ಮೀಟರ್ ಬಡ್ಡಿ ದಂಧೆಕೋರರಿಂದ ಬೀದಿ ಬದಿ ವ್ಯಾಪಾರಿ ಗಳನ್ನು ರಕ್ಷಿಸಲು ಸರ್ಕಾರ ರೂಪಿಸುತ್ತಿರುವ ಬಡವರ ಬಂಧು ಯೋಜನೆಯನ್ನು ಏಕಕಾಲಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ.
ಬೆಂಗಳೂರು, ಮೈಸೂರು, ಬೀದರ್, ಹಾಸನ, ಹುಬ್ಬಳ್ಳಿಯಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿ ಮಾಡಲು ಮೊದಲು ನಿರ್ಧರಿಸ ಲಾಗಿತ್ತು. ಇದೀಗ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ಮುಂದಾಗಿರುವುದರಿಂದ ಯೋಜನೆ ಜಾರಿ ಸ್ವಲ್ಪ ದಿನಗಳ ಮಟ್ಟಿಗೆ ಮುಂದಕ್ಕೆ ಹೋಗಿದೆ. ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಯಶವಂತಪುರ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳ ಸಮಸ್ಯೆ ಆಲಿಸಿದ ನಂತರ ಸಿಎಂ ಕುಮಾರಸ್ವಾಮಿಗೆ ನೀಡಿರುವ ವರದಿ ಆಧಾರದಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಯೋಜನೆ ಜಾರಿಗೆ ತೀರ್ವನಿ ಸಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಕನ್ನಡ ರಾಜ್ಯೋತ್ಸವಕ್ಕೆ: ಸಣ್ಣ ವ್ಯಾಪಾರಿಗಳಿಗೆ ಗಣೇಶ ಚತುರ್ಥಿ ಕೊಡುಗೆಯಾಗಿ ಬಡವರ ಬಂಧು ಪ್ರಾಯೋಗಿಕ ಜಾರಿಗೆ ಯೋಜನೆ ರೂಪಿಸಲಾಗಿತ್ತು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಾರಿಗೊಳಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವಕ್ಕೆ ಕೊಡುಗೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
43 ಮೊಬೈಲ್ ಎಟಿಎಂ: ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಸಲುವಾಗಿ ಮಾರುತಿ ವ್ಯಾನ್ನಂತಹ 43 ಮೊಬೈಲ್ ಎಟಿಎಂಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಪ್ರತಿ ಜಿಲ್ಲಾ ಕೇಂದ್ರಕ್ಕೆ ಒಂದು ಮೊಬೈಲ್ ಎಟಿಎಂಗಳಿರುತ್ತವೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿಯಂತಹ ದೊಡ್ಡ ನಗರಗಳಿಗೆ ಹೆಚ್ಚಿನ ಎಟಿಎಂಗಳನ್ನು ನೀಡಲಾಗುತ್ತದೆ.
ಬ್ಯಾಂಕ್ಗಳ ಜತೆ ಒಡಂಬಡಿಕೆ
ಸಾಲ ಕೊಡುವುದಕ್ಕೆ ಸಂಬಂಧಿಸಿದಂತೆ ಆಯಾ ಪ್ರದೇಶದ ಸಹಕಾರ ಬ್ಯಾಂಕ್ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ವ್ಯಾಪಾರಿಗಳಿಗೆ ನಿತ್ಯ ವ್ಯವಹಾರಕ್ಕೆ ಹಣ ನೀಡಿ ಕಡಿಮೆ ಬಡ್ಡಿ ವಿಧಿಸ ಲಾಗುತ್ತದೆ. ಬಡ್ಡಿ ದಂಧೆಕೋರರು ಬಡ್ಡಿ, ಮೀಟರ್ ಬಡ್ಡಿ, ಚಕ್ರ ಬಡ್ಡಿ ಎಂದು ಶೋಷಣೆ ಮಾಡುತ್ತಾರೆ. ಬೆಂಗಳೂರು ನಗರವೊಂದರಲ್ಲಿಯೇ ಪ್ರತಿನಿತ್ಯ 5 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂಬ ಅಂದಾಜಿದೆ. ಬಡ್ಡಿ ವ್ಯಾಪಾರ ನಡೆಸುವವರಿಗೆ ದಿನಕ್ಕೆ 1 ಕೋಟಿ ರೂ.ಗೂ ಹೆಚ್ಚಿನ ಆದಾಯವಿದೆ ಎನ್ನಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ