು
=
ಹುಲ್ಲುಗಾವಲು
(ಕಕಾರಕ್ಕೆ ಗಕಾರಾದೇಶ)
ಹಳ + ಕನ್ನಡ
=
ಹಳ + ಗ್ ಅನ್ನಡ
=
ಹಳಗನ್ನಡ
(ಕಕಾರಕ್ಕೆ ಗಕಾರಾದೇಶ)
ಕಳೆ + ಕೂಡಿ
=
ಕಳೆ + ಗ್ ಊಡಿ
=
ಕಳೆಗೂಡಿ
(ಕಕಾರಕ್ಕೆ ಗಕಾರಾದೇಶ)
ಎಳೆ + ಕರು
=
ಎಳೆ + ಗ್ ಅರು
=
ಎಳೆಗರು
(ಕಕಾರಕ್ಕೆ ಗಕಾರಾದೇಶ)
ಮನೆ + ಕೆಲಸ
=
ಮನೆ + ಗ್ ಎಲಸ
=
ಮನೆಗೆಲಸ
(ಕಕಾರಕ್ಕೆ ಗಕಾರಾದೇಶ)
ಮೈ + ತೊಳೆ
=
ಮೈ + ದ್ ಒಳೆ
=
ಮೈದೊಳೆ
(ತಕಾರಕ್ಕೆ ದಕಾರಾದೇಶ)
ಮೇರೆ + ತಪ್ಪು
=
ಮೇರೆ + ದ್ ಅಪ್ಪು
=
ಮೇರೆದಪ್ಪು
(ತಕಾರಕ್ಕೆ ದಕಾರಾದೇಶ)
ಕಣ್ + ಪನಿ
=
ಕಣ್ + ಬ್ ಅನಿ
=
ಕಂಬನಿ
(ಪಕಾರಕ್ಕೆ ಬಕಾರಾದೇಶ)
ಬೆನ್ + ಪತ್ತು
=
ಬೆನ್ + ಬ್ ಅತ್ತು
=
(ಬೆಂಬತ್ತು)
(ಪಕಾರಕ್ಕೆ ಬಕಾರಾದೇಶ)
ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು
ಮನೆ + ಕಟ್ಟು = ಮನೆಕಟ್ಟು
ತಲೆ + ಕಟ್ಟು = ತಲೆಕಟ್ಟು
(ii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪ ಬ ಮ ವ್ಯಂಜನಗಳಿಗೆ ವ ಕಾರವು ಆದೇಶವಾಗಿ ಬರುವುದು
ಉದಾಹರಣೆಗೆ:-
ನೀರ್ + ಪೊನಲ್
=
ನೀರ್ + ವ್ ಒನಲ್ = ನೀರ‍್ವೊನಲ್
(ಪಕಾರಕ್ಕೆ ವಕಾರಾದೇಶ)
ಎಳ + ಪೆರೆ
=
ಎಳ + ವ್ ಎರೆ = ಎಳವರೆ
(ಪಕಾರಕ್ಕೆ ವಕಾರಾದೇಶ)
ಬೆಮರ್ + ಪನಿ
=
ಬೆಮರ್ + ವ್ ಅನಿ = ಬೆಮರ್ವನಿ
(ಪಕಾರಕ್ಕೆ ವಕಾರಾದೇಶ)
ಬೇರ್ + ಬೆರಸಿ
=
ಬೇರ್ + ವ್ ಎರಸಿ = ಬೇರ‍್ವೆರಸಿ
(ಬಕಾರಕ್ಕೆ ವಕಾರಾದೇಶ)
ಕಡು + ಬೆಳ್ಪು
=
ಕಡು + ವ್ ಎಳ್ಪು = ಕಡುವೆಳ್ಪು
(ಬಕಾರಕ್ಕೆ ವಕಾರಾದೇಶ)
ಎಳ + ಬಳ್ಳಿ
=
ಎಳ + ವ್ ಅಳ್ಳಿ = ಎಳವಳ್ಳಿ
(ಬಕಾರಕ್ಕೆ ವಕಾರಾದೇಶ)
ಮೆಲ್ + ಮಾತು
=
ಮೆಲ್ + ವ್ ಆತು = ಮೆಲ್ವಾತು
(ಮಕಾರಕ್ಕೆ ವಕಾರಾದೇಶ)
ನೆಲೆ + ಮನೆ
=
ನೆಲೆ + ವ್ ಅನೆ = ನೆಲೆವನೆ
(ಮಕಾರಕ್ಕೆ ವಕಾರಾದೇಶ)
ಇದರ ಹಾಗೆ…….ಕಿಸುವಣ್, ಎಸರ‍್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ.
ಈ ಆದೇಶವು ಕೆಲವು ಕಡೆ ಬರುವುದಿಲ್ಲ. ಅದಕ್ಕೆ ಉದಾಹರಣೆ:-
ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)
ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)
ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)
(iii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಸಕಾರಕ್ಕೆ ಸಾಮಾನ್ಯವಾಗಿ ಕೆಲವು ಕಡೆ ಚಕಾರವೂ, ಕೆಲವು ಕಡೆ ಜಕಾರವೂ, ಕೆಲವು ಕಡೆ ಛಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು.
ಉದಾಹರಣೆಗೆ:-
(೧) ಸಕಾರಕ್ಕೆ ಚಕಾರ ಬರುವುದಕ್ಕೆ__ಇನ್ + ಸರ = ಇನ್ + ಚ್ ಅರ = ಇಂಚರ
ನುಣ್ + ಸರ = ನುಣ್ + ಚ್ ಅರ = ನುಣ್ಚರ
(೨) ಸಕಾರಕ್ಕೆ ಜಕಾರ ಬರುವುದಕ್ಕೆ__ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು
ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್
ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್
(೩) ಸಕಾರಕ್ಕೆ ಛಕಾರ ಬರುವುದಕ್ಕೆ__
ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ
ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ
ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ
ಕೆಲವು ಕಡೆ ಈ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.
ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್‌ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.
[1] ‘ಕಾ’ ಎಂಬುದು ‘ರಕ್ಷಣೆ ಮಾಡು’ ಎಂಬರ್ಥದಲ್ಲಿ ಏಕಾಕ್ಷರಧಾತು. ಹೊಸಗನ್ನಡದಲ್ಲಿ ‘ಕಾ’ ಧಾತು ‘ಕಾಯ್’ ಆಗುವುದೆಂದು ಕೆಲವರು ಒಪ್ಪುತ್ತಾರೆ.
[2] ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.
[3] ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.
[4] ಆ ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಆ ಎಂಬುದು ಆದೇಶವಾಗಿ ಬರುವುದು. ಹಾಗೆ ಆದೇಶವಾಗಿ ಬಂದ ಆಕಾರವೇ ಆ ಶಬ್ದವೆನಿಸುವುದು. ಉದಾ.:-ಅವನು+ಗಂಡಸು= ಆ ಗಂಡಸು; ಅವಳು+ಹೆಂಗಸು=ಆ ಹೆಂಗಸು; ಅದು+ಕಲ್ಲು= ಆ ಕಲ್ಲು ಇದರಂತೆ ಕೆಲವು ಕಡೆ – ಇವನು+ಗಂಡಸು=ಈ ಗಂಡಸು; ಇವಳು+ಹೆಂಗಸು=ಈ ಹೆಂಗಸು; ಇದು+ಕಲ್ಲು=ಈ ಕಲ್ಲು – ಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಈ ಆದೇಶವಾಗಿ ಬಂದರೆ ಇದನ್ನು ಈ ಶಬ್ದವೆನ್ನುವರು
[5] ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ. ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ. ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು
[6] ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ. ಆಗ ಸ್ಪಷ್ಟವಾಗಿ ತಿಳಿದುಬರುವುದು. ಈಗ ಸಂಧಿಕಾರ‍್ಯಗಳನ್ನಷ್ಟು ಗಮನಿಸಿದರೆ ಸಾಕು.
* ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್‌ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು. ಇದರಂತೆ ಉಳಿದವುಗಳನ್ನೂ ತಿಳಿಯಬೇಕು.
[7] ಪ ಬ ಮ ವ್ಯಂಜನಗಳಿಗೆ ಎಂದರೆ ಪ್, ಬ್, ಮ್‌ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು. ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ ಪ ಬ ಮ ವ-ಇತ್ಯಾದಿ ಬರೆದಿದೆ. ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ